Home
ಸುದ್ದಿಜಾಲ

ಗೂಗಲ್‌ ಫೋಟೋ ಆಪ್‌ನಲ್ಲಿ ಈ ರೀತಿಯಾಗಿ ಆಲ್ಬಮ್‌ ಕ್ರಿಯೇಟ್‌ ಮಾಡಿ!

ಗೂಗಲ್‌ ಕಂಪೆನಿಯು ತಂತ್ರಜ್ಞಾನ ವಿಭಾಗದಲ್ಲಿ ಎಲ್ಲಾ ವಲಯದಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆ. ಇದರ ಭಾಗವಾಗಿಯೇ ಹಲವಾರು ಗೂಗಲ್‌ನ ಆಪ್‌ಗಳು ಹಾಗೂ ಡಿವೈಸ್‌ಗಳು ಇಂದು ಮಾರುಕಟ್ಟೆಯಲ್ಲಿ ಆಳುತ್ತಿವೆ. ಇದರ ನಡುವೆ ಗೂಗಲ್‌ ಫೋಟೋ ಸೇವೆ ಸಹ ಪ್ರಮುಖವಾಗಿದ್ದು, ಇದರಿಂದ ಬಳಕೆದಾರರು ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಹೌದು, ಗೂಗಲ್‌ನ ಹಲವು ಸೇವೆಗಳಲ್ಲಿ ಗೂಗಲ್‌ ಫೋಟೋ ಸೇವೆಯೂ ಸಹ ಒಂದಾಗಿದ್ದು, ಇದರಲ್ಲಿ ಈಗಾಗಲೇ ಹಲವಾರು ಸುಧಾರಿತ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ. ವಿಷಯ ಏನೆಂದರೆ ಈ ಗೂಗಲ್‌ ಫೋಟೋ ಸೇವೆಯನ್ನು ಹೇಗೆ ಬಳಕೆ ಮಾಡಬಹುದು ಎಂದು ಹಲವರಿಗೆ ತಿಳಿದಿದೆಯಾದರೂ ಹೊಸ ಅಲ್ಬಮ್‌ ಅನ್ನು ಹೇಗೆ ರಚಿಸಬಹುದು ಎಂಬುದು ಬಹುಪಾಲು ಮಂದಿಗೆ ತಿಳಿದಿಲ್ಲ. ಹೀಗಾಗಿ ಗೂಗಲ್‌ ಫೋಟೋ ನಲ್ಲಿ ಹೊಸ ಆಲ್ಬಮ್‌ ಅನ್ನು ಹೇಗೆ ರಚಿಸಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಹಂತ 1
ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ನಲ್ಲಿ ಗೂಗಲ್‌ ಫೋಟೋ ಆಪ್‌ ಅನ್ನು ಓಪನ್‌ ಮಾಡಿ. ಇದಾದ ಬಳಿಕ ಗೂಗಲ್‌‌ ಖಾತೆಗೆ ಸೈನ್‌ ಇನ್‌ ಮಾಡಿ.

ಹಂತ 2
ಸೈನ್‌ ಇನ್‌ ಮಾಡಿದ ನಂತರ ನಿಮಗೆ ನಿಮ್ಮ ಹಲವಾರು ಫೋಟೋಗಳು ಕಾಣಿಸಿಕೊಳ್ಳುತ್ತವೆ. ಈ ಆಯ್ಕೆಯಲ್ಲಿ ನಿಮಗೆ ಬೇಕಾದ ಫೋಟೋಗಳನ್ನು ಸೆಲೆಕ್ಟ್‌ ಮಾಡಿ.

ಹಂತ 3
ಫೋಟೋಗಳನ್ನು ಆಯ್ಕೆ ಮಾಡಿದ ಬಳಿಕ ಡಿಸ್‌ಪ್ಲೇನ ಮೇಲ್ಭಾಗದಲ್ಲಿ + ಐಕಾನ್‌ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಇದರಲ್ಲಿ ಹಲವು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಈ ಮೂಲಕ ಹೊಸ ಆಲ್ಬಮ್‌ ರಚಿಸಬಹುದು.

ಹಂತ 4
ನಂತರದಲ್ಲಿ ನೀವು ಹೊಸದಾಗಿ ರಚಿಸಿದ ಆಲ್ಬಮ್‌ಗೆ ಶೀರ್ಷಿಕೆ ನೀಡಬೇಕಾಗುತ್ತದೆ. ಇಷ್ಟೆಲ್ಲಾ ಆದ ನಂತರ ನಿಮ್ಮದೇ ಆದ ಆಲ್ಬಮ್ ರಚನೆಯಾಗುತ್ತದೆ. ಇದರಿಂದ ಸುಲಭವಾಗಿ ಹಾಗೂ ಯಾವಾಗ ಬೇಕೋ ಆ ವೇಳೆ ನಿಮ್ಮಿಷ್ಟದ ಫೋಟೋಗಳನ್ನು ವೀಕ್ಷಣೆ ಮಾಡಬಹುದಾಗಿದೆ.

 ಗೂಗಲ್‌ ಫೋಟೋ ಆಪ್‌ನಲ್ಲಿ ಈ ರೀತಿಯಾಗಿ ಆಲ್ಬಮ್‌ ಕ್ರಿಯೇಟ್‌ ಮಾಡಿ!

ಗೂಗಲ್‌ ಫೋಟೋ ಆಪ್‌ನಲ್ಲಿ ಎಷ್ಟು ಫೋಟೋ ಸ್ಟೋರೇಜ್‌ ಮಾಡಬಹುದು?

ನಿಮ್ಮ ಎಲ್ಲಾ ಫೋಟೋಗಳನ್ನು ಸಂಗ್ರಹಿಸಲು ಗೂಗಲ್‌ ಫೋಟೋ ಸುಲಭವಾದ ಸ್ಟೋರೇಜ್‌ ಮಾರ್ಗ ಎಂದೇ ಹೇಳಬಹುದು. ಹಾಗೆಯೇ ಇದರಲ್ಲಿ ಫೋಟೋಗಳನ್ನು ಆಡ್‌ ಮಾಡಿದ ನಂತರ ಯಾವುದೇ ಡಿವೈಸ್‌ ಮೂಲಕವಾದರು ಮತ್ತೆ ಓಪನ್‌ ಮಾಡಿ ವೀಕ್ಷಣೆ ಮಾಡಬಹುದಾಗಿದೆ. ಇನ್ನು ನಿಮ್ಮ ಫೋಟೋ ಆಲ್ಬಮ್‌ಗಳಿಗೆ ನಕ್ಷೆಗಳು ಮತ್ತು ಪಠ್ಯದಂತಹ ಕಂಟೆಂಟ್ ಅನ್ನು ರಚಿಸಲು ಇದು ಅನುವು ಮಾಡಿಕೊಡುತ್ತದೆ. ಈ ಮೂಲಕ ಆಲ್ಬಮ್‌ಗೆ ಬರೋಬ್ಬರಿ 20,000 ಫೋಟೋಗಳು ಮತ್ತು ವಿಡಿಯೋಗಳನ್ನು ನೀವು ಆಡ್‌ ಮಾಡಬಹುದಾಗಿದೆ.

ಫೋಟೋ ಸರ್ಚ್‌ ಬಟನ್ ಆಯ್ಕೆ

ಇನ್ನು ಈ ಗೂಗಲ್ ಫೋಟೋ ಆಪ್‌ನಲ್ಲಿ ಬಳಕೆದಾರರು ಸುಲಭವಾಗಿ ಯಾವುದೇ ಫೋಟೋಗಳನ್ನು ಸರ್ಚ್ ಮಾಡಲು ಅನುಕೂಲ ಆಗುವಂತೆ ಹೊಸ ಸರ್ಚ್‌ ಫೀಚರ್ಸ್‌ನಲ್ಲಿ ಗೂಗಲ್‌ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಅಂದರೆ ಮುಖದ ಆಧಾರದ ಮೇಲೆ ಚಿತ್ರಗಳನ್ನು ಸರ್ಚ್‌ ಮಾಡಿ ಇದೇ ರೀತಿಯ ಮುಖ ಹೋಲುವ ಚಿತ್ರಗಳನ್ನು ಡಿಸ್‌ಪ್ಲೇ ಮಾಡುತ್ತದೆ. ಇದರಿಂದಾಗಿ ಬಳಕೆದಾರರು ಸುಲಭವಾಗಿ ಬೇಕಾದವರ ಎಲ್ಲಾ ಫೋಟೋಗಳನ್ನು ಒಮ್ಮೆಲೆ ನೋಡಬಹುದಾಗಿದೆ.

 ಗೂಗಲ್‌ ಫೋಟೋ ಆಪ್‌ನಲ್ಲಿ ಈ ರೀತಿಯಾಗಿ ಆಲ್ಬಮ್‌ ಕ್ರಿಯೇಟ್‌ ಮಾಡಿ!

ಇದರೊಂದಿಗೆ ಗೂಗಲ್‌ ಫೋಟೋ ಆಪ್‌ನಲ್ಲಿ ಇರುವ ಗೂಗಲ್ ಲೆನ್ಸ್ ಬಟನ್ ಅನ್ನು ಗೂಗಲ್ ಬದಲಾಯಿಸಲು ಮುಂದಾಗಿದೆ ಎನ್ನುವ ಮಾಹಿತಿ ಸಹ ತಿಳಿದುಬಂದಿದೆ. ಈ ಹೊಸ ಇಮೇಜ್ ಸರ್ಚ್‌ ಆಯ್ಕೆ ಇನ್ನೂ ಸಹ ಪರೀಕ್ಷಾ ಹಂತದಲ್ಲಿದ್ದು, ಅದರಲ್ಲೂ ಸೀಮಿತ ಸಂಖ್ಯೆಯ ಬಳಕೆದಾರರಿಗೆ ಮಾತ್ರ ಲಭ್ಯವಿದೆಯಂತೆ. ಇನ್ನು ಈ ಹೊಸ ಫೀಚರ್ಸ್‌ ಅನ್ನು ಗೂಗಲ್‌ ಯಾವಾಗ ಎಲ್ಲಾ ಬಳಕೆದಾರರಿಗೆ ಪರಿಚಯಿಸುತ್ತದೆ ಎನ್ನುವ ನಿಖರ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

Best Mobiles in India

English summary
here we explained how to create album in the Google Photos app. Google has provided several features in its Google Photo app.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+