Home
ಸುದ್ದಿಜಾಲ

ಹೆಚ್‌ಪಿ ಓಮೆನ್ 16 ಗೇಮಿಂಗ್ ಲ್ಯಾಪ್‌ಟಾಪ್‌ ಬಿಡುಗಡೆ!..ಬೆಲೆ ಎಷ್ಟು?

ಪ್ರಸ್ತುತ ಸ್ಮಾರ್ಟ್‌ಫೋನಿನಂತೆ ಲ್ಯಾಪ್‌ಟಾಪ್‌ಗಳು ಅಗತ್ಯ ಸಾಧನಗಳಾಗಿ ಕಾಣಿಸಿಕೊಂಡಿವೆ. ಪ್ರಮುಖ ಸಂಸ್ಥೆಗಳು ಭಿನ್ನ ಕಾರ್ಯವೈಖರಿಯ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತ ಮುನ್ನಡೆದಿವೆ. ಆ ಪೈಕಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಹೆಚ್ಚು ಸದ್ದು ಮಾಡಿದ್ದು, ಗೇಮ್‌ ಪ್ರಿಯರ ಗಮನ ಸೆಳೆದಿವೆ. ಜನಪ್ರಿಯ ಹೆಚ್‌ಪಿ (HP) ಕಂಪನಿಯು ಈಗಾಗಲೇ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದ್ದು, ಆ ಸಾಲಿಗೆ ಈಗ ಹೊಸದೊಂದು ಗೇಮಿಂಗ್ ಲ್ಯಾಪ್‌ಟಾಪ್‌ ಸೇರ್ಪಡೆ ಮಾಡಿದೆ.

ಹೆಚ್‌ಪಿ ಓಮೆನ್ 16 ಗೇಮಿಂಗ್ ಲ್ಯಾಪ್‌ಟಾಪ್‌ ಬಿಡುಗಡೆ!..ಬೆಲೆ ಎಷ್ಟು?

ಹೌದು, ಹೆಚ್‌ಪಿ (HP) ಸಂಸ್ಥೆಯು ಭಾರತದಲ್ಲಿ ನೂತನವಾಗಿ ಹೆಚ್‌ಪಿ ಓಮೆನ್ 16 - HP Omen 16 (2021) ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ ಗೇಮಿಂಗ್ ಲ್ಯಾಪ್‌ಟಾಪ್ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ 165Hz ಡಿಸ್‌ಪ್ಲೇ ಸಾಮರ್ಥ್ಯವನ್ನು ಪಡೆದಿದ್ದು, 11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ನಿಂದ ಚಾಲಿತವಾಗಿದೆ. ಹೆಚ್‌ಪಿ ಓಮೆನ್ 16 (2021) ಸುಧಾರಿತ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ ಅನ್ನು ಒಳಗೊಂಡಿದೆ. ಹಾಗೆಯೇ ಇದು ಗಾತ್ರದಲ್ಲಿ 2.5 ಪಟ್ಟು ತೆಳ್ಳಗಿರುತ್ತದೆ ಮತ್ತು ಉತ್ತಮ ಕೂಲಿಂಗ್ ಒದಗಿಸಲು ಸಹಾಯ ಮಾಡಲು ಎರಡು ಪಟ್ಟು ಫ್ಯಾನ್ ಬ್ಲೇಡ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಹೆಚ್‌ಪಿ ಓಮೆನ್ 16 - HP Omen 16 (2021) ಗೇಮಿಂಗ್ ಲ್ಯಾಪ್‌ಟಾಪ್ 16.1 ಇಂಚಿನ IPS ಡಿಸ್‌ಪ್ಲೇ ಹೊಂದಿದ್ದು, 2560x1440 ಪಿಕ್ಸೆಲ್‌ಗಳು ರೆಸಲ್ಯೂಶನ್ ಜೊತೆಗೆ QHD ಅನ್ನು ಹೊಂದಿದೆ. ಹಾಗೆಯೇ ಈ ಲ್ಯಾಪ್‌ಟಾಪ್ 16:9 ಆಕಾರ ಅನುಪಾತ ಮತ್ತು 165Hz ರಿಫ್ರೆಶ್ ದರವನ್ನು ಹೊಂದಿದೆ. ಡಿಸ್‌ಪ್ಲೇಯು 3ms ಪ್ರತಿಕ್ರಿಯೆ ಸಮಯ ಮತ್ತು 100 ಪ್ರತಿಶತ sRGB ಬಣ್ಣದ ಹರವು ಹೊಂದಿದೆ. ಇದಲ್ಲದೆ, ಇದು ಜರ್ಮನಿಯ TÜVRheinlan ನಿಂದ ಐಸೇಫ್‌ ಪ್ರದರ್ಶನ ಪ್ರಮಾಣೀಕರಣದೊಂದಿಗೆ ಬರುತ್ತದೆ.

ಹೆಚ್‌ಪಿ ಓಮೆನ್ 16 ಗೇಮಿಂಗ್ ಲ್ಯಾಪ್‌ಟಾಪ್‌ ಬಿಡುಗಡೆ!..ಬೆಲೆ ಎಷ್ಟು?

ಇನ್ನು ಹೆಚ್‌ಪಿ ಓಮೆನ್ 16 ಗೇಮಿಂಗ್ ಲ್ಯಾಪ್‌ಟಾಪ್ ಇಂಟೆಲ್ ಕೋರ್ i7-11800H ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ Nvidia GeForce RTX 3070 ಲ್ಯಾಪ್‌ಟಾಪ್ GPU ಜೊತೆಗೆ 8GB ಮೀಸಲಾದ ಗ್ರಾಫಿಕ್ಸ್ ಮೆಮೊರಿ ಮತ್ತು 16GB DDR4 3200MHz RAM ಹೊಂದಿದೆ. ಹಾಗೆಯೇ ಲ್ಯಾಪ್‌ಟಾಪ್ 1TB PCIe Gen 4x4 SSD ಸಂಗ್ರಹಣೆಯನ್ನು ಹೊಂದಿದೆ. ಇದು ಸಾಂಪ್ರದಾಯಿಕ SSDಗಳಿಗಿಂತ ಎರಡು ಪಟ್ಟು ಶೇಖರಣಾ ಪ್ರವೇಶ ವೇಗವನ್ನು ತಲುಪಿಸುತ್ತದೆ ಎಂದು ಹೇಳಲಾಗುತ್ತದೆ.

ಹೆಚ್‌ಪಿ ಓಮೆನ್ 16 ಗೇಮಿಂಗ್ ಲ್ಯಾಪ್‌ಟಾಪ್ ಕಸ್ಟಮೈಸ್ ಮಾಡಿದ ಗೇಮಿಂಗ್ ಸೆಟ್‌ಅಪ್‌ ಥೀಮ್ ಅನ್ನು ನೀಡಲು ಒಮೆನ್ ಗೇಮಿಂಗ್ ಹಬ್ ಲೈಟ್ ಸ್ಟುಡಿಯೋ ಏಕೀಕರಣದೊಂದಿಗೆ ನಾಲ್ಕು-ವಲಯ RGB ಆಂಟಿ-ಘೋಸ್ಟಿಂಗ್ ಕೀಬೋರ್ಡ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 83Whr ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಒಂದೇ ಚಾರ್ಜ್‌ನಲ್ಲಿ ಒಂಬತ್ತು ಗಂಟೆಗಳವರೆಗೆ ಬಳಕೆಯನ್ನು ತಲುಪಿಸಲು ರೇಟ್ ಮಾಡಲಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ 2.3kg ತೂಕವನ್ನು ಹೊಂದಿದೆ. ಗೇಮರ್‌ಗಳಿಗಾಗಿ ಅತ್ಯುತ್ತಮ ರಚನೆ ಪಡೆದಿದೆ.

ಹಾಗೆಯೇ ಈ ಲ್ಯಾಪ್‌ಟಾಪ್ ಡೈನಾಮಿಕ್ ಪವರ್ ತಂತ್ರಜ್ಞಾನ ಹೊಂದಿದೆ. ಇದು ನೈಜ-ಸಮಯದ CPU ಮತ್ತು GPU ಸಾಮರ್ಥ್ಯವನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಲ್ಯಾಪ್‌ಟಾಪ್ ಸುಧಾರಿತ ಆಂತರಿಕ ವಿನ್ಯಾಸ ಮತ್ತು ವರ್ಧಿತ ಗಾಳಿಯ ಹರಿವಿನ ಕಾರ್ಯವಿಧಾನವನ್ನು ಹೊಂದಿದೆ. ಇದರ ಬ್ಲೇಡ್‌ಗಳು 2.5 ಪಟ್ಟು ತೆಳ್ಳಗಿದ್ದು, ಹೆಚ್‌ಪಿ ಓಮೆನ್ 15 ಕ್ಕೆ ಹೋಲಿಸಿದರೆ ಬ್ಲೇಡ್ ಎಣಿಕೆಯಲ್ಲಿ 200 ಪ್ರತಿಶತದಷ್ಟು ಹೆಚ್ಚಳವನ್ನು ಹೊಂದಿವೆ.

ಹೆಚ್‌ಪಿ ಓಮೆನ್ 16 ಗೇಮಿಂಗ್ ಲ್ಯಾಪ್‌ಟಾಪ್‌ ಬಿಡುಗಡೆ!..ಬೆಲೆ ಎಷ್ಟು?

ಹೆಚ್‌ಪಿ ಓಮೆನ್ 16 ಗೇಮಿಂಗ್ ಲ್ಯಾಪ್‌ಟಾಪ್ ಬೆಲೆ ಎಷ್ಟು?
ಭಾರತದಲ್ಲಿ ಹೆಚ್‌ಪಿ ಓಮೆನ್ 16 ಗೇಮಿಂಗ್ ಲ್ಯಾಪ್‌ಟಾಪ್ ಬೆಲೆ 1,39,999ರೂ. ಆಗಿದೆ. ಇನ್ನು ಈ ಗೇಮಿಂಗ್ ಲ್ಯಾಪ್‌ಟಾಪ್ ಹೆಚ್‌ಪಿ ವರ್ಲ್ಡ್ ಸ್ಟೋರ್‌ಗಳು, ಹೆಚ್‌ಪಿ ಆನ್‌ಲೈನ್ ಸ್ಟೋರ್ ಮತ್ತು ದೇಶದ ಇತರ ಪ್ರಮುಖ ಪ್ರಮುಖ ರೀಟೇಲ್ ಮತ್ತು ಆನ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಇನ್ನು ಈ ಗೇಮಿಂಗ್ ಲ್ಯಾಪ್‌ಟಾಪ್ ಕಳೆದ ಮೇ ತಿಂಗಳಿನಲ್ಲಿ US ನಲ್ಲಿ ಅನಾವರಣ ಆಗಿತ್ತು.

ಹಾಗೆಯೇ ಈ ಹಿಂದಿನ ಹೆಚ್‌ಪಿ ಒಮೆನ್ 15 ಲ್ಯಾಪ್‌ಟಾಪ್‌ ಸಹ ಗ್ರಾಹಕರ ಗಮನ ಸೆಳೆದಿದೆ. ಹೆಚ್‌ಪಿ 8% ಕಡಿಮೆ ಮತ್ತು 11% ತೆಳುವಾದ ಚೌಕಟ್ಟನ್ನು ನೀಡಿದೆ. ಇದಲ್ಲದೆ, ಇದು ಹೊಸ 180 ಡಿಗ್ರಿ ಫ್ಲಾಟ್ ಹಿಂಜ್ ವಿನ್ಯಾಸ ಹೊಂದಿರುವ 15.6-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಎನ್ವಿಡಿಯಾ ಜಿ-ಸಿಂಕ್ ಟೆಕ್ನಾಲಜಿಯ ಜೊತೆಗೆ ಗ್ರಾಹಕರು ಅಲ್ಟ್ರಾ-ಎಚ್‌ಡಿ 120Hz ಅಥವಾ ಫುಲ್‌ ಹೆಚ್‌ಡಿ 300Hz ಕಾನ್ಫಿಗರೇಶನ್ ಹೊಂದಿರುವ OLED ಡಿಸ್‌ಪ್ಲೇಯನ್ನು ಆಯ್ಕೆ ಮಾಡಬಹುದಾಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ನಲ್ಲಿ 10 ನೇ ತಲೆಮಾರಿನ ಇಂಟೆಲ್ ಕೋರ್ I7 H-ಸೀರೀಸ್ ಮತ್ತು AMD ರೈಜೆನ್ 7 4800 H-ಸೀರಿಸ್ ಪ್ರೊಸೆಸರ್ ಆಯ್ಕೆಗಳನ್ನ ಸಹ ನೀಡಲಾಗಿದೆ. ಹಾಗೇಯೇ 4GB RAM ಮತ್ತು 32GB ಸಂಗ್ರಹ ಸಾಮರ್ಥ್ಯದ ಆಯ್ಕೆಯನ್ನ ಹೊಂದಿದೆ.

ಇದಲ್ಲದೆ ಈ ಲ್ಯಾಪ್‌ಟಾಪ್‌ ಎನ್ವಿಡಿಯಾ ಜಿಫೋರ್ಸ್ RTX2070 ಸೂಪರ್ ವರೆಗೆ ಮ್ಯಾಕ್ಸ್-ಕ್ಯೂ ಡಿಸೈನ್ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಅಲ್ಲದೆ RAID 0 ಬೆಂಬಲದೊಂದಿಗೆ ಇದು 1TB ಪಿಸಿಐಇ ಎಸ್‌ಎಸ್‌ಡಿ ಅನ್ನು ಸಹ ಒಳಗೊಂಡಿದೆ. ಇನ್ನು ಈ ಹೊಸ ಒಮೆನ್ 15 ಮಾದರಿಯ ರಿಬ್ರಾಂಡೆಡ್ ಒಮೆನ್ ಲೋಗ ಇದೆ. ಅಂತೆಯೇ, IR ಥರ್ಮೋಪೈಲ್ ಸೆನ್ಸಾರ್‌ ಅನ್ನು ಒದಗಿಸಲಾಗಿದೆ. ಇದು ಫ್ಯಾನ್ ಅಕೌಸ್ಟಿಕ್ ಕಂಟ್ರೋಲ್‌ ಕಾಪಾಡಿಕೊಳ್ಳುವ ಮೂಲಕ ಉಷ್ಣ ದಕ್ಷತೆಯನ್ನು ಉತ್ತಮಗೊಳಿಸಲು ಪ್ರಚೋದಿಸುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ನಲ್ಲಿ ಒಮೆನ್ ಟೆಂಪೆಸ್ಟ್ ಕೂಲಿಂಗ್ ಟೆಕ್ನಾಲಜಿ ಜೊತೆಗೆ 12 ವಿ ಫ್ಯಾನ್ ಮತ್ತು ಮೂರು-ಸೈಡೆಡ್ ವೆಂಟಿಂಗ್ ಜೊತೆಗೆ ಐದು-ವೇ ಏರ್‌ ಹರಿವನ್ನ ಒಳಗೊಂಡಿದೆ. ಅಲ್ಲದೆ RGB ಪರ್-ಕೀ ಲೈಟಿಂಗ್ ಅನ್ನು ನೀಡಿದೆ. ಜೊತೆಗೆ ಕಾನ್ಫಿಗರೇಶನ್ ಅನ್ನು ವಿಸ್ತರಿಸಲು ಬಯಸಿದರೆ, ಡಿಸ್‌ಪ್ಲೇ ಪ್ರವೇಶವನ್ನು ಫಿಲಿಪ್ಸ್-ಹೆಡ್ ಸ್ಕ್ರೂಗಳನ್ನ ಹೊಂದಿದೆ.ಇನ್ನು ಈ ಲ್ಯಾಪ್‌ಟಾಪ್‌ ಸಿಂಗಲ್‌ ಚಾರ್ಜ್‌ನಲ್ಲಿ 12.5 ಗಂಟೆಗಳ ಬ್ಯಾಟರಿ ಅವಧಿಯನ್ನು ತಲುಪಿಸುತ್ತದೆ.

Best Mobiles in India

English summary
HP Omen 16 (2021) Gaming Laptop With Up to 165Hz Display Launched in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+