Home
ಸುದ್ದಿಜಾಲ

ಆಧಾರ್ ಕಾರ್ಡ್ ಬಗ್ಗೆ ನಿಮಗೆ ತಿಳಿಯದ ಬಹುದೊಡ್ಡ ವಂಚನೆಗಳಿವು! 5 ಸಿಂಪಲ್ ಟಿಪ್ಸ್ ತಿಳಿದುಕೊಳ್ಳಿ

ಆಧಾರ್‌ ಕಾರ್ಡ್‌(Aadhaar Card) ಇಂದು ಬಳಕೆದಾರರಿಗೆ ಅತ್ಯಗತ್ಯ ಗುರುತಿನ ಪುರಾವೆ ಆಗಿದೆ. ಅಷ್ಟು ಮಾತ್ರವಲ್ಲದೆ ಸರ್ಕಾರದ ಬಹುಪಾಲು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಇದು ಸಹಕಾರಿ. ಅದರಲ್ಲೂ ಕರ್ನಾಟಕದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅಗತ್ಯ ದಾಖಲೆಯಾಗಿದೆ. ಈ ನಡುವೆ ಆಧಾರ್‌ ಬಳಕೆ ಮಾಡಿಕೊಂಡು ಹೇಗೆಲ್ಲಾ ವಂಚನೆ ಮಾಡಲಾಗುತ್ತದೆ ಗೊತ್ತಾ?.

ಹೌದು, ಆಧಾರ್‌ ಕಾರ್ಡ್ ಇಲ್ಲದೆ ಅನೇಕ ಕಾರ್ಯಗಳು ಅಪೂರ್ಣ. ಅದರಲ್ಲೂ ಬ್ಯಾಂಕಿನ ಕೆಲಸಕ್ಕೆ ಆಧಾರ್ ಕಾರ್ಡ್‌ ಅತಿ ಮುಖ್ಯವಾಗಿದೆ. ಆಧಾರ್ ಕಾರ್ಡ್ ಸದ್ಬಳಕೆ ನಿಮ್ಮ ಎಲ್ಲಾ ಕೆಲಸಗಳನ್ನು ಸರಳವಾಗಿಸುವಂತೆಯೇ ಅದೇನಾದರೂ ದುರ್ಬಳಕೆ ಆದರೆ ನಿಮ್ಮನ್ನು ಬರಿದು ಮಾಡುತ್ತದೆ. ಇದಕ್ಕಾಗಿ ನೀವು ಆಧಾರ್ ಕಾರ್ಡ್ ಬಳಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಹೀಗಾಗಿ ಈ 5 ವಿಷಯಗಳ ಬಗ್ಗೆ ಕಾಳಜಿ ವಹಿಸಿದ್ರೆ ಭವಿಷ್ಯದಲ್ಲಿ ಆಧಾರ್ ಕಾರ್ಡ್‌ಗಳಿಂದ ಪಾರಾಗಬಹುದು.

ಆಧಾರ್ ಕಾರ್ಡ್ ಬಗ್ಗೆ ನಿಮಗೆ ತಿಳಿಯದ ಬಹುದೊಡ್ಡ ವಂಚನೆಗಳಿವು!...

ಎಚ್ಚರಿಕೆ ಇರಲಿ: ಆಧಾರ್‌ ಅಲ್ಲದೆ ಯಾವುದೇ ದಾಖಲೆಗಳು ನಿಮ್ಮ ಬಳಿ ಇದ್ದರೆ ಅವುಗಳನ್ನು ಬಳಕೆ ಮಾಡುವಾಗ ಎಚ್ಚರಿಕೆ ವಹಿಸುವುದು ಅನಿವಾರ್ಯ. ಅದರಲ್ಲೂ ಈ ಆಧಾರ್ ಕಾರ್ಡ್ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ ನೀಡುವ ಆಧಾರ್ ಸಂಖ್ಯೆಯನ್ನು ಹೊಂದಿದ್ದು, ಇದರೊಂದಿಗೆ ಬಯೋಮೆಟ್ರಿಕ್ ವಿವರಗಳು, ಫಿಂಗರ್‌ಪ್ರಿಂಟ್, ಐರಿಸ್‌ ಮತ್ತು ಫೋಟೋದಂತಹ ನಿಮ್ಮ ವೈಯಕ್ತಿಕ ಡೇಟಾವನ್ನು ಸಹ ಹೊಂದಿರುತ್ತದೆ. ಪರಿಣಾಮ ಅದನ್ನು ಸುರಕ್ಷಿತವಾಗಿರಿಸಬೇಕು. ವಂಚಕರು ನಿಮ್ಮ ಆಧಾರ್ ಅನ್ನು ಬಳಸಿಕೊಂಡು ಬಯೋಮೆಟ್ರಿಕ್ ವಿವರಗಳನ್ನು ದುರುಪಯೋಗಪಡಿಸಿಕೊಳ್ಳಬಹುದು.

ಬಯೋಮೆಟ್ರಿಕ್ ಅನ್ನು ನೀವು ಲಾಕ್ ಮಾಡಿ: ಬಯೋಮೆಟ್ರಿಕ್ ವಿವರಗಳನ್ನು ಯಾರೂ ಸಹ ದುರುಪಯೋಗ ಮಾಡದಿರಲಿ ಎಂದು ಸರ್ಕಾರ ಇದಕ್ಕೂ ಹೊಸ ಸೌಲಭ್ಯ ಕಲ್ಪಿಸಿದೆ. ಅದುವೇ ಬಯೋಮೆಟ್ರಿಕ್ ಲಾಕ್. ಇದರ ಮೂಲಕ ನಿಮ್ಮ ಬಯೋಮೆಟ್ರಿಕ್ ಡೇಟಾವನ್ನು ನೀವು ತಾತ್ಕಾಲಿಕವಾಗಿ ಲಾಕ್ ಮಾಡಿಕೊಳ್ಳಬಹುದು. ಪರಿಣಾಮ ಯಾವುದೇ ವಂಚಕರು ನಿಮ್ಮ ಬಯೋಮೆಟ್ರಿಕ್ ಅನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಜೊತೆಗೆ ನಿಮ್ಮ ಆಧಾರ್‌ ಇನ್ನಷ್ಟು ಹೆಚ್ಚಿನ ಭದ್ರತೆ ಪಡೆಯುತ್ತದೆ.

ಫೋಟೋ ಪ್ರತಿ ಬಳಸಿ: ಈ ವಿಷಯದ ಬಗ್ಗೆ ನೀವು ಹೆಚ್ಚಿನ ಗಮನಹರಿಸಬೇಕು. ಯಾಕೆಂದರೆ ಹಲವಾರು ಜನರು ಒರಿಜಿನಲ್‌ ಆಧಾರ್ ಕಾರ್ಡ್‌ ಅನ್ನೇ ಬೇರೆಯವರಿಗೆ ಕೊಡುವ ಕೆಲಸ ಮಾಡುತ್ತಾರೆ. ಆದರೆ, ಇದನ್ನು ಎಂದಿಗೂ ಮಾಡಬೇಡಿ. ನಿಮಗೆ ಆ ವ್ಯಕ್ತಿ ನಂಬಿಕಸ್ಥ ಎಂದರೆ ಮಾತ್ರ ನೀಡಿ. ಇಲ್ಲವಾದರೆ ಝೆರಾಕ್ಸ್‌ ಪ್ರತಿಗಳನ್ನು ನೀಡುವುದು ಉತ್ತಮ. ಇದರ ಹೊರತಾಗಿ ಅಗತ್ಯ ಸಮಯದಲ್ಲಿ ಫೋಟೋ ಕಾಫಿ ಸಹ ಬಳಕೆ ಮಾಡಬಹುದು ಹಾಗೂ ಡಿಜಿಲಾಕರ್‌ ಮೂಲಕವೂ ಸೌಲಭ್ಯ ಪಡೆದುಕೊಳ್ಳಬಹುದು.

ಮಾಸ್ಕಿಂಗ್‌ ಆಧಾರ್‌ ಪಡೆದುಕೊಳ್ಳಬಹುದು: ಭದ್ರತೆ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವುದಾದರೆ ನೀವು ಮಾಸ್ಕ್ಡ್ ಆಧಾರ್‌ ಕಾರ್ಡ್‌ ಬಳಕೆ ಮಾಡಬಹುದು. ಯಾಕೆಂದರೆ ಈ ಆಧಾರ್‌ನಲ್ಲಿ ನಿಮ್ಮ ಎಲ್ಲಾ ವಿವರ ಇರುತ್ತದೆ. ಆದರೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀಡಲಾದ 12 ಅಂಕಿಗಳ ವಿಶಿಷ್ಟ ಸಂಖ್ಯೆಯ ಮೊದಲ 8 ಅಂಕೆಗಳನ್ನು ತೋರಿಸಲಾಗುವುದಿಲ್ಲ. ಇದರಿಂದಾಗಿ ಯಾರೂ ಸಹ ನಿಮ್ಮ ಆಧಾರ್‌ ಅನ್ನು ದುರುಪಯೋಗ ಮಾಡಿಕೊಳ್ಳಲು ಸಾಧ್ಯವೇ ಇರುವುದಿಲ್ಲ.

ಇ-ಆಧಾರ್ ಕಾರ್ಡ್ ಬಳಸುವಾಗ ಎಚ್ಚರ: ಇನ್ನು ಇತ್ತೀಚಿನ ದಿನಗಳಲ್ಲಿ ಇ-ಆಧಾರ್ ಕಾರ್ಡ್‌ ಬಳಕೆ ಹೆಚ್ಚಾಗುತ್ತಿವೆ. ಅದರಲ್ಲೂ ಕಂಪೆನಿಗಳು ಹಾಗೂ ಬ್ಯಾಂಕ್‌ಗಳು ಈ ಇ-ಆಧಾರ್‌ ಅನ್ನೇ ಹೆಚ್ಚಾಗಿ ಕೇಳುತ್ತವೆ. ಇದರಿಂದಾಗಿ ನೀವು ಇನ್ನಷ್ಟು ಎಚ್ಚರಿಕೆ ವಹಿಸುವುದು ಅನಿವಾರ್ಯ. ಯಾವುದೇ ಸೈಬರ್ ಕೆಫೆ ಅಥವಾ ಇತರ ವ್ಯಕ್ತಿಯ ಡಿವೈಸ್‌ನಲ್ಲಿ ನಿಮ್ಮ ಆಧಾರ್‌ ಡೌನ್‌ಲೋಡ್ ಮಾಡಬೇಡಿ. ಡೌನ್‌ಲೋಡ್‌ ಮಾಡಿದ್ದೇ ಆದರೆ ನಿಮ್ಮ ವಿವರಗಳನ್ನು ಮೋಸಗಾರರು ಸುಲಭವಾಗಿ ಪಡೆದುಕೊಳ್ಳುತ್ತಾರೆ.

ಈ ಮೇಲೆ ತಿಳಿಸಿದ ಐದು ವಿಷಯಗಳ ಮೇಲೆ ಗಮನಹರಿಸುವುದರ ಜೊತೆಗೆ ಬಲವಾದ ದೃಢೀಕರಣಕ್ಕೂ ಆದ್ಯತೆ ನೀಡಿ. ಅಂದರೆ ಆಧಾರ್ ಬಯೋಮೆಟ್ರಿಕ್ಸ್ ಮತ್ತು ಓಟಿಪಿ (ಒನ್-ಟೈಮ್ ಪಾಸ್‌ವರ್ಡ್) ಸೇರಿದಂತೆ ವಿವಿಧ ದೃಢೀಕರಣ ವಿಧಾನಗಳನ್ನು ಬಳಕೆ ಮಾಡಿಕೊಳ್ಳಿ. ಇದರಿಂದಾಗಿ ಅಧಿಕೃತ ವ್ಯಕ್ತಿ ಮಾತ್ರ ತಮ್ಮ ಆಧಾರ್-ಸಂಯೋಜಿತ ಸೇವೆಗಳಿಗೆ ಎಂಟ್ರಿ ನೀಡಲು ಸಾಧ್ಯವಾಗುತ್ತದೆ.

ಆಧಾರ್ ಕಾರ್ಡ್ ಬಗ್ಗೆ ನಿಮಗೆ ತಿಳಿಯದ ಬಹುದೊಡ್ಡ ವಂಚನೆಗಳಿವು!...

ಇನ್ನು ಆಧಾರ್ ಕಾಯಿದೆ ಮತ್ತು ನಿಯಮ 2016 ಪ್ರಕಾರ ಆಧಾರ್ ವ್ಯವಸ್ಥೆಗೆ ಕಾನೂನು ಬೆಂಬಲವನ್ನು ನೀಡಲಾಗಿದೆ. ಆಧಾರ್ ಮಾಹಿತಿಯ ಅನುಮತಿ ಬಳಕೆ ಮತ್ತು ಬಹಿರಂಗಪಡಿಸುವಿಕೆಯನ್ನು ಇದು ವ್ಯಾಖ್ಯಾನಿಸುತ್ತದೆ. ಆಧಾರ್ ಡೇಟಾದ ಯಾವುದೇ ಅನಧಿಕೃತ ಬಹಿರಂಗಪಡಿಸುವಿಕೆ ಅಥವಾ ದುರುಪಯೋಗಕ್ಕಾಗಿ ಕಠಿಣ ದಂಡವನ್ನು ವಿಧಿಸಲಾಗುತ್ತದೆ.

Best Mobiles in India

English summary
Without Aadhaar card, many works will be incomplete. Aadhaar card is mandatory for banking business as well. Meanwhile, keep your Aadhaar safe from scammers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+