Subscribe to Gizbot

ನಿಮ್ಮ ಮೆಚ್ಚಿನ ಬಜೆಟ್ ಫೋನ್‌ಗಳು ರೂ 10,000 ಕ್ಕೆ

Written By:

ಮಾರುಕಟ್ಟೆಯಲ್ಲಿರುವ ಉತ್ತಮ ಸ್ಮಾರ್ಟ್‌ಫೋನ್ ಯಾವುದು ಎಂಬ ಗೊಂದಲದಲ್ಲಿದ್ದೀರಾ ಹಾಗಿದ್ದರೆ ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ಇತ್ತೀಚಿನ ದಿನಗಳಲ್ಲಿ ರೂ 10,000 ದ ಒಳಗಿನ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ವಿವರ ಮಾಹಿತಿಯನ್ನು ನಾವು ನೀಡಿದ್ದೇವೆ.

ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಕೆಳಗಿನ ಸ್ಲೈಡರ್‌ಗಳಿಂದ ಆರಿಸಿ ಮತ್ತು ಫೋನ್ ಖರೀದಿಯನ್ನು ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 8,999

ಹುವಾಯಿ ಹೋನರ್ 4ಸಿ

ವೇಗವಾದ ಕಾರ್ಯಕ್ಷಮತೆ ಮತ್ತು ಉತ್ತಮ ಚಿತ್ರ ಸೆರೆಹಿಡಿಯುವಿಕೆ ಅಂಶಗಳ ಮೂಲಕ ಹುವಾಯಿ ಹೋನರ್ 4ಸಿ ಉತ್ತಮ ಆಯ್ಕೆ ಎಂದೆನಿಸಿದೆ. ಇದರ ಬ್ಯಾಟರಿ ಜೀವನ ಅತ್ಯಂತ ಉತ್ತಮವಾಗಿದ್ದು, ಇತರ ಆಂಡ್ರಾಯ್ಡ್ ಫೋನ್‌ನಿಂದ ಇದನ್ನು ಪ್ರತ್ಯೇಕವಾಗಿಸಿದೆ. ಹೋನರ್ 4ಸಿ ಉತ್ತಮ ವಿನ್ಯಾಸವುಳ್ಳ ಡಿವೈಸ್ ಆಗಿದ್ದು ಮಧ್ಯಮ ಬೆಲೆಯಲ್ಲೇ ಈ ಫೋನ್ ನಿಮ್ಮ ಕೈಗೆಟುಕಲಿದೆ.

ಬೆಲೆ ರೂ: 6,999

ಮೋಟೋರೋಲಾ ಮೋಟೋ ಇ (2ನೇ ಜನರೇಶನ್)

ಮೋಟೋ ಇ (ಜನರೇಶನ್ 2) ಸ್ಟೈಲಿಶ್ ಉತ್ತಮ ರಚನೆಯನ್ನು ಹೊಂದಿರುವ ಫೋನ್ ಆಗಿ ಪರಿಗಣಿಸಿದ್ದು ಬಜೆಟ್ ಬೆಲೆಯಲ್ಲಿ ಈ ಫೋನ್ ಬಂದಿದೆ. ಆದರೆ ಇದರ ದುರ್ಬಲ ಕಾರ್ಯಕ್ಷಮತೆಯಿಂದಾಗಿ ಹೋನರ್ 4ಸಿಯನ್ನೇ ನಿಮ್ಮ ಆಯ್ಕೆಯನ್ನಾಗಿಸಲು ನಾವು ತಿಳಿಸುತ್ತಿದ್ದೇವೆ.

ಬೆಲೆ ರೂ: 4,999

ಹುವಾಯಿ ಹೋನರ್ ಬಿ

ಹೋನರ್ ಬಿ ನೋಡಲು ಅಷ್ಟೊಂದು ಆಕರ್ಷಕವಾಗಿಲ್ಲದಿದ್ದರೂ, ಬಜೆಟ್ ಶ್ರೇಣಿಗೆ ಉತ್ತಮ ಆಯ್ಕೆಯಾಗಿದೆ. ಹೋನರ್ 4ಎಕ್ಸ್‌ನಂತೆ ಇದು ಸುಂದರ ವಿನ್ಯಾಸವನ್ನು ಪಡೆದುಕೊಳ್ಳದೇ ಇದ್ದರೂ, ದೊಡ್ಡ ಪರದೆ, ಡ್ಯುಯಲ್ ಸಿಮ್ ಸ್ಲಾಟ್, ವಿಸ್ತರಣಾ ಸಾಮರ್ಥ್ಯ ಮತ್ತು ಉತ್ತಮ ಬ್ಯಾಟರಿ ಜೀವನವನ್ನು ಪಡೆದುಕೊಂಡಿದೆ.

ಬೆಲೆ ರೂ: 7,200

ನೋಕಿಯಾ ಲೂಮಿಯಾ 535

ರೂ 7,000 ಕ್ಕೆ ಹೆಚ್ಚು ಮಹತ್ವಪೂರ್ಣವಾದುದನ್ನು ನೋಕಿಯಾ ಒದಗಿಸುತ್ತಿದ್ದು, ಕ್ವಾಡ್ ಕೋರ್ ಪ್ರೊಸೆಸರ್, 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಇದು ಹೊಂದಿದೆ.

ಬೆಲೆ ರೂ: 9,294

ಎಚ್‌ಟಿಸಿ ಡಿಸೈರ್ 526ಜಿ ಪ್ಲಸ್

ಡಿಸೈರ್ 526 ಜಿ ಪ್ಲಸ್ ಎಚ್‌ಟಿಸಿಯ ಉತ್ತಮ ಬಜೆಟ್ ಫೋನ್ ಅಲ್ಲ. ಇದರ ಕಾರ್ಯಕ್ಷಮತೆ ಕೂಡ ಸಾಮಾನ್ಯವಾಗಿದ್ದು ಇದರ ಬ್ಯಾಟರಿ ಜೀವನವನ್ನು ಕುರಿತು ಕೂಡ ಇದೇ ಮಾತನ್ನು ಹೇಳಬಹುದು.

ಬೆಲೆ ರೂ: 7,499

ಲೆನೊವೊ ಎ6000 ಪ್ಲಸ್

ಮೂಲ ಎ6000 ಗಿಂತ ಇದು ಉತ್ತಮವಾಗಿದ್ದು, ಪ್ರತಿಯೊಂದು ಅಂಶಗಳೂ ಪಡಿಯಚ್ಚಿನಂತೆಯೇ ಬಂದಿದೆ.ಫೋನ್ ಉತ್ತಮ ಕ್ಯಾಮೆರಾವನ್ನು ಹೊಂದಿಲ್ಲ, ಇನ್ನು ಮುಂಭಾಗ ಸೆಲ್ಫಿ ಕೂಡ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಬಹುಕಾರ್ಯಗಳನ್ನು ನಿರ್ವಹಿಸುವವರಿಗೆ ಲೆನೊವೊ ಎ6000 ಪ್ಲಸ್ ಸೂಕ್ತ ಫೋನ್ ಎಂದೆನಿಸಿದೆ.

ಬೆಲೆ ರೂ: 6,999

ಹುವಾಯಿ ಹೋನರ್ ಹೋಲಿ

ರೂ 7,000 ದ ಒಳಗಿನ ಖರೀದಿಗೆ ಹೇಳಿ ಮಾಡಿಸಿದ ಫೋನ್ ಆಗಿದೆ ಹುವಾಯಿ ಹೋನರ್ ಹೋಲಿ. ಬಜೆಟ್ ಫೋನ್ ಹೊಂದಿರಬೇಕಾದ ಎಲ್ಲಾ ಅಂಶಗಳನ್ನು ಈ ಡಿವೈಸ್ ಒಳಗೊಂಡಿದೆ. ಉತ್ತಮ ಕ್ಯಾಮೆರಾ ಡಿವೈಸ್‌ನ ಪ್ಲಸ್ ಪಾಯಿಂಟ್ ಎಂದೆನಿಸಿದೆ.

ಬೆಲೆ ರೂ: 7,325

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2

ಸ್ಯಾಮ್‌ಸಂಗ್ ಶ್ರೇಣಿಯ ಫೋನ್ ಎಂದರೆ ತನ್ನದೇ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದೇ ಹೇಳಬಹುದು. ಆದರೆ ರೂ 7,325 ಕ್ಕೆ ಇದನ್ನು ಖರೀದಿಸಲು ಅಷ್ಟೊಂದು ಪರಿಣಾಮಕಾರಿ ಅಂಶಗಳಿಲ್ಲ ಎಂದೇ ಹೇಳಬಹುದು. ಇದಕ್ಕಿಂತ ಹೋನರ್ 4ಸಿ ಅಥವಾ ಹೋನರ್ 4 ಎಕ್ಸ್ ಅನ್ನು ನಿಮಗೆ ಖರೀದಿಸಬಹುದು.

ಬೆಲೆ ರೂ: 8,830

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಪ್ರೈಮ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಪ್ರೈಮ್ ಉತ್ತಮ ಬಜೆಟ್ ಸ್ಮಾರ್ಟ್‌ಫೋನ್ ಎಂದೆನಿಸಿದೆ. ರೂ 8,830 ಕ್ಕೆ ಇದು ಉತ್ತಮ ರಚನಾ ಗುಣಮಟ್ಟ, ಗಂಭೀರ ಪರದೆ, ಕ್ಯಾಮೆರಾಗಳನ್ನು ಪಡೆದುಕೊಂಡಿದೆ ಮತ್ತು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದೆ.

ಬೆಲೆ ರೂ: 6,999

ಶ್ಯೋಮಿ ರೆಡ್ಮೀ 2

ಶ್ಯೋಮಿ ಉತ್ತಮ ಹ್ಯಾಂಡ್‌ಸೆಟ್ ಅನ್ನು ಬಿಡುಗಡೆ ಮಾಡಿದೆ ಎಂದೇ ಹೇಳಬಹುದು. ಶ್ಯೋಮಿ ತನ್ನ ಈ ಡಿವೈಸ್‌ಗೆ ಉತ್ತಮ ವೇಗ ಅಂತೆಯೇ ಕ್ಯಾಮೆರಾ ಗುಣಮಟ್ಟವನ್ನು ಸೇರಿಸಿದ್ದು ಅದ್ಭುತ ಡಿಸ್‌ಪ್ಲೇಯನ್ನು ಫೋನ್ ಹೊಂದಿರದೇ ಇದ್ದರೂ, ನಿಜಕ್ಕೂ ಫೋನ್ ನಿಮಗೆ ಇಷ್ಟವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you want to know what the best durable smartphone on the market is, then you've come to the right place. These days a decent smartphone can be purchased up for under 10k. Ranked in order, here are our pick of the 10 smartphones available at the moment.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot