Home
ಸುದ್ದಿಜಾಲ

ಆನ್‌ಲೈನಿನಲ್ಲಿ 'ಮಾವು' ಖರೀದಿಸಿ ರೈತನ ಜೀವ ಉಳಿಸಿ ಮತ್ತು ಆರೋಗ್ಯವಾಗಿರಿ!!

ಆನ್‌ಲೈನ್‌ ವ್ಯವಹಾರದಿಂದಾಗಿ ಕಷ್ಟಪಟ್ಟು ಆಹಾರ ಬೆಳೆಯುವ ಕೃಷಿಕನೋರ್ವನಿಗೆ ಸಹಾಯವಾಗುವುದು ಮಾತ್ರವಲ್ಲದೇ, ಗುಣಮಟ್ಟದ ಆಹಾರವನ್ನು ಸಹ ಪಡೆಯಬಹುದು ಎಂದಾದರೇ ನೀವು ಕೂಡ ಇನ್ನು ಆನ್‌ಲೈನಿನಲ್ಲೇ ಮಾವಿನ ಹಣ್ಣನ್ನು ಖರೀದಿಸಿ. ಏಕೆಂದರೆ, ನೀವು ಮನೆಯಲ್ಲೇ ಕುಳಿತು ರೈತರ ತೋಟದಿಂದ ನೇರವಾಗಿ ಮಾವನ್ನು ಮನೆಗೆ ತರಿಸಿಕೊಳ್ಳಬಹುದಾದ ಆಯ್ಕೆಯನ್ನು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮಂಡಳಿ ಆರಂಭಿಸಿದೆ.

ಹೌದು, ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ 'ಕಾರ್‌ಸಿರಿ ಮ್ಯಾಂಗೋಸ್' ಎಂಬ ಆನ್‌ಲೈನ್‌ ಪೋರ್ಟಲ್ ಒಂದನ್ನು ಆರಂಭಿಸಿದೆ. ಮಾವು ಬೆಳೆದ ರೈತ ಹಾಗೂ ಗ್ರಾಹಕನ ನಡುವೆ ನೇರ ಸಂಪರ್ಕ ಕಲ್ಪಿಸುವ ಬ್ಯುಸಿನೆಸ್ ಟು ಕಸ್ಟಮರ್ (ಬಿ2ಸಿ) ಯೋಜನೆಯಡಿ ನಿಗಮವು ಈ ಸೇವೆ ಆರಂಭಿಸಿದ್ದು, Https://karsirimangoes.karnataka.gov.in ಲಿಂಕ್ ಮೂಲಕ ನೀವು ರೈತರಿಂದಲೇ ಮಾವು ಖರೀದಿಸಬಹುದಾಗಿದೆ.

ಆನ್‌ಲೈನಿನಲ್ಲಿ 'ಮಾವು' ಖರೀದಿಸಿ ರೈತನ ಜೀವ ಉಳಿಸಿ ಮತ್ತು ಆರೋಗ್ಯವಾಗಿರಿ!!

ಮಾರುಕಟ್ಟೆಯಲ್ಲಿ ಆರೋಗ್ಯಕರ ಮತ್ತು ರುಚಿ ಉತ್ತಮವಾದ ಮಾವು ಸಿಗುತ್ತಿಲ್ಲ ಎಂದು ಕೊರಗುವ ಗ್ರಾಹಕರಿಗೂ ಹಾಗೂ ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ದೂರುತ್ತಿದ್ದ ರೈತರ ಮಧ್ಯೆ ಸೇತುವೆ ನಿರ್ಮಿಸಲು ಬ್ಯುಸಿನೆಸ್ ಟು ಕಸ್ಟಮರ್ ಸಹಾಯವಾಗಲಿದೆ. ಇಬ್ಬರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಆನ್‌ಲೈನ್ ಪೋರ್ಟಲ್ ಸಿದ್ಧಪಡಿಸ‌ಲಾಗಿದ್ದು, ಮಧ್ಯವರ್ತಿಗಳಿಂದ ಆಗುತ್ತಿದ್ದ ನಷ್ಟವನ್ನು ಗ್ರಾಹಕರು ಮತ್ತು ರೈತರೀರ್ವರು ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಗ್ರಾಹಕರು ಹಣ ಪಾವತಿಸಿ ತಮಗೆ ಇಷ್ಟದ ತಳಿಯ ಮಾವಿನ ಹಣ್ಣುಗಳನ್ನು ಗ್ರಾಹಕರು ಪಡೆಯಬಹುದು. ಈ ಬಗ್ಗೆ ಗ್ರಾಹಕರ ಗೊಂದಲ ನಿವಾರಣೆ ಮಾಡಲು 76040 92292 ಸಂಖ್ಯೆ ಸಹಾಯವಾಣಿಯನ್ನು ಆರಂಭಿಸಲಾಗಿದೆ. ರೈತರು ಕೂಡ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡು ವ್ಯಾಪಾರ ಆರಂಭಿಸಬಹುದು. ಇದು ಸಂಪೂರ್ಣ ಶುಲ್ಕರಹಿತ ಸೇವೆಯಾಗಿದ್ದು, ಈಗಾಗಲೇ ಈ ಸೇವೆಯ ಪ್ರಯೋಜನ ಪಡೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನಿನಲ್ಲಿ 'ಮಾವು' ಖರೀದಿಸಿ ರೈತನ ಜೀವ ಉಳಿಸಿ ಮತ್ತು ಆರೋಗ್ಯವಾಗಿರಿ!!

ಮಾರುಕಟ್ಟೆಗಳಲ್ಲಿ ಸಿಗುವ ಮಾವಿಗೆ ರಾಸಾಯನಿಕ ಬಳಸಲಾಗಿರುತ್ತದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದರೆ, ಈ ಪೋರ್ಟಲ್‌ನಿಂದ ಇಷ್ಟವಾದ ಮಾವಿನ ಹಣ್ಣನ್ನು ನೇರವಾಗಿ ಮನೆಗೆ ತರಿಸಿಕೊಳ್ಳಬಹುದಾಗಿದೆ. ಹಾಗಾದರೆ, ತಡ ಏಕೆ?, ಈಗಲೇ Https://karsirimangoes.karnataka.gov.in ಲಿಂಕ್ ಕ್ಲಿಕ್ ಮಾಡಿ ರೈತರಿಂದ ನೇರವಾಗಿ ಮಾವನ್ನು ಖರೀದಿಸಿ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ 080-22236837 ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಿ.

ಓದಿರಿ: 'ಮಾಡರ್ನ್ ಮಗು' ಮೊದಲು ಮಾತನಾಡಿದ ಪದ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಪೋಷಕರು!!

Best Mobiles in India

English summary
You can buy mangoes online easy from any ecommerce platform without taking the trouble of visiting This online portal. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+