HPಯಿಂದ ಪೆವಿಲಿಯನ್ x360 14 ಲ್ಯಾಪ್‌ಟಾಪ್ ಲಾಂಚ್!..ಬೆಲೆ ಎಷ್ಟು?
ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಂತೆ ಲ್ಯಾಪ್‌ಟಾಪ್ ಸಹ ಪ್ರತಿಯೊಬ್ಬರ ಅಗತ್ಯ ಗ್ಯಾಡ್ಜಟ್ ಆಗಿದೆ. ಈ ನಿಟ್ಟಿನಲ್ಲಿ ಪ್ರಮುಖ ಟೆಕ್ ಕಂಪನಿಗಳು ಆಕರ್ಷಕ ಫೀಚರ್ಸ್‌ಗಳ ಲ್ಯಾಪ್‌ಟಾಪ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಸಾಗಿವೆ. ಆ ಪೈಕಿ ಹೆಚ್‌ಪಿ ಕಂಪನಿಯ ಲ್ಯಾಪ್‌ಟಾಪ್‌ಗಳಿಗೆ ಉತ್ತಮ ಮಾರುಕಟ್ಟೆ ಇದ್ದು, ಭಿನ್ನ ಶ್ರೇಣಿಯ ಮಾಡೆಲ್‌ಗಳನ್ನು ಹೊಂದಿದೆ. ಆ ಸಾಲಿಗಿಗ ಹೆಚ್‌ಪಿ ಹೊಸದೊಂದು ಲ್ಯಾಪ್‌ಟಾಪ್ ಸೇರ್ಪಡೆ ಮಾಡಿಕೊಂಡಿದೆ.

ಹೌದು, ಹೆಚ್‌ಪಿ ಕಂಪನಿಯು ಹೊಸದಾಗಿ HP ಪೆವಿಲಿಯನ್ x360 14 ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್ 10ನೇ ತಲೆಮಾರಿನ ಇಂಟೆಲ್ ಚಿಪ್ ಹೊಂದಿದ್ದು, 4G LET ಸಂಪರ್ಕವನ್ನು ಪಡೆದಿದೆ. ಹಾಗೆಯೇ ಇಂಟೆಲ್ ಕೋರ್ i5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಇದರೊಂದಿಗೆ ಐರಿಶ್ ಪ್ಲಸ್ ಗ್ರಾಫಿಕ್ಸ್ ಸೌಲಭ್ಯವನ್ನು ಸಹ ಪಡೆದಿದೆ. ಇನ್ನು ಈ ಲ್ಯಾಪ್‌ಟಾಪ್ ಆರಂಭಿಕ ಬೆಲೆಯು 84,999ರೂ. ಆಗಿದೆ.

ಈ ಲ್ಯಾಪ್‌ಟಾಪ್ ಅಮೆಜಾನ್ ಅಲೆಕ್ಸಾ ವಾಯಿಸ್ ಅಸಿಸ್ಟಂಟ್ ಸೇವೆ ಮತ್ತು ವೇಕ್ ಆನ್ ವಾಯಸ್ ಫೀಚರ್‌ನ ಸಪೋರ್ಟ್ ಅನ್ನು ಪಡೆದುಕೊಂಡಿದೆ. ಇನ್ನು ಪೆವಿಲಿಯನ್ x360 14 ಲ್ಯಾಪ್‌ಟಾಪ್ ಸುಮಾರು 11 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಇರುವುದಾಗಿ ಹೆಚ್‌ಪಿ ಹೇಳಿದೆ. ಹಾಗೆಯೇ ಈ ಲ್ಯಾಪ್‌ಟಾಪ್ ರಚನೆಯು ಆಕರ್ಷಕವಾಗಿದ್ದು, ಸ್ಕ್ರೀನ್ ಹಾಗೂ ಬಾಹ್ಯ ಬಾಡಿಯ ನಡುವಿನ ಅಂತರ ಶೇ.82.47 ಆಗಿದೆ. ಹಾಗೆಯೇ ನ್ಯಾಚುರಲ್ ಸಿಲ್ವರ್ ಬಣ್ಣದ ಆಯ್ಕೆಯನ್ನು ಒಳಗೊಂಡಿದೆ.

ಆರಂಭಿಕ ಕೊಡುಗೆಯಾಗಿ ಸಂಸ್ಥೆಯು ವಿಶೇಷ ಆಫರ್ ನೀಡುತ್ತಿದ್ದು, ಜಿಯೋ ಸಹಯೋಗದೊಂದಿಗೆ ಹೆಚ್‌ಪಿಯು 6 ತಿಂಗಳ ಉಚಿತ ಡೇಟಾವನ್ನು (1.5 ಜಿಬಿ / ದಿನ) ನೀಡಲಿದೆ. ಮತ್ತು 6 ತಿಂಗಳ ನಂತರ ಒಟ್ಟಾರೆ ಜಿಯೋ ಡೇಟಾ ಯೋಜನೆಗಳಿಗೆ 30% ರಿಯಾಯಿತಿ ನೀಡುತ್ತದೆ. ಆಫರ್ ಪಡೆಯಲು ಗ್ರಾಹಕರು ರಿಲಯನ್ಸ್ ಜಿಯೋ ಸ್ಟೋರ್‌ನಲ್ಲಿ ಭೇಟಿ ನೀಡಿ ಲ್ಯಾಪ್‌ಟಾಪ್ ಇನ್‌ವಾಯ್ಸ್ ಮತ್ತು ಸಿರೀಯಲ್ ಸಂಖ್ಯೆ ವಿವರಗಳನ್ನು ನೀಡಬೇಕು ಎಂದು ಹೆಚ್‌ಪಿ ಹೇಳಿದೆ.

ಹೆಚ್‌ಪಿ ಪೆವಿಲಿಯನ್ x360 14 ಲ್ಯಾಪ್‌ಟಾಪ್ ಜೊತೆಗೆ ಹೆಚ್‌ಪಿ ಸಂಸ್ಥೆಯು HP 14 ಹೆಸರಿನ 14 ಇಂಚಿನ ಡೆಸ್ಕ್ ಟಾಪ್ ಮಾದರಿಯನ್ನು ಪರಿಚಯಿಸಿದೆ. ಈ ಡಿವೈಸ್ ಪೂರ್ಣ ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇ ಹೊಂದಿದ್ದು, 1920×1080 ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 4GB RAM ಹೊಂದಿರುವ HP14 ಡಿವೈಸ್‌ನ ಬೆಲೆಯು 44,999ರೂ. ಆಗಿದೆ. ಹಾಗೆಯೇ i5 ಮಾದರಿಯು ಬೆಲಯು 64,999ರೂ. ಆಗಿದೆ. ಇನ್ನು ಎಚ್‌ಪಿ ಪೆವಿಲಿಯನ್ x360 14 ಲ್ಯಾಪ್‌ಟಾಪ್ ಬೆಲೆಯು 84,999ರೂ. ಆಗಿದ್ದು, ಇದೇ ಜುಲೈ 1 ರಿಂದ ಮಾರಾಟ ಆರಂಭವಾಗಲಿದೆ.


Click it and Unblock the Notifications








