Home
ಸುದ್ದಿಜಾಲ

Ration Card: ರದ್ದುಗೊಂಡ, ಅಮಾನತುಗೊಂಡ ರೇಷನ್ ಕಾರ್ಡ್‌ ಮಾಹಿತಿ ಬೇಕೆ? ಹೀಗೆ ಮಾಡಿ!

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ಪಡಿತರ ಚೀಟಿ ಹಾಗೂ ಆಧಾರ್‌ಕಾರ್ಡ್‌ (Ration Card, Aadhaar Card) ಮೌಲ್ಯ ಇನ್ನಷ್ಟು ಹೆಚ್ಚಿಗೆ ಆಗಿದೆ. ಇದಕ್ಕೆ ಕಾರಣ ಸರ್ಕಾರದ ಗ್ಯಾರಂಟಿ ಯೋಜನೆಗಳು (Government Guarantee Scheme). ಈ ನಡುವೆ ಗೃಹ ಲಕ್ಷ್ಮಿ ಯೋಜನೆಗೆ (Gruhlaxmi scheme) ಪಡಿತರ ಚೀಟಿ ಕಡ್ಡಾಯವಾಗಿದ್ದು, ಸರ್ಕಾರ ಮನೆಯ ಯಜಮಾನಿ ಯಾರು ಎಂದು ತಿದ್ದುಪಡಿ ಮಾಡಲು ಅವಕಾಶ ಸಹ ನೀಡಿದೆ.

ಹೌದು, ಗೃಹ ಲಕ್ಷ್ಮಿ ಯೋಜನೆ ಸೇರಿದಂತೆ ಪಡಿತರ ಪಡೆದುಕೊಳ್ಳಲು ಹಾಗೂ ಸರ್ಕಾರದ ಅನೇಕ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದರೆ ರೇಷನ್‌ ಕಾರ್ಡ್‌ ಕಡ್ಡಾಯವಾಗಿದೆ. ಈ ನಡುವೆ ಸರ್ಕಾರ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿದ್ದರೂ ಸಹ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿರುವವರನ್ನು ಪರಿಶೀಲನೆ ಮಾಡಲಾಗಿದೆ. ಅದರಂತೆ ಯಾರ್ಯಾರ ರೇಷನ್‌ ಕಾರ್ಡ್‌ ಮನವಿ ತಿರಸ್ಕೃತ ಆಗಿದೆ ಎಂಬ ಲಿಸ್ಟ್‌ ಅನ್ನು ನೀವು ಸುಲಭವಾಗಿ ವೀಕ್ಷಣೆ ಮಾಡಬಹುದು.

ರದ್ದುಗೊಂಡ, ಅಮಾನತುಗೊಂಡ ರೇಷನ್ ಕಾರ್ಡ್‌ ಮಾಹಿತಿ ಬೇಕೆ? ಹೀಗೆ ಮಾಡಿ!

ಮೊದಲೇ ತಿಳಿಸಿದಂತೆ ರೇಷನ್‌ ಕಾರ್ಡ್‌ ಈಗ ತುಂಬಾ ಅಗತ್ಯವಾದ ದಾಖಲೆಯಾಗಿದ್ದು, ಕೆಲವು ಜನರು ಹೊಸ ರೇಷನ್‌ ಕಾರ್ಡ್‌ಗೆ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದರೆ ಇನ್ನೂ ಹಲವಾರು ಜನರು ಅರ್ಜಿ ಸಲ್ಲಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಹಾಗಿದ್ರೆ, ಬನ್ನಿ ಈಗಾಗಲೇ ನೀವು ಹೊಸ ರೇಷನ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಕೆ ಮಾಡಿದ್ದರೆ ಅದು ಯಾವ ಹಂತದಲ್ಲಿದೆ, ನಿಮ್ಮ ಮನವಿ ಸ್ವೀಕಾರ ಆಗಿದೆಯಾ ಅಥವಾ ತಿರಸ್ಕೃತ ಆಗಿದೆಯಾ ಎಂದು ತಿಳಿದುಕೊಳ್ಳಿ.

ಹಂತ 1 : ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೀವು ಆಹಾರ ಇಲಾಖೆಯ ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕಿದೆ. ಇದಕ್ಕಾಗಿ ನೀವು https://ahara.kar.nic.in/Home/Home ಲಿಂಕ್‌ ಅನ್ನು ಬಳಕೆ ಮಾಡಿಕೊಳ್ಳಬಹುದು. ನಂತರ ಅಲ್ಲೇ ನಿಮಗೆ ಇ-ಸರ್ವಿಸ್‌ (EServices) ಎಂಬ ವಿಭಾಗ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 2: ಇದಾದ ಬಳಿಕ ನಿಮಗೆ ಹಲವಾರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ವಿಭಾಗದಲ್ಲಿ ಇ ರೇಷನ್‌ ಕಾರ್ಡ್‌ (E Ration Card) ಮೇಲೆ ಟ್ಯಾಪ್‌ಮಾಡಿ, ಇದಾದ ನಂತರ ನಿಮಗೆ ರದ್ದುಪಡಿಸಿದ / ಅಮಾನತುಗೊಳಿಸಿದ ಪಟ್ಟಿಯನ್ನು ತೋರಿಸಿ (Show Cancelled / Suspended list) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 3: ಈ ಎಲ್ಲಾ ಕೆಲಸ ಮಾಡಿದ ಮೇಲೆ ನಿಮಗೆ ಹೊಸ ವಿಭಾಗ ಕಾಣಿಸಿಕೊಳ್ಳಲಿದ್ದು, ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು ಹಾಗೂ ತಿಂಗಳು, ವರ್ಷವನ್ನು ಎಂಟ್ರಿ ಮಾಡಿ. ಈ ರೀತಿ ಮಾಡಿದ ನಂತರ ನೀವು ಯಾವ ತಾಲೂಕನ್ನು ಆಯ್ಕೆ ಮಾಡಿದ್ದೀರೋ ಆ ತಾಲೂಕಿನ ರದ್ದುಪಡಿಸಿದ ಅಥವಾ ಅಮಾನತುಗೊಳಿಸಿದ ಅರ್ಜಿಗಳನ್ನು ಕಾಣಬಹುದು. ಇದರಲ್ಲಿ ನಿಮ್ಮ ಹೆಸರು ಏನಾದರೂ ಇದ್ದರೆ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ತಿದ್ದುಪಡಿ ಮಾಡಿಸಿಕೊಳ್ಳಿ.

ನಿಮ್ಮ ಗ್ರಾಮದಲ್ಲಿ ಯಾರ್ಯಾರಿಗೆ ಯಾವ ರೇಷನ್‌ ಕಾರ್ಡ್‌ ಇದೆ ಎಂದು ತಿಳಿದುಕೊಳ್ಳಲು ಹೀಗೆ ಮಾಡಿ.
ಹಂತ ೧1: ನಿಮ್ಮ ಗ್ರಾಮದಲ್ಲಿ ಯಾರ್ಯಾರು ರೇಷನ್‌ ಕಾರ್ಡ್‌ ಹೊಂದಿದ್ದಾರೆ. ಆ ಕಾರ್ಡ್‌ನಲ್ಲಿ ಎಷ್ಟು ಸದಸ್ಯರು ಇದ್ದಾರೆ ಎಂದು ತಿಳಿಯಲು ಇ ಸರ್ವಿಸ್‌ ಮೇಲೆ ಕ್ಲಿಕ್‌ ಮಾಡಿ ನಂತರದಲ್ಲಿ ಇ ರೇಷನ್‌ ಕಾರ್ಡ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿದರೆ ಹಲವಾರು ಆಯ್ಕೆಗಳು ಕಾಣಿಸಿಕೊಳ್ಳುತ್ತದೆ. ಈ ವೇಳೆ ನೀವು ಹಳ್ಳಿಗಳ ಲಿಸ್ಟ್‌ ಅನ್ನು ತೋರಿಸಿ (Show Village list) ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ.

ರದ್ದುಗೊಂಡ, ಅಮಾನತುಗೊಂಡ ರೇಷನ್ ಕಾರ್ಡ್‌ ಮಾಹಿತಿ ಬೇಕೆ? ಹೀಗೆ ಮಾಡಿ!

ಹಂತ 2: ಇದಾದ ನಂತರದಲ್ಲಿ ಕೆಲವು ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಅಂದರೆ ಮೊದಲಿಗೆ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್‌ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ Go ಅಥವಾ ಮುಂದುವರೆಯಿರಿ ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿದ್ರೆ ನಿಮ್ಮ ಗ್ರಾಮದ ಎಲ್ಲಾ ಅರ್ಹರ ಮಾಹಿತಿ ತೆರೆದುಕೊಳ್ಳುತ್ತದೆ ಇದರಲ್ಲಿ ರೇಷನ್‌ಕಾರ್ಡ್‌ ನಂಬರ್‌, ಮುಖ್ಯಸ್ಥರ ಹೆಸರು, ವಿಳಾಸ ಹಾಗೂ ಕಾರ್ಡ್‌ನ ವಿಧ ಮತ್ತು ಕುಟುಂಬದ ಸದಸ್ಯರ ಸಂಖ್ಯೆ ಕಾಣಿಸಿಕೊಳ್ಳುತ್ತದೆ.

Best Mobiles in India

English summary
Follow this to check if your ration card application is canceled or suspended.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+