HP laptop: ಹೆಚ್‌ಪಿ ಪೆವಿಲಿಯನ್ ಪ್ಲಸ್ 14, 16 ಲ್ಯಾಪ್‌ಟಾಪ್ ಲಾಂಚ್; ಫೀಚರ್ಸ್ ಏನಿದೆ? ಬೆಲೆ ಎಷ್ಟು?
ಹೆಚ್‌ಪಿ ಲ್ಯಾಪ್‌ಟಾಪ್‌ಗಳು (HP laptop) ಇತರೆ ಲ್ಯಾಪ್‌ಟಾಪ್‌ಗಳಿಂತ ಭಿನ್ನ ಫೀಚರ್ಸ್ ಆಯ್ಕೆ ಪಡೆದುಕೊಂಡಿವೆ. ಅದರಲ್ಲೂ ಬಜೆಟ್ ಬೆಲೆಯಿಂದ ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳು ಲಭ್ಯ ಇದ್ದು, ಈ ನಡುವೆ ಭಾರತದ ಯುವ ಪೀಳಿಗೆಯನ್ನು ಆಧಾರವಾಗಿರಿಸಿಕೊಂಡು ಎರಡು ಲ್ಯಾಪ್‌ಟಾಪ್‌ಗಳನ್ನು ಲಾಂಚ್ ಮಾಡಲಾಗಿದೆ.
ಹೌದು, ಹೆಚ್‌ಪಿ ಇದೀಗ ಭಾರತದಲ್ಲಿ ತನ್ನ ಇತ್ತೀಚಿನ ಪೆವಿಲಿಯನ್ ಪ್ಲಸ್ ನೋಟ್‌ಬುಕ್‌ಗಳನ್ನು (HP launches Pavilion Plus laptops) ಲಾಂಚ್ ಮಾಡಿದೆ. ಇವುಗಳನ್ನು ಯುವ ಪೀಳಿಗೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೆಚ್‌ಪಿ ಹೇಳಿಕೊಂಡಿದೆ. ಈ ಹೊಸ ಪೆವಿಲಿಯನ್ ಪ್ಲಸ್ 14 ಮತ್ತು 16 ಲ್ಯಾಪ್‌ಟಾಪ್‌ಗಳು (Pavilion Plus 14 and 16 laptop) ಸುಧಾರಿತ 13 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್ ಆಯ್ಕೆ ಹಾಗೂ AMD ರೈಜೆನ್ 7 ಸರಣಿಯ ಪ್ರೊಸೆಸರ್‌ಗಳನ್ನು ಹೊಂದಿವೆ. ಹಾಗಿದ್ರೆ, ಇವುಗಳ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇವುಗಳ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಹೆಚ್‌ಪಿ ಪೆವಿಲಿಯನ್ ಪ್ಲಸ್ 16 ಲ್ಯಾಪ್‌ಟಾಪ್ ಫೀಚರ್ಸ್: ಈ ಲ್ಯಾಪ್‌ಟಾಪ್ 16 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 2560 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 48-120Hz ರಿಫ್ರೆಶ್ ರೇಟ್, ಮೈಕ್ರೋ-ಎಡ್ಜ್, ಆಂಟಿ-ಗ್ಲೇರ್, 400 ನಿಟ್ಸ್ ಬ್ರೈಟ್‌ನೆಸ್ ಆಯ್ಕೆಯೊಂದಿಗೆ 100% sRGB ಸೌಲಭ್ಯ ಪಡೆದುಕೊಂಡಿದೆ ಹಾಗೂ ಕಡಿಮೆ ನೀಲಿ ಲೈಟ್‌ಗಾಗಿ TUV + ಐಸೇಫ್ ಡಿಸ್‌ಪ್ಲೇ, ಫ್ಲಿಕರ್-ಫ್ರೀ, 89.74% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಇದು ಹೊಂದಿದೆ.
ಇದರೊಂದಿಗೆ ಇಂಟೆಲ್ ಕೋರ್ i7-13700H / ಇಂಟೆಲ್ ಕೋರ್ i5-13500H ನ ಪ್ರೊಸೆಸರ್‌ನಲ್ಲಿ ಈ ಲ್ಯಾಪ್‌ಟಾಪ್ ಕಾಣಿಸಿಕೊಂಡಿದೆ. ಇದರ ಜೊತೆಗೆ ಇಂಟೆಲ್ ಐರಿಸ್ ಎಕ್ಸ್‌ಇ ಗ್ರಾಫಿಕ್ಸ್/ಎನ್‌ವಿಡಿಯಾ ಜಿಫೋರ್ಸ್ RTX 3050 ಗ್ರಾಫಿಕ್ಸ್ ಬೆಂಬಲದೊಂದಿಗೆ ಕಾಣಿಸಿಕೊಂಡಿದ್ದು, 512 GB / 1 TB ಸ್ಟೋರೇಜ್ ಆಯ್ಕೆಯನ್ನು ಈ ಲ್ಯಾಪ್‌ಟಾಪ್ ಪಡೆದುಕೊಂಡಿದೆ.
ಉಳಿದಂತೆ ಈ ಲ್ಯಾಪ್‌ಟಾಪ್ ಡ್ಯುಯಲ್ ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ಅತ್ಯುತ್ತಮ ಅನುಭವ ನೀಡಲಿದೆ ಮತ್ತು ಹೆಚ್‌ಪಿ ವೈಡ್ ವಿಷನ್ 5 ಮೆಗಾಪಿಕ್ಸೆಲ್ ಐಆರ್ ಕ್ಯಾಮೆರಾ, ಡ್ಯುಯಲ್ ಮೈಕ್ರೊಫೋನ್ ಆಯ್ಕೆಯನ್ನು ಈ ಲ್ಯಾಪ್‌ಟಾಪ್ ಹೊಂದಿದೆ. ಕೊನೆಯದಾಗಿ ಇದು 68Whr ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, ಇದರ ಚಾರ್ಜಿಂಗ್‌ಗಾಗಿ 90W/135W AC ಪವರ್ ಅಡಾಪ್ಟರ್ ಆಯ್ಕೆ ಪಡೆದುಕೊಂಡಿದೆ.
ಹೆಚ್‌ಪಿ ಪೆವಿಲಿಯನ್ ಪ್ಲಸ್ 14 ಲ್ಯಾಪ್‌ಟಾಪ್ ಫೀಚರ್ಸ್: ಈ ಲ್ಯಾಪ್‌ಟಾಪ್ 14 ಇಂಚಿನ OLED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 2880 x 1800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 48-120Hz ರಿಫ್ರೆಶ್ ರೇಟ್ ಹಾಗೂ ಬ್ರೈಟ್‌ವ್ಯೂ, ಕಡಿಮೆ ನೀಲಿ ಬೆಳಕು, 400 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ, 100% DCI-P3, IMAX-ವರ್ಧಿತ ರೇಟ್ ಅನ್ನು ಇದು ಹೊಂದಿದೆ.
ಪ್ರಮುಖವಾಗಿ ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ 13 ನೇ ಜನ್ i7-1355U ಹಾಗೂ AMD ರೈಜೆನ್ 7 7840H ಪ್ರೊಸೆಸರ್ ಬಲದಲ್ಲಿ ಕಾಣಿಸಿಕೊಂಡಿದ್ದು, ಇಂಟೆಲ್ ಐರಿಸ್ ಎಕ್ಸ್ ಗ್ರಾಫಿಕ್ಸ್/ಎಎಮ್‌ಡಿ ರೇಡಿಯನ್ ಗ್ರಾಫಿಕ್ಸ್ ಬೆಂಬಲ ಪಡೆದಿದೆ. ಹಾಗೆಯೇ 16 GB RAM ಹಾಗೂ TB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಈ ಲ್ಯಾಪ್‌ಟಾಪ್ ಲಭ್ಯ ಇದೆ.
ಉಳಿದಂತೆ ಈ ಲ್ಯಾಪ್‌ಟಾಪ್ ಕೂಡ ಡ್ಯುಯಲ್ ಸ್ಪೀಕರ್ ಆಯ್ಕೆ, ಹೆಚ್‌ಪಿ ವೈಡ್ ವಿಷನ್ 5 ಮೆಗಾಪಿಕ್ಸೆಲ್ ಐಆರ್ ಕ್ಯಾಮೆರಾ, ಡ್ಯುಯಲ್ ಮೈಕ್ ಅನ್ನು ಹೊಂದಿದ್ದು, ಯುಎಸ್‌ಬಿ ಟೈಪ್-ಸಿ ಜೊತೆಗೆ x1 ಥಂಡರ್‌ಬೋಲ್ಟ್ 4, x1 ಯುಎಸ್‌ಬಿ ಟೈಪ್-ಎ, x1 ಯುಎಸ್‌ಬಿ ಟೈಪ್-ಎ, 1 ಹೆಡ್‌ಫೋನ್/ಮೈಕ್, x1 ಹೆಚ್‌ಡಿಎಮ್‌ಐ 2.1 ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ.
ಈ ಹೆಚ್‌ಪಿ ಪೆವಿಲಿಯನ್ ಪ್ಲಸ್ 16 ಮತ್ತು 14 ಲ್ಯಾಪ್‌ಟಾಪ್‌ಗಳು ಬುದ್ಧಿವಂತ ಎಐ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ಹೆಚ್‌ಪಿ ಪ್ರೆಸೆನ್ಸ್ 2.0 ವಿಡಿಯೋ ಕಾನ್ಫರೆನ್ಸಿಂಗ್ ಅನ್ನು ವರ್ಧಿಸುತ್ತದೆ. ಅಂದರೆ ಈ ಮೂಲಕ ಬ್ಯಾಗ್ರೌಂಡ್ ಅನ್ನು ಮಸುಕುಗೊಳಿಸಲು ಮತ್ತು ಅವುಗಳನ್ನು ಕಸ್ಟಮ್ ಚಿತ್ರಗಳೊಂದಿಗೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ವೃತ್ತಿಪರ ನೋಟವನ್ನು ಖಾತ್ರಿಪಡಿಸುತ್ತದೆ.

ಹೆಚ್‌ಪಿ ಪೆವಿಲಿಯನ್ ಪ್ಲಸ್ 16 ಮತ್ತು 14 ಲ್ಯಾಪ್‌ಟಾಪ್ ಬೆಲೆ ಹಾಗೂ ಲಭ್ಯತೆ: ಹೆಚ್‌ಪಿ ಪೆವಿಲಿಯನ್ ಪ್ಲಸ್ 16 ಲ್ಯಾಪ್‌ಟಾಪ್ 1,24,999ರೂ.ಗಳ ಆರಂಭಿಕ ಬೆಲೆ ಹೊಂದಿದ್ದು, ಇದು ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಹೆಚ್‌ಪಿ ಪೆವಿಲಿಯನ್ ಪ್ಲಸ್ 14 ಲ್ಯಾಪ್‌ಟಾಪ್ 91,999ರೂ.ಗಳ ಬೆಲೆಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್ ಮೂನ್‌ಲೈಟ್ ಬ್ಲೂ ಮತ್ತು ನ್ಯಾಚುರಲ್ ಸಿಲ್ವರ್‌ನಲ್ಲಿ ಕಾಣಿಸಿಕೊಂಡಿದೆ.


Click it and Unblock the Notifications








