ಭಾರತದಲ್ಲಿ ಹೆಚ್‌ಪಿ ಪೆವಿಲಿಯನ್ 15 (2022) ಲ್ಯಾಪ್‌ಟಾಪ್‌ ಲಾಂಚ್!..ಅಚ್ಚರಿಯ ಬೆಲೆ?

|

ಟೆಕ್‌ ವಲಯದಲ್ಲಿ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಟೆಕ್ನಾಲಜಿ ಮುಂದುವರೆದಂತೆ ನೂತನ ತಂತ್ರಜ್ಞಾನವನ್ನ ಒಳಗೊ0ಡಿರುವ ಲ್ಯಾಫ್‌ಟಾಪ್‌ಗಳು ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಸದ್ಯ ಪ್ರಮುಖ ಲ್ಯಾಪ್‌ಟಾಪ್‌ ಕಂಪಿನಿಗಳ ಪೈಕಿ ಹೆಚ್‌ಪಿ ಸಹ ಒಂದಾಗಿದೆ. ಇನ್ನು ಹೆಚ್‌ಪಿ ಕಂಪನಿಯು ಈಗಾಗಲೇ ಭಿನ್ನ ಶ್ರೇಣಿಯಲ್ಲಿ ಹಲವು ಲ್ಯಾಪ್‌ಟಾಪ್‌ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಸಂಸ್ತೆಯು ಹೊಸದಾಗಿ ಹೆಚ್‌ಪಿ ಪೆವಿಲಿಯನ್ 15 (2022) ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ಹೆಚ್‌ಪಿ ಪೆವಿಲಿಯನ್ 15 (2022) ಲ್ಯಾಪ್‌ಟಾಪ್‌ ಲಾಂಚ್!.ಅಚ್ಚರಿ ಬೆಲೆ?

ಹೌದು, ಹೆಚ್‌ಪಿ ಸಂಸ್ಥೆಯು ಭಾರತದಲ್ಲಿ ನೂತನವಾಗಿ ಹೆಚ್‌ಪಿ ಪೆವಿಲಿಯನ್ 15 (2022) ಲ್ಯಾಪ್‌ಟಾಪ್‌ ಲಾಂಚ್ ಮಾಡಿದೆ. ಈ ಲ್ಯಾಪ್‌ಟಾಪ್ 12 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಸಾಮರ್ಥ್ಯ ಒಳಗೊಂಡಿದೆ. ಹಾಗೆಯೇ ತಾತ್ಕಾಲಿಕ ಶಬ್ದ ಕಡಿತ (TNR) ಜೊತೆಗೆ ಸಂಯೋಜಿತ ಅಮೆಜಾನ್ ಅಲೆಕ್ಸಾ ಪ್ರವೇಶದೊಂದಿಗೆ ಹೆಚ್‌ಡಿ ವಿಡಿಯೋ ಕ್ಯಾಮೆರಾದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದರೆ ಹೆಚ್‌ಪಿ ಪೆವಿಲಿಯನ್ 15 (2022) ಲ್ಯಾಪ್‌ಟಾಪ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹೆಚ್‌ಪಿ ಪೆವಿಲಿಯನ್ 15 (2022) ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದೆ. ನೀಲಿ ಬೆಳಕಿನ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪರದೆಯೊಳಗೆ ಸಂಯೋಜಿಸಲಾದ ಯಾವಾಗಲೂ ಆನ್ ಬ್ಲೂ ಲೈಟ್ ಫಿಲ್ಟರ್ EyeSafe ಪ್ರಮಾಣೀಕೃತ ಸೌಲಭ್ಯ ಹೊಂದಿದೆ. ಹಾಗೆಯೇ ಇದು ಅಲ್ಯೂಮಿನಿಯಂ ಮತ್ತು ಓಶಿಯನ್ ಬೌಂಡ್ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಇತ್ತೀಚಿನ 12 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಆಯ್ಕೆಗಳನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ವಿಂಡೋಸ್‌ 11 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲಿ ಹೆಚ್‌ಪಿ ಪೆವಿಲಿಯನ್ 15 (2022) ಲ್ಯಾಪ್‌ಟಾಪ್‌ ಲಾಂಚ್!.ಅಚ್ಚರಿ ಬೆಲೆ?

ಇದರೊಂದಿಗೆ Nvidia GeForce MX 550 ಗ್ರಾಫಿಕ್ಸ್ ಸೌಲಭ್ಯ ಇದ್ದು, ವೀಡಿಯೊ ಕರೆಗಳಲ್ಲಿ ಶಬ್ದವನ್ನು ಕಡಿಮೆ ಮಾಡಲು TNR ನೊಂದಿಗೆ ವೆಬ್‌ಕ್ಯಾಮ್ ಕೂಡ ಇದೆ. ಇದಲ್ಲದೆ, ಲ್ಯಾಪ್‌ಟಾಪ್ ಸಂಯೋಜಿತ ಡ್ಯುಯಲ್ ಅರೇ ಡಿಜಿಟಲ್ ಮೈಕ್ರೊಫೋನ್‌ ಗಳನ್ನು ಒಳಗೊಂಡಿದೆ. ಹಾಗೆಯೇ ಹೆಚ್‌ಪಿ ಪೆವಿಲಿಯನ್ 15 (2022) ನಲ್ಲಿ ಪೂರ್ಣ-ಗಾತ್ರದ ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ನೀಡಿದೆ. ಲ್ಯಾಪ್‌ಟಾಪ್ ಬ್ಯಾಂಗ್ ಮತ್ತು ಒಲುಫ್‌ಸೆನ್ ಆಡಿಯೊ ವನ್ನು ಸಹ ಹೊಂದಿದೆ ಮತ್ತು 8.75 ಗಂಟೆಗಳ ಬ್ಯಾಟರಿ ಅವಧಿಯನ್ನು ತಲುಪಿಸಲು ರೇಟ್ ಮಾಡಲಾಗಿದೆ. ಇದು ವೇಗವಾದ ಚಾರ್ಜಿಂಗ್ ಅನುಭವವನ್ನು ನೀಡಲು ಹೆಚ್‌ಪಿ ಫಾಸ್ಟ್ ಚಾರ್ಜ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ಅಡಾಪ್ಟಿವ್ ಬ್ಯಾಟರಿ ಆಪ್ಟಿಮೈಸರ್ ಇದೆ.

ಭಾರತದಲ್ಲಿ ಹೆಚ್‌ಪಿ ಪೆವಿಲಿಯನ್ 15 (2022) ಬೆಲೆ ಎಷ್ಟು?
ಭಾರತದಲ್ಲಿ ಹೆಚ್‌ಪಿ ಪೆವಿಲಿಯನ್ 15 (2022) ಲ್ಯಾಪ್‌ಟಾಪ್ ಬೆಲೆ 65,999ರೂ. ಆಗಿದೆ. ಈ ಲ್ಯಾಪ್‌ಟಾಪ್ ಫಾಗ್ ಬ್ಲೂ, ನ್ಯಾಚುರಲ್ ಸಿಲ್ವರ್ ಮತ್ತು ವಾರ್ಮ್ ಗೋಲ್ಡ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಸದ್ಯ ಕೆಲವು ಕಾನ್ಫಿಗರೇಶನ್‌ಗಳಲ್ಲಿ HP.com ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ದೇಶಾದ್ಯಂತ ಕಂಪನಿಯ ಇತರ ಆನ್‌ಲೈನ್ ಮತ್ತು ಆನ್‌ಲೈನ್ ಚಾನೆಲ್‌ಗಳ ಮೂಲಕ ಮಾರಾಟವಾಗಲಿದೆ. ಇನ್ನು ಹೊಸ ಪೆವಿಲಿಯನ್ 15 ರ ಜೊತೆಗೆ, ಹೊಸ ಪೆವಿಲಿಯನ್ ಶ್ರೇಣಿಯು ಹೆಚ್‌ಪಿ ಪೆವಿಲಿಯನ್ 14 AMD ಮಾದರಿಯನ್ನು 55,999 ರೂ. ಪೆವಿಲಿಯನ್ 15 AMD 5000 ಸರಣಿಯ ರೂಪಾಂತರ 59,999 ರೂ. ಆಗಿದೆ. ಹಾಗೆಯೇ ಪೆವಿಲಿಯನ್ 14 x360 55,999ರೂ. ಮತ್ತು ಪೆವಿಲಿಯನ್ 14 ಇಂಟೆಲ್ ಮಾದರಿ 60,999ರೂ. ಆಗಿದೆ.

Best Mobiles in India

English summary
HP Pavilion 15 (2022) Launched in India: Price and Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X