ನಿಮ್ಮ ಸ್ಮಾರ್ಟ್‌ಫೋನ್‌ನ ಕೊಳಕು ಚಾರ್ಜರ್‌ಗಳನ್ನು ಮನೆಯಲ್ಲೇ ಈ ರೀತಿ ಸ್ವಚ್ಛ ಮಾಡಿ!
ಬಹುಪಾಲು ಸ್ಮಾರ್ಟ್ ಡಿವೈಸ್‌ಗಳು ಬಹುಪಾಲು ಕಪ್ಪುಬಣ್ಣದಲ್ಲೇ ಕೂಡಿರುತ್ತವೆ. ಈ ಕಾರಣಕ್ಕೆ ಅವು ಎಂದಿಗೂ ಕೊಳಕಾದಂತೆ ಕಾಣಿಸಿಕೊಳ್ಳುವುದಿಲ್ಲ.ಆದರೆ, ಕಾಲ ಬದಲಾದಂತೆ ಡಿವೈಸ್‌ಗಳು ವಿವಿಧ ಬಣ್ಣ ಪಡೆಯುತ್ತಿದ್ದು, ಅದರಲ್ಲೂ ಬಿಳಿ ಬಣ್ಣದ ಡಿವೈಸ್‌ಗಳು ಹೆಚ್ಚಾಗುತ್ತಿದೆ. ಈ ನಡುವೆ ಪ್ರತಿ ಸ್ಮಾರ್ಟ್‌ಫೋನ್ ಬಳಕೆದಾರರು ಸಹ ಬಿಳಿ ಬಣ್ಣದ ಚಾರ್ಜರ್ ಹೊಂದಿದ್ದು, ಈ ಚಾರ್ಜರ್ ಕಾಲಾನಂತರ ಯಾವ ಬಣ್ಣಕ್ಕೆ ತಿರುಗುತ್ತದೆ ಎಂಬುದನ್ನು ನಿಮಗೆ ಹೇಳಬೇಕಿಲ್ಲ.
ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ವಿವಿಧ ರೀತಿಯ ಚಾರ್ಜಿಂಗ್ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿವೆ. ಅಂದರೆ ಫಾಸ್ಟ್ ಚಾರ್ಜಿಂಗ್, ಸೂಪರ್ ಪಾಸ್ಟ್ ಚಾರ್ಜಿಂಗ್‌ನಂತಹ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದು, ಇದರ ಆಧಾರದ ಮೇಲೆಯೇ ಕೆಲವರು ಫೋನ್‌ಗಳನ್ನು ಖರೀದಿ ಮಾಡುವವರಿದ್ದಾರೆ. ಅದಾಗ್ಯೂ ಫೋನ್‌ಗೆ ಅಗತ್ಯವಾಗಿರುವ ಈ ಚಾರ್ಜರ್‌ಗಳನ್ನು ಸ್ವಚ್ಛವಾಗಿಡುವ ಕೆಲಸವನ್ನು ಬಹುಪಾಲು ಮಂದಿ ಮಾಡುವುದಿಲ್ಲ. ಈ ಕಾರಣಕ್ಕೆ ಕೊಳಕು ಚಾರ್ಜರ್ ಅನ್ನು ಹೇಗೆ ಹೊಸತರಂತೆ ಮಾಡುವುದು ಎಂಬುದನ್ನು ತಿಳಿಸಿಕೊಡಲಿದ್ದೇವೆ ಈ ಲೇಖನ ಓದಿರಿ.

ಚಾರ್ಜರ್‌ಗಳ ಸ್ವಚ್ಛತೆಗೆ ಗಮನವನ್ನೇ ಕೊಡುವುದಿಲ್ಲ: ಮೊದಲೇ ತಿಳಿಸಿದಂತೆ ಬಹುಪಾಲು ಮಂದಿ ಚಾರ್ಜರ್‌ಗಳ ಕಡೆ ಹೆಚ್ಚಿನ ಗಮನವನ್ನು ನೀಡುವುದಿಲ್ಲ. ಆದರೆ ಅವರು ಬಳಕೆ ಮಾಡುವ ಫೋನ್ ಕೊಂಚ ಕೊಳೆಯಾದರೂ ಅಥವಾ ಬಣ್ಣ ಮಾಸಿದರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಜೊತೆಗೆ ಮೊಬೈಲ್ ಕವರ್ ಅನ್ನು ಆಗಾಗ್ಗೆ ಸ್ವಚ್ಛವಾಗಿರಿಸಿಕೊಳ್ಳುವ ಮೂಲಕ ಫೋನ್‌ನ ಅಂದವನ್ನು ಇನ್ನಷ್ಟು ಹೆಚ್ಚಿಗೆ ಮಾಡುತ್ತಾರೆ. ಇದೇ ಮಹತ್ವವನ್ನು ಚಾರ್ಜರ್‌ಗೂ ನೀಡಬೇಕಿರುವುದು ನಿಮ್ಮ ಜವಾಬ್ದಾರಿ.
ಚಾರ್ಜರ್ ಅನ್ನು ಹೇಗೆ ಸ್ವಚ್ಛ ಮಾಡುವುದು?: ನಿಮ್ಮ ಚಾರ್ಜರ್ ವೈರ್ ಕೊಳಕಿನಿಂದ ಕೂಡಿದ್ದರೆ ಮನೆಯಲ್ಲಿ ಕಂಡುಬರುವ ಶೇವಿಂಗ್ ಕ್ರೀಮ್ ಅನ್ನು ಅನ್ವಯಿಸುವ ಮೂಲಕ ನೀವು ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ಶೇವಿಂಗ್ ಕ್ರೀಮ್ ಅನ್ನು ಚಾರ್ಜರ್ ವೈರ್ ಮೇಲೆ ಚೆನ್ನಾಗಿ ಹಚ್ಚಿದ ನಂತರ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು. ಸ್ವಲ್ಪ ಸಮಯದವರೆಗೆ ಅದನ್ನು ಅಲ್ಲಿಯೇ ಇರಿಸಿದ ನಂತರ, ಅದನ್ನು ಬಟ್ಟೆಯಿಂದ ಒರೆಸಿದ್ರೆ ಸಾಕು.
ವಿನೆಗರ್ ದ್ರಾವಣ ಬಳಸಬಹುದು: ಇನ್ನು ಸಾಮಾನ್ಯವಾಗಿ ಬಹುಪಾಲು ಮನೆಗಳಲ್ಲಿ ವಿನೇಗರ್ ದ್ರಾವಣ ಇದ್ದೇ ಇರುತ್ತದೆ. ಅದರಂತೆ ನೀವು ಈ ದ್ರಾವಣದೊಂದಿಗೆ ಚಾರ್ಜರ್ ವೈರ್ ಅನ್ನು ಸಹ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ನೀವು ಒಂದು ಪಾತ್ರೆಯಲ್ಲಿ 4 ರಿಂದ 5 ಚಮಚ ವಿನೆಗರ್ ಹಾಕಿ ಅದಕ್ಕೆ ತಕ್ಕ ನೀರನ್ನು ಬೆರೆಸಿ. ಬಳಿಕ ಈ ಮಿಶ್ರಣವನ್ನು ಚಾರ್ಜರ್‌ನ ವೈರ್ ಮೇಲೆ ಚೆನ್ನಾಗಿ ಸವರಿ. ಈ ವೇಳೆ ಯಾವುದೇ ಕಾರಣಕ್ಕೂ ವೈರ್ ಅನ್ನು ಮುಳುಗಿಸಬೇಡಿ.
ಅಡಾಪ್ಟರ್ ಅನ್ನು ಈ ರೀತಿ ಸ್ವಚ್ಛ ಮಾಡಿ: ಇನ್ನು ವೈರ್ ಅನ್ನು ಸ್ವಚ್ಛ ಮಾಡುವುದು ಹೇಗೆ ಎಂದು ತಿಳಿದುಕೊಂಡಿರಿ. ಅದೇ ರೀತಿ ಅಡಾಪ್ಟರ್ ಸಹ ಕೊಳಕು ಬಣ್ಣವನ್ನು ಹೊಂದಲಿದ್ದು, ಇದನ್ನು ಎಚ್ಚರಿಕೆಯಿಂದ ಸ್ವಚ್ಛ ಮಾಡಬೇಕಿದೆ. ಇದಕ್ಕಾಗಿ ನೀವು ನಿಂಬೆಯನ್ನು ಬಳಕೆ ಮಾಡಿಕೊಳ್ಳಬಹುದು. ಅಂದರೆ ಒಂದು ಸಣ್ಣ ಪಾತ್ರೆಯಲ್ಲಿ ನಿಂಬೆಹಣ್ಣಿನ ರಸವನ್ನು ಹಿಂಡಿ ನಂತರ ಆ ರಸಕ್ಕೆ ಒಂದು ಚಿಕ್ಕ ಬಟ್ಟೆ ಹಾಕಿ. ಆ ಬಟ್ಟೆಯನ್ನು ತೆಗೆದುಕೊಂಡು ಅಡಾಪ್ಟರ್ ಅನ್ನು ಸ್ವಚ್ಛಗೊಳಿಸಿ.

ಇನ್ನು ನೀವು ಮೇಲೆ ತಿಳಿಸಿದ ಎಲ್ಲಾ ಮಾರ್ಗಗಳ ಮೂಲಕ ನಿಮ್ಮ ಚಾರ್ಜರ್ ಅನ್ನು ಕ್ಲೀನ್ ಮಾಡಿದ ನಂತರ ಅದನ್ನು ತಕ್ಷಣಕ್ಕೆ ಬಳಕೆ ಮಾಡಬೇಡಿ. ಬದಲಾಗಿ ಅದನ್ನು ಸ್ವಲ್ಪ ಸಮಯದವರೆಗೆ ಅನ್ನು ಬಿಸಿಲಿನಲ್ಲಿ ಇಡಬೇಕಿದೆ. ಹೀಗೆ ಮಾಡುವುದರಿಂದ ಅದರ ಜಾಕ್ ನಲ್ಲಿ ತೇವಾಂಶವಿದ್ದರೆ ಅದು ಒಣಗುತ್ತದೆ. ಅದಾಗ್ಯೂ ಬಿಸಿಲಿಗೆ ಇಡಲು ಸರಿಯಾದ ಸ್ಥಳ ಇಲ್ಲ ಎಂದಾದರೆ ಫ್ಯಾನ್ ಬಳಿಯಾದರೂ ಇಡಬಹುದು.


Click it and Unblock the Notifications








