ಒಂದು SMS ಇಲ್ಲವೇ ಮಿಸ್ ಕಾಲ್ ನೀಡಿ, ವೊಡಾಫೋನ್ ನಂಬರ್ ರೀಚಾರ್ಜ್ ಮಾಡಿಕೊಳ್ಳಿ!
ಕೋವಿಡ್-19 ಸಾಂಕ್ರಾಮಿಕ ವಕ್ಕರಿಸಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಕೊರೊನಾ ವೈರಾಣು ಭಾರತದಲ್ಲಿಯೂ ತನ್ನ ಕರಿನೆರಳನ್ನು ಛಾಯೆಯನ್ನು ತೋರಿಸಿದೆ. ಕೊರೊನಾ ನಿಯಂತ್ರಿಸುವುದಕ್ಕಾಗಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಇರುವ ಗ್ರಾಹಕರಿಗೆ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಲು ಅನುಕೂಲವಾಗಲೆಂದು ಜಿಯೋ, ಏರ್‌ಟೆಲ್ ಸಂಸ್ಥೆಗಳು ಕೆಲವು ಹೊಸದಾಗಿ ಆಯ್ಕೆ ನೀಡಿವೆ. ಅದೇ ಹಾದಿಯಲ್ಲಿ ಇದೀಗ ವೊಡಾಫೋನ್ ಸಹ ಹೊಸ ರೀಚಾರ್ಜ್ ಆಯ್ಕೆ ಪರಿಚಯಿಸಿದೆ.

ಹೌದು, ವೊಡಾಫೋನ್ ಎಸ್‌ಎಮ್‌ಎಸ್ ಅಥವಾ ಮಿಸ್‌ಕಾಲ್ ಮೂಲಕ ತ್ವರಿತವಾಗಿ ಮೊಬೈಲ್ ರೀಚಾರ್ಜ್ ಮಾಡುವ ಆಯ್ಕೆ ಘೋಷಿಸಿದೆ. ಹೀಗಾಗಿ ವೊಡಾಫೋನ್ ಗ್ರಾಹಕರು ಜಸ್ಟ್ ಒಂದು ಮಿಸ್ ಕಾಲ್ ಇಲ್ಲವೇ ಒಂದು ಎಸ್‌ಎಮ್‌ಎಸ್ ಮಾಡುವ ಮೂಲಕ ಮೊಬೈಲ್ ನಂಬರ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಹಾಗೂ ಫೀಚರ್ ಫೋನ್ ಬಳಕೆ ಮಾಡುವ ಗ್ರಾಹಕರಿಗೆ ನೆರವಾಗಲು ಈ ಯೋಜನೆಯನ್ನು ಪರಿಚಯಿಸಿದೆ.

ವೊಡಾಫೋನ್ ATM ಸೆಂಟರ್‌ನಲ್ಲಿ ರೀಚಾರ್ಜ್ ಮಾಡುವ ಸೌಲಭ್ಯ ಪರಿಚಯಿಸಿದೆ. ಅದಕ್ಕಾಗಿ ಸುಮಾರು ಒಂಬತ್ತು ಬ್ಯಾಂಕ್‌ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಆದರೆ ಈಗ ಪರಿಚಯಿಸಿರುವ ಎಸ್‌ಎಮ್‌ಎಸ್ ಅಥವಾ ಮಿಸ್ ಕಾಲ್ ಮೂಲಕ ರೀಚಾರ್ಜ್ ಮಾಡುವ ಸೌಲಭ್ಯದಲ್ಲಿ ಎಸ್‌ಬಿಐ, ಐಸಿಐಸಿಐ, ಆಕ್ಸಿಸ್, ಕೊಟಾಕ್ ಮತ್ತು ಇಂಡಸ್ಲ್ಯಾಂಡ್ ಬ್ಯಾಂಕುಗಳ ಮಾತ್ರ ಈ ರೀಚಾರ್ಜ್ ಸೌಲಭ್ಯಕ್ಕೆ ಪೂರಕವಾಗಿವೆ. ಹಾಗಾದರೆ ಎಸ್‌ಎಮ್‌ಎಸ್ ಮೂಲಕ ರೀಚಾರ್ಜ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

SBI ಬ್ಯಾಂಕ್- 9223440000 ಈ ನಂಬರ್ ಎಸ್‌ಎಮ್‌ಎಸ್ ಮಾಡಿ ರೀಚಾರ್ಜ್ ಮಾಡಿಕೊಳ್ಳಬಹುದು.
SMS ವಿಧಾನ- StopupUseridMPINVODAFONE10 digit Mob NoAmount

ICICI ಬ್ಯಾಂಕ್- 9222208888 ಈ ನಂಬರ್ ಎಸ್‌ಎಮ್‌ಎಸ್ ಮಾಡಿ ರೀಚಾರ್ಜ್ ಮಾಡಿಕೊಳ್ಳಬಹುದು.
SMS ವಿಧಾನ- MTOPUPVODAFONE10 digit Mob NoAmountLast 6 digits of Bank Acc
Axis Bank: SMS to 9717000002 / 5676782

Axis ಬ್ಯಾಂಕ್- 9717000002 ಈ ನಂಬರ್ ಎಸ್‌ಎಮ್‌ಎಸ್ ಮಾಡಿ ರೀಚಾರ್ಜ್ ಮಾಡಿಕೊಳ್ಳಬಹುದು.
SMS ವಿಧಾನ- MOBILE10 digit Mob NoIdea/VodafoneAmountLast 6 digits of Bank Acc

ಕೊಟಕ್ ಬ್ಯಾಂಕ್ - 9971056767 ಈ ನಂಬರ್ ಎಸ್‌ಎಮ್‌ಎಸ್ ಮಾಡಿ ರೀಚಾರ್ಜ್ ಮಾಡಿಕೊಳ್ಳಬಹುದು.
SMS ವಿಧಾನ- REC10 digit Mob No VODAFONEAmountLast 4 digits of Bank Acc

IndusInd ಬ್ಯಾಂಕ್- 9212299955 ಈ ನಂಬರ್ ಎಸ್‌ಎಮ್‌ಎಸ್ ಮಾಡಿ ರೀಚಾರ್ಜ್ ಮಾಡಿಕೊಳ್ಳಬಹುದು.
SMS ವಿಧಾನ- MOB10 digit Mob No VODAFONEAmountLast 4 digits of Debit card

ಮಿಸ್ ಕಾಲ್ ನೀಡಿ ರೀಚಾರ್ಜ್ ಮಾಡಿಕೊಳ್ಳಲು ಹೀಗೆ ಮಾಡಿ
ವೊಡಾಫೋನ್ ಎಸ್‌ಎಮ್‌ಎಸ್ ಜೊತೆಗೆ ಮಿಸ್ ಕಾಲ್ ಮಾಡುವ ಮೂಲಕ ಮೊಬೈಲ್ ರೀಚಾರ್ಜ್ ಮಾಡುವ ಸೌಲಭ್ಯ ಪರಿಚಯಿಸಿದೆ. ಮಿಸ್ ಕಾಲ್ ಮಾಡಿ ರೀಚಾರ್ಜ್ ಮಾಡಿಕೊಳ್ಳಲು ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು ಈ ಹಂತಗಳನ್ನು ಅನುಸರಿಸಿ.
* ACT VODAFONELast 5 digits of Bank Acc
* FAV98XXXXXXXXAmount
* ಮಿಸ್ ಕಾಲ್ 7308080808


Click it and Unblock the Notifications








