Home
ಸುದ್ದಿಜಾಲ

HP: ಭಾರತದಲ್ಲಿ ಹೆಚ್‌ಪಿ ಎನ್ವಿ x360 14 ಲಾಂಚ್‌! ಕಾಪಿಲೋಟ್ ಕೀ ಸೌಲಭ್ಯ... ಬೆಲೆ ಎಷ್ಟು?

ಹೆಚ್‌ಪಿ ಕಂಪೆನಿಯು ಲ್ಯಾಪ್‌ಟಾಪ್‌ (HP Laptop) ವಿಭಾಗದಲ್ಲಿ ಸಾಕಷ್ಟು ಭಿನ್ನ ಫೀಚರ್ಸ್‌ ಇರುವ ಲ್ಯಾಪ್‌ಟಾಪ್‌ಗಳನ್ನು ಅನಾವರಣ ಮಾಡಿದೆ. ಈ ಮೂಲಕ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಇತರರು ವಿವಿಧ ಪ್ರಯೋಜನ ಪಡೆಯುತ್ತಿದ್ದಾರೆ. ಅದರಂತೆ ಈಗ ಭಾರತದಲ್ಲಿ ಹೊಸ ಎನ್ವಿ x360 14 ವೇರಿಯಂಟ್‌ (HP Envy x360 14) ಅನ್ನು ಲಾಂಚ್ ಮಾಡಲಾಗಿದೆ.

ಹೌದು, ಭಾರತದಲ್ಲಿ ಹೆಚ್‌ಪಿ ಎನ್ವಿ x360 14 ಕನ್ವರ್ಟಿಬಲ್ ಲ್ಯಾಪ್‌ಟಾಪ್ ಅನ್ನು ಲಾಂಚ್‌ ಮಾಡಲಾಗಿದೆ. ಇದು OLED ಟಚ್‌ಸ್ಕ್ರೀನ್ ಆಯ್ಕೆ, 2-ಇನ್-1 ವಿನ್ಯಾಸ, ಎಐ-ಚಾಲಿತ ಫೀಚರ್ಸ್‌ ಆಯ್ಕೆ ಪಡೆಯುವ ಮೂಲಕ ಸಖತ್‌ ಪ್ರೀಮಿಯಂ ಆಗಿದೆ. ಹಾಗಿದ್ರೆ, ಈ ಲ್ಯಾಪ್‌ಟಾಪ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಹೆಚ್‌ಪಿ ಎನ್ವಿ x360 14 ಲಾಂಚ್‌! ಕಾಪಿಲೋಟ್ ಕೀ ಸೌಲಭ್ಯ..

ಹೆಚ್‌ಪಿ ಎನ್ವಿ x360 14 ಲ್ಯಾಪ್‌ಟಾಪ್‌ ಡಿಸ್‌ಪ್ಲೇ ಮಾಹಿತಿ: ಈ ಲ್ಯಾಪ್‌ಟಾಪ್‌ 14 ಇಂಚಿನ 2.8K OLED ಟಚ್‌ಸ್ಕ್ರೀನ್ ಹೊಂದಿದ್ದು, 16:10 ಆಕಾರ ಅನುಪಾತ, 89.5% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 120Hz ವೇರಿಯಬಲ್ ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಅಲ್ಟ್ರಾ-ಇಮ್ಮರ್ಸಿವ್ ವೀಕ್ಷಣೆಯ ಅನುಭವಕ್ಕಾಗಿ ಐಮ್ಯಾಕ್ಸ್‌ ವರ್ಧಿತ ಪ್ರಮಾಣೀಕೃತವಾಗಿದೆ.

ಹೆಚ್‌ಪಿ ಎನ್ವಿ x360 14 ಲ್ಯಾಪ್‌ಟಾಪ್‌ ಫೀಚರ್ಸ್‌: ಇದು ಇಂಟೆಲ್‌ನ ಇತ್ತೀಚಿನ ಕೋರ್ ಅಲ್ಟ್ರಾ ಚಿಪ್‌ಗಳಿಂದ ಕಾರ್ಯನಿರ್ವಹಿಸಲಿದ್ದು, ಮೀಸಲಾದ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್‌ನಿಂದ ಎಐ ವೇಗವರ್ಧನೆಯನ್ನು ಕಂಟ್ರೋಲ್‌ ಮಾಡಲಿದೆ. ಹೆಚ್‌ಪಿ ಪ್ರಕಾರ, ಸ್ಮಾರ್ಟ್ ಕ್ಯಾಮರಾ ಟ್ರ್ಯಾಕಿಂಗ್, ಹಿನ್ನೆಲೆ ಮಸುಕು, ಶಬ್ದ ರದ್ದತಿ ಮತ್ತು ಇತರ ಎಐ-ಚಾಲಿತ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವಾಗ ಈ ಎನ್‌ಪಿಯು ಬ್ಯಾಟರಿ ಬ್ಯಾಕಪ್ ಅನ್ನು 65% ವರೆಗೆ ಹೆಚ್ಚಿಸುತ್ತದಂತೆ.

ಭಾರತದಲ್ಲಿ ಹೆಚ್‌ಪಿ ಎನ್ವಿ x360 14 ಲಾಂಚ್‌! ಕಾಪಿಲೋಟ್ ಕೀ ಸೌಲಭ್ಯ..

ಜೊತೆಗೆ ಕಂಟೆಂಟ್ ಉತ್ಪಾದನೆ ಮತ್ತು ಹೆಚ್ಚಿನ ಕಾರ್ಯಗಳಿಗಾಗಿ ಎಐ ಚಾಟ್‌ಬಾಟ್ ಅನ್ನು ತ್ವರಿತವಾಗಿ ಪ್ರಾರಂಭಿಸಲು ಲ್ಯಾಪ್‌ಟಾಪ್ ಕೀಬೋರ್ಡ್‌ನಲ್ಲಿ ಮೈಕ್ರೋಸಾಫ್ಟ್ ಕಾಪಿಲೋಟ್ ಬಟನ್ ಆಯ್ಕೆ ನೀಡಲಾಗಿದೆ. ಈ ಮೂಲಕ ಇತರೆ ಲ್ಯಾಪ್‌ಟಾಪ್‌ಗಳಿಗಿಂತ ಬಹಳ ಭಿನ್ನವಾಗಿ ಈ ಲ್ಯಾಪ್‌ಟಾಪ್‌ ಕಾಣಿಸಿಕೊಳ್ಳಲಿದೆ. ಅಲ್ಲದೆ ಇದು ವಿಂಡೋಸ್‌ 11 ಅನ್ನು ರನ್ ಮಾಡಲಿದ್ದು, ನೀವು ಈ ಲ್ಯಾಪ್‌ಟಾಪ್‌ನಲ್ಲಿ ಕೆಲಸ ನಿರ್ವಹಿಸದೆ ಆನ್‌ ಮಾಡಿ ಏನಾದರೂ ಹೊರಹೋದರೆ ಡಿಸ್‌ಪ್ಲೇಯನ್ನು ತಂತಾನೇ ಲಾಕ್ ಮಾಡಿಕೊಳ್ಳುತ್ತದೆ.

ಪ್ರಮುಖವಾಗಿ ಈ ಲ್ಯಾಪ್‌ಟಾಪ್ ಸ್ಮಾರ್ಟ್ ವಿಡಿಯೋ ಕರೆಗಾಗಿ ಹೆಚ್‌ಪಿಯ ಸ್ಟುಡಿಯೋ ಎಫೆಕ್ಟ್‌ಗಳನ್ನು ಹೊಂದಿದ್ದು, ಮುಖ ಗುರುತಿಸುವಿಕೆಗಾಗಿ ಐಆರ್‌ ಜೊತೆಗೆ 5 ಮೆಗಾಫಿಕ್ಸೆಲ್‌ ವೆಬ್‌ಕ್ಯಾಮ್ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಪಾಲಿ ಸ್ಟುಡಿಯೊದಿಂದ ಟ್ಯೂನ್ ಮಾಡಲಾದ ಕ್ವಾಡ್ ಸ್ಪೀಕರ್‌ಗಳು ಮತ್ತು ವೈ-ಫೈ 7 ವೈರ್‌ಲೆಸ್ ಫೀಚರ್ಸ್‌ ಬಳಕೆದಾರರಿಗೆ ಪ್ರೀಮಿಯಂ ಅನುಭವವನ್ನು ನೀಡಲಿದೆ.

ಭಾರತದಲ್ಲಿ ಹೆಚ್‌ಪಿ ಎನ್ವಿ x360 14 ಲಾಂಚ್‌! ಕಾಪಿಲೋಟ್ ಕೀ ಸೌಲಭ್ಯ..

ಹಾಗೆಯೇ ಈ ಲ್ಯಾಪ್‌ಟಾಪ್‌ ಅನ್ನು ಒಂದು ಬಾರಿ ಪೂರ್ಣವಾಗಿ ಚಾರ್ಜಿಂಗ್‌ ಮಾಡಿದ್ರೆ ಬರೋಬ್ಬರಿ 14 ಗಂಟೆಗೂ ಅಧಿಕಕಾಲ ಬ್ಯಾಕಪ್‌ ನೀಡಲಿದೆ ಎಂದು ಹೆಚ್‌ಪಿ ಮಾಹಿತಿ ನೀಡಿದೆ. ಒಟ್ಟಾರೆ ಈ ಲ್ಯಾಪ್‌ಟಾಪ್‌ನ ತೂಕ 1.4kg ಆಗಿದ್ದು, ಈ ಮೂಲಕ ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ.

ಹೆಚ್‌ಪಿ ಎನ್ವಿ x360 14 ಲ್ಯಾಪ್‌ಟಾಪ್‌ ಬೆಲೆ ಹಾಗೂ ಲಭ್ಯತೆ: ಇನ್ನು ಈ ಲ್ಯಾಪ್‌ಟಾಪ್‌ಗೆ 99,999ರೂ.ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಇದು ಮೆಟಿಯರ್ ಸಿಲ್ವರ್/ ಅಟ್ಮಾಸ್ಫಿರಿಕ್ ಬ್ಲೂ ಅಲ್ಯೂಮಿನಿಯಂ ಫಿನಿಶ್ ಆಯ್ಕೆಯಲ್ಲಿ ಲಭ್ಯ ಇರಲಿದ್ದು, ಲ್ಯಾಪ್‌ಟಾಪ್ ಖರೀದಿಯ ಮೇಲೆ ಹೆಚ್‌ಪಿ ಉಚಿತ 'ಕ್ರಿಯೇಟರ್ಸ್ ಸ್ಲಿಂಗ್ ಬ್ಯಾಗ್' ಅನ್ನು ಸಹ ನೀಡುತ್ತಿದೆ.

Best Mobiles in India

English summary
HP Envy x360 14 model laptop launched in India. It's solidly premium with an OLED touchscreen option, 2-in-1 design, AI-powered features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+