Home
ಸುದ್ದಿಜಾಲ

ಫೇಸ್‌ಬುಕ್‌ನಲ್ಲೇ ಇಂಟರ್ನೆಟ್‌ ವೇಗ ತಿಳಿದುಕೊಳ್ಳಬಹುದು; ಇಲ್ಲಿದೆ ನೋಡಿ ಸರಳ ಮಾರ್ಗ!

ಮೆಟಾ ಒಡೆತನದ ಫೇಸ್‌ಬುಕ್‌ ಅನ್ನು ಭಾರತದ ಬಹುಪಾಲು ಮಂದಿ ಬಳಕೆ ಮಾಡುತ್ತಾರೆ. ಅದರಂತೆ ಫೇಸ್‌ಬುಕ್‌ ಇಂದು ಹೆಚ್ಚಾಗಿ ಮನರಂಜನೆ ಪಡೆಯಲು ಹಾಗೂ ಮಾಹಿತಿ ವಿನಿಮಯ ಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿದ್ದು, ಹಲವಾರು ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರಿಗೆ ವಿಶೇಷ ಸೌಲಭ್ಯ ಕಲ್ಪಿಸುತ್ತಿದೆ.

ಹೌದು, ಫೇಸ್‌ಬುಕ್‌ ಆಗಲಿ ಇತರೆ ಯಾವುದೇ ಆಪ್‌ ಆಗಲಿ ಫೋನ್‌ಗಳನ್ನು ಬಳಕೆ ಮಾಡಬೇಕು ಎಂದರೆ ಇಂಟರ್ನೆಟ್‌ ಅಗತ್ಯವಾಗಿದೆ. ಆದರೆ, ಕೆಲವೊಂದು ಕಡೆ ಇಂಟರ್ನೆಟ್ ವೇಗದಲ್ಲಿ ಬದಲಾವಣೆ ಆಗಲಿದ್ದು, ಆ ಸಮಯದಲ್ಲಿ ನೀವು ಗೊಂದಲಕ್ಕೆ ಒಳಗಾಗಬಹುದು. ಹೀಗಾಗಿ ಸುಲಭವಾಗಿ ನಿಮ್ಮ ಪ್ರದೇಶದಲ್ಲಿ ಸರಿಯಾಗಿ ಇಂಟರ್ನೆಟ್‌ ಲಭ್ಯವಾಗುತ್ತಿದೆಯಾ?, ಇಲ್ಲವೇ? ಎಂಬುದನ್ನು ಫೇಸ್‌ ಬುಕ್‌ನಲ್ಲಿಯೇ ತಿಳಿದುಕೊಳ್ಳಬಹುದು.

ಫೇಸ್‌ಬುಕ್‌ನಲ್ಲೇ ಇಂಟರ್ನೆಟ್‌ ವೇಗ ತಿಳಿದುಕೊಳ್ಳಬಹುದು; ಇಲ್ಲಿದೆ ಸರಳ ಮಾರ್ಗ!

ಫೇಸ್‌ಬುಕ್‌ ಆಪ್‌ನಲ್ಲಿ ನಿಮ್ಮ ವೈ-ಫೈ ನೆಟ್‌ವರ್ಕ್‌ಗಳನ್ನು ಪರಿಶೀಲಿಸುವ ಆಯ್ಕೆಯನ್ನು ನೀಡಲಾಗಿದೆ. ಹಾಗೆಯೇ ನೀವು ಬಳಕೆ ಮಾಡುವ ಡಿವೈಸ್‌ನ ಪ್ರಸ್ತುತ ಇಂಟರ್ನೆಟ್ ವೇಗ ಎಷ್ಟಿದೆ ಎಂದೂ ಸಹ ಸುಲಭವಾಗಿ ಕಂಡುಕೊಳ್ಳಬಹುದು. ಮತ್ಯಾಕೆ ತಡ ಇಲ್ಲಿ ನೀಡಲಾದ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ವೇಗವನ್ನು ತಿಳಿದುಕೊಳ್ಳಿ.

ಹಂತ 1: ನಿಮ್ಮ ಸ್ಮಾರ್ಟ್‌ಡಿವೈಸ್‌ನಲ್ಲಿ ಇಂಟರ್ನೆಟ್‌ ವೇಗ ಎಷ್ಟಿದೆ ಎಂದು ತಿಳಿದುಕೊಳ್ಳಲು ಮೊದಲು ನೀವು ಫೇಸ್‌ಬುಕ್‌ ಖಾತೆಯನ್ನು ಓಪನ್‌ ಮಾಡಿ. ಈವರೆಗೂ ನೀವು ಫೇಸ್‌ಬುಕ್‌ ಬಳಕೆ ಮಾಡುತ್ತಿಲ್ಲ ಎಂದಾದರೆ ಆಪ್‌ ಸ್ಟೋರ್‌ ಮೂಲಕ ಇನ್‌ಸ್ಟಾಲ್‌ ಮಾಡಿಕೊಳ್ಳಿ. ನಂತರ ಲಾಗ್‌ಇನ್‌ ಪ್ರಕ್ರಿಯೆ ಮುಗಿಸಿ.

ಹಂತ 2 : ಫೇಸ್‌ಬುಕ್ ಆಪ್‌ ಓಪನ್‌ ಮಾಡಿದ ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು ಅಡ್ಡ ರೇಖೆಗಳ ಮೇಲೆ ಟ್ಯಾಪ್ ಮಾಡಿ. ಈ ಮೂರು ಅಡ್ಡ ರೇಖೆಗಳ ಮೇಲೆ ಟ್ಯಾಪ್ ಮಾಡುವುದರಿಂದ ಹೊಸ ಡ್ರಾಪ್ ಡೌನ್ ಮೆನು ತೆರೆದುಕೊಳ್ಳುತ್ತದೆ. ಅದರಲ್ಲಿ ಹಲವು ಫೇಸ್‌ಬುಕ್‌ ಫೀಚರ್ಸ್‌ಗಳು, ಸೆಟ್ಟಿಂಗ್‌ಗಳು ಮತ್ತು ಇನ್ನೂ ಹೆಚ್ಚಿನ ಆಯ್ಕೆಗಳಿರಲಿವೆ.

ಫೇಸ್‌ಬುಕ್‌ನಲ್ಲೇ ಇಂಟರ್ನೆಟ್‌ ವೇಗ ತಿಳಿದುಕೊಳ್ಳಬಹುದು; ಇಲ್ಲಿದೆ ಸರಳ ಮಾರ್ಗ!

ಹಂತ 3 : ನಂತರ ನೀವು ಈ ವಿಭಾಗದಲ್ಲಿ ಸೆಟ್ಟಿಂಗ್‌ ಮತ್ತು ಗೌಪ್ಯತೆ ಆಯ್ಕೆಯ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ನೀವು ಅಲ್ಲಿ ವೈ ಫೈ ಮತ್ತು ಸೆಲ್ಯುಲಾರ್ ಕಾರ್ಯಕ್ಷಮತೆ ಎಂಬ ಆಯ್ಕೆ ಆಯ್ಕೆಯನ್ನು ಕಾಣುವಿರಿ. ಈ ಆಯ್ಕೆ ಕಾಣಿಸಿದ ನಂತರ ಅದರ ಮೇಲೆ ಟ್ಯಾಪ್ ಮಾಡಿ

ಹಂತ 4 : ಬಳಿಕ ನೀವು ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್‌ ವೇಗ ಎಷ್ಟಿದೆ ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬಹುದು. ಜೊತೆಗೆ ಇದರಲ್ಲಿನ ವೈ ಫೈ ವಿಭಾಗದ ಮೇಲೆ ಟ್ಯಾಪ್‌ ಮಾಡುವ ಮೂಲಕ ನಿಮ್ಮ ಸಮೀಪದ ವೈ-ಫೈ ಸ್ಪಾಟ್‌ಗಳು ಹಾಗೂ ಯಾವ ವೈ ಫೈ ಎಷ್ಟು ಪ್ರಮಾಣದ ವೇಗವನ್ನು ಹೊಂದಿದೆ ಎಂದೂ ಸಹ ತಿಳಿದುಕೊಳ್ಳಬಹುದು.

ಹಂತ 5 : ಇದಾದ ನಂತರದಲ್ಲಿ ರನ್ ಸ್ಪೀಡ್‌ ಟೆಸ್ಟ್‌ ಎಂಬ ಬಟನ್‌ ಸಹ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿದರೆ ಸದ್ಯದ ನಿಮ್ಮ ಇಂಟರ್ನೆಟ್‌ ವೇಗೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಈ ಮೂಲಕ ನಿಮ್ಮ ಫೋನ್‌ನಲ್ಲಿ ನೀವು ಯಾವ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ಪೂರ್ವದಲ್ಲಿಯೇ ತಿಳಿದುಕೊಳ್ಳಬಹುದು. ಈ ಸ್ಪೀಡ್‌ ಟೆಸ್ಟ್‌ ಆಯ್ಕೆಯನ್ನು ಡೌನ್‌ಲೋಡ್ ವೇಗ ಮತ್ತು ಅಪ್‌ಲೋಡ್ ವೇಗ ಎರಡನ್ನೂ ತಿಳಿಸುತ್ತದೆ.

ಫೇಸ್‌ಬುಕ್‌ನಲ್ಲೇ ಇಂಟರ್ನೆಟ್‌ ವೇಗ ತಿಳಿದುಕೊಳ್ಳಬಹುದು; ಇಲ್ಲಿದೆ ಸರಳ ಮಾರ್ಗ!

ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯ: ಈ ವಿಶೇಷ ಫೀಚರ್ಸ್‌ ಐಓಎಸ್‌ ಬಳಕೆದಾರರಿಗೆ ಲಭ್ಯ ಇರುವುದಿಲ್ಲ ಎಂಬುದು ತಿಳಿದಿರಲಿ. ಈ ಮೂಲಕ ಕೇವಲ ಆಂಡ್ರಾಯ್ಡ್‌ ಬಳಕೆದಾರರು ಮಾತ್ರ ಇದನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಆಪಲ್‌ ಡಿವೈಸ್‌ಗಳಿಗೂ ಈ ಸೌಲಭ್ಯ ಕಲ್ಪಿಸಲಾಗುತ್ತದೆಯೋ ಇಲ್ಲವೋ ಕಾದುನೋಡಬೇಕು.

Best Mobiles in India

English summary
Is the internet available easily in your area?, or not? Find out how to find out on Facebook itself.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+