ಮೈಕ್ರೋಸಾಫ್ಟ್ ಎಡ್ಜ್ ಅನ್ನು ಅನ್‌ಇನ್‌ಸ್ಟಾಲ್‌ ಮಾಡುವುದು ಹೇಗೆ ಗೊತ್ತಾ?

|

ಸಾಫ್ಟ್‌ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ ತನ್ನ ಹೊಸ ಕ್ರೋಮಿಯಂ ಆಧಾರಿತ ಎಡ್ಜ್ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಸದ್ಯ ಕ್ರೋಮಿಯಂ ಆಧಾರಿತ ಎಡ್ಜ್ ಬಳಕೆದಾರರಿಗೆ ಬಿಡುಗಡೆಯಾಗಲಿದೆ. ಇನ್ನು ಈ ರೋಲ್- completeಗೊಂಡ ನಂತರ, ಎಡ್ಜ್‌ನ ಹಳೆಯ HTML- ಆವೃತ್ತಿ ಅಥವಾ ಲೆಗಸಿ ಎಡ್ಜ್ ಇನ್ನು ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಆದರೆ ಈ ಹೊಸ ಬ್ರೌಸರ್ ವಿಂಡೋಸ್‌ನಲ್ಲಿ ಸಿಸ್ಟಮ್ ಅಪ್‌ಡೇಟ್‌ನಂತೆ ಬರುತ್ತದೆ. ಆದ್ದರಿಂದ ಅನ್‌ಇನ್‌ಸ್ಟಾಲ್‌ ಮಾಡುವ ಆಯ್ಕೆಯು ಸಹ ಇನ್ನು ಮುಂದೆ ಲಭ್ಯವಿರುವುದಿಲ್ಲ ಎಂದು ಮೈಕ್ರೋಸಾಫ್ಟ್ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ತನ್ನ ಬಳಕೆದಾರರಿಗೆ ಹೊಸ ಕ್ರೋಮಿಯಂ ಆಧಾರಿತ ಎಡ್ಜ್‌ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇನ್ನು ಈ ಹೊಸ ಬ್ರೌಸರ್ ಹಲವಾರು ಆಪ್ಡೇಟ್‌ಗಳೊಂದಿಗೆ ಬರುತ್ತದೆ. ಅಲ್ಲದೆ ಇದರಲ್ಲಿ ಮೊಜಿಲ್ಲಾ ಫೈರ್‌ಫಾಕ್ಸ್‌ಗಿಂತ ಹೆಚ್ಚು ಆದ್ಯತೆ ನೀಡಲಾಗಿದೆ ಎನ್ನಲಾಗ್ತಿದೆ. ಆದರೆ ನೀವು ಇದನ್ನು ಅನ್‌ಇನ್‌ಸ್ಟಾಲ್‌ ಮಾಡಲು ಅವಕಾಶ ನಿಡಲಾಗುವುದಿಲ್ಲ ಎನ್ನುವುದು ಬಳಕೆದಾರರಿಗೆ ಅಸಮಾಧಾನ ತರಿಸಬಹುದು. ಆದರೆ ಅದಕ್ಕೂ ಕೂಡ ಅವಕಾಶವಿದೆ. ಆದರೆ ಇದು ಸಾಂಪ್ರದಾಯಿಕ ವಿಧಾನದಿಂದ ಅಲ್ಲ, ಹಾಗಾದ್ರೆ ವಿಧಾನ ಯಾವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ ನ ಹೊಸ ಕ್ರೋಮಿಯಂ ಆಧಾರಿತ ಎಡ್ಜ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಲು ಅವಕಾಶವಿಲ್ಲ ಎಂದು ಹೇಳಲಾಗ್ತಿದೆ. ಈ ಹೊಸ ಬ್ರೌಸರ್ ವಿಂಡೋಸ್‌ನಲ್ಲಿ ಸಿಸ್ಟಮ್ ಅಪ್‌ಡೇಟ್‌ನಲ್ಲಿ ಬರುವುದರಿಂದ ಇದನ್ನ ಅನ್‌ಇನ್‌ಸ್ಟಾಲ್ ಮಾಡಲಾಗುವುದಿಲ್ಲ ಎಂದು ಮೈಕ್ರೋಸಾಫ್ಟ್‌ ಹೇಳಿಕೊಂಡಿದೆ. ಆದರೆ ನಿಜ ಹೇಳಬೇಕೆಂದರೆ, ಇದನ್ನು ಅನ್‌ಇನ್‌ಸ್ಟಾಲ್‌ ಮಾಡಬಹುದು. ಆದರೆ ಸಾಂಪ್ರದಾಯಿಕ ವಿಧಾನದಿಂದ ಅಲ್ಲ ಮತ್ತು ಸುಲಭವಾಗಿ ಅಂತೂ ಅಲ್ಲವೇ ಅಲ್ಲ.

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ನ ಕ್ರೋಮಿಯಂ ಆಧಾರಿತ ಎಡ್ಜ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡುವುದಕ್ಕೆ ಹೊಸ ಪರಿಹಾರವೊಂದು ಲಭ್ಯವಾಗಿದೆ. ಆದರೆ ಇದು ಸುಧಾರಿತ ಮತ್ತು ಅನುಭವಿ ಬಳಕೆದಾರರಿಗೆ ಮಾತ್ರ ಸಾಧ್ಯವಾಗಲಿದೆ. ಅಷ್ಟಕ್ಕೂ ಇದನ್ನ ಅನ್‌ಇನ್‌ಸ್ಟಾಲ್‌ ಮಾಡುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಸಾಫ್ಟ್ ಎಡ್ಜ್ ಅನ್ನು ಅನ್‌ಇನ್‌ಸ್ಟಾಲ್‌ ಮಾಡುವುದು ಹೇಗೆ

ಮೈಕ್ರೋಸಾಫ್ಟ್ ಎಡ್ಜ್ ಅನ್ನು ಅನ್‌ಇನ್‌ಸ್ಟಾಲ್‌ ಮಾಡುವುದು ಹೇಗೆ

ಹಂತ:1 ಮೊದಲು ಸಿ ಗೆ ನ್ಯಾವಿಗೇಟ್ ಮಾಡಿ: ಪ್ರೋಗ್ರಾಂ ಫೈಲ್‌ಗಳು (x86) ಮೈಕ್ರೋಸಾಫ್ಟ್ ಎಡ್ಜ್ ಅಪ್ಲಿಕೇಶನ್

ಹಂತ:2 ಪ್ರಸ್ತುತ ಆವೃತ್ತಿ ಸಂಖ್ಯೆಯನ್ನು ಆಯ್ಕೆಮಾಡಿ

ಹಂತ:3 setup.exe ಅನ್ನು ಪತ್ತೆ ಮಾಡಿ

ಹಂತ:4 ಕಮಾಂಡ್ ಪ್ರಾಂಪ್ಟ್‌ನಲ್ಲಿ ಫೈಲ್ ಪಥಕ್ಕೆ ನ್ಯಾವಿಗೇಟ್ ಮಾಡಿ

ಹಂತ:5 ನಂತರ ಈ ಆಯ್ಕೆಗಳನ್ನ ಕಾರ್ಯಗತಗೊಳಿಸಿ: setup.exe --uninstall --system-level --verbose-logging - force-uninstall

Most Read Articles
Best Mobiles in India

Read more about:
English summary
Microsoft is rolling out the new Chromium-based Edge for all users soon and once that's done, it will be impossible to uninstall the browser using traditional means. But there is a way around.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X