Subscribe to Gizbot

ಉಚಿತ ಎಸ್‌ಎಮ್‌ಎಸ್‌ಗಳನ್ನು ಕಳುಹಿಸುವುದು ಹೇಗೆ?

Posted By:

ನೀವು ಹಣ ಪಾವತಿಸದೇ ಸಂದೇಶಗಳನ್ನು ಕಳುಹಿಸಲು ಜನಪ್ರಿಯ ಅಪ್ಲಿಕೇಶನ್ ಆದ ವಾಟ್ಸಾಪ್ ಅನ್ನು ಬಳಸುತ್ತೀರಿ. ಆದರೆ ಸಂದೇಶವನ್ನು ಕಳುಹಿಸುವವರು ಮತ್ತು ಸ್ವೀಕರಿಸುವವರು ಇಬ್ಬರೂ ಈ ಅಪ್ಲಿಕೇಶನ್ ಅನ್ನು ಹೊಂದಿರಬೇಕು ಎಂಬುದು ಕಡ್ಡಾಯವಾಗಿದೆ. ಆದರೆ ಇದು ಯಾವಾಗಲೂ ಸಾಧ್ಯವಿಲ್ಲ. ಮತ್ತು ಇಬ್ಬರೂ ಬಳಕೆದಾರರು ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ.

ಉಚಿತ ಎಸ್‌ಎಮ್‌ಎಸ್‌ಗಳನ್ನು ಕಳುಹಿಸುವುದು ಹೇಗೆ?

ಹಾಗಿದ್ದರೆ ವಾಟ್ಸಾಪ್‌ನಲ್ಲಿರುವ ತೊಂದರೆಯನ್ನು ನಿವಾರಿಸಿ ಉಚಿತ ಸಂದೇಶಗಳನ್ನು ಕಳುಹಿಸುವ ಬೇರೆ ಬೇರೆ ಜಾಲತಾಣಗಳಿದ್ದು ಅವುಗಳ ಬಳಕೆಯನ್ನು ನಿಮಗೆ ಮಾಡಬಹುದು. ಈ ಸೇವೆಗಳನ್ನು ಬಳಸಲು ಕಳುಹಿಸುವವರು ಮಾತ್ರ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೆ ಸಾಕು. ಸ್ವೀಕರಿಸುವವರು ಹೊಂದಿರಬೇಕಾದ ಅಗತ್ಯವಿಲ್ಲ.

ಇದನ್ನೂ ಓದಿ: ನಿಮ್ಮನ್ನು ದಂಗುಬಡಿಸುವ ಟಾಪ್ 10 ತಂತ್ರಜ್ಞಾನ ಆವಿಷ್ಕಾರಗಳು

ಹಾಗಿದ್ದರೆ ಆ ಸೇವೆಗಳು ಯಾವುವು ಎಂಬುದರ ಮೇಲೆ ಕಣ್ಣಾಡಿಸೋಣ.

ವೇ2ಎಸ್‌ಎಮ್‌ಎಸ್
ನಾವು ಉಚಿತ ಎಸ್‌ಎಮ್‌ಎಸ್ ಸೇವೆಗಳನ್ನು ಪ್ರಯತ್ನಿಸಿದ್ದು ವೇ2ಎಸ್‌ಎಮ್‌ಎಸ್ ಹೆಚ್ಚು ಉಪಯುಕ್ತ ಎಂದೆನಿಸಿದೆ. ನೀವು ಈ ಸಂದೇಶ ತಾಣವನ್ನು ಬಳಸಿಕೊಂಡು ತ್ವರಿತವಾಗಿ ಸಂದೇಶಗಳನ್ನು ಕಳುಹಿಸಬಹುದಾಗಿದ್ದು ಇದು ತ್ವರಿತವಾಗಿ ಸ್ವೀಕರಿಸುವವರಿಗೆ ತಲುಪುತ್ತದೆ. ಇದು ಮೊಬೈಲ್ ಬ್ರೌಸರ್‌ಗಳು, ಡೆಸ್ಕ್‌ಟಾಪ್ ಬ್ರೌಸರ್‌ಗಳು ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಉಚಿತ ಎಸ್‌ಎಮ್‌ಎಸ್‌ಗಳನ್ನು ಕಳುಹಿಸುವುದು ಹೇಗೆ?

ಇದನ್ನು ಸೈನ್ ಇನ್ ಮಾಡಲು ವೇ2ಎಸ್‌ಎಮ್‌ಎಸ್‌ಗೆ ಹೋಗಿ ಖಾತೆಯನ್ನು ರಚಿಸಿ. ನಿಮ್ಮ ಫೋನ್‌ಗೆ ಪಾಸ್‌ವರ್ಡ್ ಅನ್ನು ಕಳುಹಿಸಲಾಗುತ್ತದೆ ಮತ್ತು ದೃಢೀಕರಣ ಇಮೇಲ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದು. ನಿಮ್ಮ ಖಾತೆಯನ್ನು ದೃಢೀಕರಿಸಲು ನಿಮ್ಮ ಖಾತೆಯನ್ನು ಪರಿಶೀಲಿಸಬೇಕಾಗುತ್ತದೆ ಮತ್ತು ಉಚಿತ ಪಠ್ಯ ಸಂದೇಶಗಳನ್ನು ಕಳುಹಿಸಲು ಆರಂಭಿಸಿ.

ಹೈಕ್
ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಹೈಕ್ ಮೆಸೆಂಜರ್ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದ್ದು ಇತರ ಹೈಕ್ ಬಳಕೆದಾರರಿಗೆ ಎಸ್‌ಎಮ್‌ಎಸ್ ಮೂಲಕ ಸಂದೇಶಗಳನ್ನು ಕಳುಹಿಸಲು ನಿಮ್ಮನ್ನು ಅನುಮತಿಸುತ್ತದೆ. ನೀವು ಸೈನ್ ಇನ್ ಮಾಡಿದಾಗ ನಿಮಗೆ ಉಚಿತ 20 ಸಂದೇಶಗಳು ಮೊದಲಿಗೆ ದೊರಕುತ್ತದೆ, ಮತ್ತು ಹೈಕ್‌ಗಾಗಿ ಶಿಫಾರಸು ಸೈನ್ ಅಪ್‌ಗಳನ್ನು ನೀವು ಯಾರಿಗಾದರೂ ಕಳುಹಿಸಿದಲ್ಲಿ ಹೆಚ್ಚಿನ 50 ಸಂದೇಶಗಳನ್ನು ಪಡೆದುಕೊಳ್ಳಬಹುದು.

ಉಚಿತ ಎಸ್‌ಎಮ್‌ಎಸ್‌ಗಳನ್ನು ಕಳುಹಿಸುವುದು ಹೇಗೆ?

ಈ ಅಪ್ಲಿಕೇಶನ್ ಐಓಎಸ್, ಆಂಡ್ರಾಯ್ಡ್, ವಿಂಡೋಸ್ ಫೋನ್, ಬ್ಲ್ಯಾಕ್‌ಬೆರ್ರಿ, ನೋಕಿಯಾ ಎಸ್40 ಮತ್ತು ಎಸ್60 ನಲ್ಲಿ ಲಭ್ಯವಿದೆ. ಮೊದಲಿಗೆ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಿ. ಹೊಸ ಸಂದೇಶ ಬಟನ್ ಮೇಲೆ ತಟ್ಟಿರಿ ಮತ್ತು ಹೈಕ್‌ನಲ್ಲಿರುವ ಯಾರಾದರೊಬ್ಬರ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಅವರಿಗೆ ಸಂದೇಶಗಳನ್ನು ಕಳುಹಿಸಿ.

English summary
Messaging apps like WhatsApp are really popular now because you don't have to pay to send text messages anymore. However, the problem with these apps is both the sender and the recipient have to install the app, which isn't always convenient.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot