ಹೀಗೆ ಮಾಡಿ, ಉಚಿತವಾಗಿ ಓಟಿಟಿ ಚಂದಾದಾರಿಕೆ ಪಡೆಯಬಹುದು!
ಪ್ರಸ್ತುತ ಓಟಿಟಿ ಪ್ಲಾಟ್‌ಫಾರ್ಮ್ ಗಳು ಅತ್ಯುತ್ತಮ ಮನರಂಜನೆಯ ತಾಣಗಳಾಗಿ ಕಾಣಿಸಿಕೊಂಡಿವೆ. ಅವುಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜೀ5 ಸೇರಿದಂತೆ ಹಲವು ಆಪ್‌ಗಳು ಗಮನ ಸೆಳೆದಿವೆ. ಆ ಪೈಕಿ ಸೋನಿ ಲೈವ್ (Sony LIV) ಸಹ ಈಗಾಗಲೇ ಹೆಚ್ಚಿನ ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿರುವ ಓಟಿಟಿ ಪ್ಲಾಟ್‌ಫಾರ್ಮು ಎನಿಸಿಕೊಂಡಿದೆ.
ಹೌದು, ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಗಳಲ್ಲಿ ಸೋನಿ ಲೈವ್ ಓಟಿಟಿ ಸಹ ಒಂದಾಗಿದೆ. ಈ ತಾಣವು ಕೆಲವು ವಿಶೇಷ ಕಾರ್ಯಕ್ರಮಗಳ ಮೂಲಕ ವೀಕ್ಷಕರ ವರ್ಗ ಗಳಿಸಿಕೊಂಡಿದೆ. ಇನ್ನು ಇತರ ಓಟಿಟಿಗಳಂತೆ ಸೋನಿ ಲೈವ್ ಓಟಿಟಿ ಸಹ ಚಂದಾದಾರಿಕೆ ಶುಲ್ಕ ಹೊಂದಿದೆ. ಸೋನಿ ಲೈವ್ ವಾರ್ಷಿಕ ಚಂದಾದಾರಿಕೆ ಶುಲ್ಕ 999ರೂ. ಆಗಿದೆ. ಆದರೆ, ಉಚಿತ ಚಂದಾದಾರಿಕೆ ಪಡೆಯಲು ಕೆಲವು ಮಾರ್ಗಗಳಿವೆ.

ಏರ್‌ಟೆಲ್ ಪ್ರಿಪೇಯ್ಡ್ ಆಫರ್
ಒಂದು ವೇಳೆ ನೀವು ಏರ್‌ಟೆಲ್ ಚಂದಾದಾರರಾಗಿದ್ದರೆ, ಸೋನಿ ಲೈವ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು. ಸಂಸ್ಥೆಯ ಅಧಿಕೃತ ಏರ್‌ಟೆಲ್ ಎಕ್ಸ್‌ಟ್ರಿಮ್ ಅಪ್ಲಿಕೇಶನ್ ಮೂಲಕ ಸೋನಿ ಲೈವ್ ಪ್ರೀಮಿಯಂ ಉಚಿತ ಆಕ್ಸಸ್ ಲಭ್ಯ. ಯಾವುದೇ ಆರು ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಆಯ್ಕೆ ಮಾಡಲು ಆಪ್ ಗ್ರಾಹಕರಿಗೆ ಅನುಮತಿಸುತ್ತದೆ. ಇನ್ನು ರೀಚಾರ್ಜ್ ಪ್ಲ್ಯಾನ್‌ಗಳನ್ನು ನೋಡುವುದಾದರೆ ಕ್ರಮವಾಗಿ 148ರೂ, 299ರೂ, 359ರೂ, 549ರೂ, 699ರೂ, 719ರೂ, 839ರೂ, 999ರೂ. ಆಗಿವೆ.
ರಿಲಯನ್ಸ್ ಜಿಯೋ ಫೈಬರ್ ಕೊಡುಗೆ
ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಹಲವು ಯೋಜನೆಗಳ ಆಯ್ಕೆ ಹೊಂದಿದೆ. ಆ ಪೈಕಿ ಕೆಲವು ಯೋಜನೆಗಳ ಜೊತೆಗೆ ಉಚಿತ SonyLIV ಪ್ರೀಮಿಯಂ ಚಂದಾದಾರಿಕೆಯನ್ನು ಸಹ ಲಭ್ಯ ಮಾಡಿದೆ. ಜಿಯೋ ಫೈಬರ್ 999ರೂ. ರಿಂದ 8,499ರೂ. ಗಳ ವರೆಗೆ ಯೋಜನೆಗಳ ಆಯ್ಕೆ ಹೊಂದಿದೆ. ಬಹುತೇಕ ಯೋಜನೆಗಳು ಸೋನಿಲೈವ್ ಪ್ರೀಮಿಯಂ, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್, ವೂಟ್ ಸೆಲೆಕ್ಟ್, ZEE5, ಲಯನ್ಸ್‌ಗೇಟ್ ಪ್ಲೇ, ನೆಟ್‌ಫ್ಲಿಕ್ಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 12 OTT ಆಪ್‌ಗಳ ಚಂದಾದಾರಿಕೆಗಳನ್ನು ಪಡೆದಿವೆ.

ಪೇಟಿಎಮ್ ಫಸ್ಟ್
ಪೇಟಿಎಮ್ (Paytm) ಪೇಟಿಎಮ್ ಫಸ್ಟ್ ಚಂದಾದಾರಿಕೆಯೊಂದಿಗೆ ವಿಶೇಷ ಒಪ್ಪಂದವನ್ನು ಸಹ ನೀಡುತ್ತಿದೆ. ಗ್ರಾಹಕರು ಪೇಟಿಎಮ್ ಫಸ್ಟ್ ಅನ್ನು ಖರೀದಿಸುವ ಜೊತೆಗೆ ಸೋನಿ ಲೈವ್ (Sony LIV) ಪ್ರೀಮಿಯಂನ ಉಚಿತ ಸದಸ್ಯತ್ವವನ್ನು ಪಡೆಯಬಹುದಾಗಿದೆ.ಅಂದಹಾಗೆ ಪೇಟಿಎಮ್ ಫಸ್ಟ್ ಸದಸ್ಯತ್ವವು 6 ತಿಂಗಳಿಗೆ 899 ರೂ.ಗಳ ಬೆಲೆ ಹೊಂದಿದೆ. ಈ ಯೋಜನೆಯೊಂದಿಗೆ ಗ್ರಾಹಕರು 699ರೂ. ಮೌಲ್ಯದ ಸೋನಿ ಲೈವ್ ಪ್ರೀಮಿಯಂ ಚಂದಾದಾರಿಕೆಯನ್ನು 6 ತಿಂಗಳವರೆಗೆ ಉಚಿತವಾಗಿ ಪಡೆಯುತ್ತಾರೆ.
ಟಾಟಾ ಪ್ಲೇ ಬಿಂಜ್ ಕಾಂಬೋಸ್
ಜನಪ್ರಿಯ ಟಾಟಾ ಪ್ಲೇ ಇತ್ತೀಚೆಗೆ ಓಟಿಟಿ ಚಂದಾದಾರಿಕೆಗಳು ಮತ್ತು ಬ್ರಾಡ್‌ಕಾಸ್ಟ್ ಪ್ಯಾಕ್‌ಗಳ ಪ್ಲಾನ್‌ಗಳನ್ನು ಪರಿಚಯಿಸಿದೆ. ಟಾಟಾ ಪ್ಲೇ ಬಿಂಜ್ ಕಾಂಬೊ ಆಫರ್‌ಗಳು ಮಾಸಿಕ ಶುಲ್ಕ 399 ರೂ. ರಿಂದ ಪ್ರಾರಂಭವಾಗುತ್ತವೆ. ಅಲ್ಲದೇ ಬಳಕೆದಾರರು ಸೋನಿ ಲೈವ್ ಪ್ರೀಮಿಯಂಗೆ OTT ಚಂದಾದಾರಿಕೆಗಳನ್ನು ಪಡೆಯುತ್ತಾರೆ. ಇದಲ್ಲದೆ, ಕಂಪನಿಯು ಜೀ5, ಡಿಸ್ನಿ+ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಸೇರಿದಂತೆ ಇತರ ಜನಪ್ರಿಯ ಓಟಿಟಿಗಳಿಗೆ ಸದಸ್ಯತ್ವ ನೀಡುತ್ತದೆ.

Vi ಕೊಡುಗೆಗಳು
ವಿ ಟೆಲಿಕಾಂ ತನ್ನ ಪೋಸ್ಟ್‌ಪೇಯ್ಡ್ ಯೋಜನೆಗಳ ಆಯ್ಕೆಗಳಲ್ಲಿ ಸೋನಿ ಲೈವ್ ಪ್ರೀಮಿಯಂ ಚಂದಾದಾರಿಕೆಗೆ ಉಚಿತ ಆಕ್ಸಸ್ ಲಭ್ಯ ಮಾಡುತ್ತದೆ. ಸೋನಿ ಲೈವ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪ್ರವೇಶಿಸಲು ಬಳಕೆದಾರರು ತಮ್ಮ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ತಿಂಗಳಿಗೆ 100 ರೂ. ಆಡ್-ಆನ್ ಪ್ಯಾಕ್ ಅನ್ನು ಆಯ್ಕೆ ಮಾಡಬಹುದು.


Click it and Unblock the Notifications








