ಹೆಚ್‌ಪಿಯ ಹೊಸ 'ಅಲ್ಟ್ರಾ ಸ್ಲಿಮ್ ಪ್ರೊಬುಕ್'ನಲ್ಲಿವೆ ಹೈಎಂಡ್ ಫೀಚರ್‌ಗಳು!

|

ಜನಪ್ರಿಯ ಟೆಕ್ ಕಂಪನಿ 'ಹೆಚ್‌ಪಿ'ಯು ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯಲ್ಲಿ ಲ್ಯಾಪ್‌ಟಾಪ್‌, ಕಂಪ್ಯೂಟರ್, ಪ್ರಿಂಟರ್ಸ್‌ ಮತ್ತು ಅಕ್ಸಸರಿಸಗಳನ್ನು ಪರಿಚಯಿಸಿದ್ದು, ಈ ಮೂಲಕ ಹೆಚ್ಚಿನ ಗ್ರಾಹಕರನ್ನು ನೆಚ್ಚಿನ ಬ್ರ್ಯಾಂಡ್‌ ಆಗಿದೆ. ಈಗ ಕಂಪನಿಯು ಮತ್ತೆ ಹೊಸ ಅವತರಣಿಕೆಯಲ್ಲಿ ನೂತನ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದ್ದು, ಅದು ಅಲ್ಟ್ರಾ ಸ್ಲಿಮ್‌ ಡಿಸೈನ್‌ನಲ್ಲಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.

ಹೆಚ್‌ಪಿಯ ಹೊಸ 'ಅಲ್ಟ್ರಾ ಸ್ಲಿಮ್ ಪ್ರೊಬುಕ್'ನಲ್ಲಿವೆ ಹೈಎಂಡ್ ಫೀಚರ್‌ಗಳು!

ಹೌದು, ಹೆಚ್‌ಪಿ ಕಂಪನಿಯು ದೇಶಿಯ ಮಾರುಕಟ್ಟೆಗೆ HP 445 G6 ಅಲ್ಟ್ರಾ ಸ್ಲಿಮ್ ಪ್ರೊಬುಕ್ ಲ್ಯಾಪ್‌ಟಾಪ್‌ ಅನ್ನು ರಿಲೀಸ್‌ ಮಾಡಿದ್ದು, ಈ ಪ್ರೊಬುಕ್ ಲ್ಯಾಪ್‌ಟಾಪ್‌ AMD ರೈಜನ್ ಕ್ವಾಡ್‌ಕೋರ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ 67,260 ರೂ.ಆರಂಭಿಕ ಬೆಲೆಯ ಪ್ರೈಸ್‌ಟ್ಯಾಗ್‌ ಹೊಂದಿದೆ. ಹಾಗಾದರೇ ಹೆಚ್‌ಪಿ ಅಲ್ಟ್ರಾ ಸ್ಲಿಮ್ ಪ್ರೊಬುಕ್ ಲ್ಯಾಪ್‌ಟಾಪ್‌ನ ಫೀಚರ್ಸ್‌ಗಳೆನು ಎಂಬುದರ ಕಂಪ್ಲೀಟ್‌ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!ಓದಿರಿ : ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಹೆಚ್‌ಪಿ 445 G6 ಪ್ರೊಬುಕ್ ಲ್ಯಾಪ್‌ಟಾಪ್‌ 1,366 x 768 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 14 ಇಂಚಿನ ಆಯಂಟಿ ಗ್ಲಾರೆ ಡಿಸ್‌ಪ್ಲೇಯನ್ನು ಹೊಂದಿದೆ. ಬಾರ್ಡರ್‌ಲೆಸ್‌ ಮತ್ತು ಅಲ್ಟ್ರಾ ಸ್ಲಿಮ್ ಡಿಸ್‌ಪ್ಲೇಯು ಅಲ್ಯುಮಿನಿಯಮ್ ಫಿನಿಶಿಂಗ್‌ನ ರಚನೆಯಲ್ಲಿದ್ದು, ‘Lay-Flat' ಡಿಸೈನ್‌ ಹೊಂದಿದೆ. 32.42 x 23.77 x 1.8 cm ಸುತ್ತಳತೆಯನ್ನು ಹೊಂದಿದ್ದು, 1.6ಕೆ.ಜಿ ತೂಕವನ್ನು ಪಡೆದುಕೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

ಹೆಚ್‌ಪಿ 445 G6 ಪ್ರೊಬುಕ್ 2GHz ವೇಗದ AMD ರೈಜನ್ ಕ್ವಾಡ್‌ಕೋರ್‌ ಪ್ರೊಸೆಸರ್‌ ಶಕ್ತಿಯನ್ನು ಹೊಂದಿದ್ದು, ಪ್ರಿ ಲೋಡೆಡ್ ವಿಂಡೊಸ್‌ 10 Pro ಓಎಸ್‌ ಪಡೆದಿದೆ. ಜೊತೆಗೆ ಗ್ರಾಫಿಕ್ಸ್‌ ಅನುಕೂಲಕ್ಕಾಗಿ Radeon Vega GPU ನೀಡಲಾಗಿದ್ದು, ಹಾಗೆಯೇ 8GB RAM ಸಾಮರ್ಥ್ಯದೊಂದಿಗೆ 1TB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಸಹ ಪಡೆದುಕೊಂಡಿದೆ.

ಓದಿರಿ : ಜಿಯೋದ ಈ ಐದು ಆಪ್ಸ್‌ಗಳನ್ನು ನೀವು ಬಳಸಿದ್ದಿರಾ? ಓದಿರಿ : ಜಿಯೋದ ಈ ಐದು ಆಪ್ಸ್‌ಗಳನ್ನು ನೀವು ಬಳಸಿದ್ದಿರಾ?

ಬಹು ಉಪಯೋಗಿ ಪ್ರೊಬುಕ್

ಬಹು ಉಪಯೋಗಿ ಪ್ರೊಬುಕ್

ಹೊಸ ಎಚ್‌ಪಿ 445 G6 ಪ್ರೊಬುಕ್ ಬಹು ಉಪಯುಕ್ತವಾಗಿದ್ದು, ಗ್ರಾಹಕರ ಪ್ರತಿಯೊಂದು ಕೆಲಸದ ಅವಶ್ಯಕತೆಗಳನ್ನು ಪೂರೈಸಲು ಅನುಕೂಲವಾಗುವಂತೆ ಪ್ರೊಬುಕ್ ವಿನ್ಯಾಸಗೊಳಿಸಲಾಗಿದೆ. ಇದು ಅತ್ಯುತ್ತಮ ಪ್ರಿಮಿಯಂ ಪಿಸಿ ಅನುಭವವನ್ನು ನೀಡುತ್ತದೆ" ಎಂದು ಎಚ್‌ಪಿ ಇಂಕ್ ಇಂಡಿಯಾದ ಹೆಡ್-ಕಮರ್ಷಿಯಲ್, ಪರ್ಸನಲ್ ಸಿಸ್ಟಮ್ಸ್ ಮುಖ್ಯಸ್ಥರಾದ 'ಸಂಜೀವ್ ಪಾಠಕ್' ಹೇಳಿದ್ದಾರೆ.

ಸೆಕ್ಯುರಿಟಿ ಫೀಚರ್ಸ್‌

ಸೆಕ್ಯುರಿಟಿ ಫೀಚರ್ಸ್‌

ಹೆಚ್‌ಪಿಯ ಪ್ರೊಬುಕ್ ಲ್ಯಾಪ್‌ಟಾಪ್‌ನಲ್ಲಿ ಭದ್ರತೆಗಾಗಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅದಕ್ಕಾಗಿ 'HP BIOSphere Gen4' ಮತ್ತು 'HP Client Security Manager G4' ಸೆಕ್ಯುರಿಟಿ ಸೌಲಭ್ಯಗಳನ್ನು ನೀಡಲಾಗಿದೆ. ಈ ಆಯ್ಕೆಗಳು ಮಾಲ್ವೇರ್‌ಗಳ ಅಟ್ಯಾಕ್‌ ಅನ್ನು ತಡೆಗಟ್ಟಲು ಸಹಕಾರಿಯಾಗಿದ್ದು, ಹೀಗಾಗಿ ಹ್ಯಾಕ್‌ ಆಗುವ ಸಂಭವ ಕಡಿಮೆ ಎನ್ನಲಾಗಿದೆ.

ಓದಿರಿ : 'ನೆಟ್‌ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ!ಓದಿರಿ : 'ನೆಟ್‌ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ!

ಬ್ಯಾಟರಿ ಬಾಳಿಕೆ

ಬ್ಯಾಟರಿ ಬಾಳಿಕೆ

ಎಚ್‌ಪಿ 445 G6 ಪ್ರೊಬುಕ್ ತನ್ನ ವರ್ಗದಲ್ಲಿಯೇ ಅತ್ಯುತ್ತಮ ಬ್ಯಾಟರಿ ಬಾಳಿಕೆ ಹೊಂದಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 11.5 ಗಂಟೆಗಳ ಕಾಲ ಬ್ಯಾಕ್‌ಅಪ್‌ ಒದಗಿಸಲಿದೆ. ಇದರೊಂದಿಗೆ ಸೆಲ್ಫ್ ಹಿಲಿಂಗ್ ವಾಯರ್‌ಲೆಸ್‌ ಟೆಕ್ನೊಲಜಿಯ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡಲಾಗಿದ್ದು, ಕೇವಲ 30ನಿಮಿಷದಲ್ಲಿ ಶೇ.50%ನಷ್ಟು ಲ್ಯಾಪ್‌ಟಾಪ್‌ ಚಾರ್ಜ್‌ ಪಡೆದುಕೊಳ್ಳುತ್ತದೆ.

ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್‌ ಐಫೋನ್‌ ಬಳಕೆದಾರರಿಗೆ ಮಾತ್ರ!ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್‌ ಐಫೋನ್‌ ಬಳಕೆದಾರರಿಗೆ ಮಾತ್ರ!

Best Mobiles in India

English summary
The HP 445 G6 ultra-slim ProBook comes with a price tag of Rs 67,260 in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X