ನಿಮ್ಮ ಪ್ಯಾನ್ ಕಾರ್ಡ್ ಮಾನ್ಯವಾಗಿದೆಯಾ ಎಂದು ತಿಳಿಯಲು ಈ ಹಂತ ಅನುಸರಿಸಿ!
ಈಗಂತೂ ಎಲ್ಲರ ಬಳಿ ಪ್ಯಾನ್‌ಕಾರ್ಡ್ ಇದ್ದು, ಹಲವಾರು ಸರ್ಕಾರಿ ಯೋಜನೆಗಳಿಗೆ ಹಾಗೂ ಇನ್ನಿತರೆ ವ್ಯವಹಾರಕ್ಕೆ ಅಗತ್ಯ. ಅದಾಗ್ಯೂ ಬಹುಪಾಲು ಮಂದಿ ಈವರೆಗೂ ಬಳಕೆ ಮಾಡಿರುವುದಿಲ್ಲ, ಆಧಾರ್ ಲಿಂಕ್ ಸಹ ಮಾಡಿಸಿರುವುದಿಲ್ಲ. ಹೀಗಾಗಿ ಪ್ಯಾನ್ ಕಾರ್ಡ್ ಮಾನ್ಯವಾಗಿದೆಯಾ ಎಂದು ಚೆಕ್ ಮಾಡಿಕೊಳ್ಳುವುದು ಅಗತ್ಯ.
ಹೌದು, ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಮಾರ್ಚ್ 31, 2023 ಕೊನೆಯ ಗಡುವಾಗಿದೆ. ಇದಕ್ಕೂ ಮೊದಲು ನೀವು ಆಧಾರ್ ಜೊತೆ ಜೋಡಣೆ ಮಾಡದೆ ಇದ್ದರೆ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ. ಹಾಗೆಯೇ ಗಡುವನ್ನು ವಿಸ್ತರಿಸುವ ಬಗ್ಗೆ ಸರ್ಕಾರ ಸಹ ಯಾವುದೇ ಅಧಿಸೂಚನೆ ಬಿಡುಗಡೆ ಮಾಡಿಲ್ಲ. ಇದರ ನಡುವೆ ನಿಮ್ಮ ಪ್ಯಾನ್ ಕಾರ್ಡ್ ಇನ್ನೂ ಮಾನ್ಯವಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಆದಾಯ ತೆರಿಗೆ ಇಲಾಖೆಯಿಂದ ಎಚ್ಚರಿಕೆ
ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಹೊಂದಿರುವವರಿಗೆ ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಅಂತಿಮ ಎಚ್ಚರಿಕೆ ನೀಡಿದ್ದು, ಮಾರ್ಚ್ 31, 2023 ರ ಮೊದಲು ಲಿಂಕ್ ಮಾಡಲು ನೀವು ವಿಫಲವಾದರೆ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಒಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಯಾವುದೇ ಹಣಕಾಸಿನ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ಸಹ ಮಾಡಲಾಗುವುದಿಲ್ಲ.
ಪ್ಯಾನ್-ಆಧಾರ್ ಲಿಂಕ್ ಮಾಡಲು ಏನು ಮಾಡಬೇಕು?
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಪ್ರಕಾರ incometax.gov.in ಗೆ ಭೇಟಿ ನೀಡುವ ಮೂಲಕ ಲಿಂಕ್ ಮಾಡುವ ಪ್ರಕ್ರಿಯೆಯನ್ನು ನಡೆಸಬಹುದಾಗಿದೆ. ಈ ವೇಳೆ ನೀವು ಈ ಲಿಂಕ್ ಪ್ರಕ್ರಿಯೆಗಾಗಿ 1,000 ರೂ. ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಗಿದ್ರೆ, ನಿಮ್ಮ ಪ್ಯಾನ್ ಕಾರ್ಡ್ ಮಾನ್ಯವಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ ಎಂದು ಈ ಮೂಲಕ ಸುಲಭವಾಗಿ ತಿಳಿದುಕೊಳ್ಳಿ.
ನಿಮ್ಮ ಪ್ಯಾನ್ ಕಾರ್ಡ್‌ನ ಸಿಂಧುತ್ವವನ್ನು ಪರಿಶೀಲಿಸಲು ಈ ಹಂತ ಅನುಸರಿಸಿ
ಹಂತ 1
ಮೊದಲು incometaxindiaefiling.gov.in/home ನಲ್ಲಿ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ಪೇಜ್‌ನ ಎಡಭಾಗದಲ್ಲಿರುವ ನಿಮ್ಮ ಪ್ಯಾನ್ ವಿವರಗಳನ್ನು ಪರಿಶೀಲಿಸಿ (Verify Your PAN Details) ಎಂದು ಕಾಣಿಸಿಕೊಳ್ಳುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದಕ್ಕೂ ಮೊದಲು ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಬರೆದಿಟ್ಟುಕೊಂಡಿರಿ.
ಹಂತ 2
ಇದಾದ ಬಳಿಕ ಅಲ್ಲಿ ಕೇಳಲಾದ ಮಾಹಿತಿಯಂತೆ ಪ್ಯಾನ್ ಸಂಖ್ಯೆಯನ್ನು ಎಂಟ್ರಿ ಮಾಡಿ ನಂತರ ನಿಮ್ಮ ಪೂರ್ಣ ಹೆಸರು ಹಾಗೂ ಅಲ್ಲೇ ಕಾಣಿಸಿಕೊಳ್ಳುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ನಂತರ ಸಲ್ಲಿಸು(Submit)ಬಟನ್ ಮೇಲೆ ಕ್ಲಿಕ್ ಮಾಡಿ.ಈ ವೇಳೆ ವೆಬ್‌ಸೈಟ್‌ನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯವಾಗಿರಲಿ ಇಲ್ಲದಿರಲಿ ಅದರ ಸ್ಟೇಟಸ್ ಅನ್ನು ತಿಳಿಸುವ ಮೆಸೆಜ್‌ಒಂದು ಕಾಣಿಸಿಕೊಳ್ಳುತ್ತದೆ. ಈ ಮೂಲಕ ನಿಮ್ಮ ಪ್ಯಾನ್ ಕಾರ್ಡ್ ಯಾವ ಹಂತದಲ್ಲಿದೆ ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬಹುದು.

SMS ಮೂಲಕ ಪ್ಯಾನ್ ಕಾರ್ಡ್ ಮಾನ್ಯವಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
ಹಂತ 1
ವೆಬ್‌ಸೈಟ್ ಮೂಲಕ ತಿಳಿದುಕೊಳ್ಳುವುದರ ಹೊರತಾಗಿಯೂ ನೀವು ಎಸ್‌ಎಮ್ಎಸ್ ಮೂಲಕವೂ ಈ ಮಾಹಿತಿ ಪಡೆದುಕೊಳ್ಳಬುದು. ಇದಕ್ಕಾಗಿ ನೀವು ನಿಮ್ಮ ಡಿವೈಸ್ ಮೂಲಕ 567678 ಅಥವಾ 56161 ಗೆ ಎಸ್‌ಎಮ್‌ಎಸ್ ಕಳುಹಿಸಬಹುದು. ಉದಾಹರಣೆ ಸಹಿತ ಹೇಳುವುದಾದರೆ ನಿಮ್ಮ ಪ್ಯಾನ್ ಸಂಖ್ಯೆ ABCDE1234F ಆಗಿದೆ ಎಂದುಟ್ಟುಕೊಳ್ಳಿ. ಆಗ ನೀವು NSDL PAN ABCDE1234F ಎಂದು ಬರೆದು ಸಂದೇಶ ಕಳುಹಿಸಬೇಕಾಗುತ್ತದೆ.
ಹಂತ 2
ಈ ಮೆಸೆಜ್ ಕಳುಹಿಸಿದ ತಕ್ಷಣವೇ ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯವಾಗಿರಲಿ ಅಥವಾ ಇಲ್ಲದಿರಲಿ ಪ್ಯಾನ್‌ಕಾರ್ಡ್ ಸ್ಟೇಟಸ್‌ನ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ನಿಮ್ಮ ಮೊಬೈಲ್ ನಲ್ಲಿಯೇ ನೋಡಬಹುದು. ಈ ಮೂಲಕ ನೀವು ನಿಮ್ಮ ಮುಂದಿನ ವ್ಯವಹಾರಗಳನ್ನು ಮಾಡಲು ಸುಲಭವಾಗುತ್ತದೆ. ಹಾಗೆಯೇ ಪ್ಯಾನ್ ಕಾರ್ಡ್‌ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಶೀಘ್ರವೇ ಸರಿಪಡಿಸಿಕೊಳ್ಳಬಹುದು.


Click it and Unblock the Notifications








