ಇನ್ಮುಂದೆ ಇನ್‌ಸ್ಟಾಗ್ರಾಮ್‌ನಲ್ಲಿಯೇ ಲಭ್ಯ ವಿಡಿಯೋ ಎಡಿಟಿಂಗ್ ಟೂಲ್ಸ್!ಬಳಕೆ ಹೇಗೆ?
ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ಮೂಲಕ ಅದೆಷ್ಟೋ ಜನರು ಮುನ್ನೆಲೆಗೆ ಬಂದಿದ್ದಾರೆ. ಅದರಲ್ಲೂ ಈ ಆಪ್‌ನಲ್ಲಿ ಇರುವ ರೀಲ್ಸ್ ಬಳಕೆ ಮಾಡಿಕೊಂಡು ಬಳಕೆದಾರರು ತಮ್ಮ ಟ್ಯಾಲೆಂಟ್ ಅನ್ನು ಹೊರಹಾಕುತ್ತಿದ್ದಾರೆ. ಇದರಿಂದಾಗಿ ತಮ್ಮದೇ ಆದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ನಡುವೆ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಎಡಿಟಿಂಗ್ ಟೂಲ್ಸ್ ಅನ್ನು ಪರಿಚಯಿಸಲಾಗುತ್ತಿದ್ದು, ಬಳಕೆದಾರರು ಇನ್ನಷ್ಟು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಹೌದು, ಮೆಟಾ ಮಾಲೀಕತ್ವದ ಫೋಟೋ ಮತ್ತು ವಿಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಆಗಿರುವ ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಹೊಸ ಎಡಿಟಿಂಗ್ ಟೂಲ್ಸ್ ಅನ್ನುಮೆಟಾ ಪರಿಚಯಿಸಲಾಗುತ್ತಿದೆ. ಈ ಮೂಲಕ ಬಳಕೆದಾರರು ಸ್ಪ್ಲಿಟ್, ರಿಪ್ಲೇಸ್ ಮತ್ತು ಸ್ಪೀಡ್ ಫೀಚರ್ಸ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಇತರೆ ವಿಡಿಯೋ ಎಡಿಟಿಂಗ್ ಆಪ್‌ಗಿಂತ ಇಲ್ಲಿಯೇ ಅತ್ಯುತ್ತಮವಾಗಿ ಎಡಿಟ್ ಮಾಡಬಹುದಾಗಿದೆ. ಹಾಗಿದ್ರೆ, ಬನ್ನಿ ಹೇಗೆ ಈ ಟೂಲ್ಸ್ ಬಳಕೆ ಮಾಡಿಕೊಂಡು ಎಡಿಟ್ ಮಾಡಬಹುದು ಎಂಬುದನ್ನು ತಿಳಿಯೋಣ.

ರೀಲ್ಸ್ ಎಡಿಟಿಂಗ್‌ಗಾಗಿ ಟೂಲ್ಸ್: ಈ ಮೊದಲು ಫೇಸ್‌ಬುಕ್ ಆಗಿರಬಹುದು, ಯೂಟ್ಯೂಬ್ ಆಗಿರಬಹುದು ಜೊತೆಗೆ ಇನ್‌ಸ್ಟಾಗ್ರಾಮ್‌ಗೂ ಕೂಡ ವಿಡಿಯೋ ಅಪ್‌ಲೋಡ್ ಮಾಡಬೇಕು ಎಂದರೆ ಥರ್ಡ್ ಪಾರ್ಟಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಎಡಿಟ್ ಮಾಡಿ ಅಪ್‌ಲೋಡ್ ಮಾಡಬೇಕಿತ್ತು.ಆದರೆ, ಈಗ ರೀಲ್‌ಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿಯೇ ಉತ್ತಮವಾಗಿ ಸಂಪಾದಿಸಲು ಅನುವು ಮಾಡಿಕೊಲಾಗುತ್ತದೆ. ಈ ಮೂಲಕ ನಿಮ್ಮ ಫೋನ್‌ನಲ್ಲಿ ಇತರೆ ಆಪ್‌ಗಳ ಅವಶ್ಯಕತೆ ಇರುವುದಿಲ್ಲ. ಇನ್ನು ಇನ್‌ಸ್ಟಾಗ್ರಾಮ್ ಪರಿಚಯಿಸಲು ಮುಂದಾಗಿರುವ ಹೊಸ ರೀಲ್ಸ್ ಎಡಿಟಿಂಗ್ ಟೂಲ್ಸ್‌ಗಳ ಬಗ್ಗೆ ತಿಳಿಯೋಣ ಬನ್ನಿ.
ಸ್ಪ್ಲಿಟ್: ಈ ಟೂಲ್ಸ್ ಬಳಕೆ ಮಾಡಿಕೊಂಡು ಯಾವುದೇ ದೀರ್ಘ ವಿಡಿಯೋಗಳನ್ನು ಎರಡು ಭಾಗಗಳಾಗಿ ಮಾಡಬಹುದಾಗಿದೆ. ಇದರಿಂದ ಎಷ್ಟು ಸಮಯದ ವಿಡಿಯೋ ಅವಶ್ಯಕತೆ ಇದೆಯೋ ಅದನ್ನು ಬಳಕೆ ಮಾಡಿಕೊಂಡು ಉಳಿದ ವಿಡಿಯೋವನ್ನು ಡಿಲೀಟ್ ಮಾಡಬಹುದಾಗಿದೆ. ಜೊತೆಗೆ ಇತರೆ ಫೀಚರ್ಸ್‌ಗಳನ್ನು ಅಲ್ಲಲ್ಲಿ ಆಡ್ ಮಾಡಲು ಸಹ ಈ ಸ್ಪ್ಲಿಟ್ ಟೂಲ್ಸ್ ಅನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ.
ರಿಪ್ಲೇಸ್: ಸ್ಮಾರ್ಟ್‌ಫೋನ್ ಬಳಕೆ ಮಾಡಿಕೊಂಡು ಆಪ್ ಮೂಲಕ ವಿಡಿಯೋ ಎಡಿಟ್ ಮಾಡುವವರಿಗೆ ಈ ರಿಪ್ಲೇಸ್ ಪದ ಗೊತ್ತಿರುತ್ತದೆ. ಈ ಟೂಲ್ಸ್ ಮೂಲಕ ಬಳಕೆದಾರರು ವಿಡಿಯೋ ಎಡಿಟ್ ಮಾಡಲು ಮುಂದಾದಾಗ ಇತರ ಕ್ಲಿಪ್‌ಗಳ ಟೈಮ್‌ಲೈನ್ ಅಥವಾ ಕ್ರಮವನ್ನು ಬದಲಾಯಿಸದೆಯೇ ಒಂದು ವಿಡಿಯೋ ಕ್ಲಿಪ್ ಅನ್ನು ಮತ್ತೊಂದು ಕ್ಲಿಪ್‌ನೊಂದಿಗೆ ರಿಪ್ಲೇಸ್ ಮಾಡಿಕೊಳ್ಳಲು ಅನುಮತಿಸುತ್ತದೆ. ಇದರಲ್ಲಿ ನೀವು ಈಗಾಗಲೇ ಅನ್ವಯಿಸಿರುವ ಎಫೆಕ್ಟ್‌ಗಳು, ಆಡಿಯೋಗಳಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ.

ಸ್ಪೀಡ್: ಈ ಟೂಲ್ಸ್ ಹೆಸರನ್ನು ಕೇಳಿದರೆ ನಿಮಗೇ ಅರ್ಥ ಆಗಲಿದೆ. ಈ ಟೂಲ್ಸ್ ಬಳಕೆ ಮಾಡಿಕೊಂಡು ವಿಡಿಯೋದ ವೇಗವನ್ನು ಕಂಟ್ರೋಲ್ ಮಾಡಬಹುದಾಗಿದೆ. ಅಂದರೆ, ವಿಡಿಯೋವನ್ನು ನಿಧಾನವಾಗಿ ಅಥವಾ ವೇಗವಾಗಿ ರನ್ ಆಗುವಂತೆ ಮಾಡಬಹುದಾಗಿದೆ. ಇದರಿಂದಾಗಿ ನಿಮ್ಮ ವಿಡಿಯೋವನ್ನು ಇನ್ನೂ ಹೆಚ್ಚಿಗೆ ಆಕರ್ಷಕವಾಗುವಂತೆ ಮಾಡಬಹುದು. ಹಾಗಿದ್ರೆ, ಬನ್ನಿ ಈ
ಹೊಸ ವಿಡಿಯೋ ಎಡಿಟಿಂಗ್ ಟೂಲ್ಸ್‌ಗಳನ್ನು ಬಳಕೆ ಮಾಡುವುದು ಹೇಗೆ ಎಂದು ತಿಳಿಯೋಣ.
ಹಂತ 1: ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ಆಪ್ ಅನ್ನು ಓಪನ್ ಮಾಡಿ ಅದನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ. ಬಳಿಕ ಮುಖ್ಯ ಪುಟ ಕೆಳಗೆ ಕಾಣಿಸಿಕೊಳ್ಳುವ '+' ಐಕಾನ್ ಮೇಲೆ ಟ್ಯಾಪ್ ಮಾಡಿ. ನಂತರದಲ್ಲಿ ರೀಲ್ಸ್ ಆಯ್ಕೆ ಸ್ಕ್ರಾಲ್ ಮಾಡಿ. ಅ ವಿಭಾಗದಲ್ಲಿ ನಿಮ್ಮ ಫೋನ್‌ನಲ್ಲಿರುವ ವಿಡಿಯೋ ಫೈಲ್ ಅನ್ನು ಆಯ್ಕೆ ಮಾಡಿಕೊಳ್ಳಿ. ಅದಾಗ್ಯೂ ವಿಡಿಯೋ ಇಲ್ಲ ಎಂದಾದರೆ ಹೊಸದಾಗಿ ವಿಡಿಯೋ ರೆಕಾರ್ಡ್ ಮಾಡಿ.

ಹಂತ 2: ಹೊಸ ವಿಡಿಯೋವನ್ನು ರೆಕಾರ್ಡ್ ಮಾಡಿದ ನಂತರ ಅಥವಾ ಫೋನ್‌ನಿಂದ ಇಂಪೋರ್ಟ್ ಮಾಡಿಕೊಂಡ ನಂತರ ಎಡಿಟ್ ಬಟನ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿದರೆ ಹಲವು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ವೇಳೆ ನಿಮಗೆ ಅಗತ್ಯವಾದ ಟೂಲ್ ಅನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿಕೊಂಡು ರೀಲ್ ಅನ್ನು ಪೋಸ್ಟ್ ಮಾಡಲು ಫಾರ್ವರ್ಡ್ ಬಾಣದ ಮೇಲೆ ಟ್ಯಾಪ್ ಮಾಡಿ.
ಗಮನಿಸಬೇಕಾದ ವಿಷಯ ಏನೆಂದರೆ ಇನ್‌ಸ್ಟಾಗ್ರಾಮ್ ತನ್ನ ರೀಲ್ ವಿಭಾಗದಲ್ಲಿ ಈ ಹೊಸ ಎಡಿಟ್ ಟೂಲ್ಸ್‌ಗಳನ್ನು ಒಂದೇ ಬಾರಿಗೆ ಎಲ್ಲರಿಗೂ ಪರಿಚಯಿಸುತ್ತಿಲ್ಲ. ಇದರಿಂದಾಗಿ ಬಳಕೆದಾರರು ಈ ಸೌಲಭ್ಯ ಪಡೆದುಕೊಳ್ಳಲು ಕೆಲ ಸಮಯ ಕಾಯಬೇಕಿದೆ. ಇದಾದ ನಂತರ ನಿಮ್ಮಿಷ್ಟದ ವಿಡಿಯೋವನ್ನು ನಿಮ್ಮಿಷ್ಟ ಬಂದಹಾಗೆ ಎಡಿಟ್ ಮಾಡಿಕೊಂಡು ಅಪ್‌ಲೋಡ್ ಮಾಡಿ.


Click it and Unblock the Notifications








