Home
ಸುದ್ದಿಜಾಲ

ನಿಮ್ಮ ಫೋನಿನಲ್ಲಿ ಹೈಡ್‌ ಆಗಿರುವ ಅಪ್ಲಿಕೇಶನ್ ಪತ್ತೆ ಮಾಡಲು ಹೀಗೆ ಮಾಡಿ!

ಮೊಬೈಲ್‌ ಬಳಕೆದಾರರೇ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಪ್‌ಗಳನ್ನು ಹೈಡ್‌ ಮಾಡಲು ಅವಕಾಶ ಲಭ್ಯ ಇದೆ. ಹಾಗೆಯೇ ಹೈಡ್‌ ಮಾಡಲಾದ ಅಪ್ಲಿಕೇಶನ್ ಮತ್ತೆ ತೆರೆಯಲು (ಕಾಣಿಸುವಂತೆ) ಸಹ ಸಾಧ್ಯ. ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬಳಕೆದಾರರೇ, ನಿಮ್ಮ ಫೋನಿನಲ್ಲಿ ಅಪ್ಲಿಕೇಶನ್‌ಗಳನ್ನು ಹೇಗೆ ಮರೆಮಾಡುವುದು ಮತ್ತು ಅಗತ್ಯವಿದ್ದಾಗ ಅವುಗಳನ್ನು ಹಿಂಪಡೆಯುವುದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದ್ದು, ಸಂಸ್ಥೆಯು ಗ್ರಾಹಕರಿಗೆ ಉಪಯುಕ್ತವಾಗುವ ರೀತಿ ಹಲವು ಅನುಕೂಲಕರ ಫೀಚರ್ಸ್‌ ಲಭ್ಯ ಮಾಡಿದೆ. ಅದೇ ರೀತಿ ಬಳಕೆದಾರರು ಅಗತ್ಯ ಇಲ್ಲದ ಅಥವಾ ಯಾರಿಗೂ ಕಾಣಿಸದಂತೆ ಆಪ್‌ ಇಡಲು ಹೈಡ್‌ ಮಾಡುವ ಆಯ್ಕೆ ಇದೆ. ಅಗತ್ಯ ಇದ್ದಾಗ ಮತ್ತೆ ಆ ಆಪ್‌ ಕಾಣುವಂತೆ ಮಾಡಬಹುದು. ಹೀಗೆ ಮಾಡಲು ಯಾವ ಕ್ರಮ ಅನುಸರಿಸಬೇಕು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನಿಮ್ಮ ಫೋನಿನಲ್ಲಿ ಹೈಡ್‌ ಆಗಿರುವ ಅಪ್ಲಿಕೇಶನ್ ಪತ್ತೆ ಮಾಡಲು ಹೀಗೆ ಮಾಡಿ!

ಸ್ಯಾಮ್‌ಸಂಗ್‌ ಫೋನಿನಲ್ಲಿ ಆಪ್‌ ಹೈಡ್‌ ಮಾಡಲು ಈ ಕ್ರಮ ಅನುಸರಿಸಿ :
ಹೋಮ್ ಸ್ಕ್ರೀನ್ ಸೆಟ್ಟಿಂಗ್‌ಗಳ ಮೂಲಕ ಹೀಗೆ ಮಾಡಿ:
ಹಂತ 1 : ಮೊದಲನೇಯದಾಗಿ, ಫೋನಿನಲ್ಲಿ ಹೋಮ್ ಸ್ಕ್ರೀನ್ ಅನ್ನು ಒತ್ತಿ ಹಿಡಿಯಿರಿ
ಹಂತ 2 : ಬಳಿಕ ಕೆಳಭಾಗದ ಸೆಟ್ಟಿಂಗ್‌ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3 : ನಂತರ ಹೋಮ್ ಮತ್ತು ಆಪ್‌ಗಳ ಸ್ಕ್ರೀನ್‌ಗಳಲ್ಲಿ ಆಪ್ಸ್‌ ಅನ್ನು ಹೈಡ್‌ ಮಾಡಿ ಆಯ್ಕೆ ಕ್ಲಿಕ್ ಮಾಡಿ.
ಹಂತ 4 : ಆ ನಂತರ, ಹೈಡ್‌ ಮಾಡಲು ಬಯಸುವ ಆಪ್‌ಗಳನ್ನು ಆಯ್ಕೆ ಮಾಡಿ ಬಳಿಕ ಡನ್‌ ಕ್ಲಿಕ್ ಮಾಡಿ.

ಸೆಕ್ಯುರ್‌ ಫೋಲ್ಡರ್ ಮೂಲಕ ಈ ಹಂತಗಳನ್ನು ಅನುಸರಿಸಿ :
ಹಂತ 1 : ಸ್ಯಾಮ್‌ಸಂಗ್ ಮೊಬೈಲ್ ಫೋನ್‌ನಲ್ಲಿ ಸೆಟ್ಟಿಂಗ್ಸ್‌ ತೆರೆಯಿರಿ
ಹಂತ 2 : ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸೆಕ್ಯುರಿಟಿ ಮತ್ತು ಪ್ರೈವಸಿ ಅನ್ನು ಟ್ಯಾಪ್ ಮಾಡಿ
ಹಂತ 3 : ಆ ಬಳಿಕ, ಸುರಕ್ಷಿತ ಫೋಲ್ಡರ್ ಆಯ್ಕೆ ಮಾಡಿ

ಹಂತ 4 : ಸ್ಯಾಮ್‌ಸಂಗ್‌ ಖಾತೆಯನ್ನು ಬಳಸಿಕೊಂಡು ಲಾಗ್ ಇನ್ ಮಾಡಿ.(ಈ ಹಿಂದೆ ಮಾಡದಿದ್ದರೆ ಪಿನ್ ಅನ್ನು ಹೊಂದಿಸಿ) ಸುರಕ್ಷಿತ ಫೋಲ್ಡರ್ ಅನ್ನು ಬಳಸಲು ಸ್ಯಾಮ್‌ಸಂಗ್‌ ಖಾತೆಯು ಅತ್ಯಗ.
ಹಂತ 5 : ಸ್ಯಾಮ್‌ಸಂಗ್ ಖಾತೆಯನ್ನು ಸೆಟ್‌ ಮಾಡಿ ಮತ್ತು ಲಾಗ್ ಇನ್ ಮಾಡಿದ ನಂತರ, ಆಪ್ಸ್ ಸ್ಕ್ರೀನ್‌ಗೆ ಸುರಕ್ಷಿತ ಫೋಲ್ಡರ್ ಅನ್ನು ಸೇರಿಸಿ ಆನ್ ಮಾಡಿ.

ಹಂತ 6 : ನಂತರ ಆಪ್‌ನ ಡ್ರಾಯರ್‌ನಿಂದ ಸುರಕ್ಷಿತ ಫೋಲ್ಡರ್ ಅನ್ನು ಪತ್ತೆ ಮಾಡಿ ಹಾಗೂ ತೆರೆಯಿರಿ.
ಹಂತ 7 : ಓಪೆನ್ ಮಾಡಿದ ಬಳಿಕ, '+' ಐಕಾನ್ ಕ್ಲಿಕ್ ಮಾಡಿರಿ.
ಹಂತ 8 : ಆ ನಂತರ ಹೈಡ್ ಮಾಡಲು ಬಯಸುವ ಆಪ್‌ಗಳನ್ನು ಆಯ್ಕೆ ಮಾಡಿ ಮತ್ತು ಸೇರಿಸು ಆಯ್ಕೆ ಒತ್ತಿರಿ.

ಸ್ಯಾಮ್‌ಸಂಗ್‌ ಫೋನ್‌ನಲ್ಲಿ ಹೈಡ್‌ ಆದ ಆಪ್‌ಗಳನ್ನು ತೆರೆಯಲು ಈ ಕ್ರಮ ಅನುಸರಿಸಿ :
ಹೋಮ್ ಸ್ಕ್ರೀನ್ ಸೆಟ್ಟಿಂಗ್‌ಗಳ ಮೂಲಕ
ಹಂತ 1 : ಮೊದಲು, ಫೋನಿನ ಹೋಮ್ ಸ್ಕ್ರೀನ್ ಅನ್ನು ಒತ್ತಿ ಹಿಡಿಯಿರಿ
ಹಂತ 2 : ಆಯ್ಕೆಗಳ ಒಂದು ಸೆಟ್ ಕೆಳಭಾಗದಲ್ಲಿ ಕಾಣಿಸುತ್ತದೆ. ಬಳಿಕ ಸೆಟ್ಟಿಂಗ್ಸ್‌ ಆಯ್ಕೆ ಮಾಡಿರಿ

ಹಂತ 3 : ನಂತರ ಕೆಳಗೆ ಸ್ಕ್ರಾಲ್ ಮಾಡಿರಿ. ಹೋಮ್ ಮತ್ತು ಆಪ್ಸ್‌ಗಳ ಸ್ಕ್ರೀನ್ನಲ್ಲಿ ಆಪ್ಸ್‌ಗಳನ್ನು ಹೈಡ್‌ ಮಾಡಿ ಆಯ್ಕೆ ಟ್ಯಾಪ್ ಮಾಡಿ
ಹಂತ 4 : ಬಳಿಕ ಮೇಲ್ಭಾಗದಲ್ಲಿ ಎಲ್ಲಾ ಹೈಡ್‌ ಆದ ಅಪ್ಲಿಕೇಶನ್‌ಗಳನ್ನು ಕಾಣಬಹುದು

ಹಂತ 5 : ಹೈಡ್‌ ಅಪ್ಲಿಕೇಶನ್ ತೆರೆಯಲು, ಮರೆಮಾಡಲು ಬಯಸುವ ಆಪ್‌ ಅನ್ನು ಆಯ್ಕೆ ಮಾಡಿ ಮತ್ತು ಡನ್ ಆಯ್ಕೆ ಒತ್ತಿರಿ
ಹಂತ 6 : ತದ ನಂತರ ಹೋಮ್ ಬಟನ್ ಒತ್ತಿರಿ ಮತ್ತು ಅಪ್ಲಿಕೇಶನ್ ಡ್ರಾಯರ್‌ನಲ್ಲಿ ಅಪ್ಲಿಕೇಶನ್ ಕಾಣಿಸುತ್ತದೆ
ಹಂತ 7 : ತೆರೆಯಲು ಆಪ್‌ ಅನ್ನು ಸರಳವಾಗಿ ಆಯ್ಕೆ ಮಾಡಿರಿ

Best Mobiles in India

English summary
How to find hidden apps on Samsung Smartphones. follow these steps in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+