Voter Id: ವೋಟರ್ ಐಡಿಯನ್ನು ಮನೆಯಲ್ಲಿಯೇ ಅಪ್‌ಡೇಟ್ ಮಾಡಲು ಹೀಗೆ ಮಾಡಿ
ಈಗಂತೂ ಎಲ್ಲವೂ ಆನ್‌ಲೈನ್‌ನಲ್ಲೇ (Online) ಸುಲಭವಾಗಿ ನಡೆಯುತ್ತವೆ. ಆದರೆ ಕೆಲವರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ. ಈ ನಡುವೆ ಆನ್‌ಲೈನ್ ಟೂಲ್ಸ್ ಮೂಲಕ ಮತದಾರರು ತಮ್ಮ ವೋಟರ್ ಐಡಿ (Voter Id) ಮಾಹಿತಿಯನ್ನು ನವೀಕರಿಸಬಹುದಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿಶೇಷ ಕೊಡುಗೆ ಕೊಟ್ಟಂತೆ ಆಗಲಿದೆ.
ಹೌದು, ಮತದಾನದ ಬಗ್ಗೆ ಹಾಗೂ ಮತದಾನದ ಗುರುತಿನ ಚೀಟಿ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗದ ವಾರ್ಷಿಕ ಉಪಕ್ರಮವಾದ ಜನವರಿ 25 ರಂದು ಅಂದರೆ ಇಂದು ರಾಷ್ಟ್ರವು 14 ನೇ ರಾಷ್ಟ್ರೀಯ ಮತದಾರರ ದಿನವನ್ನು (National Voter's Day) ಆಚರಣೆ ಮಾಡಿಕೊಳ್ಳುತ್ತಿದೆ. ಈ ನಡುವೆ ನಾಗರಿಕರು ಈಗ ತಮ್ಮ ಮತದಾರರ ಐಡಿ ವಿವರಗಳನ್ನು ಸುಲಭವಾಗಿ ಅಪ್‌ಡೇಟ್ ಮಾಡಲು ಅನುಕೂಲ ಕಲ್ಪಿಸಿಕೊಡಲಾಗಿದೆ. ಹಾಗಿದ್ರೆ, ಬನ್ನಿ ಏನೆಲ್ಲಾ ಅಪ್‌ಡೇಟ್ ಮಾಡಬಹುದು?, ಹೇಗೆ ಮಾಡಬಹುದು ಅನ್ನೋ ಮಾಹಿತಿಯನ್ನು ಇಲ್ಲಿ ಗಮನಿಸೋಣ.

ಮತದಾನದ ಗುರುತಿನ ಚೀಟಿ ನವೀಕರಣ: ಲೋಕಸಭಾ ಚುನಾವಣೆಗೆ (Lok Sabha Elections) ಇನ್ನೇನು ಕೆಲವೇ ವಾರಗಳು ಬಾಕಿ ಇದೆ. ಈ ವೇಳೆ ಯಾರೆಲ್ಲಾ ಹೆಸರು ಬದಲು ಮಾಡಿಕೊಂಡಿದ್ದಾರೋ ಅಥವಾ ವಿಳಾಸ ಬದಲು ಮಾಡಿಕೊಂಡಿದ್ದಾರೋ ಅವರು ಇದೀಗ ತಮ್ಮ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದಾಗಿದೆ. ಇದಕ್ಕಾಗಿ ನಿಮ್ಮ ಬಳಿ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಸಾಕು.
ಮತದಾರರ ಗುರುತಿನ ಚೀಟಿಯಲ್ಲಿ ಆನ್‌ಲೈನ್ ಬದಲಾವಣೆಗಳನ್ನು ಮಾಡಲು ಈ ಹಂತ ಅನುಸರಿಸಿ:
ಹಂತ 1 : ಮೊದಲು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್ ಅಥವಾ ಮತದಾರರ ಸಹಾಯವಾಣಿ ಆಪ್‌ಗೆ ಭೇಟಿ ನೀಡಿ. ಇದಾದ ನಂತರದಲ್ಲಿ ಮುಂದುವರಿಯಲು ನಿಮ್ಮ ರಾಜ್ಯವನ್ನು ಆಯ್ಕೆಮಾಡಿ. ಬಳಿಕ ಅಲ್ಲಿ ಕಾಣಿಸಿಕೊಳ್ಳುವ ಫಾರ್ಮ್ 8A ಆಯ್ಕೆಮಾಡಿ. ಇದು ಮತದಾರರ ಐಡಿ ವಿವರಗಳನ್ನು ನವೀಕರಿಸಲು ಇರುವ ಆನ್‌ಲೈನ್ ಫಾರ್ಮ್ ಆಗಿದೆ.

ಹಂತ 2: ಇದಾದ ನಂತರದಲ್ಲಿ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿ. ಅಂದರೆ ನಿಮ್ಮ ಹೆಸರು, ವಿಳಾಸ, ರಾಜ್ಯ ಮತ್ತು ಕ್ಷೇತ್ರದ ಬದಲಾವಣೆಗಳಂತಹ ಅಗತ್ಯವಿರುವ ವಿವರಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ನಂತರ ಸಂಬಂಧಿಸಿದ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಬೇಕಾಗುತ್ತದೆ. ಇದರಲ್ಲಿ ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅನ್ನು ಪುರಾವೆಯಾಗಿ ಅಪ್‌ಲೋಡ್ ಮಾಡಬಹುದು.
ಹಂತ 3: ಇದೆಲ್ಲಾ ಆದ ಮೇಲೆ ಅಂದರೆ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿದ ಬಳಿಕ ನೀವು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಬ್‌ಮಿಟ್ ಮಾಡಬೇಕಾಗುತ್ತದೆ. ಈ ವೇಳೆ ನೀವು ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಲು ನೀವು ಉಲ್ಲೇಖ ಸಂಖ್ಯೆಯನ್ನು ಪಡೆಯುತ್ತೀರಿ. ಇದೆಲ್ಲಾ ಆದ ಮೇಲೆ ಆಯೋಗ ಡಾಕ್ಯುಮೆಂಟ್ ಅನ್ನು ಪರಿಶೀಲನೆ ಮಾಡಿ, ಬದಲಾವಣೆಗಳನ್ನು ನವೀಕರಣ ಮಾಡಿ ಮತದಾರರ ಗುರುತಿನ ಚೀಟಿಯಲ್ಲಿ ಅದನ್ನು ಸೇರಿಸುತ್ತದೆ.

ಬದಲಾವಣೆ ಮಾಡಲು ನಾಲ್ಕು ಅಗತ್ಯ ಚುನಾವಣಾ ಆಪ್‌ಗಳು:
ನೀವು ನಿಮ್ಮ ವೋಟರ್ ಐಡಿಯಲ್ಲಿ ಬದಲಾವಣೆ ಮಾಡಲು ಅಥವಾ ಇನ್ಯಾವುದೇ ಚುನಾವಣೆ ಸಂಬಂಧ ಮಾಹಿತಿ ಪಡೆಯಲು ಸುಲಭ ಆಗಲು ನಾಲ್ಕು ಆಪ್‌ಗಳನ್ನು ಆಯೋಗ ಪರಿಚಯಿಸಿದೆ. ಅದರಲ್ಲಿ ವೋಟರ್ ಹೆಲ್ಪ್‌ಲೈನ್ ಆಪ್, ಸಕ್ಷಮ್ ಆಪ್, cVIGIL ಆಪ್, ವೋಟರ್ ಟರ್ನೌಟ್ ಆಪ್(Voter Helpline App, Saksham App, cVIGIL App, Voter Turnout App.).
ವೋಟರ್ ಹೆಲ್ಪ್‌ಲೈನ್ ಆಪ್ ಮತದಾರರ ಗುರುತಿನ ಚೀಟಿಗಳು, ಮತದಾರರ ಪಟ್ಟಿಗಳು ಮತ್ತು ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಸಕ್ಷಮ್ ಆಪ್ ಅನ್ನು ವಿಶೇಷ ಚೇತನರಿಗೆ ವಿನ್ಯಾಸಗೊಳಿಸಲಾಗಿದೆ (ದೈಹಿಕವಾಗಿ ಅಂಗವಿಕಲ), ಇದು ಚುನಾವಣಾ ಪ್ರಕ್ರಿಯೆಯಲ್ಲಿ ಅವರ ಪ್ರವೇಶವನ್ನು ಖಚಿತಪಡಿಸುತ್ತದೆ. cVIGIL ಆಪ್ ಒಂದು ಮೇಲ್ವಿಚಾರಣಾ ವ್ಯವಸ್ಥೆ ಆಗಿದ್ದು, ಮೇಲ್ವಿಚಾರಣೆಗಾಗಿ ಚುನಾವಣಾ ಆಯೋಗದೊಂದಿಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡಲು ಅನುಮತಿಸುತ್ತದೆ.

ವೋಟರ್ ಟರ್ನೌಟ್ ಆಪ್ ಅನ್ನು ಮತದಾನದ ಶೇಕಡಾವಾರು ಬಗ್ಗೆ ನೈಜ ಸಮಯದ ಮಾಹಿತಿಯನ್ನು ಪಡೆಯಲು ಬಳಕೆ ಮಾಡಬಹುದಾಗಿದೆ. ಈ ಆಪ್‌ಗಳು ಮತ್ತು ಆನ್‌ಲೈನ್ ಟೂಲ್ಸ್ ಸಹಾಯದಿಂದ, ಮತದಾರರು ತಮ್ಮ ಮಾಹಿತಿಯನ್ನು ನವೀಕರಿಸಬಹುದಾಗಿದೆ. ಇದರ ಜೊತೆಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸಕ್ರಿಯವಾಗಿ ಮಾಹಿತಿ ನೀಡಬಹುದಾಗಿದೆ.


Click it and Unblock the Notifications








