Home
ಸುದ್ದಿಜಾಲ

ಮೊಬೈಲ್‌ನಲ್ಲಿ ಒಂದೇ ಬಾರಿಗೆ ಎರಡು ಆಪ್‌ ಓಪನ್‌ ಮಾಡಲು ಈ ಕ್ರಮ ಅನುಸರಿಸಿ!

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ ಇರುವವರು ಸುಮ್ಮನೆ ಕೂರುವುದಿಲ್ಲ. ಯಾಕೆಂದರೆ ಕೆಲವು ಆಕರ್ಷಕ ಫೀಚರ್ಸ್‌ಗಳು ಬಳಕೆದಾರರನ್ನು ಸೆಳೆಯುತ್ತಿರುತ್ತವೆ. ಈ ವಿಶೇಷ ಫೀಚರ್ಸ್‌ಗಳಲ್ಲಿ ಒಂದೇ ಬಾರಿಗೆ ಎರಡು ಆಪ್‌ಗಳನ್ನು ಓಪನ್‌ ಮಾಡಬಹುದು. ಈ ಮೂಲಕ ಒಂದೇ ಡಿಸ್‌ಪ್ಲೇ ಮೂಲಕ ಒಂದು ಬದಿಯಲ್ಲಿ ವಿಡಿಯೋ ವೀಕ್ಷಣೆ ಮಾಡಿದರೆ ಇನ್ನೊಂದು ಬದಿಯಲ್ಲಿ ಮತ್ಯಾವುದೋ ಆಪ್‌ ಬಳಕೆ ಮಾಡಬಹುದು.

ಮೊಬೈಲ್‌ನಲ್ಲಿ ಒಂದೇ ಬಾರಿಗೆ ಎರಡು ಆಪ್‌ ಓಪನ್‌ ಮಾಡಲು ಈ ಕ್ರಮ ಅನುಸರಿಸಿ!

ಹೌದು, ಸಾಮಾನ್ಯವಾಗಿ ಯಾವುದೇ ದೊಡ್ಡ ಡಿಸ್‌ಪ್ಲೇ ಆಯ್ಕೆ ಇರುವ ಡಿವೈಸ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ಆಪ್‌ಗಳನ್ನು ಓಪನ್‌ ಮಾಡಿ ಒಂದೇ ಬಾರಿಗೆ ಒಂದೇ ಡಿಸ್‌ಪ್ಲೇ ಮೂಲಕ ವೀಕ್ಷಣೆ ಮಾಡಬಹುದು. ಅದರಂತೆ ಫೋನ್‌ನಲ್ಲಿಯೂ ಸಹ ಈ ಸೌಕರ್ಯ ಇದ್ದು, ಒಂದು ಬಾರಿಗೆ ಎರಡು ಆಪ್‌ಗಳನ್ನ ಬಳಕೆ ಮಾಡಬಹುದಾಗಿದೆ. ಈ ಮೂಲಕ ಬಳಕೆದಾರರು ಒಂದು ಬದಿಯಲ್ಲಿ ವಿಡಿಯೋ ವೀಕ್ಷಣೆ ಮಾಡಬಹುದಾಗಿದ್ದರೆ, ಮತ್ತೊಂದು ಬದಿಯ ಡಿಸ್‌ಪ್ಲೇನಲ್ಲಿ ಮತ್ಯಾವುದೋ ಅಗತ್ಯ ಆಪ್‌ ಓಪನ್ ಮಾಡಬಹುದು.

ಸ್ಪ್ಲಿಟ್ ಸ್ಕ್ರೀನ್

ಸ್ಪ್ಲಿಟ್ ಸ್ಕ್ರೀನ್ ಎನ್ನುವುದು ಯಾವುದೇ ಡಿವೈಸ್‌ಗಳಲ್ಲಿ ಒಂದು ವಿಶೇಷ ಫೀಚರ್ಸ್‌ ಆಗಿದ್ದು, ಬಳಕೆದಾರರಿಗೆ ಒಂದೇ ಡಿಸ್‌ಪ್ಲೇನಲ್ಲಿ ಏಕಕಾಲದಲ್ಲಿ ಎರಡು ವಿಭಿನ್ನ ಅಪ್ಲಿಕೇಶನ್‌ಗಳನ್ನು ವೀಕ್ಷಿಸಲು ಮತ್ತು ಸಂವಹನ ಮಾಡಲು ಅನುವು ಮಾಡಿಕೊಡುತ್ತದೆ. ಹೆಸರೇ ಸೂಚಿಸುವಂತೆ ಸ್ಪ್ಲಿಟ್ ಸ್ಕ್ರೀನ್ ಫೀಚರ್ಸ್‌ ಡಿಸ್‌ಪ್ಲೇಯನ್ನು ಎರಡು ಅಥವಾ ಹೆಚ್ಚಿನ ವಿಭಾಗಗಳಾಗಿ ವಿಂಗಡಿಸುತ್ತದೆ.

ಇನ್ನು ಪ್ರತಿ ವಿಭಾಗವು ಪ್ರತ್ಯೇಕ ಅಪ್ಲಿಕೇಶನ್ ತೆರೆಯಲು ಅನುವು ಮಾಡಿಕೊಡಲಿದ್ದು, ಈ ವಿಭಾಗದ ಗಾತ್ರವನ್ನು ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಈಗಾಗಲೇ ತೆರೆದ ಆಪ್‌ಅನ್ನು ಬೇಕೆಂದಾಗ ಕ್ಲೋಸ್‌ ಮಾಡಿ ಬೇಕಾದ ಆಪ್‌ನಲ್ಲಿ ತಕ್ಷಣವೇ ತೆರೆಯುವ ಅವಕಾಶ ಸಹ ಇದರಲ್ಲಿದೆ. ಇದಕ್ಕಾಗಿ ನೀವು ಈ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ಒಂದೇ ಬಾರಿಗೆ ಎರಡು ಆಪ್‌ ಓಪನ್‌ ಮಾಡಬಹುದು.

ಮೊಬೈಲ್‌ನಲ್ಲಿ ಒಂದೇ ಬಾರಿಗೆ ಎರಡು ಆಪ್‌ ಓಪನ್‌ ಮಾಡಲು ಈ ಕ್ರಮ ಅನುಸರಿಸಿ!

ಹಂತ 1
ಸ್ಪ್ಲಿಟ್-ಸ್ಕ್ರೀನ್ ಮೋಡ್‌ನಲ್ಲಿ ನೀವು ಬಳಸಲು ಬಯಸುವ ಆಪ್‌ ಅನ್ನು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ ನಲ್ಲಿ ಓಪನ್‌ ಮಾಡಿ.

ಹಂತ 2
ಇದಾದ ನಂತರ ಇತ್ತೀಚಿನ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಓಪನ್‌ ಮಾಡಬೇಕು. ಈ ಆಯ್ಕೆ ಡಿಸ್‌ಪ್ಲೇನ ಕೆಳಭಾಗದಲ್ಲಿರುತ್ತದೆ ಗಮನಿಸಿ.

ಹಂತ 3
ಇನ್ನು ಯಾವ ಆಪ್‌ ಓಪನ್‌ ಮಾಡಿದ್ದೀರೋ ಆ ಆಪ್‌ ಅನ್ನು ಡಿಸ್‌ಪ್ಲೇನ ಅರ್ಧದಷ್ಟು ಭಾಗದಲ್ಲಿ ಸೆಟ್‌ ಮಾಡಲು ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ.

ಹಂತ 4
ಮೊದಲ ಆಪ್‌ ಅರ್ಧ ಸ್ಕ್ರೀನ್‌ಗೆ ಸೆಟ್‌ ಆದ ನಂತರ ಇತ್ತೀಚಿನ ಅಪ್ಲಿಕೇಶನ್‌ಗಳ ಪಟ್ಟಿಯಿಂದ ಸ್ಪ್ಲಿಟ್-ಸ್ಕ್ರೀನ್ ಮೋಡ್‌ನಲ್ಲಿ ನೀವು ಬಳಸಲು ಬಯಸುವ ಎರಡನೇ ಆಪ್ ಆಯ್ಕೆಮಾಡಿ. ಇದು ತಂತಾನೆ ಡಿಸ್‌ಪ್ಲೇನಲ್ಲಿ ಉಳಿದ ಅರ್ಧಭಾಗಕ್ಕೆ ಸೆಟ್‌ ಆಗುತ್ತದೆ.

ಮೊಬೈಲ್‌ನಲ್ಲಿ ಒಂದೇ ಬಾರಿಗೆ ಎರಡು ಆಪ್‌ ಓಪನ್‌ ಮಾಡಲು ಈ ಕ್ರಮ ಅನುಸರಿಸಿ!

ಇಷ್ಟೆಲ್ಲಾ ಮಾಡುವುದು ಕಷ್ಟ ಎಂದು ನಿಮಗನಿಸಿದರೆ ನೇರವಾಗಿಯೂ ಈ ಫೀಚರ್ಸ್‌ ಬಳಕೆ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಇತ್ತೀಚಿನ ಅಪ್ಲಿಕೇಶನ್‌ಗಳ ಬಟನ್ ಅನ್ನು ಕೆಲವು ಹೊತ್ತು ಲಾಂಗ್‌ ಪ್ರೆಸ್‌ ಮಾಡಿ ಹಿಡಿದುಕೊಂಡರೆ ಸಾಕು.

ಈ ವಿಷಯ ನಿಮ್ಮ ಗಮನಕ್ಕಿರಲಿ

ಯಾವುದೇ ಆಂಡ್ರಾಯ್ಡ್ ಡಿವೈಸ್‌ ಸಹ ವಿವಿಧ ಸಾಮರ್ಥ್ಯದ ಫೀಚರ್ಸ್‌ಗಳನ್ನು ಪಡೆದುಕೊಂಡಿರುತ್ತದೆ. ಹೀಗಾಗಿ ಎಲ್ಲಾ ಆಪ್‌ಗಳು ಎಲ್ಲಾ ಡಿವೈಸ್‌ಗಳಲ್ಲಿ ಸ್ಪ್ಲಿಟ್-ಸ್ಕ್ರೀನ್ ಮೋಡ್‌ ಬೆಂಬಲಿಸುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ. ಈ ಮೂಲಕ ನೀವು ಮೇಲಿನ ಸುಲಭ ಮಾರ್ಗಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಫೋನ್‌ನಲ್ಲಿ ಮಲ್ಟಿ ಟಾಸ್ಕ್‌ ಪ್ರಕ್ರಿಯೆ ನಡೆಸಬಹುದಾಗಿದೆ.

Best Mobiles in India

English summary
Split screen is a feature on devices that allows users to view and interact with two different applications simultaneously on the same screen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+