ಆಧಾರ್ ನೊಂದಿಗೆ ಮೊಬೈಲ್‌ ನಂ & ಇಮೇಲ್ ಐಡಿ ಲಿಂಕ್ ಆಗಿರುವುದನ್ನು ಪರಿಶೀಲಿಸುವುದು ಹೇಗೆ? ಮತ್ತು ಯಾಕೆ?

Written By:

ಕೇಂದ್ರ ಸರಕಾರವೂ ಆಧಾರ್ ಸೇವೆಯನ್ನು ತೀರಾ ಗಂಭೀರವಾಗಿ ಪರಿಗಣಿಸಿದ್ದು, ಈ ಹಿನ್ನಲೆಯಲ್ಲಿ ದೇಶದ ನಾಗರೀಕರಿಗೆ ಇದ್ದು ಕಡ್ಡಾಯವಾಗಿ ಬೇಕಾದ ಡಾಕ್ಯುಮೆಂಟ್‌ಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ನಿಮ್ಮ ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆ, ಪ್ಯಾನ್‌ಕಾರ್ಡ್‌ ನಂಬರ್ ಮತ್ತು ಬ್ಯಾಂಕ್ ಖಾತೆಗಳನ್ನು ಕಡ್ಡಾಯವಾಗಿ ಜಂಟಿ ಮಾಡಿಸುವಂತೆ ಸೂಚನೆಯನ್ನು ನೀಡಲಾಗಿದೆ.

ಆಧಾರ್ ನೊಂದಿಗೆ ಮೊಬೈಲ್‌ ನಂ & ಇಮೇಲ್ ಐಡಿ ಲಿಂಕ್ ಆಗಿರುವುದನ್ನು ಪರಿಶೀಲಿಸಿ

ಓದಿರಿ: ಇಲ್ಲಿರುವ ಐದು ಆಫರ್‌ಗಳಲ್ಲಿ ಜಿಯೋ-BSNL ಬೆಸ್ಟ್‌: ನೀವು ಯಾವುದನ್ನು ಆಯ್ಕೆ ಮಾಡ್ತೀರಾ..?

ಈಗಾಗಲೇ ಬ್ಯಾಂಕ್ ಖಾತೆಗಳಿಗೆ ಮತ್ತು ಪ್ಯಾನ್‌ಕಾರ್ಡ್‌ಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದ್ದು, ಮೊಬೈಲ್‌ ಸಂಖ್ಯೆಯನ್ನು ಜೋಡಣೆ ಮಾಡುವ ಕಾರ್ಯವೂ ಜೋರಾಗಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ಮತ್ತು ಇಮೇಲ್ ಐಡಿ ಆಧಾರ್ ನೊಂದಿಗೆ ಲಿಂಕ್ ಆಗಿದೆ ಅಥಾವ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?. ಇದಕ್ಕಾಗಿಯೇ ಉತ್ತರ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ ನಂಬರ್-ಇಮೇಲ್ ಐಡಿ:

ಮೊಬೈಲ್‌ ನಂಬರ್-ಇಮೇಲ್ ಐಡಿ:

ಮೊಬೈಲ್‌ ನಂಬರ್ ಮತ್ತು ಇಮೇಲ್ ಐಡಿಗಳನ್ನು ಆಧಾರ್ KYC ಆಧಾರಿತ ಸುರಕ್ಷತೆಗೆ ಬಳಸಿಕೊಳ್ಳಲಿದ್ದು, ಯಾವುದೇ ಆಧಾರ್ ಸಂಬಂಧಿತ ಸೇವೆಯನ್ನು ಪಡೆಯುವ ಸಂಧರ್ಭದಲ್ಲಿ OTP ಮೇಲ್ ಮತ್ತು ಮೊಬೈಲ್‌ ನಂಬರ್‌ಗಳಿಗೆ ಬರಲಿದ್ದು, ಅದನ್ನು ಬಳಸಿದರೆ ಮಾತ್ರ ಆಧಾರ್ ಸೇವೆಗಳು ದೊರೆಯಲಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಲಿಂಕ್ ಮಾಡುವುದು ಅಗತ್ಯ.

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ತಿಳಿಯುವುದು ಹೇಗೆ..?

ತಿಳಿಯುವುದು ಹೇಗೆ..?

ಮೊಬೈಲ್‌ ನಂಬರ್ ಮತ್ತು ಇಮೇಲ್ ಐಡಿ ಆಧಾರ್ ನೊಂದಿಗೆ ಲಿಂಕ್ ಆಗಿದೆಯೇ ಎಂಬುದನ್ನು ತಿಳಿಯುವ ಸಲುವಾಗಿ ನೀವು UIDAI ಜಾಲತಾಣಕ್ಕೆ ಭೇಟಿ ನೀಡಬೇಕಾಗಿದೆ. ಅಲ್ಲಿ ಆಧಾರ್ ಡೇಟಾ ವೆರಿಫಿಕೇಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರೇ ಅಲ್ಲಿ ನಿಮ್ಮ ಮೊಬೈಲ್‌ ನಂಬರ್ ಮತ್ತು ಇಮೇಲ್ ಐಡಿ ವೈರಿಫೈ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು.

ನೀವೆ ಮಾಡಿ:

ನೀವೆ ಮಾಡಿ:

ಮೊಬೈಲ್‌ ನಂಬರ್ ಮತ್ತು ಇಮೇಲ್ ಐಡಿ ವೈರಿಫೈ ಮಾಡಲು https://resident.uidai.gov.in/verify-email-mobile ತಾಣಕ್ಕೆ ಭೇಟಿ ನೀಡಿ, ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್‌ ನಂಬರ್ ಮತ್ತು ಇಮೇಲ್ ಐಡಿ ದಾಖಲಿಸಬೇಕಾಗಿದೆ. ಇದಾದ ನಂತರದಲ್ಲಿ ಕ್ಯಾಪ್ಷರ್ ಅನ್ನು ಎಂಟ್ರಿ ಮಾಡಿದ ಬಳಿಕ OTP ಬರಲಿದೆ. ನಿಮ್ಮ ಮೊಬೈಲ್‌ ನಂಬರ್ ಮತ್ತು ಇಮೇಲ್ ಐಡಿಗೆ ಬಂದಿರುವ OTP ಎಂಟ್ರಿ ಮಾಡಿದರೆ ಅಲ್ಲಿಯೇ ವೈರಿಫೈ ಆಗಿದೆ ಅಥಾವ ಇಲ್ಲ ಎಂಬುದು ತಿಳಿಯಲಿದೆ.

ಆಗಲಿಲ್ಲವಾದರೆ ಮಾಡುವುದು ಏನು..?

ಆಗಲಿಲ್ಲವಾದರೆ ಮಾಡುವುದು ಏನು..?

ನಿಮ್ಮ ಮೊಬೈಲ್‌ ನಂಬರ್ ಮತ್ತು ಇಮೇಲ್ ಐಡಿ ವೈರಿಫೈ ಆಗಿಲ್ಲವಾದರೆ ಹತ್ತಿರದಲ್ಲೇ ಇರುವ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಅಲ್ಲಿ ನಿಮ್ಮ ಮೊಬೈಲ್‌ ನಂಬರ್ ಮತ್ತು ಇಮೇಲ್ ಐಡಿ ಲಿಂಕ್ ಮಾಡಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
How to verify your Aadhaar linked mobile number and email ID. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot