Home
ಸುದ್ದಿಜಾಲ

ಮೊಬೈಲ್‌ ಇಂಟರ್ನೆಟ್‌ ಸ್ಲೋ ಆಗಿದೆಯೇ?..ಚಿಂತೆ ಬಿಡಿ, ಈ ಸೆಟ್ಟಿಂಗ್ ಮಾಡಿ ಸಾಕು!

ಪ್ರಸ್ತುತ ಇಂಟರ್ನೆಟ್‌ ಅಗತ್ಯ ಇದ್ದು, ಅನೇಕ ಕೆಲಸಗಳು ಆನ್‌ಲೈನ್‌ ಮೂಲಕವೇ ನಡೆಯುತ್ತವೆ. ಅಲ್ಲದೇ ವಿಡಿಯೋ ಸ್ಟ್ರೀಮಿಂಗ್‌, ಡೌನ್‌ಲೋಡ್‌, ವಿಡಿಯೋ ಕರೆ ಮಾಡಲು ಸೇರಿದಂತೆ ಹಲವು ಆಪ್‌ ಬಳಕೆಗೆ ಇಂಟರ್ನೆಟ್‌ ಬೇಕೆ ಬೇಕು. ಬಹುತೇಕ ಬಳಕೆದಾರರು ಮೊಬೈಲ್‌ ಡೇಟಾ ಮೂಲವೇ ಹೆಚ್ಚಿನ ಇಂಟರ್ನೆಟ್‌ ಬಳಕೆ ಮಾಡುತ್ತಾರೆ. ಇನ್ನು ಮೊಬೈಲ್‌ನಲ್ಲಿ ಕೆಲವೊಮ್ಮೆ ಇಂಟರ್ನೆಟ್‌ ಬಳಕೆ ಸ್ಲೋ ಆಗುವ ಸಾಧ್ಯತೆಗಳು ಇರುತ್ತವೆ.

ಹೌದು, ಮೊಬೈಲ್‌ ಬಳಕೆದಾರರು ತಮ್ಮ ಅನೇಕ ಕೆಲಸಗಳನ್ನು ನಡೆಸಲು ಮೊಬೈಲ್‌ ಇಂಟರ್ನೆಟ್‌ ಮೂಲಕವೇ ಮಾಡುತ್ತಾರೆ. ಹೀಗಾಗಿ ವೇಗದ ಇಂಟರ್ನೆಟ್‌ ಸಂಪರ್ಕ ಇರಲಿ ಎಂದು ನಿರೀಕ್ಷಿಸುತ್ತಾರೆ. ಆದರೆ ಕೆಲವೊಮ್ಮೆ ಮೊಬೈಲ್‌ನಲ್ಲಿ ಇಂಟರ್ನೆಟ್‌ ಸ್ಲೋ ಆಗುವ ಸಾಧ್ಯತೆಗಳು ಇರುತ್ತವೆ. ಅದಕ್ಕೆ ನೆಟ್‌ವರ್ಕ್‌ ಒಂದೇ ಕಾರಣ ಆಗಿರುವುದಿಲ್ಲ. ಕೆಲವು ಇತರೆ ಅಂಶಗಳು ಸಹ ಕಾರಣ ಆಗಿರಬಹುದು. ಹಾಗಾದರೇ ಮೊಬೈಲ್‌ನಲ್ಲಿ ಇಂಟರ್ನೆಟ್‌ ಸ್ಪೀಡ್‌ ಹೆಚ್ಚಿಸುವುದು ಹೇಗೆ ಈ ಬಗ್ಗೆ ಕೆಲವು ಟಿಪ್ಸ್‌ ಮುಂದೆ ನೋಡೋಣ ಬನ್ನಿರಿ.

ಮೊಬೈಲ್‌ ಇಂಟರ್ನೆಟ್‌ ಸ್ಲೋ ಆಗಿದೆಯೇ?..ಚಿಂತೆ ಬಿಡಿ, ಈ ಸೆಟ್ಟಿಂಗ್ ಮಾಡಿ ಸಾಕು!

ನೆಟ್‌ವರ್ಕ್ ಸಿಗ್ನಲ್ ಚೆಕ್‌ ಮಾಡಿ

ಮೊಬೈಲ್‌ ಇಂಟರ್ನೆಟ್‌ (Internet) ಸ್ಲೋ ಆದಾಗ, ಮೊದಲಿಗೆ ನೆಟ್‌ವರ್ಕ್‌ ಸಿಗ್ನಲ್‌ ಚೆಕ್‌ ಮಾಡಿ. ಕಡಿಮೆ ಸಿಗ್ನಲ್‌ ಇದ್ದರೆ, ಇಂಟರ್ನೆಟ್ ಸ್ಪೀಡ್‌ ಸಹ ಕಡಿಮೆ ಆಗಿರುತ್ತದೆ. ಅದಕ್ಕಾಗಿ ಫೋನಿನ ಸ್ಟೇಟಸ್ ಬಾರ್‌ನಲ್ಲಿ ಸಿಗ್ನಲ್ ಸರಿಯಾಗಿದೆಯೇ ಒಮ್ಮೆ ಚೆಕ್‌ ಮಾಡಿರಿ. ಒಂದು ವೇಳೆ ಸಿಗ್ನಲ್‌ ಕಡಿಮೆ ಇದ್ರೆ, ಬೇರೆ ಸ್ಥಳದಲ್ಲಿ ಮತ್ತೊಮ್ಮೆ ಪರಿಶೀಲಿಸಿ ನೋಡಿ.

ನಿಯಮಿತವಾಗಿ Cache ಕ್ಲಿಯರ್‌ ಮಾಡಿ

ಹೆಚ್ಚಿನ Cache ಸಂಗ್ರಹವು ಇಂಟರ್ನೆಟ್ ಸ್ಪೀಡ್‌ ಅನ್ನು ನಿಧಾನಗೊಳಿಸಬಹುದು. ನಿಮ್ಮ ಫೋನಿನಲ್ಲಿ ನಿಯಮಿತವಾಗಿ ಅಪ್ಲಿಕೇಶನ್‌ಗಳು ಹಾಗೂ ವೆಬ್ ಬ್ರೌಸರ್‌ Cache ಕ್ಲಿಯರ್‌ ಮಾಡುವುದು ಉತ್ತಮ. ಇದಕ್ಕಾಗಿ ಬಳಕೆದಾರರು ಫೋನ್‌ ಸೆಟ್ಟಿಂಗ್‌ಗಳು > ಆಪ್ಸ್‌> ನಿರ್ದಿಷ್ಟ ಆಪ್‌ > ಸ್ಟೋರೇಜ್‌ > ಕ್ಲಿಯರ್‌ Cache ಆಯ್ಕೆ ಮಾಡಬಹುದು.

ಸಾಫ್ಟ್‌ವೇರ್ ಅಪ್‌ಡೇಟ್‌

ಮೊಬೈಲ್ಗಳು ಅಗತ್ಯ ವೇಳೆ ಸಾಫ್ಟ್‌ವೇರ್‌ ಅಪ್‌ಡೇಟ್‌ ಬೇಡುತ್ತವೆ. ಮೊಬೈಲ್‌ ಸಾಫ್ಟ್‌ವೇರ್ ಅಪ್‌ಡೇಟ್‌ ಕೇಳಿದಾಗ, ಇತ್ತೀಚಿನ ಓಎಸ್‌ ಆವೃತ್ತಿಗೆ ಅಪ್‌ಡೇಟ್‌ ಮಾಡಿಕೊಳ್ಳುವುದು ಉತ್ತಮ. ಸರಿಯಾಗಿ ಫೋನ್‌ ಅಪ್‌ಡೇಟ್‌ ಮಾಡಿಕೊಳ್ಳದಿದ್ದರೆ, ಅದು ಸಹ ಇಂಟರ್ನೆಟ್‌ ವೇಗಕ್ಕೆ ಹಿನ್ನಡೆ ಮಾಡುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಇತ್ತೀಚಿನ ಆವೃತ್ತಿಗೆ ನಿಮ್ಮ ಮೊಬೈಲ್‌ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳಿ.

ಸುರಕ್ಷಿತ ಹಾಗೂ ಸ್ಪೀಡ್‌ ವೆಬ್‌ ಬ್ರೌಸರ್ ಬಳಕೆ ಮಾಡಿ

ಇಂಟರ್ನೆಟ್‌ ಬಳಕೆ ಮಾಡಲು ಸುರಕ್ಷಿತ ಹಾಗೂ ಸ್ಪೀಡ್‌ ವೆಬ್‌ ಬ್ರೌಸರ್ ಆಯ್ಕೆ ಮಾಡಿಕೊಳ್ಳಿ. ಕೆಲವೊಮ್ಮೆ ನೀವು ಬಳಕೆ ಮಾಡುವ ವೆಬ್‌ ಬ್ರೌಸರ್‌ ಸಹ ನಿಮ್ಮ ಇಂಟರ್ನೆಟ್‌ ಸ್ಪೀಡ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಉತ್ತಮ ವೆಬ್‌ ಬ್ರೌಸರ್‌ ಮಾಡಿಕೊಳ್ಳಬೇಕು. ಗೂಗಲ್‌ ಕ್ರೋಮ್‌ ಹಾಗೂ ಮೋಜಿಲ್ಲಾ ಫೈರ್‌ಫಾಕ್ಸ್‌ ಜನಪ್ರಿಯ ವೆಬ್‌ ಬ್ರೌಸರ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ.

ಬ್ಯಾಕ್‌ಗ್ರೌಂಡ್‌ ಆಪ್‌ ನಿಷ್ಕ್ರೀಯಗೊಳಿಸಿ

ಕೆಲವೊಮ್ಮೆ ಮೊಬೈಲ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಅಪ್ಲಿಕೇಶನ್‌ಗಳು ಕೆಲಸ ಮಾಡುತ್ತಿರುತ್ತವೆ. ಹೀಗೆ ಬ್ಯಾಕ್‌ಗ್ರೌಂಡ್‌ನಲ್ಲಿ ಹೆಚ್ಚಿನ ಆಪ್‌ಗಳು ಕಾರ್ಯ ಮಾಡುತ್ತಿದ್ದರೆ, ಅದು ಇಂಟರ್ನೆಟ್ ಸ್ಪೀಡ್‌ ಕಡಿಮೆ ಆಗಲು ಕಾರಣವಾಗಬಹುದು. ಹೀಗಾಗಿ ನಿಮ್ಮ ಫೋನಿನಲ್ಲಿ ಬ್ಯಾಕ್‌ಗ್ರೌಂಡ್‌ ಆಪ್‌ ನಿಷ್ಕ್ರೀಯಗೊಳಿಸಿ.

ಡೇಟಾ ಸೇವರ್ ಮೋಡ್ ಬಳಕೆ ಮಾಡಬಹುದು

ಇಂದಿನ ಬಹುತೇಕ ಮೊಬೈಲ್‌ಗಳು ಡೇಟಾ ಸೇವರ್ ಮೋಡ್ ಫೀಚರ್‌ ಅನ್ನು ಹೊಂದಿವೆ. ಡೇಟಾ ಸೇವರ್ ಮೋಡ್ ಆಪ್‌ಗಳಿಗೆ ಬ್ಯಾಕ್‌ಗ್ರೌಂಡ್‌ ಡೇಟಾ ಬಳಕೆಯನ್ನು ನಿರ್ಬಂಧಿಸುತ್ತದೆ. ಅಲ್ಲದೇ ಡೇಟಾ ಸೇವರ್ ಮೋಡ್‌ ಅನ್ನು ಆಕ್ಟಿವ್ ಮಾಡುವುದರಿಂದ ಡೇಟಾ ಬಳಕೆ ಕಡಿಮೆ ಮಾಡಲು ಇದು ನೆರವಾಗುತ್ತದೆ. ಹಾಗೆಯೇ ಇಂಟರ್ನೆಟ್‌ ವೇಗಕ್ಕೂ ಉತ್ತಮ.

Best Mobiles in India

English summary
How to Increase Internet Speed On Your Mobile. Check This Effective Tips.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+