ಗೂಗಲ್‌ ಪ್ಲೇ ಸರ್ವಿಸ್‌ ಅಪ್‌ಡೇಟ್‌ ಮಾಡುವುದು ಹೇಗೆ; ಈ ಕ್ರಮ ಅನುಸರಿಸಿ

|

ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ 'ಗೂಗಲ್‌ ಪ್ಲೇ ಸರ್ವಿಸ್‌' ಪ್ರಮುಖ ಪಾತ್ರ ವಹಿಸುತ್ತದೆ. ಇದು ಆಂಡ್ರಾಯ್ಡ್‌ ಓಎಸ್‌ ಹಾಗೂ ಆಪ್‌ಗಳ ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡಿ ಸ್ಮಾರ್ಟ್‌ಫೋನ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಗೆ ಮಾಡುತ್ತದೆ. ಅದರಲ್ಲೂ ಪ್ರಮುಖವಾಗಿ ಗೂಗಲ್‌ ಆಪ್‌ಗಳು ಹಾಗೂ ಮೂರನೇ ವ್ಯಕ್ತಿಯ ಆಪ್‌ ಸೇವೆ ಪಡೆಯಲು ಈ ಗೂಗಲ್‌ ಪ್ಲೇ ಸರ್ವಿಸ್‌ ಪ್ರಮುಖವಾಗಿದೆ. ಆದರೆ, ಇದನ್ನು ಕಾಲಕಾಲಕ್ಕೆ ಅಪ್‌ಗ್ರೇಡ್‌ ಮಾಡದಿದ್ದರೆ ಹಲವು ಸಮಸ್ಯೆ ಎದುರಾಗುತ್ತವೆ.

ಸ್ಮಾರ್ಟ್‌ಫೋನ್‌

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಆಪ್‌ಗಳು ಕ್ರ್ಯಾಶ್ ಆಗಿದ್ದರೆ ಅದಕ್ಕೆ ನೀವು ಗೂಗಲ್‌ ಪ್ಲೇ ಸರ್ವಿಸ್‌ನಲ್ಲಿನ ದೋಷಗಳನ್ನು ಮೊದಲು ಪತ್ತೆ ಮಾಡಬೇಕಿದೆ. ಅದಕ್ಕೂ ಮೊದಲು ನೀವು ಆಟೋಮ್ಯಾಟಿಕ್‌ ಅಪ್‌ಡೇಟ್‌ ಫೀಚರ್ಸ್‌ ಅನ್ನು ಬಳಸುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲದೆ ಅಪ್‌ಡೇಟ್‌ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಆದರೆ, ನೀವೇ ನೇರವಾಗಿ ಅಪ್‌ಡೇಟ್‌ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರೆ ಈ ಮಾರ್ಗ ಅನುಸರಿಸಿ.

ಅಪ್‌ಡೇಟ್‌ ಮಾಡಿ

ಅಪ್‌ಡೇಟ್‌ ಮಾಡಿ

ಗೂಗಲ್‌ ಪ್ಲೇ ಸರ್ವಿಸ್‌ನಲ್ಲಿ ಏನಾದರೂ ಸಮಸ್ಯೆ ಎದುರಾದರೆ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಗೂಗಲ್‌ ಪ್ಲೇ ಸರ್ವಿಸ್‌ ಅನ್ನು ಅಪ್‌ಡೇಟ್‌ ಮಾಡಬೇಕಿರುತ್ತದೆ. ಇದಕ್ಕೆ ಎರಡು ರ್ಮಾಗಳಿವೆ, ಒಂದು ಗೂಗಲ್‌ ಗೂಗಲ್‌ ಪ್ಲೇ ಸ್ಟೋರ್‌ ಇನ್ನೊಂದು APK ಮಿರರ್ (APKMirror). ಇತ್ತೀಚೆಗೆ ಗೂಗಲ್‌ ಪ್ಲೇ ಸರ್ವಿಸ್‌ ಅನ್ನು APK ಮೂಲಕವೂ ಇನ್‌ಸ್ಟಾಲ್‌ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನವೀಕರಿಸುವುದು ಹೇಗೆ?

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನವೀಕರಿಸುವುದು ಹೇಗೆ?

ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಗೂಗಲ್‌ ಪ್ಲೇ ಸರ್ವಿಸ್‌ ಅನ್ನು ಸುಲಭವಾಗಿ ಅಪ್‌ಡೇಟ್‌ ಮಾಡಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಪ್ಲೇ ಸ್ಟೋರ್‌ ಓಪನ್‌ ಮಾಡಿದ ತಕ್ಷಣ ಅಪ್‌ಡೇಟ್‌ ಆಯ್ಕೆ ನಿಮಗೆ ಕಾಣಿಸುವುದಿಲ್ಲ ಅದನ್ನು ಕಂಡುಕೊಳ್ಳಲು ಈ ಕೆಳಗಿನ ಕ್ರಮ ಅನುಸರಿಸಿ.

ಓಪನ್‌

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್‌ ಓಪನ್‌ ಮಾಡಿ ನಂತರ 'ಆಪ್‌' ವಿಭಾಗಕ್ಕೆ ತೆರಳಿ ಅಲ್ಲಿ 'ಸೀ ಆಲ್‌ ಆಪ್' ಮೇಲೆ ಟ್ಯಾಪ್‌ ಮಾಡಿ. ಇದಾದ ನಂತರ ಮೇಲಿನ ಬಲ ಮೂಲೆಯಲ್ಲಿ, ಮೂರು ಡಾಟ್ ಐಕಾನ್ ಪಕ್ಕದಲ್ಲಿರುವ 'ಸರ್ಚ್‌' ಐಕಾನ್ ಅನ್ನು ಟ್ಯಾಪ್ ಮಾಡಿ. ಅಲ್ಲಿ 'Play' ಎಂದು ಟೈಪ್ ಮಾಡಿದರೆ 'ಗೂಗಲ್ ಪ್ಲೇ ಸರ್ವಿಸ್‌' ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

ಸ್ಕ್ರಾಲ್

ಇದಾದ ಬಳಿಕ ಕೆಳಗೆ ಸ್ಕ್ರಾಲ್ ಮಾಡಿದರೆ ಅಲ್ಲಿ ಆಪ್‌ ವಿವರ ಕಾಣುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿದರೆ ಅಧಿಕೃತ ಮುಖಪುಟಕ್ಕೆ ತೆರಳುತ್ತದೆ. ಅಲ್ಲಿ 'ಅಪ್‌ಡೇಟ್‌' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿದರೆ ಗೂಗಲ್‌ ಪ್ಲೇ ಸರ್ವಿಸ್ ಆಪ್‌ ಅನ್ನು ನವೀಕರಣ ಮಾಡಿಕೊಳ್ಳಬಹುದು.

APK

ಇಷ್ಟೆಲ್ಲಾ ಮಾಡಿದರೂ ಸರಿಯಾಗಲಿಲ್ಲ ಎಂದರೆ APK ಮಿರರ್ ಬಳಕೆ ಮಾಡಿಕೊಂಡು ಹೊಸದಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ನೋಡಿ.

APK ಮಿರರ್

APK ಮಿರರ್ ಗೆ ಭೇಟಿ ನೀಡುವ ಮುನ್ನ ಮೊದಲು ಗೂಗಲ್‌ ಪ್ಲೇ ಸರ್ವಿಸ್‌ ಯಾವ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಅದೇನಾದರೂ ಹಳೆಯ ಆವೃತ್ತಿಯ ಸಂಖ್ಯೆ ಹೊಂದಿದ್ದರೆ ಜೊತೆಗೆ ಗೂಗಲ್‌ ಹೊಸ ಆವೃತ್ತಿ ಪರಿಚಯಿಸಿದೆ ಎಂದು ನಿಮಗನಿಸಿದರೆ ಹಾಗೂ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಆವೃತ್ತಿ ಲಭ್ಯವಾಗುತಿಲ್ಲ ಎಂಬುದು ನಿಮಗೆ ಸ್ಪಷ್ಟವಾದರೆ ಮಾತ್ರ APK ಮಿರರ್ ಬಳಕೆ ಮಾಡಿ.

ಅಪ್‌ಡೇಟ್‌

APK ಮಿರರ್ ಗೆ ಹೋಗಿ ಅಲ್ಲಿ ಗೂಗಲ್‌ ಪ್ಲೇ ಸರ್ವಿಸ್‌ ಎಂದು ಸರ್ಚ್‌ ಮಾಡಿ. ನಂತರ ಅಪ್‌ಡೇಟ್‌ ಆದ ಇತ್ತೀಚಿನ ಆವೃತ್ತಿಯ ಗೂಗಲ್‌ ಪ್ಲೇ ಸರ್ವಿಸ್ ಮೇಲೆ ಟ್ಯಾಪ್‌ ಮಾಡಿ. ನಂತರ ಅಲ್ಲಿಯೇ ಕಾಣಿಸಿಕೊಳ್ಳುವ ಡೌನ್‌ಲೋಡ್‌ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ. ಇದರ ಜೊತೆಗೆ ನಿಮ್ಮ ಡಿವೈಸ್‌ನಲ್ಲಿ ಆಪ್‌ ರನ್ ಆಗುವುದನ್ನು ಖಚಿತಪಡಿಸಿಕೊಳ್ಳಲು nodpi ವೇರಿಯಂಟ್ ಅನ್ನು ಸಹ ಡೌನ್‌ಲೋಡ್ ಮಾಡಬೇಕಿದೆ. ಇನ್ನು ಡೌನ್‌ಲೋಡ್‌ ಸಮಯದಲ್ಲಿ 'ಡೌನ್‌ಲೋಡ್‌ ಎನಿವೇ' ಮೇಲೆ ಟ್ಯಾಪ್‌ ಮಾಡಬೇಕಿದೆ. ಇದಾದ ನಂತರ ನೋಟಿಫಿಕೇಶನ್‌ ಬರುತ್ತದೆ. ಅದನ್ನು ಓಪನ್‌ ಮಾಡಿ ಟ್ಯಾಪ್‌ ಮಾಡಿದರೆ ಅಪ್‌ಡೇಟ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಟ್ಯಾಪ್‌ ಮಾಡಿ.

ಪ್ರಯೋಜನವೇನು?

ಪ್ರಯೋಜನವೇನು?

ಗೂಗಲ್‌ ಪ್ಲೇ ಸರ್ವಿಸ್‌ ಅನ್ನು ಅಪ್‌ಡೇಟ್‌ ಮಾಡುವುದರಿಂದ ಹಲವು ಉಪಯೋಗ ಆಗುತ್ತದೆ. ಗೂಗಲ್‌ ಪ್ಲೇ ಸರ್ವಿಸ್‌ ನಿಮ್ಮ ಸ್ಮಾರ್ಟ್‌ಫೋನ್‌ಗೆ‌ ಯಾವಾಗಲೂ ಭದ್ರತೆ ನೀಡುತ್ತದೆ. ಜೊತೆಗೆ ನಾವು ಯಾವುದಾದರೂ ಆಪ್‌ಅನ್ನು ಇನ್‌ಸ್ಟಾಲ್‌ ಮಾಡುವಾಗ ಅದು ಮಾಲ್‌ವೇರ್‌ ಹೊಂದಿದೆಯೇ?, ಇಲ್ಲವೇ ಎಂಬುದನ್ನು ತಿಳಿದುಕೊಂಡು ನಮಗೆ ತಿಳಿಸುತ್ತದೆ. ಹೀಗಾಗಿ ನಾವು ಎಚ್ಚರಿಕೆ ವಹಿಸಬಹುದಾಗಿದೆ.

Best Mobiles in India

English summary
Google Play Service plays an important role in Android devices. If you face any problem while updating this Google Play service then follow these steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X