HP ಸಂಸ್ಥೆಯಿಂದ ಎರಡು AI ಅಧಾರಿತ ಲ್ಯಾಪ್‌ಟಾಪ್ ಲಾಂಚ್!..ವಾವ್ ಎನಿಸುವ ಫೀಚರ್ಸ್!
ಟೆಕ್ ದೈತ್ಯ ಹೆಚ್‌ಪಿ (HP) ಸಂಸ್ಥೆಯು ಇದೀಗ ಎಐ - AI ಅಧಾರಿತ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಈ ಮಾದರಿಯ ಲ್ಯಾಪ್‌ಟಾಪ್‌ಗಳು ಗೇಮರ್ ಹಾಗೂ ಕಂಟೆಂಟ್ ಕ್ರಿಯೆಟರ್ಸ್‌ಗಳಿಗೆ ಹೆಚ್ಚಿನ ಅನುಕೂಲ ಒದಗಿಸಲಿವೆ. ಅಂದಹಾಗೆ ಓಮೆನ್ ಟ್ರಾನ್ಸೆಂಡ್ 14 (Omen Transcend 14) ಮತ್ತು ಹೆಚ್‌ಪಿ ಎನ್ವಿ x360 (HP Envy x360 14) ಹೆಚ್‌ಪಿ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಲ್ಯಾಪ್‌ಟಾಪ್ ಆಗಿವೆ.
ಹೌದು, ಹೆಚ್‌ಪಿ ಸಂಸ್ಥೆಯು ಹೊಸದಾಗಿ ಓಮೆನ್ ಟ್ರಾನ್ಸ್‌ಸೆಂಡ್ 14 (Omen Transcend 14) ಮತ್ತು ಹೆಚ್‌ಪಿ ಎನ್ವಿ x360 (HP Envy x360 14) ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಈ ಎರಡು ಲ್ಯಾಪ್‌ಟಾಪ್ ಎಐ ಸೌಲಭ್ಯ ಪಡೆದಿದ್ದು, ಹೈ ಎಂಡ್ ಮಾದರಿಯ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಇನ್ನುಳಿದಂತೆ ಈ ಎರಡು ಲ್ಯಾಪ್‌ಟಾಪ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

'ಹೆಚ್‌ಪಿ ಸಂಸ್ಥೆಯಲ್ಲಿ, ಎಐ ಪವರ್ ಬಳಸಿಕೊಂಡು ಬಳಕೆದಾರರನ್ನು ಸಬಲೀಕರಣಗೊಳಿಸುವುದು ನಮ್ಮ ಉದ್ದೇಶವಾಗಿದೆ. ಎಐ-ಚಾಲಿತ ವೈಯಕ್ತೀಕರಣದ ಮೂಲಕ, ನಾವು ಹೆಚ್ಚು ವೈಯಕ್ತೀಕರಿಸಿದ ಮತ್ತು ಅರ್ಥಪೂರ್ಣ ಬಳಕೆದಾರ ಅನುಭವಗಳನ್ನು ರಚಿಸುತ್ತಿದ್ದೇವೆ. ತಂತ್ರಜ್ಞಾನದೊಂದಿಗೆ ನಾವು ಸಂವಹನ ನಡೆಸುವ ರೀತಿಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದೇವೆ' ಎಂದು ಹೆಚ್‌ಪಿ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇಪ್ಸಿತಾ ದಾಸ್‌ಗುಪ್ತ ಹೇಳಿದ್ದಾರೆ.
ಓಮೆನ್ Transcend 14 ಲ್ಯಾಪ್‌ಟಾಪ್
ಈ ಲ್ಯಾಪ್‌ಟಾಪ್ ಎಐ ಆಧಾರಿತವಾಗಿದ್ದು, ಉತ್ತಮ ಗೇಮಿಂಗ್ ಅನುಭವ ನೀಡಲಿದೆ. ಈ ಓಮೆನ್ ಟ್ರಾನ್ಸ್‌ಸೆಂಡ್ 14 NVIDIA GeForce RTX 4060 ಗ್ರಾಫಿಕ್ಸ್ ಸೌಲಭ್ಯ ಪಡೆದಿದ್ದು, ವೇಗವರ್ಧಿತ ಗೇಮ್‌ನ ಅನುಭವ ಮತ್ತು ವರ್ಧಿತ ಗ್ರಾಫಿಕ್ಸ್‌ಗಾಗಿ ಎಐ ಫೀಚರ್ಸ್‌ಗಳಿಗೆ ಬಲ ನೀಡುತ್ತದೆ. ಈ ಹೊಸ ಲ್ಯಾಪ್‌ಟಾಪ್ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಆಯ್ಕೆ ಪಡೆದಿದ್ದು, ಕಂಪ್ಯೂಟ್-ಇಂಟೆನ್ಸಿವ್ ಕಾರ್ಯಗಳನ್ನು ನಿರ್ವಹಿಸಲು ನೆರವಾಗಲಿದೆ.

ಇನ್ನು ಈ ಲ್ಯಾಪ್‌ಟಾಪ್ 14 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್ ಆಗಿದ್ದು, ಗರಿಷ್ಠ ಕಾರ್ಯಕ್ಷಮತೆಯಲ್ಲಿ OMEN ಟ್ರಾನ್ಸ್‌ಸೆಂಡ್ 14 ರನ್‌ಗೆ ಸಹಾಯ ಮಾಡಲು ಇಂಟೆಲ್‌ನೊಂದಿಗೆ ಸಹ-ಇಂಜಿನಿಯರಿಂಗ್ ಮಾಡಲಾದ ಹೊಸ ಕೂಲಿಂಗ್ ವ್ಯವಸ್ಥೆಯಾಗಿದೆ.
ಓಮೆನ್ ಲ್ಯಾಪ್‌ಟಾಪ್: ಹಗುರವಾದ ವಿನ್ಯಾಸ
ಹೆಚ್‌ಪಿ ಓಮೆನ್ ಟ್ರಾನ್ಸ್‌ಸೆಂಡ್ 14 ಸಂಸ್ಥೆಯ ಹಗುರವಾದ ಗೇಮಿಂಗ್ ಲ್ಯಾಪ್‌ಟಾಪ್ ಆಗಿದೆ. ಈ ಲ್ಯಾಪ್‌ಟಾಪ್ 11.5 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಸೌಲಭ್ಯ ಪಡೆದುಕೊಂಡಿದ್ದು, ಇನ್ನು ಇದರ ತೂಕ 1.637 ಕೆಜಿ ಆಗಿದೆ. ಹಾಗೆಯೇ ಇದು ಟೈಪ್-C PD 140W ಅಡಾಪ್ಟರ್ ಪ್ರಯಾಣದಲ್ಲಿರುವಾಗ ಚಾರ್ಜಿಂಗ್ ಅನ್ನು ಮತ್ತಷ್ಟು ಸುಲಭಗೊಳಿಸುತ್ತದೆ.
ಓಮೆನ್ ಲ್ಯಾಪ್‌ಟಾಪ್: ಹೈಪರ್‌ಎಕ್ಸ್ ಸೌಲಭ್ಯ
ಈ ಲ್ಯಾಪ್‌ಟಾಪ್‌ನಲ್ಲಿ ಲ್ಯಾಟಿಸ್-ಕಡಿಮೆ ವಿನ್ಯಾಸದ ಕೀಬೋರ್ಡ್ ರಚನೆ ನೀಡಲಾಗಿದೆ. ಹೀಗಾಗಿ ಕೀ ಕ್ಯಾಪ್‌ಗಳು ಅಂಚಿನಿಂದ ಅಂಚಿನ ವಿನ್ಯಾಸದಲ್ಲಿ ಇರುತ್ತವೆ. ಆದಾಗ್ಯೂ, ಮೆಕ್ಯಾನಿಕಲ್ ಕೀ ಬೋರ್ಡ್‌ಗಳಿಗಾಗಿ ಹೈಪರ್‌ಎಕ್ಸ್‌ನ ಪುಡಿಂಗ್ ಕ್ಯಾಪ್‌ಗಳನ್ನು ರೂಪಿಸಲಾಗಿದ್ದು, ಇದು ಪ್ರತಿ ಕೀ ಗೆ ಬ್ರೈಟ್ನೆಸ್ಸ್/ ಶೇನಿಂಗ್ ನೀಡುತ್ತದೆ.
ಹೆಚ್‌ಪಿ ಎನ್ವಿ x360 14: ಎಐ ಲ್ಯಾಪ್‌ಟಾಪ್
ಸಂಸ್ಥೆಯು ಈ ಹೊಸ ಲ್ಯಾಪ್‌ಟಾಪ್ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಅಡೋಬ್ ಫೋಟೋಶಾಪ್ ನಂತಹ ಅಪ್ಲಿಕೇಶನ್ ಸುಲಭ ಆಗಲಿವೆ. ಹಾಗೆಯಯೇ ಈ ಲ್ಯಾಪ್‌ಟಾಪ್ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (NPU) ಸೌಲಭ್ಯ ಪಡೆದಿದ್ದು, ತಡೆರಹಿತ ಸೃಜನಶೀಲತೆ ಮತ್ತು ಉತ್ಪಾದಕತೆಗಾಗಿ ಬ್ಯಾಟರಿ ಆಪ್ಟಿಮೈಸೇಶನ್‌ಗೆ 65% ರಷ್ಟು ನೆರವು ಮಾಡುತ್ತದೆ. ಇನ್ನು ಕೀಬೋರ್ಡ್‌ನಲ್ಲಿ ಮೈಕ್ರೋಸಾಫ್ಟ್ CoPilot ಬಟನ್ ಪಡೆದ ಹೆಚ್‌ಪಿಯ ಮೊದಲ ಲ್ಯಾಪ್‌ಟಾಪ್ ಎನಿಸಿಕೊಂಡಿದೆ.
ಈ ಲ್ಯಾಪ್‌ಟಾಪ್ ಉತ್ತಮ ವೀಡಿಯೊ ಫೀಚರ್‌ಗಾಗಿ ವಿಂಡೋಸ್ ಸ್ಟುಡಿಯೋ ಎಫೆಕ್ಟ್ ಅನ್ನು ಪಡೆದಿದೆ. ಅಲ್ಲದೇ ವಿಂಡೋಸ್ ಸ್ಟುಡಿಯೋ ಎಫೆಕ್ಟ್ ಆಟೋಮ್ಯಾಟಿಕ್ ಆಗಿ ಝೂಮ್ ಮಾಡುವ ಮತ್ತು ಫೋಟೋ ಕ್ರಾಪ್ ಮಾಡುವಂತಹ ಎಐ ಆಯ್ಕೆ ಒದಗಿಸುತ್ತವೆ.
ಹಾಗೆಯೇ ಈ ಲ್ಯಾಪ್‌ಟಾಪ್‌ನಲ್ಲಿ ಬಳಕೆದಾರರು ಎದ್ದು ಹೋದಾಗ ಸ್ಕ್ರೀನ್ ಅನ್ನು ಆಟೋಮ್ಯಾಟಿಕ್ ಲಾಕ್ ಮಾಡುವುದು ಹಾಗೂ ಯಾರಾದರೂ ಹಿಂದೆ ನಿಂತಾಗ ಸ್ಕ್ರೀನ್ ಅನ್ನು ಮಬ್ಬುಗೊಳಿಸುವುದು ಸೇರಿದಂತೆ ಎಐ-ವರ್ಧಿತ ಗೌಪ್ಯತೆ ಫೀಚರ್ಸ್‌ಗಳು ನೆರವು ಮಾಡುತ್ತದೆ.
ಇನ್ನು ಈ ಲ್ಯಾಪ್‌ಟಾಪ್ 14 ಇಂಚಿನ OLED ಟಚ್ ಡಿಸ್‌ಪ್ಲೇ ಪಡೆದಿದ್ದು, 1.4 ಕೆಜಿ ತೂಕ ಪಡೆದಿದೆ. ಈ ಲ್ಯಾಪ್‌ಟಾಪ್ ಪೂರ್ಣ ಅಲ್ಯೂಮಿನಿಯಂ ಚಾಸಿಸ್ ಪಡೆದಿದ್ದು, x360 ಹಿಂಜ್ ಜೊತೆಗೆ ಪ್ರೀಮಿಯಂ ಅನುಭವವನ್ನು ಒದಗಿಸುತ್ತದೆ.
ಬೆಲೆ ಮತ್ತು ಲಭ್ಯತೆ ಮಾಹಿತಿ
ಹೆಚ್‌ಪಿ ಓಮೆನ್ ಟ್ರಾನ್ಸೆಂಡ್ 14 (HP Omen Transcend 14) ಆರಂಭಿಕ ಬೆಲೆ 174,999ರೂ. ಆಗಿದ್ದು, ಈ ಲ್ಯಾಪ್‌ಟಾಪ್ ಹೆಚ್‌ಪಿ ವರ್ಲ್ಡ್ ಸ್ಟೋರ್ಸ್ ಮತ್ತು ಹೆಚ್‌ಪಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯ. ಸೆರಾಮಿಕ್ ವೈಟ್ ಮತ್ತು ಶಾಡೋ ಬ್ಲ್ಯಾಕ್ ಕಲರ್ ಆಯ್ಕೆ ಪಡೆದಿದೆ.
ಹೆಚ್‌ಪಿ ಎನ್ವಿ x360 (HP Envy x360 14 HP) ಆರಂಭಿಕ ಬೆಲೆ 99,999ರೂ. ಆಗಿದ್ದು, ಹೆಚ್‌ಪಿ ವರ್ಲ್ಡ್ ಸ್ಟೋರ್ಸ್ ಮತ್ತು ಹೆಚ್‌ಪಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯ. ಇದನ್ನು ಸಿಲ್ವರ್ ಮತ್ತು ಬ್ಲೂ ಕಲರ್ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








