Home
ಸುದ್ದಿಜಾಲ

ಹೊಸ ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿಯಲ್ಲಿ 50 ಸಾವಿರ ಉಳಿಸಬೇಕೆ? ಈ ಕಿಲಾಡಿ ಐಡಿಯಾ ಬಳಸಿ!

ಆಪಲ್‌ ಬಹುನಿರೀಕ್ಷಿತ ಐಫೋನ್ 15 ಸರಣಿ ಫೋನ್‌ಗಳು ಲಾಂಚ್ ಆಗಿದೆ. ಈ ಫೋನ್‌ಗಳು ಲಾಂಚ್‌ ಆಗಿದ್ದೇ ತಡ ಆಪಲ್‌ ಅಭಿಮಾನಿಗಳು ಈ ಫೋನ್‌ ಅನ್ನು ಯಾವಾಗ ಖರೀದಿ ಮಾಡುವುದು ಎಂಬ ಕಾತುರದಲ್ಲಿ ಇದ್ದಾರೆ. ಈ ಖರೀದಿ ವೇಳೆ ನೀವು ಈ ಕಿಲಾಡಿ ಐಡಿಯಾ ಬಳಸಬಹುದಾಗಿದೆ.

ಹೌದು, ಹೊಸ ಐಫೋನ್‌ಗಳ ಭಾರತದ ಬೆಲೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಮೂಲಕ ಪ್ರೊ ಮಾದರಿಗಳು ಕೊಂಚ ಹೆಚ್ಚಿನ ಬೆಲೆ ಹೊಂದಿವೆಯಾದರೂ ಅದಕ್ಕೆ ತಕ್ಕನಾದ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ. ಈ ವೇಳೆ ನೀವು ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿ ಮಾಡಲು ಇಚ್ಚಿಸಿದರೆ ಈಗಲೇ ಹಾಂಗ್‌ಕಾಂಗ್‌ಗೆ ಹೋಗಲು ರೆಡಿಯಾಗಿದೆ. ಹಾಗಿದ್ರೆ, ಬನ್ನಿ ಈ ಕಿಲಾಡಿ ಐಡಿಯಾ ಏನು ಎಂದು ನೋಡೋಣ.

ಹೊಸ ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿಯಲ್ಲಿ 50 ಸಾವಿರ ಉಳಿಸಬೇಕೆ? ..

ಭಾರತದಲ್ಲಿ ಈ ಫೋನ್‌ಗಳ ಬೆಲೆ ಕೆಲವರಿಗೆ ಓಕೆ ಎನಿಸಿದರೆ ಇನ್ನೂ ಕೆಲವರು ಜಾಸ್ತಿ ಆಯ್ತು ಅಂತಿದ್ದಾರೆ. ಈ ನಡುವೆ ಐಫೋನ್‌ 15 ಪ್ರೊ ಭಾರತದಲ್ಲಿ ತುಂಬಾ ದುಬಾರಿ ಫೋನ್ ಆಗಿದೆ. ಆದರೆ, ಈ ಫೋನ್‌ ಅನ್ನು ನೀವು ದುಬೈ ಅಥವಾ ಹಾಂಗ್ ಕಾಂಗ್‌ನಲ್ಲಿ ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಭಾರತದಲ್ಲಿ ಐಫೋನ್‌ 15 ಪ್ರೊ ಮ್ಯಾಕ್ಸ್‌ ಬೆಲೆ ದುಬಾರಿ: ಐಫೋನ್‌ 15 ಪ್ರೊ ಮ್ಯಾಕ್ಸ್‌ 256GB ವೇರಿಯಂಟ್‌ಗೆ ಭಾರತದಲ್ಲಿ 1,59,999 ರೂ.ಗಳನ್ನು ನಿಗದಿ ಮಾಡಲಾಗಿದೆ. ಆದರೆ, ಇದೇ ಫೋನ್‌ ಅನ್ನು ನೀವು ಹಾಂಗ್‌ಕಾಂಗ್‌ನಲ್ಲಿ $10,199 ಗೆ ಅಂದರೆ 1,08,058 ರೂ.ಗಳಿಗೆ ಖರೀದಿ ಮಾಡಬಹುದು.

ನಿಮ್ಮ ಬಳಿ ಪಾಸ್‌ಪೋರ್ಟ್‌ ಇದೆ ಎಂದಾದರೆ ಈಗಲೇ ಹೊಸ ರಾಷ್ಟ್ರಕ್ಕೆ ಹೋಗಲು ಯೋಜಿಸಿ. ಈ ಮೂಲಕ ಒಂದು ಕಡೆ ಪ್ರವಾಸ, ಮತ್ತೊಂದು ಕಡೆ ಕಡಿಮೆ ದರದಲ್ಲಿ ಐಫೋನ್‌ ಖರೀದಿ ಮಾಡಬಹುದು. ಇನ್ನು ಆಪಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬೆಲೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಇದರಿಂದ ಆಗುವ ಲಾಭ ಏನು?: ಈ ಫೋನ್‌ ಅನ್ನು ಹಾಂಗ್‌ಕಾಂಗ್‌ನಲ್ಲಿ ಖರೀದಿ ಮಾಡಿದರೆ 50,000 ರೂ.ಗಳನ್ನು ಉಳಿತಾಯ ಮಾಡಬಹುದಾಗಿದೆ. ಇನ್ನು ವಿಮಾನದ ದರ ಪರಿಶೀಲಿಸಿದರೆ ಸೆಪ್ಟೆಂಬರ್ 29 ಕ್ಕೆ ದೆಹಲಿಯಿಂದ ಹಾಂಗ್ ಕಾಂಗ್‌ಗೆ 28,138 ರೂ.ಗಳ ರಿಟರ್ನ್ ಫೇರ್ ಇದೆ.

ಈ ದರದಲ್ಲಿ ಏರ್‌ ಇಂಡಿಯಾಕ್ಕಿಂತ ಉತ್ತಮವಾದ ಆಯ್ಕೆ ಇಲ್ಲ. ಜೊತೆಗೆ ಇದು ನಾನ್‌ಸ್ಟಾಪ್‌ ಸಹ ಆಗಿದೆ. ನೀವು ಹಾಂಗ್‌ಕಾಂಗ್‌ಗೆ ಹಾರಲು ಕ್ಯಾಥೆ ಪೆಸಿಫಿಕ್ ಮತ್ತು ಸಿಂಗಾಪುರ್ ಏರ್‌ಲೈನ್‌ಗಳಂತಹ ಇತರೆ ವಿಮಾನ ಆಯ್ಕೆಗಳಿವೆ. ಆದರೆ, ನಮ್ಮದೇ ಆದ ಏರ್ ಇಂಡಿಯಾ ವಿಮಾನವನ್ನು ಆರಿಸುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯ.

ಇನ್ನು ಹಾಂಗ್ ಕಾಂಗ್‌ನಲ್ಲಿ ವಾಸ್ತವ್ಯದ ಬಗ್ಗೆ ಲೆಕ್ಕಾಚಾರ ಹಾಕುವುದಾದರೆ ಹಾಂಗ್ ಕಾಂಗ್‌ನಲ್ಲಿ ಪ್ರತಿ ರಾತ್ರಿಗೆ ಸುಮಾರು 3000 ರೂ.ಗಳಿಂದ 5000 ರೂ.ಗಳ ದರದಲ್ಲಿ 3 ಸ್ಟಾರ್ ವಾಸ್ತವ್ಯ ಪಡೆಯಬಹುದು. ನೀವು ಎರಡು ರಾತ್ರಿ ತಂಗಲು ಇಚ್ಚಿಸಿದ್ರೆ 8000 ರೂ.ಗಳಿಂದ 10000 ರೂ.ಗಳು ಖರ್ಚಾಗುತ್ತದೆ ಅಷ್ಟೇ. ಆ ಎರಡು ದಿನಗಳಲ್ಲಿ ನಿಮ್ಮ ಆಹಾರ ಮತ್ತು ಪಾನೀಯಗಳಿಗೆ ಹೆಚ್ಚೆಂದರೆ 10,000 ರಿಂದ 12,000 ರೂ.ಗಳಾಗಬಹುದು.

ದುಬೈಗೂ ಹೋಗಬಹುದು: ಹಾಂಗ್‌ಕಾಂಗ್‌ ಇಷ್ಟ ಎಲ್ಲ ಎಂದಾದರೆ ನೀವು ದುಬೈಗೂ ಹೋಗಬಹುದಾಗಿದೆ. ಹಾಂಗ್ ಕಾಂಗ್‌ಗೆ ಹೋಲಿಸಿದರೆ ಐಫೋನ್‌ 15 ಪ್ರೊ ಮ್ಯಾಕ್ಸ್‌ ಆರಂಭಿಕ ಬೆಲೆ ದುಬೈನಲ್ಲಿ ಸ್ವಲ್ಪ ಹೆಚ್ಚು ಅಂದರೆ ಸುಮಾರು 1.15 ಲಕ್ಷ ರೂ.ಗಳಾಗಿದೆ. ಆದರೆ ದುಬೈಗೆ ವಿಮಾನಗಳು ಸುಮಾರು 8000ರೂ.ಗಳಿಂದ 10000 ರೂ.ಗಳಲ್ಲಿ ಸಿಗಲಿದೆ.

ಬೇರೆ ದೇಶದಲ್ಲಿ ಫೋನ್‌ ಖರೀದಿಸಿ ಇಲ್ಲಿ ಬಳಕೆ ಮಾಡಿದ್ರೆ ಸಮಸ್ಯೆ ಆಗುವುದಿಲ್ಲವೇ?: ಐಫೋನ್‌ ಖರೀದಿ ಮೇಲೆ ನೀಡಲಾಗುವ ವಾರಂಟಿ ಜಾಗತಿಕವಾಗಿದೆ ಎಂದು ನಿಮಗೆ ತಿಳಿದಿರಲಿ. ಇದರರ್ಥ ನೀವು ಜಗತ್ತಿನ ಎಲ್ಲಿಬೇಕಾದರೂ ಫೋನ್ ಖರೀದಿ ಮಾಡಬಹುದು, ಎಲ್ಲಿ ಬೇಕಾದರೂ ಬಳಕೆ ಮಾಡಬಹುದು, ಎಲ್ಲಿ ಬೇಕಾದರೂ ರಿಪೇರಿ ಮಾಡಿಸಬಹುದು.

ಹಾಗಿದ್ರೆ ಐಫೋನ್‌ 15 ಪ್ರೊ ಮ್ಯಾಕ್ಸ್‌ಗಾಗಿ ಅಷ್ಟು ದೂರ ಪ್ರಯಾಣಿಸಬೇಕೇ?: ಈ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಮೂಡಿರಬಹುದು. ಆದರೆ ಇದು ಎಲ್ಲರಿಗೂ ಸುಲಭವಾದ ಮಾರ್ಗವಲ್ಲ. ಬದಲಾಗಿ ಈ ವೇಳೆ ಏನಾದರೂ ನೀವು ಪ್ರವಾಸಕ್ಕೆ ಯೋಜಿಸುತ್ತಿದ್ದರೆ ಇದು ಉತ್ತಮ ಸಂದರ್ಭ ಎಂದಷ್ಟೇ ಹೇಳಬಹುದು. ನೀವು ವೀಸಾ ಅಥವಾ ಪ್ರವೇಶ ಶುಲ್ಕ ಮತ್ತು ಪ್ರಯಾಣದ ಸಮಯದಲ್ಲಿ ಅನಿವಾರ್ಯವಾಗಿರುವ ವಿವಿಧ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡರೆ ಫೋನ್‌ನ ಒಟ್ಟಾರೆ ವೆಚ್ಚವು ಸ್ವಲ್ಪ ಹೆಚ್ಚೇ ಎಂದು ಹೇಳಬಹುದು.

ಹೊಸ ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿಯಲ್ಲಿ 50 ಸಾವಿರ ಉಳಿಸಬೇಕೆ? ..

ಈ ಐಡಿಯಾವನ್ನು ಬಳಕೆ ಮಾಡಿ: ಇನ್ನು ನೀವು ಐಫೋನ್‌ಗಾಗಿ ಬೇರೆ ದೇಶಕ್ಕೆ ಪ್ರವಾಸ ಹೋಗುವ ಬದಲಾಗಿ ನಿಮ್ಮ ಆತ್ಮೀಯರು, ಸಂಬಂಧಿಕರು ಆ ದೇಶಗಳಿಗೆ ಹೋಗುವವರಿದ್ದರೆ ಅವರಿಗೆ ಈ ಫೋನ್‌ ಖರೀದಿ ಮಾಡಿ ತರಲು ಹೇಳಿ. ಈ ರೀತಿ ಮಾಡಿದ್ರೆ ಇನ್ನೂ ಹೆಚ್ಚಿನ ಹಣವನ್ನು ನೀವು ಉಳಿತಾಯ ಮಾಡಬಹುದು.

Best Mobiles in India

English summary
The 256GB variant of the iPhone 15 Pro Max in India has been priced at Rs 1,59,999 in India. However, you can buy the same phone in Hong Kong for $10,199 which is Rs 1,08,058.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+