ಹೋಳಿ ಆಚರಣೆ ಮಾಡುವಾಗ ಇರಲಿ ಎಚ್ಚರ! ಸ್ಮಾರ್ಟ್‌ಫೋನ್, ಇಯರ್‌ಫೋನ್‌ಗಳನ್ನು ಈ ರೀತಿ ರಕ್ಷಿಸಿ
ಹೋಳಿ ಸಂಭ್ರಮಕ್ಕೆ (holi festival) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ನಡುವೆ ಸಾಕಷ್ಟು ಜನರು ಈ ದೊಡ್ಡ ಹಬ್ಬಕ್ಕೆ ರೆಡಿಯಾಗುತ್ತಿದ್ದು, ಈ ಕಲರ್‌ಫುಲ್ ಹಬ್ಬವನ್ನು ಆಚರಣೆ ಮಾಡುವಾಗ ಬೆಲೆಬಾಳುವ ಗ್ಯಾಜೆಟ್‌ಗಳಾದ ಸ್ಮಾರ್ಟ್‌ಫೋನ್‌ಗಳು, ಇಯರ್‌ಫೋನ್‌ಗಳು (Smartphones, earphones) ಮತ್ತು ಇತರೆ ಗ್ಯಾಜೆಟ್‌ಗಳನ್ನು ರಕ್ಷಿಸಿಕೊಳ್ಳಿ.
ಹೌದು, ಸ್ಮಾರ್ಟ್‌ಫೋನ್,ಸ್ಮಾರ್ಟ್‌ವಾಚ್ ಸೇರಿದಂತೆ ಅನೇಕ ಸ್ಮಾರ್ಟ್‌ಡಿವೈಸ್‌ಗಳನ್ನು ಬಳಕೆ ಮಾಡಲಾಗುತ್ತದೆ. ಅಂದರೆ ಹೋಳಿ ಸಂದರ್ಭದಲ್ಲಿ ಸಂತಸದ ದೃಶ್ಯಗಳನ್ನು ಸೆರೆಹಿಡಿಯಲು ಅಥವಾ ಸೆಲ್ಫಿ ತೆಗೆದುಕೊಳ್ಳಲು ಹೆಚ್ಚಾಗಿ ಫೋನ್ ಬಳಕೆ ಮಾಡಲಾಗುತ್ತದೆ. ಆದರೆ ಬಣ್ಣದ ಆಟದಲ್ಲಿ ಕೊಂಚ ಸಮಸ್ಯೆ ಆದರೂ ಇವು ಶಾಶ್ವತ ಹಾನಿಯಾಗುತ್ತವೆ. ಈ ಕಾರಣಕ್ಕೆ ಈ ಡಿವೈಸ್‌ಗಳನ್ನು ರಕ್ಷಣೆ ಮಾಡಿಕೊಂಡು ಹೋಳಿಯನ್ನು ಇನ್ನಷ್ಟು ರಂಗೇರಿಸುವುದು ಹೇಗೆ ಅನ್ನೋ ಸಲಹೆಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಾಟರ್‌ಪ್ರೂಫ್ ಜಿಪ್ ಲಾಕ್ ಬ್ಯಾಗ್ ಬಳಸಿ: ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಇತರ ಗ್ಯಾಜೆಟ್‌ಗಳನ್ನು ವಾಟರ್‌ಪ್ರೂಫ್ ಜಿಪ್ ಲಾಕ್ ಬ್ಯಾಗ್‌ನಲ್ಲಿ (waterproof zip lock bag) ಇರಿಸಿಕೊಂಡು ಹೋಳಿ ಆಡುವುದು ಉತ್ತಮವಾಗಿದೆ. ಈ ಸರಳ ಮಾರ್ಗವು ನಿಮ್ಮ ಸ್ಮಾರ್ಟ್ ಗ್ಯಾಜೆಟ್ ಅನ್ನು ನೀರು ಮತ್ತು ಬಣ್ಣಗಳ ವಿರುದ್ಧ ರಕ್ಷಿಸುತ್ತವೆ. ರಂಗು ರಂಗಿನ ಹಬ್ಬದ ವೇಳೆಯೂ ನೀವು ಅವುಗಳನ್ನು ಬಳಕೆ ಮಾಡಬಹುದು.
ಟೇಪ್ ಅಂಟಿಸಿ: ಸ್ಮಾರ್ಟ್‌ಫೋನ್‌ಗಳು ಹಾಗೂ ಇತರೆ ಡಿವೈಸ್‌ಗಳಲ್ಲಿ ಕೆಲವು ಪೋರ್ಟ್‌ಗಳು ಇರುತ್ತವೆ. ಇವುಗಳ ಒಳಗೆ ಬಣ್ಣ ಹೋದರೆ ಅಥವಾ ನೀರು ಹೋದರೆ ಡಿವೈಸ್‌ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ ಕಾರಣ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೆಚ್ಚು ಜನಪ್ರಿಯ ಆಗಿರುವ ಅಢೇಸಿವ್ ಟೇಪ್ (Adhesive Tape) ಅನ್ನು ಬಳಕೆ ಮಾಡಿಕೊಂಡು ಪೋರ್ಟ್‌ಗಳು, ಇಯರ್‌ಪೀಸ್ ಗ್ರಿಲ್‌ಗಳು ಮತ್ತು ಹೆಡ್‌ಫೋನ್ ಜ್ಯಾಕ್‌ಗಳಂತಹ ಎಲ್ಲಾ ಪೋರ್ಟ್ ಅನ್ನು ಕವರ್ ಮಾಡಿ.

ಒದ್ದೆಯಾದ ಫೋನ್‌ಗಳನ್ನು ಚಾರ್ಜ್ ಮಾಡಬೇಡಿ: ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಹೋಳಿ ಹಿನ್ನೆಲೆ ಒದ್ದೆಯಾಗಿದ್ದರೆ ಅದನ್ನು ಚಾರ್ಜ್ ಮಾಡುವ ಕೆಲಸ ಮಾಡಬೇಡಿ. ಇದು ಸಂಭಾವ್ಯ ಶಾರ್ಟ್ ಸರ್ಕ್ಯೂಟ್‌ಗಳನ್ನು ತಡೆಗಟ್ಟಲು ಸಹಾಯ ಮಾಡಲಿದೆ. ಬದಲಾಗಿ ಫೋನ್ ಸಂಪೂರ್ಣ ಒಣಗುವವರೆಗೆ ಬಿಡಿ. ಅಲ್ಲದೆ ಈ ವೇಳೆ ಬ್ಲೋ ಡ್ರೈಯರ್‌ಗಳನ್ನು ಸಹ ಬಳಕೆ ಮಾಡಬೇಡಿ. ಇದರ ಶಾಖವು ಡಿವೈಸ್‌ನ ಸೂಕ್ಷ್ಮ ಘಟಕಗಳನ್ನು ಹಾನಿ ಮಾಡಲಿದೆ.
ನ್ಯಾನೊ-ಕೋಟಿಂಗ್ ಸ್ಕ್ರೀನ್ ಪ್ರೊಟೆಕ್ಟರ್ ಬಳಸಿ: ನ್ಯಾನೊ-ಕೋಟಿಂಗ್ ಸ್ಕ್ರೀನ್ ಪ್ರೊಟೆಕ್ಟರ್ ಬಣ್ಣದ ನೀರು ಸೇರಿದಂತೆ ದ್ರವ ಹಾನಿಯ ವಿರುದ್ಧ ಹೆಚ್ಚುವರಿ ರಕ್ಷಣೆಯ ಲೆಯರ್ ಅನ್ನು ನೀಡುತ್ತದೆ. ಇದನ್ನು ಆನ್‌ಲೈನ್ ಮಾರುಕಟ್ಟೆಯಲ್ಲಿ ಅಫರ್ ಬೆಲೆಗೆ ಖರೀದಿ ಮಾಡಬಹುದು. ಈ ಪ್ರೊಟೆಕ್ಟರ್ ನಿಮ್ಮ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಗೆ ದೀರ್ಘ ರಕ್ಷಣೆ ನೀಡುವ ಕೆಲಸ ಮಾಡುತ್ತದೆ.
ಇಯರ್‌ಫೋನ್‌ಗಳಿಗೆ ಗ್ಲಿಸರಿನ್ ಅಥವಾ ಮಾಯಿಶ್ಚರೈಸರ್ ಹಾಕಿ: ಸಂಭಾವ್ಯ ಹಾನಿ ಅಥವಾ ಬಣ್ಣದ ಕಲೆಗಳಿಂದ ಇಯರ್‌ಫೋನ್‌ಗಳನ್ನು ರಕ್ಷಿಸಲು, ಗ್ಲಿಸರಿನ್ ಅಥವಾ ಮಾಯಿಶ್ಚರೈಸರ್ ಅನ್ನು ಹಾಕಿ. ಇದನ್ನು ಮಾಡುವುದರಿಂದ ಇಯರ್‌ಫೋನ್‌ಗಳನ್ನು ರಕ್ಷಿಸುವುದಲ್ಲದೆ, ಸಂಭ್ರಮಾಚರಣೆಯ ನಂತರ ಯಾವುದೇ ಬಣ್ಣದ ಅವಶೇಷಗಳನ್ನು ನೀವು ಕಾಣಲಾಗುವುದಿಲ್ಲ.

ಡಿಸ್‌ಪ್ಲೇ ರಕ್ಷಿಸಿ: ನಿಮ್ಮ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇಯನ್ನು ಟ್ರಾನ್ಫರೆಂಟ್ ಫಿಲ್ಮ್ ಅಥವಾ ಪ್ಲಾಸ್ಟಿಕ್ ಶೀಟ್‌ನಿಂದ ಕವರ್ ಮಾಡಿ. ಇದನ್ನು ಮಾಡುವುದರಿಂದ ನಿಮ್ಮ ಫೋನ್ ಬಣ್ಣದ ಕಲೆಗಳಿಂದ ಮುಕ್ತವಾಗಲಿದೆ. ಜೊತೆಗೆ ಸ್ಪಷ್ಟ ವೀಕ್ಷಣೆ ಅನುಭವವನ್ನು ಪಡೆಯಬಹುದಾಗಿದೆ.
ಪ್ಯಾಟರ್ನ್ ಹಾಗೂ ಪಿನ್ ಲಾಕ್ ಸೆಟ್ ಮಾಡಿ: ಹೋಳಿ ಸಂದರ್ಭದಲ್ಲಿ ಕೈಗಳು ಮತ್ತು ಮುಖ ಬಣ್ಣಗಳಿಂದಲೇ ತುಂಬಿ ಹೋಗಿರುತ್ತದೆ. ಆ ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಬಯೋಮೆಟ್ರಿಕ್ ಸ್ಕ್ಯಾನರ್ ಫಿಂಗರ್‌ಪ್ರಿಂಟ್ ಅಥವಾ ಫೇಸ್ ರೆಕಗ್ನಿಶನ್ ಫೀಚರ್ಸ್ ಕೆಲಸ ಮಾಡುವುದಿಲ್ಲ. ಹೋಳಿ ಆಚರಣೆಯ ಸಮಯದಲ್ಲಿ ನಿಮ್ಮ ಡಿವೈಸ್ ಅನ್ನು ಬಳಕೆ ಮಾಡಬೇಕು ಎಂದರೆ ಪ್ಯಾಟರ್ನ್ ಅಥವಾ ಪಿನ್ ಲಾಕ್ ಅನ್ನು ಸೆಟ್ ಮಾಡಿಕೊಳ್ಳಿ.
ಸಿಲಿಕಾ ಪೌಚ್‌ಗಳನ್ನು ಬಳಕೆ ಮಾಡಿ: ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಿರುವ ಜಿಪ್-ಲಾಕ್ ಆಯ್ಕೆ ಇರುವ ಸಿಲಿಕಾ ಪೌಚ್‌ಗಳನ್ನು ಈ ವೇಳೆ ಬಳಕೆ ಮಾಡಬಹುದು. ಸ್ಮಾರ್ಟ್‌ಫೋನ್ ಮತ್ತು ಇತರ ಗ್ಯಾಜೆಟ್‌ಗಳನ್ನು ತೇವಾಂಶದ ವಿರುದ್ಧ ರಕ್ಷಿಸಲು ಇದು ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಈ ಚೀಲಗಳು ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತವೆ, ನಿಮ್ಮ ಡಿವೈಸ್‌ಗೆ ಹಾನಿಯಾಗುವ ಅಪಾಯವನ್ನು ಮಾಡುತ್ತದೆ.


Click it and Unblock the Notifications








