Home
ಸುದ್ದಿಜಾಲ

Aadhaar and Google pay: ಗೂಗಲ್‌ ಪೇ ಬಳಕೆ ಮಾಡಲು ಡೆಬಿಟ್ ಕಾರ್ಡ್‌ ಬೇಕಿಲ್ಲ, ಆಧಾರ್‌ ಇದ್ರೆ ಸಾಕು!

ಗೂಗಲ್‌ ಪೇ (Google Pay ) ಮೂಲಕ ಈಗಾಗಲೇ ಜನರು ನಿರೀಕ್ಷೆ ಮೀರಿ ಡಿಜಿಟಲ್‌ ಪಾವತಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಈ ನಡುವೆ ಗೂಗಲ್‌ ಈ ಆಪ್‌ನಲ್ಲಿ ಹೊಸ ರೀತಿಯ ಸೌಲಭ್ಯ ಕಲ್ಪಿಸಿಕೊಡುತ್ತಿದ್ದು, ಬಳಕೆದಾರರಿಗೆ ಆಪ್‌ ಅನ್ನು ಬಳಕೆ ಮಾಡಲು ಇನ್ನಷ್ಟು ಸರಾಗ ಮಾರ್ಗ ಒದಗಿಸಿದೆ. ಈ ನಡುವೆ ಯುಪಿಐಗಾಗಿ ಗೂಗಲ್‌ ಪೇ ಆಧಾರ್ ಆಧಾರಿತ ದೃಢೀಕರಣ ಬೆಂಬಲವನ್ನು ಪಡೆಯಲಿದೆ.

ಹೌದು, ಗೂಗಲ್ ಪೇ ಇದೀಗ ಯುಪಿಐ(UPI) ಸಕ್ರಿಯಗೊಳಿಸುವಿಕೆಗಾಗಿ ಆಧಾರ್(Aadhaar) ಆಧಾರಿತ ದೃಢೀಕರಣವನ್ನು ಬೆಂಬಲಿಸುತ್ತದೆ. ಇದನ್ನು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲಕ ಬಳಕೆದಾರರು ಆಧಾರ್ ಬಳಸಿಕೊಂಡು ಯುಪಿಐಗಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಡೆಬಿಟ್ ಕಾರ್ಡ್ ಇಲ್ಲದೆಯೇ ತಮ್ಮ ಯುಪಿಐ ಪಿನ್ ಹೊಂದಿಸಲು ಸಾಧ್ಯವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಹಾಗಿದ್ರೆ, ಇದನ್ನು ಹೇಗೆ ಬಳಕೆ ಮಾಡಿಕೊಳ್ಳುವುದು?, ಇದರಿಂದ ಯಾರಿಗೆಲ್ಲಾ ಪ್ರಯೋಜನ? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

 ಗೂಗಲ್‌ ಪೇ ಬಳಕೆ ಮಾಡಲು ಡೆಬಿಟ್ ಕಾರ್ಡ್‌ ಬೇಕಿಲ್ಲ, ಆಧಾರ್‌ ಇದ್ರೆ ಸಾಕು!

ಡೆಬಿಟ್‌ ಕಾರ್ಡ್‌ ಅವಶ್ಯಕತೆ ಇಲ್ಲ: ಈ ಮೊದಲು ಡೆಬಿಟ್‌ ಕಾರ್ಡ್‌ ಇಲ್ಲದೆ ಯಾವುದೇ ಯುಪಿಐ ಪೇಮೆಂಟ್‌ ಮಾಡಲು ಸಾಧ್ಯ ಆಗುತ್ತಿರಲಿಲ್ಲ. ಈ ಡೆಬಿಟ್‌ ಕಾರ್ಡ್‌ ಬಳಕೆ ಮಾಡದ ಅದೆಷ್ಟೋ ಜನರು ಫೋನ್‌ಫೇ ಅಥವಾ ಗೂಗಲ್‌ ಪೇ ಬಳಕೆ ಮಾಡಲು ಆಗುತ್ತಿರಲಿಲ್ಲ. ಕೊನೆಗೂ ಗೂಗಲ್‌ ಪೇ ನಲ್ಲಿ ಡೆಬಿಟ್‌ ಕಾರ್ಡ್‌ ಇಲ್ಲದೆ ಇರುವವರೂ ಸಹ ಆಧಾರ್‌ ಕಾರ್ಡ್‌ ಬಳಕೆ ಮಾಡಿಕೊಂಡು ಯುಪಿಐ ಪಾವತಿಗಳನ್ನು ಮಾಡಲು ಅನುಕೂಲ ಮಾಡಿಕೊಡುತ್ತಿದೆ.

ಈ ಸೌಲಭ್ಯ ಇದೀಗ ಈಗ ಬ್ಯಾಂಕ್‌ಗಳ ಬ್ಯಾಂಕ್ ಖಾತೆದಾರರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಹೆಚ್ಚಿನ ಬ್ಯಾಂಕ್‌ಗಳ ಗ್ರಾಹಕರಿಗೆ ಈ ಸೌಲಭ್ಯ ವಿಸ್ತರಣೆ ಮಾಡಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಿದ್ರೆ, ಬನ್ನಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಗೂಗಲ್‌ ಪೇನಲ್ಲಿ ಡೆಬಿಟ್‌ ಕಾರ್ಡ್‌ ಬಳಕೆ ಮಾಡದೆ ಕೇವಲ ಆಧಾರ್‌ ಕಾರ್ಡ್ ನಂಬರ್‌ ಮೂಲಕ ಹೇಗೆ ಯುಪಿಐ ಅನ್ನು ಸಕ್ರಿಯಗೊಳಿಸುವುದು ಎಂದು ಸರಳ ಹಂತಗಳ ಮೂಲಕ ತಿಳಿಯೋಣ.

 ಗೂಗಲ್‌ ಪೇ ಬಳಕೆ ಮಾಡಲು ಡೆಬಿಟ್ ಕಾರ್ಡ್‌ ಬೇಕಿಲ್ಲ, ಆಧಾರ್‌ ಇದ್ರೆ ಸಾಕು!

ಹಂತ 1: ಆಧಾರ್‌ ಮೂಲಕ ಗೂಗಲ್‌ ಪೇ ನಲ್ಲಿ ಯುಪಿಐ ಸಕ್ರಿಯಗೊಳಿಸಬೇಕಾದರೆ ಮೊದಲು UIDAI ಮತ್ತು ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಅವರ ಫೋನ್ ಸಂಖ್ಯೆ ಒಂದೇ ಆಗಿದೆಯೇ ಎಂದು ತಿಳಿದುಕೊಳ್ಳಬೇಕು. ಜೊತೆಗೆ ಅವರ ಬ್ಯಾಂಕ್ ಖಾತೆ ಆಧಾರ್‌ ಕಾರ್ಡ್‌ಗೆ ಲಿಂಕ್ ಆಗಿದೆಯಾ ಎಂದು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಅದನ್ನು ತಕ್ಷಣವೇ ಮಾಡಿಸಿಕೊಳ್ಳಿ.

ಹಂತ 2: ಇದಾದ ಬಳಿಕ ಗೂಗಲ್‌ ಪೇ ನಲ್ಲಿ ಬಳಕೆದಾರರು ಡೆಬಿಟ್ ಕಾರ್ಡ್ ಅಥವಾ ಆಧಾರ್ ಆಧಾರಿತ ಯುಪಿಐ ಆಯ್ಕೆಯನ್ನು ಗಮನಿಸಬಹುದು. ಇದರಲ್ಲಿ ಆಧಾರ್ ಅನ್ನು ಆಯ್ಕೆ ಮಾಡಿಕೊಳ್ಳಿ. ಈ ವೇಳೆ ನಿಮ್ಮ ಆಧಾರ್ ಸಂಖ್ಯೆಯ ಮೊದಲ ಆರು ಅಂಕೆಗಳನ್ನು ನಮೂದಿಸಬೇಕಾಗುತ್ತದೆ. ಈ ದೃಢೀಕರಣ ಹಂತವನ್ನು ಪೂರ್ಣಗೊಳಿಸಲು ಬ್ಯಾಂಕ್‌ನಿಂದ ಪಡೆದ ಓಟಿಪಿ ಯನ್ನು ಎಂಟ್ರಿ ಮಾಡಬೇಕು.

ಹಂತ 3: ಇದಾದ ಬಳಿಕ ಸಂಬಂಧಿತ ಬ್ಯಾಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ ಮತ್ತು ಇಷ್ಟು ಮಾಡಿದ ಮೇಲೆ ನಿಮಗೆ ಯುಪಿಐ ಪಿನ್ ಅನ್ನು ಸೆಟ್‌ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ಇದಿಷ್ಟು ಮಾಡಿದ್ರೆ ನೀವು ಗೂಗಲ್‌ ಪೇ ಮೂಲಕ ಬ್ಯಾಲೆನ್ಸ್ ಪರಿಶೀಲಿಸಬಹುದು, ಪಾವತಿ ಮಾಡಬಹುದು. ಹಾಗೂ ಯುಪಿಐ ಮೂಲಕ ಏನೆಲ್ಲಾ ಡಿಜಿಟಲ್‌ ವ್ಯವಹಾರ ಮಾಡಬಹುದೋ ಅವುಗಳನ್ನು ಸುಲಭವಾಗಿ ಮಾಡಬಹುದು.

ಇನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿನ ವಯಸ್ಕ ಜನಸಂಖ್ಯೆಯ 99.9% ಕ್ಕಿಂತ ಹೆಚ್ಚು ಜನರು ಆಧಾರ್ ಸಂಖ್ಯೆಯನ್ನು ಹೊಂದಿದ್ದು, ಕನಿಷ್ಠ ತಿಂಗಳಿಗೊಮ್ಮೆಯಾದರೂ ಅದನ್ನು ಒಂದಲ್ಲಾ ಒಂದು ಕಾರಣಕ್ಕೆ ಬಳಕೆ ಮಾಡುತ್ತಿದ್ದಾರೆ. ಆದರೆ, ಇನ್ಮುಂದೆ ಯುಪಿಐ ಪಾವತಿಗೆ ಇದು ಅನುಕೂಲ ಆಗುತ್ತಿರುವುದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಇದು ಬಳಕೆ ಆಗಲಿದೆ.

 ಗೂಗಲ್‌ ಪೇ ಬಳಕೆ ಮಾಡಲು ಡೆಬಿಟ್ ಕಾರ್ಡ್‌ ಬೇಕಿಲ್ಲ, ಆಧಾರ್‌ ಇದ್ರೆ ಸಾಕು!

ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ನೀವು ಒಮ್ಮೆ ಆಧಾರ್ ಸಂಖ್ಯೆಯ ಮೊದಲ ಆರು ಅಂಕೆಗಳನ್ನು ನಮೂದಿಸಿದಾಗ ಆಧಾರ್ ಸಂಖ್ಯೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೌಲ್ಯೀಕರಣಕ್ಕಾಗಿ ಅದನ್ನು NPCI ಮೂಲಕ UIDAI ಗೆ ಕಳುಹಿಸಲಾಗುತ್ತದೆ. ಇದಾದ ನಂತರವೇ ಬ್ಯಾಂಕಿಂಗ್ ವ್ಯವಹಾರಕ್ಕೆ ಆಧಾರ್ ಅನ್ನು ಬಳಕೆ ಮಾಡಿಕೊಳ್ಳಲು ಸಾಧ್ಯ. ಹಾಗೆಯೇ ಗೂಗಲ್ ಪೇ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವುದಿಲ್ಲ.
Best Mobiles in India

English summary
Google Pay now supports Aadhaar-based authentication for UPI activation. It was mentioned by National Payments Corporation of India that users can register for UPI using Aadhaar and set their UPI PIN without a debit card.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+