ನಿಮ್ಮನ್ನು ದಂಗುಬಡಿಸುವ ಟಾಪ್ 10 ತಂತ್ರಜ್ಞಾನ ಆವಿಷ್ಕಾರಗಳು

By Shwetha
|

ನೀವು ಸ್ವಲ್ಪ ಹೊತ್ತು ನಿಂತು ಆಲೋಚಿಸಿದಾಗ ಇಂದಿನ ಆಧುನಿಕ ತಂತ್ರಜ್ಞಾನ ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿದು ಆಶ್ಚರ್ಯವಾಗಬಹುದು. ಜಗತ್ತಿನ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಗಳೊಡನೆ ವೀಡಿಯೊ ಚಾಟ್ ಮಾಡಬಹುದು. ನಿಮ್ಮ ಫೋನ್ ಹೆಚ್ಚಿನ ಮೆಮೊರಿಯನ್ನು ಮತ್ತು ಪ್ರೊಸೆಸಿಂಗ್ ಪವರ್ ಅನ್ನು ಹೊಂದಿದೆ ಎಂಬುದನ್ನು ತಿಳಿದು ಮೂಗಿನ ಮೇಲೆ ಬೆರಳಿಡುವ ಪರಿಸ್ಥಿತಿ ನಿಮ್ಮದಾಗಬಹುದು.

ಹಾಗಿದ್ದರೆ ನೀವಿಂದು ನೋಡುತ್ತಿರುವ ಈ ತಂತ್ರಜ್ಞಾನ ಆವಿಷ್ಕಾರ ಮೊದಲೇ ಇತ್ತೇ ಎಂಬುದನ್ನು ಕುರಿತು ಮನದಲ್ಲಿ ಎಣಿಕೆಗಳು ಬರುವುದು ಸಹಜವೇ. ಆಧುನಿಕ ತಂತ್ರಜ್ಞಾನ ಹೇಗೆ ಅಭಿವೃದ್ಧಿಯನ್ನು ಪಡೆದಿದೆ. ಅವುಗಳು ಎದುರಿಸಿರುವ ಏಳು ಬೀಳುಗಳು, ಅಭಿವೃದ್ಧಿ ಸೂತ್ರಗಳು ಮೊದಲಾದವನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.

#1

#1

ಆಪಲ್‌ನ ನ್ಯೂಟನ್ ಮೆಸೇಜ ಪ್ಯಾಡ್ ಹೆಚ್ಚು ಪರಿಣಾಮಕಾರಿ ತಂತ್ರಜ್ಞಾನವಾಗಿದ್ದು, 1993 ರಲ್ಲಿ ಜನ್ಮತಾಳಿತು. ನೋಟ್ ಟೇಕಿಂಗ್, ಸಂಪರ್ಕಗಳನ್ನು ಸಂಗ್ರಹಿಸುವುದು. ಫ್ಯಾಕ್ಸ್‌ಗಳನ್ನು ಕಳುಹಿಸುವುದು ಇವೇ ಮೊದಲಾದ ಕೆಲಸಗಳನ್ನು ಮಾಡುತ್ತವೆ. ಆದರೆ ಇದು ಗಾತ್ರದಲ್ಲಿ ತುಂಬಾ ಸಣ್ಣದು, ದುಬಾರಿ ಮತ್ತು ಬರವಣಿಗೆ ಗುರುತಿಸುವಿಕೆಯಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿದೆ.

#2

#2

1989 ರಲ್ಲಿ, ನಿನ್‌ಟೆಂಡೋ ಮಾರುಕಟ್ಟೆಗೆ ಲಗ್ಗೆ ಹಾಕಿತು. ನಿನ್‌ಟೆಂಡೋ ಗೇಮ್‌ಗಳ ನಿಯಂತ್ರಕವಾಗಿ ಪವರ್ ಗ್ಲೋ ಮೆಟಲ್ ಶಕ್ತಿಯೊಂದಿಗೆ ಬಂದಿದ್ದು ಇದು 8 ಬಿಟ್‌ಗಳ ಪ್ರೊಸೆಸಿಂಗ್ ಪವರ್ ಅನ್ನು ಮಾತ್ರ ಹೊಂದಿದೆ. ಇದರಲ್ಲಿ ಎರಡು ಟ್ರಾನ್ಸ್‌ಮೀಟರ್‌ಗಳು ಯಾವ ಗೇಮ್ ಮತ್ತು ಲೆವೆಲ್ ಅನ್ನು ಆರಿಸಬೇಕು ಎಂಬುದಕ್ಕಾಗಿ ಮೆಲ್ಭಾಗದಲ್ಲಿ ಸಣ್ಣ ಪ್ಯಾನೆಲ್ ಅನ್ನು ಇದು ಹೊಂದಿತ್ತು. ಇದು ಆಪ್ಟಿಕಲ್ ಫೈಬರ್ಸ್, ಅಲ್ಟ್ರಾ ಸೋನಿಕ್ ಸ್ಪೀಕರ್‌ಗಳು, ಮತ್ತು ಮೈಕ್ರೋಫೋನ್‌ಗಳನ್ನು ಒಳಗೊಂಡಿತ್ತು.

#3

#3

ಇದು ಬೇರೆ ಬೇರೆ ಗಾತ್ರಗಳಲ್ಲಿ ಬಂದಿದ್ದು, ಹೆಚ್ಚು ಸಾಂಪ್ರದಾಯಿಕ ಆಡಿಯೊ ಭಾಗಗಳನ್ನು ಹೊಂದಿದೆ. 1987 ರಲ್ಲಿ ಇದನ್ನು ಪ್ರಸ್ತುತಪಡಿಸಿದ್ದು ಗ್ರಾಹಕರಿಗೆ ಮೊದಲ ಡಿಜಿಟಲ್ ಆಡಿಯೊ ಲಭ್ಯವಾಗುವಂತೆ ಮಾಡಿತು.

#4

#4

ಹಿಂದೆ ಗೋಪ್ರೋಸ್, ಸೆಲ್ಫೀಗಳು ಬೇಟಾಮ್ಯಾಕ್ಸ್ ಮತ್ತು ವಿಎಚ್‌ಎಸ್ ಟೇಪ್‌ಗಳಲ್ಲಿ ಪೋಲೋರೈಡ್ ಪೋಲಾವಿಶನ್ ಇತ್ತು. ಇದು ತ್ವರಿತ ಚಲನಚಿತ್ರಗಳಾಗಿದ್ದು ಇದು ನಿಮಗೆ ತ್ವರಿತ ಚಿತ್ರಗಳನ್ನು ನೀಡುತ್ತದೆ. ಚಿತ್ರ ಗುಣಮಟ್ಟ ಕೂಡ ಸಾಮಾನ್ಯ ಮಟ್ಟದ್ದಾಗಿದೆ.

#5

#5

ಟಿವಿ ಮತ್ತು ಅಂತರ್ಜಾಲದ ಸಮ್ಮಿಶ್ರವಾಗಿರುವ ಎಮ್‌ಎಸ್‌ಎನ್ ಟಿವಿ 1996 ರಲ್ಲಿ ಆರಂಭಗೊಂಡಿತು. ಇದು ಟಿವಿ ಆಧಾರಿತ ಇಮೇಲ್ ಮತ್ತು ಪ್ರಮಾಣಿತ ಟೆಲಿಫೋನ್ ಲೈನ್‌ಗಳ ಮೂಲಕ ಆನ್‌ಲೈನ್ ಬ್ರೌಸಿಂಗ್ ಅನ್ನು ಒದಗಿಸುತ್ತದೆ.

#6

#6

ಇಂದಿನ ವೀಡಿಯೊ ಗೇಮ್‌ಗಳಿಗೆ ಹೋಲಿಸಿದಾಗ ಹೆಚ್ಚು ಪ್ರಾಚೀನವಾಗಿದೆ. 1978 ರಲ್ಲಿ ಅಸ್ತಿತ್ವಕ್ಕೆ ಬಂದ ಇದು, ನಿಂಟೆಂಡೊ ಗೇಮ್ ಬಾಯ್‌ಗೂ ಮೊದಲು ಹೆಚ್ಚು ದಶಕದ್ದಾಗಿದೆ

#7

#7

ಸಿರಿಗಿಂತ ಹದಿನೈದು ವರ್ಷಗಳಿಗೂ ಮುನ್ನ ಡ್ರಾಗನ್ ನ್ಯಾಚುರಲೀ ಸ್ಪೀಕಿಂಗ್ ಸಾಫ್ಟ್‌ವೇರ್ ಇತ್ತು. ನೀವು ಉಚ್ಛರಿಸಿದ ಪದಗಳನ್ನು ಗುರುತಿಸಲು ಡ್ರಾಗನ್ ಸಾಫ್ಟ್‌ವೇರ್‌ಗೆ ನೀವು ತರಬೇತಿಯನ್ನು ನೀಡಬೇಕಾಗುತ್ತದೆ.

#8

#8

1998 ರಲ್ಲಿ, ಮೂರು ವರ್ಷಗಳಿಗೂ ಮುನ್ನ ಆಪಲ್‌ನ ಐಪ್ಯಾಡ್, ಡೈಮಂಡ್ ರಿಯೊ ಎಮ್‌ಪಿ3 ಪ್ಲೇಯರ್ ಮೊತ್ತ ಮೊದಲ ಯಶಸ್ವಿ ಎಮ್‌ಪಿ 3 ಪ್ಲೇಯರ್ ಆಗಿದೆ. ಮೊದಲ ಡೌನ್‌ಲೋಡ್ ಸೇವೆಗಳ ಸೃಷ್ಟಿಗೆ ಮುನ್ನಡಿಯನ್ನು ಬರೆಯಿತು.

#9

#9

ಸ್ಕೈಪ ಮತ್ತು ಫೇಸ್‌ಟೈಮ್‌ಗಿಂತ ಮುನ್ನ, AT&T ವೀಡಿಯೊಫೋನ್ 2500 ಇತ್ತು. ಇದು ಗ್ರಾಹಕರಿಗಾಗಿ ಮೊದಲ ವೀಡಿಯೊ ಸಂವಹನ ಡಿವೈಸ್ ಆಗಿದ್ದು ಇದರ ಬೆಲೆ 1993 ರಲ್ಲಿ $1,500 ಬೆಲೆಯಾಗಿತ್ತು.

Most Read Articles
Best Mobiles in India

English summary
If you stop and think about it for a minute, and you’ll realize that today’s tech can do amazing things. Not only can modern gizmos track your location with GPS but you can even video chat with someone in another part of the world.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more