Home
ಸುದ್ದಿಜಾಲ

ಟ್ರಾಫಿಕ್ ರೂಲ್ಸ್ ಬ್ರೇಕ್‌ ಮಾಡಿದ್ದೀರಾ? ಎಷ್ಟು ದಂಡ ಬಾಕಿ ಇದೆ?..ಹೀಗೆ ತಿಳಿಯಿರಿ!

ಇತ್ತೀಚಿಗೆ ಕೇಂದ್ರ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದಿದ್ದು, ಸಂಚಾರಿ ನಿಯಮ ಉಲ್ಲಂಘಿಸುವ ಸವಾರರಿಗೆ ಹೆಚ್ಚಿನ ದಂಡ ವಿಧಿಸುತ್ತದೆ. ಅಲ್ಲದೇ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುವವರನ್ನು ಪತ್ತೆಹಚ್ಚಲು ಹೆಚ್ಚುವರಿಯಾಗಿ, ಸರ್ಕಾರವು ರಸ್ತೆಯಲ್ಲಿ ಕ್ಯಾಮೆರಾಗಳು ಮತ್ತು ಇತರ ಸೆನ್ಸಾರ್‌ಗಳನ್ನು ಅಳವಡಿಸಿದೆ. ಇದು ನಿಯಮಗಳನ್ನು ಉಲ್ಲಂಘಿಸಿದ ಜನರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸುಲಭವಾಗಿದೆ.

ಸವಾರರಿಗೆ

ಸುಲಭ ಪಾವತಿಗಾಗಿ ಚಾಲಕರಿಗೆ ದಂಡ ವಿಧಿಸುವ ಮತ್ತು ಚಲನ್ ಪಾವತಿಸುವ ಸಂಪೂರ್ಣ ವ್ಯವಸ್ಥೆಯನ್ನು ಆನ್‌ಲೈನ್‌ಗೆ ತರಲಾಗಿದ್ದರೂ, ಟ್ರಾಫಿಕ್ ಚಲನ್ ಬಗ್ಗೆ ಅನೇಕ ವಾಹನ ಸವಾರರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಸಂದರ್ಭಗಳಿವೆ. ಹೀಗಾಗಿ, ಈ ಚಲನ್‌ಗಳು ಪಾವತಿಸದೆ ಹಾಗೆಯೇ ಉಳಿಯುತ್ತವೆ. ಆದರೆ ಸವಾರರು/ ಚಾಲಕರು ಆನ್‌ಲೈನ್‌ ಮೂಲಕ ದಂಡದ ಮೊತ್ತ ತಿಳಿಯಬಹುದು ಹಾಗೂ ಆನ್‌ಲೈನ್‌ ಮೂಲಕವೇ ಪಾವತಿಸಬಹುದು.

ನಿಬಂಧನೆಗಳನ್ನು

ಹೌದು, ದಂಡ ವಿಧಿಸಲಾಗಿದೆಯೇ ಎಂದು ಪರಿಶೀಲಿಸಲು ಸರ್ಕಾರ ಕೆಲವು ಸುಲಭವಾದ ಮಾರ್ಗವನ್ನು ಸಹ ರೂಪಿಸಿದೆ. ಈ ಮೂಲಕ ಸವಾರರು ದಂಡ ವಿಧಿಸಲಾಗಿದೆಯೇ ಎಂದು ಪರಿಶೀಲಿಸಬಹುದು. ಇ-ಚಲನ್ ಎನ್ನುವುದು ಟ್ರಾಫಿಕ್ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸುವ ವ್ಯಕ್ತಿ ಕಂಡುಬಂದಲ್ಲಿ ನೀಡಲಾದ ಎಲೆಕ್ಟ್ರಾನಿಕ್ ಮೂಲಕ ರಚಿಸಲಾದ ದಾಖಲೆಯಾಗಿದೆ. ಹಾಗಾದರೇ ದಂಡ ವಿಧಿಸಲಾಗಿದೆಯೇ ಎಂದು ತಿಳಿಯುವುದು ಹೇಗೆ? ಮತ್ತು ಆನ್‌ಲೈನ್ ಟ್ರಾಫಿಕ್ ಚಲನ್ ಅನ್ನು ಪಾವತಿಸುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಬೆಂಗಳೂರು ನಗರ ಸಂಚಾರ ಪೊಲೀಸರ ದಂಡದ ವಿವರಗಳನ್ನು ಆನ್‌ಲೈನ್‌ನಲ್ಲಿ ಚೆಕ್‌ ಮಾಡಲು ಹೀಗೆ ಮಾಡಿ:

ಬೆಂಗಳೂರು ನಗರ ಸಂಚಾರ ಪೊಲೀಸರ ದಂಡದ ವಿವರಗಳನ್ನು ಆನ್‌ಲೈನ್‌ನಲ್ಲಿ ಚೆಕ್‌ ಮಾಡಲು ಹೀಗೆ ಮಾಡಿ:

ಹಂತ 1: https://echallan.parivahan.gov.in/ ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ 'ಚೆಕ್ ಚಲನ್ ಸ್ಟೇಟಸ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ DL ಸಂಖ್ಯೆ ಅಥವಾ ವಾಹನದ ಸಂಖ್ಯೆಯನ್ನು ನೀವು ನಮೂದಿಸಬೇಕಾದಲ್ಲಿ ಹೊಸ ಪುಟವು ತೆರೆಯುತ್ತದೆ
ಹಂತ 4: ನಿಮ್ಮ ವಿರುದ್ಧ ಯಾವುದೇ ದಂಡ ಮತ್ತು ಇ-ಚಲನ್ ಇಲ್ಲದಿದ್ದರೆ, ಚಲನ್ ಕಂಡುಬಂದಿಲ್ಲ' ಎಂಬ ಡೈಲಾಗ್ ಬಾಕ್ಸ್ ತೆರೆಯುತ್ತದೆ
ಹಂತ 5: ನಿಮ್ಮ ಹೆಸರಿನ ವಿರುದ್ಧ ದಂಡ ಅಥವಾ ಇ-ಚಲನ್ ಬಾಕಿ ಇದ್ದರೆ, ನಂತರ ಪುಟವು ತೆರೆಯುತ್ತದೆ ಅದು ನಿಮಗೆ ಚಲನ್ ಕುರಿತು ಎಲ್ಲಾ ವಿವರಗಳನ್ನು ತೋರಿಸುತ್ತದೆ.

ಆನ್‌ಲೈನ್‌ನಲ್ಲಿ ಚಲನ್ ಪಾವತಿ ಮಾಡಲು ಬಯಸಿದರೆ ಹಂತಗಳು ಇಲ್ಲಿವೆ:

ಆನ್‌ಲೈನ್‌ನಲ್ಲಿ ಚಲನ್ ಪಾವತಿ ಮಾಡಲು ಬಯಸಿದರೆ ಹಂತಗಳು ಇಲ್ಲಿವೆ:

ಹಂತ 1: https://echallan.parivahan.gov.in/index/accused-challan ಗೆ ಭೇಟಿ ನೀಡಿ
ಹಂತ 2: ಪುಟದಲ್ಲಿ ನಿಮ್ಮ ಚಲನ್ ಸಂಖ್ಯೆ, ವಾಹನ ಸಂಖ್ಯೆ ಅಥವಾ DL ಸಂಖ್ಯೆಯನ್ನು ನಮೂದಿಸಿ
ಹಂತ 3: ಕ್ಯಾಪ್ಚಾ ಕೋಡ್ ಸೇರಿಸಿ ಮತ್ತು 'ವಿವರ ಪಡೆಯಿರಿ' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 4: ಹೊಸ ಪುಟವು ತೆರೆಯುತ್ತದೆ, ಅಲ್ಲಿ ನೀವು ಇ-ಚಲನ್ ಕುರಿತು ಪ್ರತಿ ವಿವರವನ್ನು ಪಡೆಯಬಹುದು
ಹಂತ 5: ಪಾವತಿ ಕಾಲಮ್‌ನ ಅಡಿಯಲ್ಲಿ 'ಈಗ ಪಾವತಿಸಿ' ಕ್ಲಿಕ್ ಮಾಡಿ ಮತ್ತು ಮುಂದುವರಿಯಿರಿ
ಹಂತ 6: ನೀಡಿರುವ ಆಯ್ಕೆಗಳಿಂದ ಪಾವತಿಯ ವಿಧಾನವನ್ನು ಆರಿಸಿ. ನೀವು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು
ಹಂತ 7: ಪಾವತಿಯನ್ನು ಸ್ವೀಕರಿಸಿದ ನಂತರ, ನೋಂದಾಯಿತ ಮೊಬೈಲ್ ಸಂಖ್ಯೆಗೆ ದೃಢೀಕರಣ ಸಂದೇಶವನ್ನು ಕಳುಹಿಸಲಾಗುತ್ತದೆ.

ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಈ ದಾಖಲಾತಿಗಳು ಅಗತ್ಯ

ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಈ ದಾಖಲಾತಿಗಳು ಅಗತ್ಯ

ಕಲಿಕಾ ಚಾಲನಾ ಅನುಜ್ಞಾ ಪತ್ರ-LLR
ಡ್ರೈವಿಂಗ್ ಲೈಸನ್ಸ್‌ ಪಡೆಯಲು ಮೊದಲು ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಪಡೆದುಕೊಳ್ಳಬೇಕು. ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯಲು ಆಸಕ್ತರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯಲು ಅರ್ಜಿ ಸಲ್ಲಿಸುವವರು 18 ವರ್ಷ ತುಂಬಿದ ಮತ್ತು ಮೇಲ್ಪಟ್ಟಿರಬೇಕು. ಅಂತಹ ಅರ್ಜಿದಾರರು ಮಾತ್ರ ಅರ್ಹರಾಗಿರುತ್ತಾರೆ.

ವಯಸ್ಸಿನ ಪ್ರಮಾಣ ಪತ್ರ

ವಯಸ್ಸಿನ ಪ್ರಮಾಣ ಪತ್ರ

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ವಯಸ್ಸಿನ ಪ್ರಮಾಣ ಪತ್ರ ನೀಡಬೇಕಿರುತ್ತದೆ. ಅಂದರೇ ಡ್ರೈವಿಂಗ್ ಲೈಸನ್ಸ್‌ ಪಡೆಯಲು ಅರ್ಜಿದಾರರು 18 ವರ್ಷ ಪೂರೈಸಿರುವುದನ್ನು ದೃಢಿಕರಿಸಲು ವಯಸ್ಸಿನ ಪ್ರಮಾಣ ಪತ್ರ ಅಗತ್ಯ. ಅರ್ಜಿದಾರರು ವಯಸ್ಸಿನ ದೃಢಿಕರಣಕ್ಕಾಗಿ ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿಗಳು ಅಥವಾ ಪಾನ್ ಕಾರ್ಡ್‌ ನೀಡಬಹುದಾಗಿದೆ.

ವಿಳಾಸ ಪುರಾವೆ

ವಿಳಾಸ ಪುರಾವೆ

ಅರ್ಜಿದಾರರು ತಮ್ಮ ವಿಳಾಸ ಪುರಾವೆಯ ದಾಖಲೆಯನ್ನು ಸಲ್ಲಿಸಬೇಕಿರುತ್ತದೆ. ಅದಕ್ಕಾಗಿ ಪಡಿತರ ಚೀಟಿ, ಪಾಸ್‌ಪೋರ್ಟ್, ಜೀವ ವಿಮೆ ಪಾಲಿಸಿ, ಚುನಾವಣಾ ಗುರುತಿನ ಚೀಟಿ, ದೂರವಾಣಿ ಬಿಲ್, ನೀರಿನ ಬಿಲ್ ಅಥವಾ ದಂಡಾಧಿಕಾರಿಗಳ ಅಥವಾ ನೋಟರಿಯವರ ಮುಂದೆ ದೃಢೀಕರಿಸಿದ ವಯಸ್ಸು ಮತ್ತು ವಿಳಾಸದ ಪ್ರಮಾಣ ಪತ್ರವನ್ನು ಸಹ ಅರ್ಜಿಯೊಂದಿಗೆ ಲಗತ್ತಿಸಬಹುದಾಗಿದೆ.

ಅರ್ಜಿ ನಮೂನೆ -2 (CMVR-2)

ಅರ್ಜಿ ನಮೂನೆ -2 (CMVR-2)

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ಆನ್‌ಲೈನ್‌ನಲ್ಲಿ ನಮೂನೆ -2 (CMVR-2) ಅನ್ನು ತುಂಬಿದಬೇಕು. ಈ ಅರ್ಜಿಯಲ್ಲಿ ಯಾವ ವಾಹನದ ಮಾದರಿಯ(LMV/Motor Cycle without gear/Motor Cycle with gear ) ಲೈಸನ್ಸ್ ಪಡೆಯಲು ಅರ್ಜಿಸಲಿಸುತ್ತಿರಿ ಎನ್ನುವ ಅಂಶಗಳು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿರಿ. ನಂತರ ಮುದ್ರಿತ ಪ್ರತಿಯನ್ನು (Print out) ತೆಗೆದುಕೊಳ್ಳಬೇಕು.

ವೈದ್ಯಕೀಯ ಪ್ರಮಾಣ ಪತ್ರ

ವೈದ್ಯಕೀಯ ಪ್ರಮಾಣ ಪತ್ರ

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ 40 ವರ್ಷ ವಯಸ್ಸು ಪೂರ್ಣಗೊಂಡಿರುವ ಅಭ್ಯರ್ಥಿಗಳು ನೊಂದಾಯಿತ ವೈದ್ಯಾಧಿಕಾರಿರವರು ನೀಡಿರುವ ವೈದ್ಯಕೀಯ ಪ್ರಮಾಣ ಪತ್ರ ಅರ್ಜಿಯೊಂದಿಗೆ ಲಗತ್ತಿಸಬೇಕು. (ಇದು ಸಾರಿಗೇತರ ವಾಹನಗಳಿಗೆ ಸಂಬಂಧಿಸಿರುತ್ತದೆ). ಹಾಗೂ ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾನಪತ್ರ ಸಲ್ಲಿಸುವವರು ವಯಸ್ಸಿನ ಲೆಕ್ಕ ಮಿತಿಯಿಲ್ಲದೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.

ಸಾರಿಗೆ ವಾಹನಗಳಿಗೆ

ಸಾರಿಗೆ ವಾಹನಗಳಿಗೆ

ಯಲ್ಲೊ ಬೋರ್ಡ್‌ ವಾಹನಗಳು ಎಂದು ಹೇಳಲಾಗುವ ಮೋಟಾರ್ ಕ್ಯಾಬ್, ಆಟೋ ರಿಕ್ಷಾ ಕ್ಯಾಬ್ ಸಾರ್ವಜಿನಿಕ ಸೇವಾ ವಾಹನಗಳು (ಪಿ. ಎಸ್. ವಿ), ಭಾರಿ ಸಾರಿಗೆ ವಾಹನಗಳು (ಹೆಚ್.ಟಿ. ವಿ) ಮತ್ತು ಇತರ ನಿರ್ದಿಷ್ಟ ವಾಹನಗಳ ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕಿದ್ದರೇ, ಅರ್ಜಿದಾರರ ವಯಸ್ಸು 20 ವರ್ಷ ತುಂಬಿರಬೇಕು ಅಥವಾ 20 ವರ್ಷ ಮೇಲ್ಪಟ್ಟಿರಬೇಕು.

Best Mobiles in India

English summary
How to check and Pay Traffic Challan online in Bangalore: Follow These Steps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+