Home
ಸುದ್ದಿಜಾಲ

HPಯಿಂದ ಹೊಸ ಲ್ಯಾಪ್‌ಟಾಪ್‌ ಲಾಂಚ್!..ಇದರ ತೂಕ ಕೇಳಿದ್ರೆ, ಅಚ್ಚರಿ ಪಡ್ತೀರಾ!

ಟೆಕ್‌ ಪ್ರಿಯರ ನೆಚ್ಚಿನ CES 2024 (ಗ್ರಾಹಕರ ಎಲೆಕ್ಟ್ರಾನಿಕ್ಸ್ ಶೋ - CES ) ಕಾರ್ಯಕ್ರಮ ಲಾಸ್ ವೇಗಾಸ್‌ನಲ್ಲಿ ಲೈವ್ ಆಗಿದೆ. ಈ ಕಾರ್ಯಕ್ರಮವು ಇದೇ ಜನವರಿ 12 ರ ವರೆಗೂ ನಡೆಯಲಿದ್ದು, ಸಾಕಷ್ಟು ನೂತನ ಉತ್ಪನ್ನಗಳ ಅನಾವರಣಕ್ಕೆ ವೇದಿಕೆ ಆಗಿದೆ. ಈ ಕಾರ್ಯಕ್ರಮದಲ್ಲಿ ಜನಪ್ರಿಯ ಹೆಚ್‌ಪಿ ಸಂಸ್ಥೆಯು ವಿಶ್ವದ ಅತ್ಯಂತ ಹಗುರ ಗೇಮಿಂಗ್‌ ಲ್ಯಾಪ್‌ಟಾಪ್‌ ಅನ್ನು ಅನಾವರಣ ಮಾಡಿದೆ.

ಹೌದು, CES 2024 ಕಾರ್ಯಕ್ರಮದಲ್ಲಿ ಹೆಚ್‌ಪಿ ಸಂಸ್ಥೆಯು HP Omen Transcend 14 ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಇದು ಗೇಮಿಂಗ್‌ ಮಾದರಿಯ ಲ್ಯಾಪ್‌ಟಾಪ್‌ ಆಗಿದ್ದು, ವಿಶ್ವದ ಅತೀ ಹಗುರ ಗೇಮಿಂಗ್ (1.6kg) ಲ್ಯಾಪ್‌ಟಾಪ್‌ ಎಂದು ಸಂಸ್ಥೆಯು ಹೇಳಿಕೊಂಡಿದೆ. ಅಂದಹಾಗೆ ಈ ಲ್ಯಾಪ್‌ಟಾಪ್‌ ಶಾಡೋ ಬ್ಲ್ಯಾಕ್ ಮತ್ತು ಸೆರಾಮಿಕ್ ವೈಟ್ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

HPಯಿಂದ ಹೊಸ ಲ್ಯಾಪ್‌ಟಾಪ್‌ ಲಾಂಚ್!..ಇದರ ತೂಕ ಕೇಳಿದ್ರೆ, ಅಚ್ಚರಿ ಪಡ್ತೀರಾ!

ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ ಅಲ್ಟ್ರಾ 9 ಪ್ರೊಸೆಸರ್, Nvidia GeForce RTX 4070 GPU ಮತ್ತು ಅಲ್ಟ್ರಾ-ವೈಬ್ರೆಂಟ್ RGB ಕೀಬೋರ್ಡ್ ಅರೆಪಾರದರ್ಶಕ ಕೀಕ್ಯಾಪ್‌ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಈ ಲ್ಯಾಪ್‌ಟಾಪ್ ಒಂದೇ ಚಾರ್ಜ್‌ನಲ್ಲಿ ಸುಮಾರು 6 ಗಂಟೆಗಳ ಬ್ಯಾಟರಿ ಅವಧಿ ಅನ್ನು ಒದಗಿಸಲಿದೆ ಎನ್ನಲಾಗಿದೆ. ಹಾಗಾದರೇ ಹೆಚ್‌ಪಿ ಓಮೆನ್‌ ಟ್ರಾನ್ಸ್‌ಸೆಂಡ್ 14 ಲ್ಯಾಪ್‌ಟಾಪ್‌ನ ಇತರೆ ಫೀಚರ್ಸ್‌ ಮುಂದೆ ತಿಳಿಯೋಣ ಬನ್ನಿರಿ.

HPಯಿಂದ ಹೊಸ ಲ್ಯಾಪ್‌ಟಾಪ್‌ ಲಾಂಚ್!..ಇದರ ತೂಕ ಕೇಳಿದ್ರೆ, ಅಚ್ಚರಿ ಪಡ್ತೀರಾ!

ಹೆಚ್‌ಪಿ ಓಮೆನ್‌ ಟ್ರಾನ್ಸ್‌ಸೆಂಡ್ 14 - ಫೀಚರ್ಸ್‌

ಹೆಚ್‌ಪಿ ಓಮೆನ್‌ ಟ್ರಾನ್ಸ್‌ಸೆಂಡ್ 14 ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 2.8K ರೆಸಲ್ಯೂಶನ್ ಹಾಗೂ 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿದೆ. ಇದು 500 nits ಬ್ರೈಟ್‌ನೆಸ್ ಮತ್ತು HDR ಬೆಂಬಲ ಹೊಂದಿದ್ದು, OLED ಡಿಸ್‌ಪ್ಲೇ ಮಾದರಿಯ ಪಡೆದಿದೆ.

ಹಾಗೆಯೇ ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ ಅಲ್ಟ್ರಾ 9 ಪ್ರೊಸೆಸರ್ ಪವರ್‌ ಪಡೆದಿದ್ದು, ಎನ್‌ವಿಡಿಯಾ ಆರ್‌ಟಿಎಕ್ಸ್ 4070 ಜಿಪಿಯು ಜೊತೆ ಜೋಡಿಸಲಾಗಿದೆ. ಅಲ್ಲದೇ ಲ್ಯಾಪ್‌ಟಾಪ್ 32GB RAM ಮತ್ತು 2TB ಆಂತರಿಕ ಸಂಗ್ರಹಣೆಗೆ ಸಪೋರ್ಟ್‌ ಕೂಡಾ ಹೊಂದಿದೆ. ಇದು ಮರುವಿನ್ಯಾಸಗೊಳಿಸಲಾದ ಚಾಸಿಸ್ ಅನ್ನು ಸಹ ಹೊಂದಿದೆ.

HPಯಿಂದ ಹೊಸ ಲ್ಯಾಪ್‌ಟಾಪ್‌ ಲಾಂಚ್!..ಇದರ ತೂಕ ಕೇಳಿದ್ರೆ, ಅಚ್ಚರಿ ಪಡ್ತೀರಾ!

ಹೆಚ್‌ಪಿ ಓಮೆನ್‌ ಟ್ರಾನ್ಸ್‌ಸೆಂಡ್ 14 ಲ್ಯಾಪ್‌ಟಾಪ್‌ Wi-Fi 7 ಸಪೋರ್ಟ್‌ ಪಡೆದಿರುವ ಜೊತೆಗೆ ಬ್ಲೂಟೂತ್ v5.4, USB A-ಪೋರ್ಟ್, USB C-ಪೋರ್ಟ್ ಮತ್ತು 3.5mm ಆಡಿಯೋ ಜಾಕ್ ಸೌಲಭ್ಯಗಳನ್ನು ಕೂಡಾ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 140W ಚಾರ್ಜಿಂಗ್‌ಗೆ ಸಪೋರ್ಟ್ ಜೊತೆಗೆ 71WHr ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಲ್ಯಾಪ್‌ಟಾಪ್ ಒಂದೇ ಚಾರ್ಜ್‌ನಲ್ಲಿ ಸುಮಾರು 6 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಬೆಲೆ ಎಷ್ಟು ಹಾಗೂ ಲಭ್ಯತೆಯ ಮಾಹಿತಿ

ಹೆಚ್‌ಪಿ ಓಮೆನ್‌ ಟ್ರಾನ್ಸ್‌ಸೆಂಡ್ 14 ಲ್ಯಾಪ್‌ಟಾಪ್‌ ಆರಂಭಿಕ ಬೆಲೆಯನ್ನು ಕ್ರಮವಾಗಿ $1,899 (ಭಾರತದಲ್ಲಿ ಅಂದಾಜು 1,57,900 ರೂ) ಮತ್ತು $1,199 (ಭಾರತದಲ್ಲಿ ಅಂದಾಜು 99,700 ರೂ) ಎಂದು ಹೇಳಲಾಗಿದೆ. ಇನ್ನು ಹೆಚ್‌ಪಿ ಓಮೆನ್‌ ಟ್ರಾನ್ಸ್‌ಸೆಂಡ್ 14 ಲ್ಯಾಪ್‌ಟಾಪ್‌ ಶಾಡೋ ಬ್ಲ್ಯಾಕ್ ಮತ್ತು ಸೆರಾಮಿಕ್ ವೈಟ್ ಬಣ್ಣಗಳ ಆಯ್ಕೆ ಪಡೆದಿದೆ.

ಅಧಿಕೃತ ಹೆಚ್‌ಪಿ ವೆಬ್‌ಸೈಟ್‌ನಿಂದ ಮುಂಗಡ-ಕೋರಿಕೆಗಾಗಿ ಲ್ಯಾಪ್‌ಟಾಪ್ $1,499 (ಸುಮಾರು 1,24,600 ರೂ) ಆರಂಭಿಕ ಬೆಲೆಗೆ ಲಭ್ಯವಿದೆ. ಇದು ಮುಂಬರುವ ಕೆಲವು ದಿನಗಳಲ್ಲಿ US ನಲ್ಲಿ ಬೆಸ್ಟ್ ಬೈನಿಂದ ಲಭ್ಯವಿರುತ್ತದೆ. ಸದ್ಯಕ್ಕೆ ಭಾರತದ ಮಾರುಕಟ್ಟೆಯಲ್ಲಿ ಈ ಲ್ಯಾಪ್‌ಟಾಪ್‌ ಲಭ್ಯತೆಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

Best Mobiles in India

English summary
HP Omen Transcend 14 Debuts as World’s Lightest Gaming Laptop. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+