Home
ಸುದ್ದಿಜಾಲ

ಸರ್ಕಾರದ ಮಹತ್ವದ ನಿರ್ಧಾರ; eSanjeevani ಆಪ್‌ ಬಳಸಿ ಮನೆಯಿಂದಲೇ ಚಿಕಿತ್ಸೆ ಪಡೆಯಿರಿ!

ಸರ್ಕಾರ ತನ್ನ ಬಹುಪಾಲು ಎಲ್ಲಾ ಇಲಾಖೆಗಳನ್ನು ಡಿಜಿಟಲೀಕರಣ ಮಾಡುತ್ತಿದ್ದು, ಇದಕ್ಕೆ ಆರೋಗ್ಯ ಇಲಾಖೆ ಸಹ ಹೊರತಲ್ಲ. ಈ ಹಿಂದೆ ರೋಗಿಗಳು ಆರೋಗ್ಯ ಸೇವೆ ಪಡೆಯಬೇಕು ಎಂದರೆ ಗಂಟೆಗಟ್ಟಲೆ ಕ್ಯೂ ನಿಲ್ಲುವ ಹಾಗೂ ಚಿಕಿತ್ಸೆ ಪಡೆದುಕೊಳ್ಳಲು ಹರಸಾಹಸ ಪಡುವ ವ್ಯವಸ್ಥೆ ಇತ್ತು.ಆದರೆ, ಇದಕ್ಕೆ ತಿಲಾಂಜಲಿ ಇಡಲಾಗಿದೆ.

ಹೌದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಹೊಸ ಆಪ್‌ ಅನ್ನು ಪರಿಚಯಿಸಲಾಗಿದ್ದು, ಇದನ್ನು ಕೆಲವು ಮನ್ ಕಿ ಬಾತ್ ನ 98 ನೇ ಸಂಚಿಕೆಯಲ್ಲಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ. ಅದರಂತೆ ಈ ಆಪ್‌ ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಹಾಗಿದ್ರೆ, ಈ ಆಪ್‌ ಹೇಗೆಲ್ಲಾ ಪ್ರಯೋಜನ, ಇದರ ಲಾಗಿನ್‌ ಪ್ರಕ್ರಿಯೆ ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಸರ್ಕಾರದ ಮಹತ್ವದ ನಿರ್ಧಾರ;eSanjeevaniಆಪ್‌ ಬಳಸಿ ಮನೆಯಿಂದಲೇ ಚಿಕಿತ್ಸೆ ಪಡೆಯಿರಿ

ಇ-ಸಂಜೀವಿನಿ ಅಪ್ಲಿಕೇಶನ್ (eSanjeevani app)

ಇ-ಸಂಜೀವಿನಿ ಆಪ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ (MoHFW) ಚಾಲಿತವಾಗಲಿದ್ದು, ಇದು ಟೆಲಿಮೆಡಿಸಿನ್ ಆಪ್ ಆಗಿದೆ. ಈ ಮೂಲಕ ಓರ್ವ ವೈದ್ಯರಿಂದ ಮ್ತೋರ್ವ ವೈದ್ಯರಿಗೆ ಹಾಗೂ ವೈದ್ಯರಿಂದ ರೋಗಿಗಳಿಗೆ ಎಲ್ಲೇ ಇದ್ದರೂ ಸಹ ಅಂದರೆ ಯಾವುದೇ ದೂರ ಊರಿನಲ್ಲಿದ್ದರೂ ಅಗತ್ಯ ಸೇವೆ ಒದಗಿಸಲು ಬಹಳ ವ್ಯವಸ್ಥಿತವಾಗಿ ಈ ಆಪ್‌ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಇ-ಸಂಜೀವಿನಿಯಿಂದ ಸಿಗುವ ಸೇವೆ ಏನು?

ಈ ಆಪ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ ರೋಗಿಗಳ ನೋಂದಣಿ, ಟೋಕನ್ ಕ್ರಿಯೇಟ್‌, ಸರದಿ ನಿರ್ವಹಣೆ, ವೈದ್ಯರೊಂದಿಗೆ ಆಡಿಯೋ-ವಿಡಿಯೋ ಸಮಾಲೋಚನೆ, ಇ-ಪ್ರಿಸ್ಕ್ರಿಪ್ಷನ್ ಮತ್ತು ಎಸ್‌ಎಮ್‌ಎಸ್‌ ಹಾಗೂ ಇಮೇಲ್ ನೋಟಿಫಿಕೇಶನ್‌ ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಆಪ್‌ನಲ್ಲಿ ರಾಜ್ಯದ ವೈದ್ಯರು ತಮ್ಮದೇ ಆದ ರೀತಿಯಲ್ಲಿ ಸೇವೆಯಲ್ಲಿ ನಿರತರಾಗುತ್ತಾರೆ.

ಹಾಗಿದ್ರೆ, ಇ-ಸಂಜೀವಿನಿಯಲ್ಲಿ ಟೋಕನ್ ಅನ್ನು ನೋಂದಾಯಿಸುವುದು/ಜನರೇಟ್ ಮಾಡುವುದು ಹೇಗೆ ಎಂಬುದನ್ನು ಸರಳ ಹಂತದ ಮೂಲಕ ತಿಳಿಸಿಕೊಡಲಾಗಿದೆ ಗಮನಿಸಿ.

ಸರ್ಕಾರದ ಮಹತ್ವದ ನಿರ್ಧಾರ;eSanjeevaniಆಪ್‌ ಬಳಸಿ ಮನೆಯಿಂದಲೇ ಚಿಕಿತ್ಸೆ ಪಡೆಯಿರಿ

ಹಂತ 1
ಮೊದಲು ನಿಮ್ಮ ಫೋನ್‌ನಲ್ಲಿ ಇ-ಸಂಜೀವಿನಿ ಅಧಿಕೃತ ಸೈಟ್‌ಗೆ ಭೇಟಿ ನೀಡಿ ಇದು ಕಷ್ಟ ಎಂದಾದರೆ ಗೂಗಲ್‌ ಪ್ಲೇ ಸ್ಟೋರ್‌ ಹಾಗೂ ಆಪಲ್‌ ಸ್ಟೋರ್‌ ಮೂಲಕ ಇ-ಸಂಜೀವಿನಿ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ. ಇದಕ್ಕೆ ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ಇದಾದ ನಂತರ ಪೇಜ್‌ನ ಮೇಲ್ಭಾಗದಲ್ಲಿ ರೋಗಿಗಳ ನೋಂದಣಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಮೇಲೆ ಕ್ಲಿಕ್ ಮಾಡಿ.

ಹಂತ 2
ನಂತರದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬಳಿಕ ಅಲ್ಲೇ ಓಟಿಪಿಗಾಗಿ ಕ್ಲಿಕ್‌ ಮಾಡಿ ಎಂಬ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿದರೆ ನೀವು ನಮೂದು ಮಾಡಿರುವ ಮೊಬೈಲ್‌ ಸಂಖ್ಯೆಗೆ ಒಂದು ಓಟಿಪಿ ನಂಬರ್ ಬರುತ್ತದೆ. ಅದನ್ನು ಕೇಳಲಾದ ಜಾಗದಲ್ಲಿ ಭರ್ತಿ ಮಾಡಿ.

ಹಂತ 3
ಇದಾದ ಬಳಿಕ ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಅಗತ್ಯವಾದ ಎಲ್ಲಾ ಮಾಹಿತಿಯನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ನಂತರ ಟೋಕನ್‌ ಜನರೇಟ್‌ ಮಾಡಲು ಅಲ್ಲಿ ನೀಡಲಾದ ಬಟನ್‌ ಮೇಲೆ ಟ್ಯಾಪ್‌ ಮಾಡಿ. ಇನ್ನು ಈ ವೇಳೆ ನಿಮ್ಮ ಬಳಿ ಯಾವುದಾದರೂ ನಿಮ್ಮ ಆರೋಗ್ಯ ಸಂಬಂಧಿ ದಾಖಲಾತಿ ಇದ್ದರೆ ಅದನ್ನು ಅಪ್‌ಲೋಡ್‌ ಮಾಡಬಹುದು. ಇದರಿಂದ ವೈದ್ಯರಿಗೆ ಸಹಾಯವಾಗುತ್ತದೆ.

ಹಂತ 4
ಮೇಲೆ ತಿಳಿಸಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ನೀವು ಎಸ್‌ಎಮ್‌ಎಸ್‌ ಮೂಲಕ ರೋಗಿಯ ನೋಂದಣಿ ಅಥವಾ ಟೋಕನ್‌ ಸಂಖ್ಯೆಯನ್ನು ಪಡೆಯುತ್ತೀರ. ಇದಾದ ನಂತರದಲ್ಲಿ ನೀಡಲಾದ ಟೋಕನ್ ಐಡಿಯೊಂದಿಗೆ ಪೋರ್ಟಲ್‌ಗೆ ಮತ್ತೊಮ್ಮೆ ಲಾಗಿನ್ ಮಾಡಬೇಕಿದೆ. ಇದಕ್ಕಾಗಿ ಅಲ್ಲಿ Patient Login ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 5
ಇನ್ನು Patient Login ಮೂಲಕ ನೀವು ಆರೋಗ್ಯ ಸೇವೆ ಪಡೆಯಲು ಸಿದ್ಧವಾಗಬಹುದು. ಇದಕ್ಕಾಗಿ ನೀವು ಅಪಾಯಿಂಟ್ಮೆಂಟ್ ಪಡೆದುಕೊಳ್ಳಲು ನಿಮ್ಮ ಹತ್ತಿರದ ಅಥವಾ ಯಾವ ಆಸ್ಪತ್ರೆಯಲ್ಲಿ ಸೇವೆ ಪಡೆಯಲು ಮುಂದಾಗುತ್ತೀರೋ ಆ ಆಸ್ಪತ್ರೆಯ ಹೆಸರನ್ನು ಎಂಟ್ರಿ ಮಾಡಬಹುದಾಗಿದೆ. ಆಸ್ಪತ್ರೆಯಲ್ಲಿ ಹೆಚ್ಚಿನ ಅಪಾಯಿಂಟ್ಮೆಂಟ್ ಗಳಿದ್ದರೆ ನಿಮಗೆ ಸರಣಿ ಸಂಖ್ಯೆಯನ್ನು ಒದಗಿಸಲಾಗುತ್ತದೆ.

Best Mobiles in India

English summary
eSanjeevini app will be powered by the Ministry of Health and Family Welfare (MoHFW) and will help patients get treatment easily.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+