Home
ಸುದ್ದಿಜಾಲ

ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಸುತ್ತೀರಾ?...ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸರಳ ಸಲಹೆಗಳು!

ಸ್ಮಾರ್ಟ್‌ಡಿವೈಸ್‌ಗಳು ಎಷ್ಟು ಅನುಕೂಲವೋ ಅದೇ ರೀತಿ ಹೆಚ್ಚಿನ ಬಳಕೆಯಿಂದ ಅನಾನುಕೂಲವೂ ಉಂಟಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಹೈದರಾಬಾದ್‌ನ 30 ವರ್ಷದ ಮಹಿಳೆ ತಾತ್ಕಾಲಿಕವಾಗಿ ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದು, ಇದು ರಾಷ್ಟ್ರಾದ್ಯಂತ ಸಂಚಲನ ಉಂಟು ಮಾಡಿತ್ತು. ನಿರಂತರ ಸ್ಮಾರ್ಟ್‌ಫೋನ್‌ ಬಳಕೆಯಿಂದ ಈ ರೀತಿ ಸಂಭವಿಸಿದೆ ಎಂದು ವೈಜ್ಞಾನಿಕವಾಗಿ ಹೇಳಲು ಸಾಧ್ಯವಾಗದಿದ್ದರೂ ಬಹುಪಾಲು ಇದೇ ಕಾರಣಕ್ಕೆ ಹೀಗೆ ಆಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಸುತ್ತೀರಾ?...ಕಣ್ಣುಗಳನ್ನು ರಕ್ಷಿಸಲು ಸರಳ ಸಲಹೆಗಳು!

ಹೌದು, ಸ್ಮಾರ್ಟ್‌ಫೋನ್‌ಗಳಿಗೆ ಆಗ ತಾನೆ ಜನಿಸಿದ ಮಗುವಿನಿಂದ ಹಿಡಿದು ಸಾಯುವ ಹಂತದಲ್ಲಿರುವ ವಯಸ್ಕರೂ ಸಹ ಫಿದಾ ಆಗುತ್ತಾರೆ. ಅಷ್ಟರ ಮಟ್ಟಿಗಿನ ಸೆಳೆತವನ್ನು ಫೋನ್‌ ಹೊಂದಿರುತ್ತದೆ. ಅದರೆ, ಇದು ಎಂತಹ ದುರಂತ ಉಂಟು ಮಾಡುತ್ತದೆ ಎಂಬುದರ ಬಗ್ಗೆ ಒಮ್ಮೆಯಾದರೂ ಆಲೋಚನೆ ಮಾಡಿದ್ದೀರಾ?. ನೀವು ನಿಮ್ಮ ಕಣ್ಣಿನ ಸಹಿತ ಉತ್ತಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ಈ ಸಲಹೆಗಳನ್ನು ಪಾಲಿಸಿ, ಇಲ್ಲವಾದರೆ ನಿಮ್ಮ ಕಣ್ಣುಗಳಿಗೂ ಸಮಸ್ಯೆ ಉಂಟಾಗಬಹುದು.

ಡಾರ್ಕ್‌ ಮೋಡ್‌ ಬಳಸಿ

ಯಾವುದೇ ಸ್ಮಾರ್ಟ್‌ಡಿವೈಸ್‌ಗಳಲ್ಲಿ ಬಳಕೆದಾರರ ಕಣ್ಣಿನ ಹಿತದೃಷ್ಟಿಯಿಂದ ಡಾರ್ಕ್‌ ಮೋಡ್‌ ಆಯ್ಕೆಯನ್ನು ನೀಡಲಾಗುತ್ತದೆ. ಅದರಲ್ಲೂ ಸ್ಮಾರ್ಟ್‌ಫೋನ್‌ನಲ್ಲಿ ರಾತ್ರಿ ವೇಳೆ ಈ ಸೌಲಭ್ಯವನ್ನು ಬಳಕೆ ಮಾಡಿದರೆ ಖಂಡಿತಾ ಬಳಕೆದಾರರಿಗೆ ಕಣ್ಣಿಗೆ ಸಮಸ್ಯೆ ಆಗುವುದಿಲ್ಲ. ಇನ್ನು ಕಪ್ಪು ಹಿನ್ನೆಲೆ ಇರುವ ಡಿಸ್‌ಪ್ಲೇಯನ್ನು ನೋಡುವುದಿಂದ ಕಣ್ಣುಗಳು ದಣಿಯುವುದಿಲ್ಲ. ಹಾಗೆಯೇ ನೀಲಿ ಬೆಳಕಿನ ಪ್ರಖರತೆ ಕಡಿಮೆಯಾಗಿ ನಿಮ್ಮ ಕಣ್ಣಿನ ರಕ್ಷಣೆಗೆ ಸಹಕಾರಿಯಾಗುತ್ತದೆ. ಇದು ಆಯ್ಕೆಯ ವಿಷಯವಾಗಿದ್ದು, ನಿಮಗೆ ಬೇಡ ಎಂದರೆ ಆಫ್‌ ಮಾಡಿಕೊಳ್ಳುವ ಅವಕಾಶ ಸಹ ಉಂಟು.

ಬ್ರೈಟ್‌ನೆಸ್‌ ಸೆಟ್ಟಿಂಗ್‌ ಅನ್ನು ಹೊಂದಿಸಿ

ಈ ಆಯ್ಕೆಯೂ ಸಹ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಯಾಕೆಂದರೆ ಈ ಸೌಲಭ್ಯದ ಮೂಲಕ ನೀವು ಯಾವ ಪರಿಸರದಲ್ಲಿ ಇದ್ದೀರ ಎನ್ನುವುದನ್ನು ಆಧಾರವಾಗಿರಿಸಿಕೊಂಡ ಬ್ರೈಟ್‌ನೆಸ್‌ ಸೆಟ್ ಮಾಡಿಕೊಳ್ಳಬಹುದು. ಅದರಲ್ಲೂ ಆಟೋ ಬ್ರೈಟ್‌ನೆಸ್‌ ಆಯ್ಕೆ ಸಹ ಇದ್ದು, ನಿಮ್ಮ ಸುತ್ತಮುತ್ತಲಿನ ಬೆಳಕಿಗೆ ಅನುಗುಣವಾಗಿ ಇದು ಬದಲಾಗುತ್ತದೆ. ಹೀಗಾಗಿ ನಿಮ್ಮ ಕಣ್ಣುಗಳಿಗೆ ಯಾವುದೇ ಸಂಕಷ್ಟ ಎದುರಾಗೋಲ್ಲ.

ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಸುತ್ತೀರಾ?...ಕಣ್ಣುಗಳನ್ನು ರಕ್ಷಿಸಲು ಸರಳ ಸಲಹೆಗಳು!

ಕಣ್ಣು ಮಿಟುಕಿಸುವುದನ್ನು ಮರೆಯದಿರಿ

ಸಾಮಾನ್ಯವಾಗಿ ಯಾವುದಾದರೂ ವಿಡಿಯೋ ಹೆಚ್ಚು ಇಂಟ್ರೆಸ್ಟಿಂಗ್‌ ಆಗಿದ್ದರೆ ಕಣ್ಣನ್ನೇ ಮಿಟುಕಿಸದೆ ಹಾಗೆ ವಿಡಿಯೋ ನೋಡುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಇದು ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡಲಿದ್ದು, ಸಾಕಷ್ಟು ಸಮಸ್ಯೆ ನಿರ್ಮಾಣ ಮಾಡುತ್ತದೆ. ಸ್ಮಾರ್ಟ್‌ಫೋನ್‌ ಬಳಕೆ ಮಾಡುವಾಗ ನಿಯಮಿತವಾಗಿ ಕಣ್ಣು ಮಿಟುಕಿಸುವುದನ್ನು ರೂಢಿಸಿಕೊಳ್ಳಿ. ಈ ಮೂಲಕ ಕಣ್ಣುಗಳು ತೇವಾಂಶದಿಂದ ಕೂಡಿರುತ್ತದೆ. ಹಾಗೆಯೇ ಪ್ರತಿ ಅರ್ಧ ಗಂಟೆಗೆ 10 ರಿಂದ 20 ಬಾರಿ ಕಣ್ಣು ಮಿಟುಕಿಸುವುದನ್ನು ಮರೆಯದಿರಿ.

ನೈಟ್‌ಶಿಫ್ಟ್‌ ಹಾಗೂ ನೈಟ್‌ಲೈಟ್‌ ಬಳಸಿ

ಆಪಲ್‌ ಫೋನ್‌ಗಳಲ್ಲಿ ನೈಟ್‌ಶಿಫ್ಟ್‌ ಹಾಗೂ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ನೈಟ್‌ಲೈಟ್‌ ಫೀಚರ್ಸ್‌ ಸೌಲಭ್ಯವಿದ್ದು, ಬಳಕೆದಾರರು ಇದನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಫೀಚರ್ಸ್‌ ನಿಮ್ಮ ಡಿಸ್‌ಪ್ಲೇ ಬ್ರೈಟ್‌ನೆಟ್‌ ಹಾಗೂ ಅದರ ತೀಕ್ಷ್ಣತೆಯನ್ನು ಕಡಿಮೆ ಮಾಡುವ ಮೂಲಕ ಮೂಲಕ ಕಣ್ಣಿನ ರಕ್ಷಣೆಗೆ ಅನುವು ಮಾಡಿಕೊಡುತ್ತದೆ.

ಟೆಕ್ಸ್ಟ್ ಗಾತ್ರ ಹೆಚ್ಚಿಸಿ

ಯಾವುದೇ ಸ್ಮಾರ್ಟ್‌ಫೋನ್‌ಗಳು ಯಾವುದೇ ವಿಭಾಗದಲ್ಲಿನ ಟೆಕ್ಸ್ಟ್ ಗಾತ್ರವನ್ನು ಬದಲಾಯಿಸಲು ಅನುವು ಮಾಡಿಕೊಡುತ್ತವೆ. ಅದರಲ್ಲೂ ಸಣ್ಣ ಗಾತ್ರದ ಟೆಕ್ಸ್ಟ್ಅನ್ನು ವೀಕ್ಷಣೆ ಮಾಡುವಾಗ ಕಣ್ಣಿಗೆ ಹೆಚ್ಚಿನ ಒತ್ತಡ ನಿರ್ಮಾಣ ಆಗುತ್ತದೆ. ಈ ಕಾರಣಕ್ಕೆ ನಿಮಗೆ ಅಗತ್ಯ ಎನಿಸುವ ಗಾತ್ರವನ್ನು ಸೆಟ್‌ ಮಾಡಿಕೊಂಡು ಆ ಮೂಲಕ ಸ್ಮಾರ್ಟ್‌ಫೋನ್ ಬಳಕೆ ಮಾಡಿದರೆ ನಿಮ್ಮ ಫೋನ್‌ಅನ್ನು ಕಣ್ಣಿಗೆ ಹತ್ತಿರ ಇಟ್ಟು ನೋಡುವ ಪ್ರಮೇಯ ಬರುವುದಿಲ್ಲ.

ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಸುತ್ತೀರಾ?...ಕಣ್ಣುಗಳನ್ನು ರಕ್ಷಿಸಲು ಸರಳ ಸಲಹೆಗಳು!

ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಸ್ವಚ್ಛವಾಗಿಡಿ

ಸ್ಮಾರ್ಟ್‌ಫೋನ್‌ನಲ್ಲಿ ಟಾಯ್ಲೆಟ್‌ನಲ್ಲಿ ಇರುವ ಕೀಟಾಣುಗಳಿಗಿಂತ ಹೆಚ್ಚಿನ ಕೀಟಾಣು ಇರುತ್ತವೆ ಎನ್ನುವುದು ಸಾಮಾನ್ಯ ವಿಷಯ. ಅದರಲ್ಲೂ ಡಿಸ್‌ಪ್ಲೇ ವಿಚಾರಕ್ಕೆ ಬಂದರೆ ಮಾತೇ ಬೇಡ ಬಿಡಿ. ನೈರ್ಮಲ್ಯದ ಕಾರಣಗಳಿಗಾಗಿ ಮಾತ್ರವಲ್ಲದೆ ಕೊಳಕು ಡಿಸ್‌ಪ್ಲೇ ಕಣ್ಣುಗಳ ಮೇಲೂ ಹೆಚ್ಚುವರಿ ಒತ್ತಡವನ್ನು ಉಂಟು ಮಾಡುತ್ತದೆ ಎಂಬ ವಿಷಯ ನಿಮ್ಮ ಗಮನಕ್ಕೆ ಇರಲಿ. ಹೀಗಾಗಿ ಮೃದುವಾದ ಬಟ್ಟೆಯನ್ನು ತೆಗೆದುಕೊಂಡು ನಿಮ್ಮ ಡಿಸ್‌ಪ್ಲೇಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಇದಕ್ಕಾಗಿ ನಿಮಗೆ ನೀರು ಅಥವಾ ಡಿಟರ್ಜೆಂಟ್ ಅಗತ್ಯವಿಲ್ಲ. ಒಂದು ಸರಳ ಮೈಕ್ರೋ ಫೈಬರ್ ಬಟ್ಟೆ ಇದ್ದರೆ ಸಾಕು.

20/20/20 ನಿಯಮ ಅನುಸರಿಸಿ

ಇದೊಂದು ಆಶ್ಚರ್ಯಕರ ವಿಷಯವಾಗಿ ನಿಮಗೆ ಕಾಣಬಹುದು. ಆದರೆ, ಈ ರೀತಿ ಮಾಡುವುದರಿಂದ ನಿಮ್ಮ ಕಣ್ಣುಗಳಷ್ಟೇ ಅಲ್ಲದೆ, ನಿಮ್ಮ ಮಾನಸಿಕ ಆರೋಗ್ಯವೂ ತುಂಬಾ ಚೆನ್ನಾಗಿರುತ್ತದೆ. ಅಂದರೆ, ಈ 20/20/20 ನಿಯಮದ ಪ್ರಕಾರ ಪ್ರತಿ 20 ನಿಮಿಷಗಳಿಗೊಮ್ಮೆ ಕನಿಷ್ಟ 20 ಸೆಕೆಂಡುಗಳ ಕಾಲ ಕನಿಷ್ಠ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಬೇಕು. ಅಂದರೆ ನಿಮ್ಮ ಸಮೀಪ ಇರುವ ಮರ, ಶಾಲೆ, ದೇವಾಲಯ ಅಥವಾ ಇನ್ಯಾವುದೇ ವಸ್ತುಗಳಿರಬಹುದು. ಅವುಗಳನ್ನು ಕನಿಷ್ಟ 20 ಸೆಕೆಂಡುಗಳ ಕಾಲ ವೀಕ್ಷಣೆ ಮಾಡಬೇಕು. ಇದರಿಂದ ಶಾಶ್ವತವಾಗಿ ನಿಮ್ಮ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬಹುದು.

Best Mobiles in India

English summary
smartphones being dangerous to the human eye. prolonged usage and under certain conditions can be harmful to eyes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+