ಮನೆಯಲ್ಲಿಯೇ ಸೆಲ್ಫ ಕ್ವಾರಂಟೈನ್‌ ಆಗಿ; ಇತರರಿಗೂ ನೆರವಾಗಿ!

|

ಕೊರೊನಾ ವೈರಸ್‌ ಹರಡದಂತೆ ತಡೆಯಲು ಏಪ್ರಿಲ್ 14ರ ವರೆಗೂ ಸರ್ಕಾರ ಲಾಕ್‌ಡೌನ್‌ ಘೋಷಿಸಿದೆ. ವಿದೇಶದಿಂದ ಬಂದವರಿಗೆ, ಕೊರೊನಾ ಶಂಕಿತರಿಗೆ ಕ್ವಾರಂಟೈನ್‌ನಲ್ಲಿರುವ ವ್ಯವಸ್ಥೆ ಮಾಡಿದೆ. ಇನ್ನು ಲಾಕ್‌ಡೌನ್‌ ಇರುವುದರಿಂದ ಜನರು ಸಹ ಮನೆಯಲ್ಲಿರುವುದು ಅವಶ್ಯವಾಗಿದ್ದು, ಅನೇಕರಿಗೆ ಸ್ವಯಂ ಕ್ವಾರಂಟೈನ್‌ಗೆ ಒಳಗಾದಂತೆ ಭಾಸವಾಗಿದೆ. ಆದ್ರೆ ಈ ಸಂದರ್ಭದಲ್ಲಿ ಮನೆಯಲ್ಲಿದ್ದುಕೊಂಡೆ ಸ್ನೇಹಿತರೊಂದಿಗೆ ಸಂವಹನ ಮಾಡುಲು ತಂತ್ರಜ್ಞಾನ ನೆರವಾಗಲಿದೆ. ಜೊತೆಗೆ ಬೇಸರ ನಿಗಿಸಲು ವಿಡಿಯೊ ಸ್ಟ್ರೀಮಿಂಗ್ ತಾಣಗಳ ಸಹ ಇವೆ.

ಸ್ವಯಂ ಕ್ವಾರಂಟೈನ್

ಸ್ವಯಂ ಕ್ವಾರಂಟೈನ್

ಈ ಸಂದರ್ಭದಲ್ಲಿ ನೀವು ಸ್ವಯಂ ಕ್ವಾರಂಟೈನ್‌(ಮನೆಯಲ್ಲಿಯೇ ಇರುವುದು) ವ್ಯವಸ್ಥೆಗೆ ಒಳಗಾಗುವುದು ಹಾಗೂ ಈ ಮೂಲಕ ಇತರರಿಗೂ ನೆರವಾಗುವುದು. ಮನೆಯಲ್ಲಿ ಇದ್ದುಕೊಂಡು ಸಮಯ ಕಳೆಯಲು ನಮಗೆ ಅನೇಕ ದಾರಿಗಳ ಬಗ್ಗೆ ತಿಳಿಸಿದೆ. ಸ್ನೇಹಿತರೊಂದಿಗೆ ವಿಡಿಯೊ ಕರೆ ಮೂಲಕ ಮಾತನಾಡಲು, ಇಂಟರ್ನೆಟ್‌ನಲ್ಲಿ ಮಾಹಿತಿ ಜಾಲಾಡಲು, ವಿಡಿಯೊ ಸ್ಟ್ರೀಮಿಂಗ್ ಶೋಗಳನ್ನು ವೀಕ್ಷಿಸುವುದು ಹೀಗೆ ಹಲವು ಅವಕಾಶಗಳಿವೆ. ಆದ್ರೆ ನಿಮ್ಮ ನೆರೆಹೊರೆಯ ಹಿರಿಯರಿಗೆ, ಚಾಲಕರಿಗೆ, ಕಾವಲುಗಾರರಿಗೆ, ಸಣ್ಣ ಪುಟ್ಟ ಅಂಗಡಿಕಾರರಿಗೆ ತಂತ್ರಜ್ಞಾನದ ಹೆಚ್ಚಾಗಿ ತಿಳಿದಿರವುದಿಲ್ಲ. ಈ ಲಾಕ್‌ಡೌನ್‌ ಅವಧಿಯಲ್ಲಿ ಸುರಕ್ಷಿತವಾಗಿ, ಸುಲಭವಾಗಿ, ತಂತ್ರಜ್ಞಾನದ ಮೂಲಕ ಹೇಗೆ ಕಳೆಯಬಹುದು ಅನ್ನೊದನ್ನು ನೀವು ತಿಳಿಸಬಹುದಾಗಿದೆ. ಹಾಗಂತ ನೀವೇನು ಹೊರಗಡೆ ಹೋಗುವ ಅಗತ್ಯ ಇಲ್ಲ. ಮುಂದೆ ಓದಿರಿ.

ಸ್ಮಾರ್ಟ್‌ಫೋನ್‌ ಬಳಕೆ ಬಗ್ಗೆ ಮಾಹಿತಿ ನೀಡಿ

ಸ್ಮಾರ್ಟ್‌ಫೋನ್‌ ಬಳಕೆ ಬಗ್ಗೆ ಮಾಹಿತಿ ನೀಡಿ

ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರೂ ನಿಮ್ಮಂತೆ ಎಕ್ಸ್‌ಪರ್ಟ್ ಆಗಿರುವುದಿಲ್ಲ. ಆದ್ದರಿಂದ ನೀವು ನಿಮ್ಮ ನೆರೆಹೊರೆಯ ಹಿರಿಯರಿಗೆ ಮತ್ತು ಇತರರಿಗೆ ವೀಡಿಯೊ ಕರೆ ಮಾಡುವುದು ಹೇಗೆ, ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸುವುದು ಎಂಬ ಬಗ್ಗೆ ಈ ಲಾಕ್‌ಡವನ್‌ ಅವಧಿಯಲ್ಲಿ ಅವರಿಗೆ ಕಲಿಸಬಹುದು. ಹಾಗೆಯೇ ಅವರು ಹೆಚ್ಚಿನ ಒಲವು ತೋರಿದರೇ ನೀವು ಅವರಿಗೆ YouTube ಬಗ್ಗೆ ತಿಳಿಸಬಹುದು.

ಆನ್‌ಲೈನ್‌ ರೀಚಾರ್ಜ್‌ ಬಗ್ಗೆ ತಿಳಿಸಿ

ಆನ್‌ಲೈನ್‌ ರೀಚಾರ್ಜ್‌ ಬಗ್ಗೆ ತಿಳಿಸಿ

ಸದ್ಯ ವಾಟರ್ ಬಿಲ್, ವಿದ್ಯುತ್ ಬಿಲ್, ಡಿಟಿಎಚ್ ಬಿಲ್, ಎಲ್‌ಐಸಿ ಪ್ರೀಮಿಯಂ, ಫೋನ್ ರೀಚಾರ್ಜ್‌ ನಂತಹ ಅಗತ್ಯ ಸೇವೆಗಳನ್ನು ಡಿಜಿಟಲ್ ಪೇಮೆಂಟ್‌ ಆಪ್‌ಗಳಲ್ಲಿ ಪಾವತಿಸುವ ಬಗ್ಗೆ ಮಾಹಿತಿ ನೀಡಿ. ಲಾಕ್‌ಡೌನ್‌ ಪರಿಸ್ಥಿತಿ ಇರುವುದರಿಂದ ಮನೆಯಲ್ಲಿಯೇ ಇದ್ದುಕೊಂಡು ಸ್ಮಾರ್ಟ್‌ಫೋನ್‌ ಮೂಲಕವೇ ಎಲ್ಲ ಬಗೆಯ ಬಿಲ್ ಮೊತ್ತ ಹಾಗೂ ಶುಲ್ಕ ಪಾವತಿಗಳನ್ನು ಮಾಡುವ ಬಗ್ಗೆ ಕಲಿಸಿಕೊಡಿ. ಯುಪಿಐ ಆಪ್ಸ್‌ಗಳ ಬಳಕೆ ಹೇಗೆ ಮತ್ತು ಅವುಗಳ ಹೇಗೆ ಸುರಕ್ಷಿತ ಸೇವೆ ಒದಗಿಸುತ್ತವೆ ಎನ್ನುವ ಬಗ್ಗೆ ತಿಳಿಸಿ. ಎಲ್ಲ ರೀಚಾರ್ಜ್‌ಗೆ ಅನುಕೂಲವಾಗಿರುವ ಏರ್‌ಟೆಲ್ ಥ್ಯಾಂಕ್ಸ್‌ ಆಪ್‌ ತಿಳಿಸಿ. ಅದು ಗೂಗಲ್ ಪೇ ಸ್ಟೋರ್‌ನಲ್ಲಿ ಲಭ್ಯ ಇದೆ.

ಕೋವಿಡ್ -19 ಬಗ್ಗೆ ಮಾಹಿತಿ ನೀಡಿ

ಪ್ರಸ್ತುತ ಇಡೀ ವಿಶ್ವವನ್ನೇ ನಲುಗಿಸಿರುವ ಕೋವಿಡ್ 19 ವೈರಾಣು ಹರಡುವಿಕೆ ಹೇಗೆ ಎಂಬುದರ ಬಗ್ಗೆ ತಿಳಿಸಿ. ಹಾಗೆಯೇ ಈ ಸಾಕ್ರಾಂಮಿಕ ಹರಡದಂತೆ ಹೇಗೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿ ಹಾಗೂ ಕೊರೊನಾ ಬಗ್ಗೆ ಅಧಿಕೃತ ಆರೋಗ್ಯ ಸಂಸ್ಥೆಗಳು ಪ್ರಕಟಿಸಿರುವ ಸರಿಯಾದ ಮಾಹಿತಿ ತಿಳಿಸಿ. ಹ್ಯಾಂಡ್‌ವಾಶ್‌ ಮಾಡುವ ಬಗ್ಗೆ ಹಾಗೂ ಮನೆಯಲ್ಲಿರುವ ಬಗ್ಗೆ ಮಾಹಿತಿ ನೀಡಿ. ಇದರೊಂದಿಗೆ ಸಾಮಾಜಿಕ ತಾಣಗಳಲ್ಲಿನ-ವಾಟ್ಸಪ್‌ನಲ್ಲಿ ಹರಿದಾಡುವ ಸುದ್ದಿಗಳ ಅಸಲಿಯತ್ತು ಅರಿಯದೇ ಪಾರ್ವರ್ಡ್ ಮಾಡಬೇಡಿ ಎಂಬುದನ್ನು ಹೇಳಿ.

ಕೊರೊನಾ ವೈರಸ್‌ ರಿಸ್ಕ್ ಸ್ಕ್ಯಾನ್‌

ಕೊರೊನಾ ವೈರಸ್‌ ರಿಸ್ಕ್ ಸ್ಕ್ಯಾನ್‌

ಕೊರೊನಾ ವೈರಸ್‌ ಬಗ್ಗೆ ಸರಿಯಾದ ಮಾಹಿತಿ ನೀಡುವ ಉದ್ದೇಶದಿಂದ ಏರ್‌ಟೆಲ್ ಅಪೋಲೋ 24*7 ಫಾರ್ಮಸಿ ಸಹಯೋಗದೊಂದಿಗೆ ಕೊರೊನಾ ವೈರಸ್‌ ರಿಸ್ಕ್ ಸ್ಕ್ಯಾನ್‌ ಚಾಟ್ ಬಾಟ್‌ ಆರಂಭಿಸಿದೆ. ಈ ಕೊರೊನಾ ವೈರಸ್‌ ರಿಸ್ಕ್ ಸ್ಕ್ಯಾನ್‌ ಬಾಟ್‌ AI ತಂತ್ರಜ್ಞಾನವನ್ನು ಹೊಂದಿದೆ. ಇಲ್ಲಿ ಬಳಕೆದಾರರು ಅವರ ವಯಸ್ಸು, ಲಿಂಗ, ಪ್ರವಾಸದ ಮಾಹಿತಿ, ದೇಹದ ಉಷ್ಣಾಂಶ ಇಂತಹ ಸರಳ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಅವರ ಅಪಾಯದ ಮಟ್ಟವನ್ನು ತಿಳಿಯಬಹುದಾಗಿದೆ. ಹಾಗೆಯೇ ಈ ಸೇವೆಯಲ್ಲಿ ಕೊರೊನಾ ವೈರಸ್‌ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ, ಏರ್‌ಟೆಲ್‌ನ ಈ ಸೇವೆಯನ್ನು ಈಗಾಗಲೇ ವಿಶ್ವಾದ್ಯಂತ 7.3 ಮಿಲಿಯನ್‌ ಬಳಕೆದಾರರು ಲೈಕ್‌ ಮಾಡಿದ್ದಾರೆ. ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ನೀವು ಸಹಕೊರೊನಾ ವೈರಸ್‌ ರಿಸ್ಕ್ ಸ್ಕ್ಯಾನ್‌ ಸೇವೆ ಪಡೆಯಬಹುದು. ಇತರರಿಗೂ ಈ ಬಗ್ಗೆ ತಿಳಿಸಬಹುದು.

Best Mobiles in India

English summary
The Airtel Thanks app serves as a one-stop solution for all your digital payments for times when you cannot step out from your home.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X