ನೌಕರರೇ, ನಿಮ್ಮ UAN ನಂಬರ್ ಆಕ್ಟಿವ್ ಮಾಡುವುದನ್ನು ಮರೆಯಬೇಡಿ!..ತುಂಬಾ ಅಗತ್ಯ!
ಪ್ರಿಯ ನೌಕರರೇ ನಿಮ್ಮ ಸಂಬಳದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಗೆ (EPF) ಹಣ ಕಡಿತವಾಗುತ್ತಿದ್ದರೇ, ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಸಕ್ರಿಯ ಮಾಡುವುದು ಅಗತ್ಯ. UAN ನಂಬರ್ ಆಕ್ಟಿವ್ ( UAN activation) ಮಾಡಿದರೆ, ಪಿಎಫ್ ಬ್ಯಾನೆಲ್ಸ್ ಪರಿಶೀಲಿಸಬಹುದು, ಹಣ ವಿತ್‌ಡ್ರಾ ಮಾಡಬಹುದು, ನಾಮೀನಿಯ ಹೆಸರು ಸೇರಿಸಬಹುದು ಸೇರಿದಂತೆ ಹಲವು ಉಪಯುಕ್ತ ಕೆಲಸ ಮಾಡಲು ದಾರಿಯಾಗುತ್ತದೆ. ಅಂದಹಾಗೆ ಆನ್‌ಲೈನ್ ಮೂಲಕ ಸುಲಭವಾಗಿ UAN ನಂಬರ್ ಆಕ್ಟಿವ್ ಮಾಡಬಹುದಾಗಿದೆ.

ಅರೇ, ಆನ್‌ಲೈನ್ ಮೂಲಕ UAN ನಂಬರ್ ಆಕ್ಟಿವ್ ಮಾಡುವುದು ಹೇಗೆ ಎಂದು ಯೋಚಿಸುತ್ತೀದ್ದಿರಾ?..ಚಿಂತೆ ಬಿಡಿ ಆನ್‌ಲೈನ್ ಮೂಲಕ ನಿಮ್ಮ UAN ನಂಬರ್ ಚಾಲ್ತಿ ಮಾಡಲು ಅವಕಾಶ ಇದೆ. ಕೆಲವು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ನೌಕರರು ತಮ್ಮ UAN ನಂಬರ್ ಅನ್ನು ಸಕ್ರಿಯ ಮಾಡಬಹುದಾಗಿದೆ. ಹಾಗಾದರೆ UAN ನಂಬರ್ ಚಾಲ್ತಿ ಮಾಡುವುದು ಹೇಗೆ?..ಅದಕ್ಕೆ ಬೇಕಾಗುವ ದಾಖಲೆಗಳು ಯಾವುವು? ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

UAN ನಂಬರ್ ಆಕ್ಟಿವ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:
ಹಂತ 1: ವೆಬ್ ಬ್ರೌಸರ್ ತೆರೆಯಿರಿ, EPFO ಸದಸ್ಯರ ಪೋರ್ಟಲ್‌ಗೆ (e EPFO member portal) ಕ್ಲಿಕ್ ಮಾಡಿ.
ಹಂತ 2: ಡ್ಯಾಶ್‌ಬೋರ್ಡ್‌ನಲ್ಲಿ 'Services' ಆಯ್ಕೆ ಕ್ಲಿಕ್ ಮಾಡಿ. ಆಗ ಡ್ರಾಪ್-ಡೌನ್ ಮೆನು ತೆರೆಯುತ್ತೆ, ಅಲ್ಲಿ 'For Employees' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3: ನಂತರ ತೆರೆಯುವ ಪೇಜ್‌ನಲ್ಲಿ, ಬಲಭಾಗದಲ್ಲಿರುವ ಪ್ರಮುಖ ಲಿಂಕ್‌ಗಳ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ. 'UAN ಸಕ್ರಿಯಗೊಳಿಸಿ' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಆ ಬಳಿಕ ನಿಮ್ಮ UAN, PF ಸದಸ್ಯ ID, ಆಧಾರ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಸೇರಿದಂತೆ ಅಗತ್ಯವಿರುವ ಕಾಲಂ ಭರ್ತಿ ಮಾಡಿ. ಆ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಸ್ವೀಕರಿಸಲು 'Get Authorization Pin' ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ 5: ಕಾಣಿಸಿಕೊಳ್ಳುವ ಪರದೆಯ ಮೇಲೆ, 'I Agree' ಬಾಕ್ಸ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್-ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು ಅಂತಿಮವಾಗಿ, 'ವ್ಯಾಲಿಡೆಟ್ ಓಟಿಪಿ ಮತ್ತು ಆಕ್ಟಿವ್ ಯುಎಎನ್ (Validate OTP and Activate UAN) ಒತ್ತಿರಿ.
ಈ ಮೇಲಿನ ಕ್ರಮಗಳನ್ನು ಅನುಸರಿಸಿದ ಬಳಿಕ ನಿಮ್ಮ UAN ಚಾಲ್ತಿ ಮಾಡುವ ಪ್ರಕ್ರಿಯೆಯು ಪೂರ್ಣಗೊಂಡಿದೆ. ನಂತರ UAN ಸದಸ್ಯರ ಪೋರ್ಟಲ್‌ಗೆ ಲಾಗ್ ಇನ್ ಮಾಡಬಹುದು. ನಿಮ್ಮ ಇಪಿಎಫ್ ಖಾತೆಯನ್ನು ತೆರೆಯುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಪಾಸ್‌ವರ್ಡ್ ಅನ್ನು ನೀವು ಸ್ವೀಕರಿಸುತ್ತೀರಿ.

UAN ಆಕ್ಟಿವ್ ಮಾಡಲು ಬೇಕಾಗುವ ಅಗತ್ಯ ದಾಖಲೆಗಳ ಲಿಸ್ಟ್:
* ಬ್ಯಾಂಕ್ ಖಾತೆ ವಿವರಗಳು: ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಮತ್ತು ಶಾಖೆಯ ಹೆಸರು.
* ಗುರುತಿನ ಪುರಾವೆ: ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಅಥವಾ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್.

* ವಿಳಾಸ ಪುರಾವೆ: ಯುಟಿಲಿಟಿ ಬಿಲ್, ಬಾಡಿಗೆ/ಗುತ್ತಿಗೆ ಒಪ್ಪಂದ, ರೇಷನ್ ಕಾರ್ಡ್ ಅಥವಾ ನಿಮ್ಮ ಪ್ರಸ್ತುತ ವಿಳಾಸದೊಂದಿಗೆ ಯಾವುದೇ ಇತರ ಐಡಿ ಪುರಾವೆ.
* ಪ್ಯಾನ್ ಕಾರ್ಡ್
* ಆಧಾರ್ ಕಾರ್ಡ್


Click it and Unblock the Notifications








