Paytm FASTag: ನೀವು ಪೇಟಿಎಂ ಫಾಸ್ಟ್‌ಟ್ಯಾಗ್ ಹೊಂದಿದ್ದೀರಾ? ಚಿಂತೆ ಬೇಡ.. ಈಗಲೇ ಈ ಕೆಲಸ ಮಾಡಿ
ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದ ಆದೇಶದಿಂದ ಪೇಟಿಎಂ ಸಂಸ್ಥೆ ಮಾತ್ರವಲ್ಲದೆ ಇದರ ಬಳಕೆದಾರರೂ ಸಹ ಭಾರೀ ಆತಂಕಕ್ಕೆ ಒಳಗಾಗಿದ್ದಾರೆ. ಅಂದರೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ಕೆಲವು ವ್ಯಾಪಾರ ನಿರ್ಬಂಧಗಳಿಗೆ ಒಳಪಟ್ಟಿದ್ದು, ಪೇಟಿಎಂ ಫಾಸ್ಟ್‌ಟ್ಯಾಗ್ (Paytm FASTag) ಬಳಕೆದಾರರನ್ನು ಒಳಗೊಂಡಂತೆ ಇತರೆ ಗ್ರಾಹಕರ ಮೇಲೆ ಕೆಟ್ಟ ಪರಿಣಾಮ ಬೀರಿದೆ.
ಹೌದು, ಪೇಟಿಎಂನಲ್ಲಿ ದಿನೇ ದಿನೇ ಒಂದಲ್ಲಾ ಒಂದು ಬೆಳವಣಿಗೆ ಆಗುತ್ತಿದ್ದು, ಈ ನಡುವೆ ಪೇಟಿಎಂ ಮೂಲಕ ಯಾರೆಲ್ಲಾ ಫಾಸ್ಟ್‌ಟ್ಯಾಗ್ ಖಾತೆಗಳನ್ನು ಬಳಕೆ ಮಾಡುತ್ತಿದ್ದಾರೋ ಅವರು ಈಗ ನಿಷ್ಕ್ರಿಯಗೊಳಿಸುವ ಅಥವಾ ಅವುಗಳನ್ನು ಪರ್ಯಾಯ ವಿತರಕರಿಗೆ ವರ್ಗಾಯಿಸುವ ಕೆಲಸ ಮಾಡಬೇಕಾಗಿದೆ. ಹಾಗಿದ್ರೆ, ಫಾಸ್ಟ್‌ಟ್ಯಾಗ್ ಖಾತೆಯನ್ನು ಹೇಗೆ ಪೋರ್ಟ್ ಮಾಡುವುದು?,ಈಗ ಇರುವ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ ಅನ್ನೋ ಅಗತ್ಯ ಮಾಹಿತಿ ಇಲ್ಲಿದೆ ನೋಡಿ.

ಪೇಟಿಎಂ ಫಾಸ್ಟ್‌ಟ್ಯಾಗ್: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕೃತ ಬ್ಯಾಂಕ್‌ಗಳಿಂದ ಪ್ರತ್ಯೇಕವಾಗಿ ಫಾಸ್ಟ್‌ಟ್ಯಾಗ್ ಅನ್ನು ಪಡೆದುಕೊಳ್ಳುವ ಮಹತ್ವವನ್ನು ಒತ್ತಿಹೇಳುವ ನಿರ್ಣಾಯಕ ಎಚ್ಚರಿಕೆಯನ್ನು ನೀಡಿದೆ. ಈ ನಿರ್ಬಂಧಗಳಿಂದಾಗಿ ಬಳಕೆದಾರರು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಹಾಗಿದ್ರೆ, ಬನ್ನಿ ಮೊದಲು ಇದನ್ನು ಹೇಗೆ ನಿಷ್ಕ್ರಿಯಗೊಳಿಸುವುದು ಅನ್ನೋದನ್ನು ಹಂತಹಂತವಾಗಿ ತಿಳಿಯೋಣ ಬನ್ನಿ.
ನಿಷ್ಕ್ರಿಯಗೊಳಿಸುವುದು ಹೇಗೆ?:
ಹಂತ 1:
ಮೊದಲು ನಿಮ್ಮ ಬಳಕೆದಾರ ಐಡಿ, ವ್ಯಾಲೆಟ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಬಳಕೆ ಮಾಡಿಕೊಂಡು ಪೇಟಿಎಂ ಫಾಸ್ಟ್‌ಟ್ಯಾಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ ನಂತರ ಪರಿಶೀಲನೆ ಉದ್ದೇಶಗಳಿಗಾಗಿ ನಿಮ್ಮ ಫಾಸ್ಟ್‌ಟ್ಯಾಗ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯಂತಹ ಅಗತ್ಯ ಮಾಹಿತಿಯನ್ನು ನಮೂದಿಸಿ.
ಹಂತ 2:
ಇದೆಲ್ಲಾ ಆದ ಮೇಲೆ ಪೇಜ್ ಅನ್ನು ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಸಹಾಯ ಮತ್ತು ಬೆಂಬಲ' (Help & Support) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಅಲ್ಲಿ ಲಭ್ಯವಿರುವ ಆಯ್ಕೆಗಳಿಂದ 'ಆರ್ಡರ್ ಮಾಡದ ಸಂಬಂಧಿತ ಪ್ರಶ್ನೆಗಳಿಗೆ ಸಹಾಯ ಬೇಕೇ?' (Need Help With Non-Order Related Queries?) ಅನ್ನೋದನ್ನು ಆಯ್ಕೆಮಾಡಿ.

ಹಂತ 3:
ನಂತರದಲ್ಲಿ ಫಾಸ್ಟ್‌ಟ್ಯಾಗ್ ಪ್ರೊಫೈಲ್ ಅನ್ನು ನವೀಕರಿಸಲು ಸಂಬಂಧಿಸಿದ ಪ್ರಶ್ನೆಗಳು (Queries Related to Updating FASTag Profile) ಎಂದು ಲೇಬಲ್ ಮಾಡಲಾದ ಆಯ್ಕೆ ಮೇಲೆ ಟ್ಯಾಪ್ ಮಾಡಿ ಹಾಗೂ ನಾನು ನನ್ನ ಫಾಸ್ಟ್‌ಟ್ಯಾಗ್ ಅನ್ನು ಕ್ಲೋಸ್ ಮಾಡಲು ಬಯಸುತ್ತೇನೆ ಎಂಬುದರ ಮೇಲೆ ಟ್ಯಾಪ್ ಮಾಡಿ. ಇದನ್ನು ಮಾಡಿದ ಮೇಲೆ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚನೆಗಳನ್ನು ಅನುಸರಿಸಿ.
ಪೋರ್ಟಿಂಗ್ ಮಾಡುವುದು ಹೇಗೆ?
ಹಂತ 1:
ಮೊದಲು ಫಾಸ್ಟ್‌ಟ್ಯಾಗ್ ಖಾತೆಗಳ ನೇರ ವರ್ಗಾವಣೆ ಪ್ರಸ್ತುತ ಲಭ್ಯವಿಲ್ಲ ಎಂದು ತಿಳಿದುಕೊಳ್ಳಿ. ಇದಕ್ಕಾಗಿ ಪರ್ಯಾಯ ವಿತರಕರನ್ನು ಸಂಪರ್ಕಿಸುವ ಕೆಲಸ ಮಾಡಬೇಕಿದೆ. ಅಂದರೆ ಪೋರ್ಟಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಹೆಚ್‌ಡಿಎಫ್‌ಸಿ ಅಥವಾ ಐಸಿಐಸಿಐ ಬ್ಯಾಂಕ್‌ನಂತಹ (HDFC, ICICI Bank) ಪರ್ಯಾಯ ಫಾಸ್ಟ್‌ಟ್ಯಾಗ್ ವಿತರಕರನ್ನು ಸಂಪರ್ಕಿಸಿ.
ಹಂತ 2:
ಇದಾದ ನಂತರದಲ್ಲಿ ಬದಲಾಯಿಸುವ ನಿಮ್ಮ ಉದ್ದೇಶವನ್ನು ಹೊಸ ವಿತರಕರಿಗೆ ತಿಳಿಸಿ ಮತ್ತು ವಾಹನ ನೋಂದಣಿ ಮಾಹಿತಿ ಸೇರಿದಂತೆ ಅಗತ್ಯ ವಿವರಗಳನ್ನು ಅವರಿಗೆ ನೀಡಿ. ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯ ತಡೆರಹಿತ ವರ್ಗಾವಣೆಯನ್ನು ಸುಲಭಗೊಳಿಸಲು ಹೊಸ ವಿತರಕರು ಒದಗಿಸಿದ ಯಾವುದೇ ಹೆಚ್ಚುವರಿ ಸೂಚನೆಗಳನ್ನು ಅನುಸರಿಸಿ.

ಈ ಮೇಲೆ ತಿಳಿಸಿದ ಹಂತ-ಹಂತದ ಮಾರ್ಗದರ್ಶಿಗಳನ್ನು ಅನುಸರಿಸುವ ಮೂಲಕ, ಬಳಕೆದಾರರು ತಮ್ಮ ಫಾಸ್ಟ್‌ಟ್ಯಾಗ್ ಖಾತೆಗಳನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಬಹುದಾಗಿದೆ. ಜೊತೆಗೆ ಇತ್ತೀಚಿನ ನಿಯಂತ್ರಕ ನಿರ್ದೇಶನಗಳಿಗೆ ಅನುಗುಣವಾಗಿ ಪರ್ಯಾಯ ವಿತರಕರಿಗೆ ಅವುಗಳನ್ನು ಪೋರ್ಟ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಯಾವುದೇ ಸಮಸ್ಯೆ ಇಲ್ಲದೆ ಫಾಸ್ಟ್‌ಟ್ಯಾಗ್ ಪ್ರಯೋಜನ ಪಡೆಯಬಹುದಾಗಿದೆ.


Click it and Unblock the Notifications








