Home
ಸುದ್ದಿಜಾಲ

PM KISAN ನ 13 ನೇ ಕಂತು ಬಿಡುಗಡೆ; ಮೊಬೈಲ್‌ನಲ್ಲೇ ಫಲಾನುಭವಿ ಸ್ಟೇಟಸ್‌ ಚೆಕ್‌ ಮಾಡಿ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯು ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ರೈತರಿಗೆ ಆರ್ಥಿಕ ಬೆಂಬಲ ನೀಡುತ್ತಾ ಬರುತ್ತಿದೆ. ಅದರಂತೆ ಇದೀಗ ಪಿಎಮ್‌ ಕಿಸಾನ್‌ನ 13 ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, ಆನ್‌ಲೈನ್‌ ಮೂಲಕ ಫಲಾನುಭವಿಯ ಸ್ಟೇಟಸ್‌ ಅನ್ನು ಈ ಮೂಲಕ ತಿಳಿದುಕೊಳ್ಳಿ.

2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಆರಂಭಿಸಲಾಗಿದ್ದು, ಅಂದಿನಿಂದಲೂ ರೈತರಿಗೆ ಪ್ರತಿ ವರ್ಷಕ್ಕೆ 6,000 ರೂ. ಗಳ ಸಹಾಯಧನವನ್ನು 2,000 ರೂ. ಗಳಂತೆ ಮೂರು ಕಂತುಗಳಲ್ಲಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಈ ಮೂಲಕ ಲಕ್ಷಾಂತರ ರೈತರು ಉತ್ತಮ ಬೆಳೆ ಬೆಳದು ಸದೃಢರಾಗುತ್ತಿದ್ದಾರೆ.

PM KISANನ 13 ನೇ ಕಂತು ಬಿಡುಗಡೆ;ಮೊಬೈಲ್‌ನಲ್ಲೇ ಫಲಾನುಭವಿ ಸ್ಟೇಟಸ್‌ ಚೆಕ್‌ ಮಾಡಿ

ಈ 13 ನೇ ಕಂತಿನಲ್ಲಿ 8 ಕೋಟಿಗೂ ಹೆಚ್ಚು ಅರ್ಹ ರೈತರಿಗೆ ಒಟ್ಟು 16,800 ಕೋಟಿ ರೂಪಾಯಿಗಳ ಆರ್ಥಿಕ ಸಹಾಯ ನೀಡಲಾಗುತ್ತಿದ್ದು, ಈ ಯೋಜನೆಯನ್ನು ನೀವು ಸಹ ಪಡೆದುಕೊಳ್ಳಬೇಕು ಎಂದರೆ ಏನು ಮಾಡಬೇಕು?, ಜೊತೆಗೆ ಪಿಎಂ ಕಿಸಾನ್ ಫಲಾನುಭವಿಗಳ ಸ್ಟೇಟಸ್‌ ಅನ್ನು ಪರಿಶೀಲಿಸುವುದು ಹೇಗೆ ಎಂಬಿತ್ಯಾದಿ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಗಮನಿಸಿ.

ಕಿಸಾನ್ ಸಮ್ಮಾನ್ ನಿಧಿಗೆ ಅರ್ಹರಾಗುವುದು ಹೇಗೆ?

ಮೊದಲು ಅರ್ಜಿದಾರರು ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರಬೇಕಾಗುತ್ತದೆ. ಜೊತೆಗೆ 2 ಹೆಕ್ಟೇರ್‌ವರೆಗಿನ ಜಮೀನು ಹೊಂದಿರುವ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆ ಅನ್ವಯಿಸುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಯಾವುದೇ ವಯಸ್ಸಿನ ಮಿತಿ ನಿಖರಪಡಿಸಿಲ್ಲ ಈ ಮೂಲಕ ಯಾರು ನಿಗದಿತ ಜಮೀನನ್ನು ಹೊಂದಿದ್ದಾರೋ ಅವರು ಅರ್ಹರಾಗುತ್ತಾರೆ.

ಹಾಗೆಯೇ ಈ ಯೋಜನೆಯ ಪ್ರಯೋಜನ ಪಡೆಯಲು ಮತ್ತಷ್ಟು ಷರತ್ತುಗಳಿದ್ದು, ಅರ್ಜಿದಾರರು ಭಾರತೀಯ ನಾಗರಿಕರಾಗಿಬೇಕಾಗಿದೆ. ಜೊತೆಗೆ ಈ ಸೌಲಭ್ಯ ಪಡೆದುಕೊಳ್ಳಲು ರೈತರು ಇಂತಿಷ್ಟೇ ಆದಾಯ ಪಡೆಯಬೇಕು ಎಂಬ ನಿಯಮವಿಲ್ಲ. ಹಾಗೆಯೇ ರೈತರು ತಮ್ಮ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಿರುವುದು ಕಡ್ಡಾಯ. ಅದೆಲ್ಲಕ್ಕೂ ಮಿಗಿಲಾಗಿ ಅರ್ಜಿ ಸಲ್ಲಿಸಲು ರೈತರು ಆಧಾರ್ ಕಾರ್ಡ್ ಹೊಂದಿರಲೇಬೇಕು.

PM KISANನ 13 ನೇ ಕಂತು ಬಿಡುಗಡೆ;ಮೊಬೈಲ್‌ನಲ್ಲೇ ಫಲಾನುಭವಿ ಸ್ಟೇಟಸ್‌ ಚೆಕ್‌ ಮಾಡಿ

ಪಿಎಂ ಕಿಸಾನ್ ಫಲಾನುಭವಿಗಳ ಸ್ಟೇಟಸ್‌ ಪರಿಶೀಲಿಸುವುದು ಹೇಗೆ?

ಈ ಯೋಜನೆ ಆರಂಭವಾದಾಗಿನಿಂದ ಇದುವರೆಗೆ ದೇಶದ 11 ಕೋಟಿ ರೈತರಿಗೆ 2.25 ಲಕ್ಷ ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ. ಸಾಮಾನ್ಯವಾಗಿ ಹಲವು ರೈತರಿಗೆ ಹಣ ಜಮಾ ಆಗಿರುತ್ತದೆ. ಆದರೆ, ಕೆಲವು ರೈತರಿಗೆ ತಾಂತ್ರಿಕ ಸಮಸ್ಯೆ ಅಥವಾ ಇ-ಕೆವೈಸಿಯಂತಹ ಸಮಸ್ಯೆಗಳಿಂದ ಹಣ ಜಮಾ ಆಗಿರುವುದಿಲ್ಲ. ಪರಿಣಾಮ ರೈತರು ತಮ್ಮ ಪಿಎಂ ಕಿಸಾನ್ ಫಲಾನುಭವಿಗಳ ಸ್ಟೇಟಸ್‌ ಅನ್ನು ಈ ಸರಳ ಹಂತದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಹಂತ 1
ಮೊದಲು ನಿಮ್ಮ ಡಿವೈಸ್‌ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು. ಇದಕ್ಕಾಗಿ ನೀವು ಸರ್ಚ್‌ಬಾರ್‌ನಲ್ಲಿ www.pmkisan.gov.in ಎಂದು ಟೈಪ್‌ ಮಾಡಬೇಕು. ಇದಾದ ನಂತರ ಅಧಿಕೃತ ಪೋರ್ಟಲ್‌ ತೆರೆದುಕೊಳ್ಳುತ್ತದೆ. ಅಲ್ಲಿ ಫಾರ್ಮರ್ ಕಾರ್ನರ್‌ಗೆ ಭೇಟಿ ನೀಡಬೇಕಿದೆ.

ಹಂತ 2
ಫಾರ್ಮರ್ ಕಾರ್ನರ್‌ನಲ್ಲಿ ಫಲಾನುಭವಿ ಸ್ಟೇಟಸ್‌ ಟ್ಯಾಬ್ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇದಾದ ಬಳಿಕ ಅಲ್ಲಿ ಅಗತ್ಯವಾಗಿ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ಎಂಟ್ರಿ ಮಾಡಬೇಕಾಗುತ್ತದೆ. ಮೊಬೈಲ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಿದ ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಇದನ್ನು ಎಂಟ್ರಿ ಮಾಡಿದ ನಂತರ ಡಾಟಾ ಪಡೆಯಿರಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

PM KISANನ 13 ನೇ ಕಂತು ಬಿಡುಗಡೆ;ಮೊಬೈಲ್‌ನಲ್ಲೇ ಫಲಾನುಭವಿ ಸ್ಟೇಟಸ್‌ ಚೆಕ್‌ ಮಾಡಿ

13ನೇ ಕಂತು ಈ ರೈತರ ಖಾತೆಗೆ ಜಮಾ ಆಗುವುದಿಲ್ಲ

ಇನ್ನು ಭೂ ದಾಖಲೆಗಳು ತಪ್ಪಾಗಿ ಕಂಡುಬಂದಲ್ಲಿ ರೈತರನ್ನು ಈ ಯೋಜನೆಯ ಫಲಾನುಭವಿ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಇಂತಹ ರೈತರಿಗೆ ಹಣ ಜಮಾ ಆಗುವುದಿಲ್ಲ. ಜೊತೆಗೆ ಇ-ಕೆವೈಸಿ ಅಪ್‌ಡೇಟ್ ಮಾಡದಿದ್ದರೂ, 13 ನೇ ಕಂತಿನಿಂದ ವಂಚಿತರಾಗಬಹುದು. ಇದರೊಂದಿಗೆ ನೀವೇನಾದರೂ ಸಾಂವಿಧಾನಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೆ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.ಅದರಲ್ಲೂ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದೀರಾ ಎಂದಾದರೂ ಸಹ ಈ ಯೋಜನೆಗೆ ಅನರ್ಹರು.

Best Mobiles in India

English summary
In this 13th Installment of PM Kisan Nidhi, a total financial assistance of Rs 16,800 crore is being provided to more than 8 crore eligible farmers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+