Home
ಸುದ್ದಿಜಾಲ

ಫೋನ್‌ನಲ್ಲಿ ಮೈ ಮ್ಯಾಪ್ಸ್‌ ಮೂಲಕ ಹತ್ತಿರದ ಪಾರ್ಕ್‌ಗಳನ್ನು ಪತ್ತೆ ಮಾಡುವುದು ಹೇಗೆ?

ಸಾಮಾನ್ಯವಾಗಿ ಪಟ್ಟಣ ಹಾಗೂ ಮಹಾನಗರಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಉತ್ತಮ ಗಾಳಿ ಸೇವನೆ ಮಾಡಲು ಉದ್ಯಾನವನಗಳ ಮೊರೆ ಹೋಗಲಾಗುತ್ತದೆ. ಆದರೆ, ಆಫೀಸ್‌ ಕೆಲಸಕ್ಕೆಂದು ಹೊರ ಹೋದಾಗ ಅಥವಾ ಬೇರೆ ಊರುಗಳಿಗೆ ತೆರಳಿದಾಗ ನಿಮ್ಮ ಹತ್ತಿರ ಇರುವ ಪಾರ್ಕ್‌ಗಳನ್ನು ಪತ್ತೆ ಮಾಡುವುದು ಹೇಗೆಂದು ಗೊತ್ತಾ?.

ಹೌದು, ಮನಸ್ಸಿಗೆ ಶಾಂತಿ ಪಡೆಯಲು ಹಾಗೂ ಉತ್ತಮ ಪರಿಸರದಲ್ಲಿ ಕೆಲವು ಹೊತ್ತು ಸಮಯ ಕಳೆಯಲು ಯಾರು ತಾನೆ ಬಯಸುವುದಿಲ್ಲ ಹೇಳಿ. ಆದರೆ, ಕೆಲವು ವೇಳೆ ನಮ್ಮ ಬಾಡಿಗೆ ಮನೆ ಸಮೀಪವೇ ಅಥವಾ ನಮ್ಮ ಕಚೇರಿ ಸಮೀಪವೇ ಪಾರ್ಕ್‌ಗಳು ಇದ್ದರೂ ನಮಗೆ ತಿಳಿಯುವುದಿಲ್ಲ. ಯಾವಾಗಲಾದರು ಒಮ್ಮೆ ನೋಡಿ ಅರೇ.. ಈ ಪಾರ್ಕ್‌ ನಮ್ಮ ಆಫೀಸ್‌ ಅಥವಾ ಮನೆಗೆ ಇಷ್ಟು ಹತ್ತಿರವಿದೆಯೇ? ಎಂದು ಅಂದುಕೊಳ್ಳುವುದುಂಟು. ಇನ್ಮುಂದೆ ಈ ಸಮಸ್ಯೆ ನಿಮಗೆ ಬರುವುದಿಲ್ಲ.

ಫೋನ್‌ನಲ್ಲಿ ಮೈ ಮ್ಯಾಪ್ಸ್‌ ಮೂಲಕ ಹತ್ತಿರದ ಪಾರ್ಕ್‌ ಪತ್ತೆ ಮಾಡುವುದು ಹೇಗೆ?

ನಿಮ್ಮ ಬಳಿ ಸ್ಮಾರ್ಟ್‌ಫೋನ್ ಇದ್ದರೆ ಸಾಕು

ಸಾಮಾನ್ಯವಾಗಿ ಈಗಂತೂ ಎಲ್ಲರೂ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾರೆ. ಈ ಫೋನ್‌ ಮೂಲಕ ನಿಮ್ಮ ದೈನಂದಿನ ಆರೋಗ್ಯ ಹಾಗೂ ದೈಹಿಕ ಚಟುವಟಿಕೆಯ ಮಾಹಿತಿಗಳನ್ನು ಟ್ರ್ಯಾಕ್‌ ಮಾಡಬಹುದು. ಅದರಂತೆ ಈ ರೀತಿಯ ಚಟುವಟಿಕೆ ನಡೆಸಲು ಉದ್ಯಾನವನಗಳಿದ್ದರೆ ಇನ್ನಷ್ಟು ಅನುಕೂಲ ಅಲ್ಲವೆ?. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ನಿಮ್ಮ ಹತ್ತಿರದ ಸ್ಥಳದಲ್ಲಿ ಯಾವ ಉದ್ಯಾನವನ ಇದೆ ಎಂದು ಕಂಡುಕೊಳ್ಳಬಹುದು.

ಮೈ ಮ್ಯಾಪ್ಸ್‌ ಬಳಕೆ ಮಾಡಿ

ಗೂಗಲ್‌ ತನ್ನದೇ ಆದ ಆಪ್‌ಗಳ ಮೂಲಕ ವಿವಿಧ ಸೇವೆ ನೀಡುತ್ತಿದ್ದು, ಅದರಲ್ಲಿ ಗೂಗಲ್‌ ಮ್ಯಾಪ್‌ ಹಾಗೂ ಮೈ ಮ್ಯಾಪ್ಸ್ (Google My Maps) ಆಯ್ಕೆ ಸಹ ಬಹಳ ಜನಪ್ರಿಯತೆ ಪಡೆದುಕೊಂಡಿವೆ. ಈ ಎರಡೂ ಸೇವೆಗಳು ಒಂದೇ ರೀತಿಯದ್ದಾಗಿದ್ದರೂ ಸ್ವಲ್ಪ ಭಿನ್ನತೆ ಇದೆ. ಯಾಕೆಂದರೆ ಮೈ ಮ್ಯಾಪ್ಸ್ ಮೂಲಕ ನಕ್ಷೆಯಲ್ಲಿ ವಿವಿಧ ಸ್ಥಳಗಳನ್ನು ಗುರುತಿಸಬಹುದು, ನಿರ್ದೇಶನಗಳನ್ನು ಉಳಿಸಬಹುದು. ಅಷ್ಟೇ ಏಕೆ ನಿಮ್ಮ ವೆಬ್‌ಸೈಟ್ ಅಥವಾ ಬ್ಲಾಗ್‌ನಲ್ಲಿ ನೀವು ಮೈ ಮ್ಯಾಪ್ಸ್ ಅನ್ನು ಎಂಬೆಡ್ ಮಾಡಬಹುದು.

ಫೋನ್‌ನಲ್ಲಿ ಮೈ ಮ್ಯಾಪ್ಸ್‌ ಮೂಲಕ ಹತ್ತಿರದ ಪಾರ್ಕ್‌ ಪತ್ತೆ ಮಾಡುವುದು ಹೇಗೆ?

ನೀವು ನಿಮ್ಮ ಮೊಬೈಲ್‌ ಮೂಲಕ ಅಥವಾ ಸ್ಮಾರ್ಟ್‌ಡಿವೈಸ್‌ ಮೂಲಕ ಹತ್ತಿರದ ಉದ್ಯಾನವನಗಳನ್ನು ಪತ್ತೆ ಮಾಡಲು ಮೊದಲು ಮೈ ಮ್ಯಾಪ್ಸ್‌ ಎಂದು ಸರ್ಚ್‌ ಮಾಡಿ. ಇದಾದ ನಂತರ ಖಾಲಿ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕಾಣಿಸಿಕೊಳ್ಳುವ ಸರ್ಚ್‌ ಬಾಕ್ಸ್‌ನಲ್ಲಿ 'parks and gardens near me' ಎಂದು ನಮೂದಿಸಿ. ಈ ವೇಳೆ ನಿಮ್ಮ ಹತ್ತಿರ ಇರುವ ಎಲ್ಲಾ ಪಾರ್ಕ್‌ಗಳ ವಿವರ ನಿಮಗೆ ತಿಳಿಯುತ್ತದೆ. ಈ ವಿಭಾಗದಲ್ಲಿ ನಿಮಗೆ ಬೇಕಾದ ಪಾರ್ಕ್‌ಗಳ ಮೇಲೆ ಕ್ಲಿಕ್‌ ಮಾಡುವ ಮೂಲಕ ಅದರ ವಿವರವನ್ನು ಪಡೆದುಕೊಳ್ಳಬಹುದು.

ಇದರೊಂದಿಗೆ ನೀವು ಸ್ಥಳವನ್ನು ಆಯ್ಕೆ ಮಾಡಿದರೆ, ಅದನ್ನು ಗೂಗಲ್‌ ಮ್ಯಾಪ್‌ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ ಅದನ್ನು ಮೈ ಮ್ಯಾಪ್ಸ್‌ಗೆ ಆಡ್‌ ಮಾಡುವ ಅವಕಾಶ ಸಹ ನಿಮಗೆ ಇರುತ್ತದೆ. ಇನ್ನು ಗೂಗಲ್‌ ಮೈ ಮ್ಯಾಪ್ಸ್ ಹೊರತಾಗಿ ಗೂಗಲ್‌ ಮ್ಯಾಪ್‌ನಲ್ಲಿ ಸ್ಥಳವನ್ನು ವೀಕ್ಷಿಸುವುದರಿಂದ ನೀವು ಹೆಚ್ಚುವರಿ ಚಿತ್ರಗಳನ್ನು ಮತ್ತು ಬಳಕೆದಾರರ ವಿಮರ್ಶೆಗಳನ್ನು ನೋಡಬಹುದು.

ಫೋನ್‌ನಲ್ಲಿ ಮೈ ಮ್ಯಾಪ್ಸ್‌ ಮೂಲಕ ಹತ್ತಿರದ ಪಾರ್ಕ್‌ ಪತ್ತೆ ಮಾಡುವುದು ಹೇಗೆ?

ಇದಕ್ಕೆ ಪ್ರತ್ಯೇಕ ಆಪ್‌ ಇಲ್ಲ

ನೀವು ನಿಮ್ಮ ಫೋನ್‌, ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌ನಲ್ಲಿ ಇದನ್ನು ಬಳಕೆ ಮಾಡಬಹುದಾಗಿದ್ದು, ಇದಕ್ಕಾಗಿ ಪ್ರತ್ಯೇಕವಾದ ಯಾವುದೇ ಆಪ್‌ ಇಲ್ಲ ಎನ್ನುವುದು ನಿಮ್ಮ ಗಮನಕ್ಕೆ ಇರಲಿ. ಇದರ ಬಳಕೆ ಆರಂಭದಲ್ಲಿ ಕ್ಲಿಷ್ಟ ಎನಿಸಿದರು ನಿರಂತರವಾಗಿ ಬಳಕೆ ಮಾಡಲು ಮುಂದಾದರೆ ಗೂಗಲ್ ಮ್ಯಾಪ್ಸ್‌ಗಿಂತ ಈ ಮೈ ಮ್ಯಾಪ್ಸ್‌ ಹೆಚ್ಚು ಇಷ್ಟವಾಗಲಿದೆ.

Best Mobiles in India

English summary
Any nearby location can be easily searched through My Maps, which can be added location to this app from Google Maps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+