Home
ಸುದ್ದಿಜಾಲ

ಈ ಹೆಚ್‌ಪಿ ಲ್ಯಾಪ್‌ಟಾಪ್‌ ಬೆಲೆಯಲ್ಲಿ ಭಾರೀ ಇಳಿಕೆ: 74% ರಿಯಾಯಿತಿ!

ಲ್ಯಾಪ್‌ಟಾಪ್‌ಗಳಲ್ಲಿ ವಿವಿಧ ಆಯ್ಕೆಗಳಿದ್ದು, ಬೆಲೆಗೆ ತಕ್ಕಂತಹ ಫೀಚರ್ಸ್‌ಗಳನ್ನು ಹೊಂದಿರಲಿವೆ. ಅದರಂತೆ ನೀವು ಉತ್ತಮ ಲ್ಯಾಪ್‌ಟಾಪ್‌ ಅನ್ನು ಅದರಲ್ಲೂ ದುಬಾರಿ ಬೆಲೆಯ ಲ್ಯಾಪ್‌ಟಾಪ್‌ ಅನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದರೆ ಇದು ಸೂಕ್ತ ಸಮಯ. ಯಾಕೆಂದರೆ ಈ ಲ್ಯಾಲ್‌ಟಾಪ್‌ 74% ಡಿಸ್ಕೌಂಟ್‌ ಪಡೆದುಕೊಂಡಿದೆ.

ಹೌದು, ಲ್ಯಾಪ್‌ಟಾಪ್‌ಗಳು ಹೆಚ್ಚಿನ ಬೆಲೆಯ ಡಿವೈಸ್‌ಗಳಾಗಿದ್ದು, ಹಲವರಿಗೆ ಇವುಗಳನ್ನು ಖರೀದಿ ಮಾಡಲು ಕಷ್ಟಸಾಧ್ಯ. ಅದಾಗ್ಯೂ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು ಆಗಾಗ್ಗೆ ಆಫರ್‌ ಘೋಷಣೆ ಮಾಡುವ ಮೂಲಕ ಈ ರೀತಿಯ ಡಿವೈಸ್‌ಗಳನ್ನು ಸೇಲ್‌ ಮಾಡುತ್ತಿರುತ್ತವೆ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದ ಡಿಸ್ಕೌಂಟ್‌ ಕೆಲವು ಸಮಯದಲ್ಲಿ ಮಾತ್ರ ಲಭ್ಯ. ಅದರಂತೆ ಹೆಚ್‌ಪಿ255G8 ಲ್ಯಾಪ್‌ಟಾಪ್‌(HP255G8 Laptop) 74% ಡಿಸ್ಕೌಂಟ್‌ ಪಡದುಕೊಡಿದ್ದು, ಇದರ ಫೀಚರ್ಸ್‌ ಏನು, ಆಪರ್‌ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಈ ಹೆಚ್‌ಪಿ ಲ್ಯಾಪ್‌ಟಾಪ್‌ ಬೆಲೆಯಲ್ಲಿ ಭಾರೀ ಇಳಿಕೆ: 74% ರಿಯಾಯಿತಿ!

ಹೆಚ್‌ಪಿ 255 G8 ಲ್ಯಾಪ್‌ಟಾಪ್‌ ಡಿಸ್‌ಪ್ಲೇ ವಿವರ: ಈ ಲ್ಯಾಪ್‌ಟಾಪ್‌ ಅನ್ನು ಅಗತ್ಯ ಬೆಲೆಯಲ್ಲಿ ಖರೀದಿ ಮಾಡುವ ಮುನ್ನ ಇದರ ಫೀಚರ್ಸ್‌ಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಅದರಂತೆ ಈ ಲ್ಯಾಪ್‌ಟಾಪ್‌ ‎15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ‎1920 x 1080 ಪಿಕ್ಸೆಲ್ ರೆಸಲ್ಯೂಶನ್‌ ನೀಡಲಿದೆ.

ಹೆಚ್‌ಪಿ 255 G8 ಲ್ಯಾಪ್‌ಟಾಪ್‌ ಪ್ರೊಸೆಸರ್: ಈ ಲ್ಯಾಪ್‌ಟಾಪ್ 3.2 GHz ಗಡಿಯಾರ ವೇಗದ AMD ಅಥ್ಲಾನ್ ಸಿಲ್ವರ್ 3050U ಪ್ರೊಸೆಸರ್ ಅನ್ನು ಹೊಂದಿದ್ದು, DOS ಆಪರೇಟಿಂಗ್ ಸಿಸ್ಟಮ್ ಪಡೆದಿದೆ. ಜೊತೆಗೆ 8 GB RAM ಹಾಗೂ ‎256 GB ಇಂಟರ್‌ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ.

ಹೆಚ್‌ಪಿ 255 G8 ಲ್ಯಾಪ್‌ಟಾಪ್‌ ಬ್ಯಾಟರಿ ಹಾಗೂ ಇತರೆ: ಈ ಲ್ಯಾಪ್‌ಟಾಪ್ ಉತ್ತಮ-ಗುಣಮಟ್ಟದ Li-Ion ಬ್ಯಾಟರಿಯನ್ನು ಹೊಂದಿದ್ದು, ನೀವು ಎಷ್ಟೇ ಸಮಯದವರೆಗೂ ಕೆಲಸ ಮಾಡಿದರೂ ಸಹ ಹೆಚ್ಚು ಬಿಸಿಯಾಗುವುದಿಲ್ಲ ಅಥವಾ ಬ್ಯಾಟರಿ ಊದಿಕೊಳ್ಳುವುದಿಲ್ಲ ಈ ಮೂಲಕ ದೀರ್ಘಸಮಯದ ಬಾಳಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಎರಡು ಯುಎಸ್‌ಬಿ-ಎ 3.2 ಜನ್‌ 1 ಪೋರ್ಟ್‌ಗಳು ಹಾಗೂ ಒಂದು ಯುಎಸ್‌ಬಿ ಟೈಪ್‌ ಸಿ C 3.2 ಜನ್‌ 1 ಪೋರ್ಟ್‌ ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಒಂದು ಹೆಚ್‌ಡಿಎಮ್‌ಐ 1.4b ಪೋರ್ಟ್‌, ಒಂದು ಆರ್‌ಜೆ-45 ಹಾಗೂ ಎಸಿ ಪವರ್ ಪೋರ್ಟ್ ಸೇರಿದಂತೆ ಹೆಡ್‌ಫೋನ್/ಮೈಕ್ರೊಫೋನ್ ಕಾಂಬೊ ಜ್ಯಾಕ್‌ಗೆ ಇದು ಬೆಂಬಲ ನೀಡಲಿದೆ. ಇದರೊಂದಿಗೆ ಪ್ರೀಮಿಯಂ ಕೀಬೋರ್ಡ್ ಆಯ್ಕೆ ಪಡೆದುಕೊಂಡಿದ್ದು, ಅತ್ಯಂತ ಆಕರ್ಷಕವಾಗಿದೆ. ಇದರ ಜೊತೆಗೆ ಈ ಲ್ಯಾಪ್‌ಟಾಪ್‌ SD, SDHC ಮತ್ತು SDXC ಅನ್ನು ಬೆಂಬಲಿಸುತ್ತದೆ.

ಈ ಹೆಚ್‌ಪಿ ಲ್ಯಾಪ್‌ಟಾಪ್‌ ಬೆಲೆಯಲ್ಲಿ ಭಾರೀ ಇಳಿಕೆ: 74% ರಿಯಾಯಿತಿ!

ಹೆಚ್‌ಪಿ 255 G8 ಬೆಲೆ ವಿವರ: ಈ ಲ್ಯಾಪ್‌ಟಾಪ್‌ ಒಂದು ರೂ. ಗಳ ಕಡಿಮೆ ಬೆಲೆಯೊಂದಿಗೆ ಒಂದು ಲಕ್ಷ ಬೆಲೆಯನ್ನು ಹೊಂದಿದೆ. ಅಂದರೆ ಇದಕ್ಕೆ 99,999 ರೂ. ಗಳು. ಆದರೆ ಅಮೆಜಾನ್‌ನಲ್ಲಿ 74% ಡಿಸ್ಕೌಂಟ್‌ ಘೋಷಣೆ ಮಾಡಲಾಗಿದ್ದು, ಈ ಮೂಲಕ ನೀವು ಕೇವಲ 25,999 ರೂ. ಗಳಲ್ಲಿ ಈ ಲ್ಯಾಪ್‌ಟಾಪ್‌ ಖರೀದಿ ಮಾಡಬಹುದಾಗಿದೆ. ಹೀಗಾಗಿ ನೀವು 74,000 ರೂ. ಗಳನ್ನು ಉಳಿಸಬಹುದಾಗಿದೆ.

ಈ ಹೆಚ್‌ಪಿ ಲ್ಯಾಪ್‌ಟಾಪ್‌ ಬೆಲೆಯಲ್ಲಿ ಭಾರೀ ಇಳಿಕೆ: 74% ರಿಯಾಯಿತಿ!

ಅದಾಗ್ಯೂ ಇನ್ನೂ ಹೆಚ್ಚಿನ ಡಿಸ್ಕೌಂಟ್‌ ಬೇಕು ಎಂದರೆ ಬ್ಯಾಂಕ್‌ ಆಫರ್‌ಗಳು ಹಾಗೂ ವಿನಿಮಯ ಆಫರ್‌ ಗಳನ್ನು ಬಳಕೆ ಮಾಡಿಕೊಂಡು ಈ ಲ್ಯಾಪ್‌ಟಾಪ್‌ ಖರೀದಿ ಮಾಡಬಹುದಾಗಿದೆ. ಈ ಮೂಲಕ ನೀವು ಈ ಲ್ಯಾಪ್‌ಟಾಪ್ ಮೇಲೆ 16,300 ರೂ. ಗಳ ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೆ ಇಎಂಐ ಮೂಲಕವೂ ಇದನ್ನು ಖರೀದಿ ಮಾಡಬಹುದು.

Best Mobiles in India

English summary
If you are thinking of buying an HP laptop then this is a golden opportunity. Because 74% discount has been announced on Amazon for HP255G8 laptop.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+