ಯೂಟ್ಯೂಬ್‌ನಲ್ಲಿ ಯಾವುದ್ಯಾವುದೋ ವಿಡಿಯೋ ಕಾಣಿಸಿಕೊಳ್ಳುತ್ತಿವೆಯಾ? ಈ ರೀತಿ ನಿರ್ಬಂಧಿಸಿ!
ಯೂಟ್ಯೂಬ್ (YouTube) ಬಳಕೆ ಮಾಡದವರು ಯಾರಿದ್ದಾರೆ ಹೇಳಿ. ನಿತ್ಯವೂ ಒಂದಲ್ಲಾ ಒಂದು ಬಾರಿ ಈ ಕಡೆ ಕಣ್ಣಾಯಿಸದೆ ಇರಲಾರರು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಕಂಟೆಂಟ್‌ಗಳು ವೀಕ್ಷಕರು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿವೆ. ಕ್ರಿಯೇಟರ್ಸ್‌ಗಳು ಲೈಕ್, ಕಮೆಂಟ್ ಹಾಗೂ ವೀಕ್ಷಣೆ ಹೆಚ್ಚಿಗೆ ಮಾಡಿಕೊಳ್ಳಲು ಅನಗತ್ಯ ಕಂಟೆಂಟ್ ಇರುವ ವಿಡಿಯೋಗಳನ್ನು ಪ್ರಕಟ ಮಾಡುತ್ತಲೇ ಇರುತ್ತಾರೆ.
ಹೌದು, ಯೂಟ್ಯೂಬ್ ನಲ್ಲಿ ಎಲ್ಲಾ ರೀತಿಯ ಕಂಟೆಂಟ್ (YouTube content) ಲಭ್ಯ ಇದೆ. ಅದಾಗ್ಯೂ ಕೆಲವು ವಿಷಯಗಳಿಗೆ ನಿರ್ಬಂಧ ಹೇರಲಾಗಿದೆಯಾದರೂ ಕ್ರಿಯೇಟರ್ಸ್‌ಗಳು ಮಾತ್ರ ಯೂಟ್ಯೂಬ್‌ಗೆ ಮೋಸ ಮಾಡಿ ಕೆಲವು ಅಶ್ಲೀಲ ಅಥವಾ ಸಮಾಜಕ್ಕೆ ಕೆಟ್ಟ ಸಂದೇಶ ಸಾರುವ ಕಂಟೆಂಟ್ ಅನ್ನು ಪ್ರಕಟಿಸುತ್ತಲೇ ಇರುತ್ತಾರೆ. ಈ ನಡುವೆ ಕುಟುಂಬದ ಜೊತೆಗೆ ಯೂಟ್ಯೂಬ್ ನೋಡುವಾಗ ಇದು ಇರುಸು ಮುರುಸು ಮಾಡುವುದಂತೂ ಪಕ್ಕಾ. ಈ ಕಾರಣಕ್ಕೆ ಈ ರೀತಿಯ ಕಂಟೆಂಟ್ ಅನ್ನು ಬ್ಲಾಕ್ ಮಾಡುವುದು ಅನಿವಾರ್ಯ.

ಯೂಟ್ಯೂಬ್‌ನಲ್ಲಿ ಹಲವು ಫೀಚರ್ಸ್: ಇನ್ನು ಈಗಾಗಲೇ ಯೂಟ್ಯೂಬ್‌ನಲ್ಲಿ ಸಾಕಷ್ಟು ಫೀಚರ್ಸ್ ಬಳಕೆದಾರರಿಗೆ ಲಭ್ಯ ಇದ್ದು, ಇವು ವಿವಿಧ ಪ್ರಯೋಜನ ನೀಡುತ್ತವೆ. ಅದರಂತೆ ಈ ರೀತಿಯ ಕೆಟ್ಟ ಕಂಟೆಂಟ್ ಅಥವಾ ಇಷ್ಟವಾಗದ ಕಂಟೆಂಟ್ ಅನ್ನು ನಿರ್ಬಂಧಿಸಲು ಸಹ ಅವಕಾಶ ನೀಡಲಾಗಿದೆ. ಒಮ್ಮೆ ಈ ರೀತಿಯ ಕಂಟೆಂಟ್‌ಗೆ ನಿರ್ಬಂಧ ಹೇರಿದರೆ ಮತ್ತೆ ಅವು ನಿಮ್ಮ ಯೂಟ್ಯೂಬ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಅಂದರೆ ಗೂಗಲ್ (Google) ಯೂಟ್ಯೂಬ್‌ನಲ್ಲಿ ಕೆಲವು ಪರಿಹಾರೋಪಾಯಗಳನ್ನು ನೀಡುತ್ತದೆ ಅದು ಬಳಕೆದಾರರು ತಮ್ಮ ಫೀಡ್‌ನಲ್ಲಿ ಕಾಣಿಸಿಕೊಳ್ಳುವ ಕೆಲವು ಚಾನಲ್‌ಗಳಿಂದ ಕಂಟೆಂಟ್ ಪ್ರದರ್ಶನ ಆಗುವುದನ್ನು ತಡೆಯಲು ಅನುವು ಮಾಡಿಕೊಡುತ್ತದೆ. ಹಾಗಿದ್ರೆ, ಈ ಫೀಚರ್ಸ್ ಅನ್ನು ಹೇಗೆ ಬಳಕೆ ಮಾಡಿಕೊಳ್ಳುವುದು ಎಂಬ ಬಗ್ಗೆ ನೀವು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಸರಳ ಮಾರ್ಗ.
ಹಂತ 1: ಮೊದಲು ನಿಮ್ಮ ಫೋನ್‌ನಲ್ಲಿ ಇರುವ ಯೂಟ್ಯೂಬ್ ಆಪ್ (YouTube app) ಅನ್ನು ಓಪನ್ ಮಾಡಬೇಕು. ಅಥವಾ ಲ್ಯಾಪ್‌ಟಾಪ್ ಹಾಗೂ ಇನ್ನಿತರೆ ಡಿವೈಸ್‌ನಲ್ಲಿ ಓಪನ್ ಮಾಡಬೇಕು ಎಂದರೆ youtube.com ಎಂದು ಸರ್ಚ್ ಮಾಡುವ ಮೂಲಕ ಅಧಿಕೃತ ಸೈಟ್ ಅನ್ನು ಓಪನ್ ಮಾಡಿ. ಬಳಿಕ ಯುಟ್ಯೂಬ್ ಅಲ್ಲಿ ನಿರ್ಬಂಧಿಸಲು ಇಚ್ಚಿಸುವ ವಿಡಿಯೋ ಸರ್ಚ್ ಮಾಡಿ.
ಹಂತ 2 : ಅಂದರೆ ನೀವು ನಿರ್ಬಂಧಿಸಲು ಬಯಸುವ ಚಾನಲ್‌ನಿಂದ ಆ ವಿಡಿಯೋವನ್ನು ಸರ್ಚ್ ಮಾಡಿ. ಬಳಿಕ ವಿಡಿಯೋ ಶೀರ್ಷಿಕೆಯ ಪಕ್ಕದಲ್ಲಿರುವ ಮೆನು ಬಟನ್ ಮೇಲೆ ಟ್ಯಾಪ್ ಮಾಡಿದರೆ ಕೆಲವು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಚಾನಲ್ ಅನ್ನು ಶಿಫಾರಸು ಮಾಡಬೇಡಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
ಹಂತ 3 : ಈ ಪ್ರಕ್ರಿಯೆ ಮುಗಿಸಿದ ನಂತರ ಮಾಹಿತಿ ಕಾರ್ಡ್ ನಿಮ್ಮ ಡಿಸ್‌ಪ್ಲೇ ಮೇಲೆ ವಿಡಿಯೋವನ್ನು ಬದಲಾಯಿಸುತ್ತದೆ. ಅಕಸ್ಮಾತ್ ಈ ವೇಳೆ ನೀವು ತಪ್ಪಾದ ಚಾನಲ್ ಅನ್ನು ನಿರ್ಬಂಧಿಸಿದ್ದರೆ ಅಲ್ಲೇ ಕಾಣಿಸಿಕೊಳ್ಳುವ 'ರದ್ದುಮಾಡು' ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿದರೆ ಸಾಕು. ಉಳಿದಂತೆ ನಿಮಗೆ ಇಷ್ಟವಿಲ್ಲದೆ ವಿಡಿಯೋ ಅಥವಾ ಚಾನಲ್ ಅನ್ನು ಯೂಟ್ಯೂಬ್ ನಿಮಗೆ ಶಿಫಾರಸು ಮಾಡುವುದನ್ನು ನಿಲ್ಲಿಸುತ್ತದೆ.

ಯೂಟ್ಯೂಬ್ ಬಳಕೆದಾರರಿಗೆ ಬಂಪರ್ ಸುದ್ದಿ: ಈ ನಡುವೆ ಯೂಟ್ಯೂಬ್ ಮೂರು ತಿಂಗಳ ಉಚಿತ ಚಂದಾದಾರಿಕೆ ಅವಕಾಶ ನೀಡಿದೆ. ಅಂದರೆ ಈ ಮೊದಲು ತಿಂಗಳಿಗೆ ಇಂತಿಷ್ಟು ಎಂದು ಪಾವತಿ ಮಾಡಿ ಯೂಟ್ಯೂಬ್ ಬಳಕೆ ಮಾಡಬೇಕಾಗಿತ್ತು. ಆದರೆ, ಈಗ ಉಚಿತವಾಗಿಯೇ ಪ್ರೀಮಿಯಂ ಸೇವೆ ಪಡೆದುಕೊಳ್ಳಲು ಅನುವು ಮಾಡಿಕೊಡಲಾಗಿದೆ.
ಈ ಸದಸ್ಯತ್ವವು ನಿಮಗೆ ಜಾಹೀರಾತು ಮುಕ್ತ ಕಂಟೆಂಟ್, ಬ್ಯಾಗ್ರೌಂಡ್ ಪ್ಲೇಬ್ಯಾಕ್ ಸೇರಿದಂತೆ ಇನ್ನೂ ಅನೇಕ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಈ ಮೊದಲು ಈ ಸೇವೆ ಪಡೆದುಕೊಳ್ಳಲು ಭಾರತದಲ್ಲಿ ತಿಂಗಳಿಗೆ 139 ರೂ.ಗಳು ಅಥವಾ ಮೂರು ತಿಂಗಳಿಗೆ 399ರೂ.ಗಳನ್ನು ಪಾವತಿ ಮಾಡಬೇಕಿತ್ತು. ಆದರೆ, ಈಗ ಯಾವುದೇ ಹಣ ಪಾವತಿ ಮಾಡುವ ಹಾಗಿಲ್ಲ.ಕೊಡುಗೆಯ ಅವಧಿಯು ಅನಿರ್ದಿಷ್ಟವಾಗಿದೆ.


Click it and Unblock the Notifications








