ಆಂಡ್ರಾಯ್ಡ್ ಎಮ್ ಪ್ರಿವ್ಯೂ ಈ ಹಂತಗಳಲ್ಲಿ ಡೌನ್‌ಲೋಡ್ ಮಾಡಿ
ಜಗತ್ತಿನ ಹೆಚ್ಚು ಜನಪ್ರಿಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನ ಇತ್ತೀಚಿನ ಆವೃತ್ತಿ ಆಂಡ್ರಾಯ್ಡ್ ಎಮ್ ಅನ್ನು ಗೂಗಲ್ I/O 2015 ರಲ್ಲಿ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಎಮ್ ಅನ್ನು ಇನ್ನೂ ಕೆಲವು ಮಾರ್ಪಾಡುಗಳ ಮೂಲಕ ಬಿಡುಗಡೆ ಮಾಡಲಾಗುತ್ತಿದ್ದು ಈ ವರ್ಷದ ತ್ರೈಮಾಸಿಕದಲ್ಲಿ ಇದು ಬಳಕೆದಾರರ ಕೈ ಸೇರಲಿದೆ.
ಓದಿರಿ: ನಿಮ್ಮ ಮೆಚ್ಚಿನ ಬಜೆಟ್ ಫೋನ್‌ಗಳು ರೂ 10,000 ಕ್ಕೆ
ಆಂಡ್ರಾಯ್ಡ್ ಎಮ್ ಪ್ರಿವ್ಯೂವನ್ನು ಈ ಕೆಳಗಿನ ಡಿವೈಸ್‌ಗಳಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದ್ದು ಗೂಗಲ್ ನೆಕ್ಸಸ್ 5, ಗೂಗಲ್ ನೆಕ್ಸಸ್ 6, ಗೂಗಲ್ ನೆಕ್ಸಸ್ 9, ಗೂಗಲ್ ನೆಕ್ಸಸ್ ಪ್ಲೇಯರ್ ಈ ಡಿವೈಸ್‌ಗಳಲ್ಲಿ ಲಭ್ಯವಿದೆ. ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಎಮ್ ಪ್ರಿವ್ಯೂವನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಆಂಡ್ರಾಯ್ಡ್ ಸ್ಟುಡಿಯೊ ಪ್ರಿವ್ಯೂ
ನಿಮ್ಮ ವಿಂಡೋಸ್ ಕಂಪ್ಯೂಟರ್‌ನಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ ಸ್ಟುಡಿಯೊ ಪ್ರಿವ್ಯೂವನ್ನು ಡೌನ್‌ಲೋಡ್ ಹಾಗೂ ಇನ್‌ಸ್ಟಾಲ್ ಮಾಡಿಕೊಳ್ಳಿ.

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪಾತ್‌ಗೆ ಎಸ್‌ಡಿಕೆ ಫೋಲ್ಡರ್ ಸೇರಿಸಿ:
ಮೈ ಕಂಪ್ಯೂಟರ್ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ಕ್ಲಿಕ್ ಮಾಡಿ

ಸಿಸ್ಟಮ್ ಸೆಟ್ಟಿಂಗ್ಸ್
ಸುಧಾರಿತ ಸಿಸ್ಟಮ್ ಸೆಟ್ಟಿಂಗ್ಸ್‌ನಲ್ಲಿ ಕ್ಲಿಕ್ ಮಾಡಿ.

ಸಿಸ್ಟಮ್ ಪ್ರಾಪರ್ಟೀಸ್
ಸಿಸ್ಟಮ್ ಪ್ರಾಪರ್ಟೀಸ್ > ಅಡ್ವಾನ್ಸ್‌ಡ್ > ಎನ್‌ವೀರೋನ್‌ಮೆಂಟ್ ವೇರಿಯೇಬಲ್ಸ್ ಕ್ಲಿಕ್ ಮಾಡಿ.

ವಿಂಡೋದಲ್ಲಿ, ಪಾತ್ ಆಯ್ಕೆಮಾಡಿ
ವಿಂಡೋದಲ್ಲಿ, ಪಾತ್ ಆಯ್ಕೆಮಾಡಿ, ನಂತರ ಎಡಿಟ್ ಕ್ಲಿಕ್ ಮಾಡಿ ಮತ್ತು ಎಸ್‌ಡಿಕೆಯನ್ನು ಇನ್‌ಸ್ಟಾಲ್ ಮಾಡಿರುವ ಡೈರೆಕ್ಟರಿ ಹೆಸರಿನಲ್ಲಿ ಟೈಪ್ ಮಾಡಿ, ಹಾಗೂ ಸೆಮಿ - ಕೋಲನ್ ಮೂಲಕ ಪ್ರತೀ ಎಂಟ್ರಿಯನ್ನು ಬೇರ್ಪಡಿಸಿ.

ಯುಎಸ್‌ಬಿ ಡೀಬಗ್ಗಿಂಗ್ ಅನ್ನು ಸಕ್ರಿಯಗೊಳಿಸಿ
ನಿಮ್ಮ ಡಿವೈಸ್‌ನಲ್ಲಿ ಯುಎಸ್‌ಬಿ ಡೀಬಗ್ಗಿಂಗ್ ಅನ್ನು ಸಕ್ರಿಯಗೊಳಿಸಿ. ಮೊದಲಿಗೆ ಸೆಟ್ಟಿಂಗ್ > ಅಬೌಟ್ ಫೋನ್ > ಸಾಫ್ಟ್‌ವೇರ್ ಇನ್‌ಫೋರ್ಮೇಶನ್ ಇದಕ್ಕೆ ಹೋಗಿ.

ಬಿಲ್ಡ್ ನಂಬರ್
ಬಿಲ್ಡ್ ನಂಬರ್‌ಗೆ ಏಳು ಬಾರಿ ತಟ್ಟಿರಿ.

ಡೀಬಗ್ಗಿಂಗ್
ಸೆಟ್ಟಿಂಗ್ಸ್‌ಗೆ ಹೋಗಿ > ಡೆವಲಪರ್ ಆಪ್ಶನ್. ಯುಎಸ್‌ಬಿ ಡೀಬಗ್ಗಿಂಗ್ ಟಿಕ್ ಮಾಡಿ.

ಫ್ಯಾಕ್ಟ್ರಿ ಇಮೇಜ್
ನಿಮ್ಮ ಡಿವೈಸ್‌ನಲ್ಲಿ ಸರಿಯಾದ ಫ್ಯಾಕ್ಟ್ರಿ ಇಮೇಜನ್ನು ಡೌನ್‌ಲೋಡ್ ಮಾಡಿ.

ಡಿವೈಸ್ ಸ್ಟಾರ್ಟ್ ಮಾಡಿ
ಫಾಸ್ಟ್‌ಬೂಟ್ ಮೋಡ್‌ನಲ್ಲಿ ಡಿವೈಸ್ ಸ್ಟಾರ್ಟ್ ಮಾಡಿ.


Click it and Unblock the Notifications








