HP laptops: ಭಾರತದಲ್ಲಿ ಹೆಚ್‌ಪಿ ಸ್ಪೆಕ್ಟರ್ x360 ಲ್ಯಾಪ್‌ಟಾಪ್ ಲಾಂಚ್! ಎಐ ಫೀಚರ್ಸ್, ಬೆಲೆ ಎಷ್ಟು?
ಹೆಚ್‌ಪಿ ಲ್ಯಾಪ್‌ಟಾಪ್‌ಗಳು (HP Laptop) ಉತ್ತಮ ಗುಣಮಟ್ಟದ ಹಾಗೂ ಸುಧಾರಿಯ ಕಾರ್ಯಕ್ಷಮತೆ ನೀಡುವ ಡಿವೈಸ್‌ಗಳಾಗಿವೆ. ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್ ಆಯ್ಕೆಯ ಲ್ಯಾಪ್‌ಟಾಪ್‌ಗಳನ್ನು ನೋಡಬಹುದಾಗಿದ್ದು, ಈ ನಡುವೆ ಎಐ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಲ್ಯಾಪ್‌ಟಾಪ್ ಅನ್ನು ಅನಾವರಣ ಮಾಡಲಾಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ಲ್ಯಾಪ್‌ಟಾಪ್‌ಗಳು ಸಹ ಎಐ ಚಾಲಿತ ಫೀಚರ್ಸ್ ಆಯ್ಕೆಯೊಂದಿಗೆ ಕಾಣಿಸಿಕೊಳ್ಳುತ್ತಿವೆ. ಇದರ ಭಾಗವಾಗಿಯೇ ಈಗ ಹೆಚ್‌ಪಿ ಭಾರತದಲ್ಲಿ ತನ್ನ ಹೊಸ ಸ್ಪೆಕ್ಟರ್ x360 (HP Specter x360) 14 ಇಂಚಿನ ಮತ್ತು 16 ಇಂಚಿನ ಲ್ಯಾಪ್‌ಟಾಪ್‌ಗಳನ್ನು ಘೋಷಣೆ ಮಾಡಿದೆ. ಈ ಡಿವೈಸ್‌ಗಳು ನ್ಯೂರಲ್ ಪ್ರೊಸೆಸಿಂಗ್ ಯುನಿಟ್ (NPU), ಸಾಂಪ್ರದಾಯಿಕ CPU ಜೊತೆಗೆ ಕಾಣಿಸಿಕೊಂಡಿವೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಏನು?, ಭಾರತದಲ್ಲಿ ಈ ಲ್ಯಾಪ್‌ಟಾಪ್‌ಗಳ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹೆಚ್‌ಪಿ ಸ್ಪೆಕ್ಟರ್ x360 ಲ್ಯಾಪ್‌ಟಾಪ್: ಈ ಲ್ಯಾಪ್‌ಟಾಪ್‌ಗಳು 28K OLED ಜೊತೆಗೆ 16:10 ಆಕಾರ ಅನುಪಾತದ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಯಾವುದೇ ಚಿತ್ರಗಳನ್ನು ತೀಕ್ಷ್ಣವಾಗಿ ಮತ್ತು ಹೆಚ್ಚು ರೋಮಾಂಚಕವಾಗಿಸುತ್ತದೆ. ಇದರೊಂದಿಗೆ ನೀವು ಈ ಲ್ಯಾಪ್‌ಟಾಪ್‌ನಲ್ಲಿ ಏನನ್ನು ನೋಡುತ್ತಿದ್ದೀರಾ ಅನ್ನೋದನ್ನು ಅವಲಂಬಿಸಿ ಡಿಸ್‌ಪ್ಲೇ 48 Hz ರಿಫ್ರೆಶ್ ರೇಟ್ ನಿಂದ 120 Hz ರಿಫ್ರೆಶ್ ರೇಟ್‌ಗೆ ಆಟೋಮ್ಯಾಟಿಕ್ ಆಗಿ ಬದಲಾಗುತ್ತದೆ.
ಇವು 360-ಡಿಗ್ರಿ ಹಿಂಜ್‌ನೊಂದಿಗೆ IMAX ವರ್ಧಿತ ಪ್ರಮಾಣೀಕರಣವನ್ನು ನೀಡುತ್ತದೆ. ಟಚ್ ಇನ್‌ಪುಟ್ ಬೆಂಬಲದೊಂದಿಗೆ ವರ್ಧಿತ ಕಂಟೆಂಟ್ ಬಳಕೆಯ ಅನುಭವಕ್ಕಾಗಿ ಲ್ಯಾಪ್‌ಟಾಪ್ ಕನಿಷ್ಠ 16 GB RAM ಮತ್ತು 512 GB PCIe ಜನ್ 4 ಆಧಾರಿತ SSD ಅನ್ನು ಹೊಂದಿವೆ. ಈ ನಡುವೆ ಆಸುಸ್ ಮತ್ತು ಏಸರ್ ನಂತಹ ಬ್ರ್ಯಾಂಡ್‌ಗಳು ಇತ್ತೀಚೆಗೆ ಇಂಟೆಲ್ ಕೋರ್ ಅಲ್ಟ್ರಾ-ಚಾಲಿತ ಲ್ಯಾಪ್‌ಟಾಪ್‌ಗಳನ್ನು ಲಾಂಚ್ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.
ಹಾಗೆಯೇ 6 ಇಂಚಿನ ವೇರಿಯಂಟ್ ಅತಿದೊಡ್ಡ ಹ್ಯಾಪ್ಟಿಕ್ ಟಚ್‌ಪ್ಯಾಡ್ ಅನ್ನು ಹೊಂದಿದೆ. ಪಾಲಿಯಿಂದ ಟ್ಯೂನ್ ಮಾಡಲಾದ ಸ್ಪೀಕರ್ ಸೆಟಪ್‌ನೊಂದಿಗೆ ಈ ಲ್ಯಾಪ್‌ಟಾಪ್ ನಿರ್ಮಾಣ ಆಗಿದ್ದು, ಈ ಎರಡೂ ಲ್ಯಾಪ್‌ಟಾಪ್‌ಗಳು ಇಂಟೆಲ್ ಕೋರ್ ಅಲ್ಟ್ರಾ 7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇದರೊಂದಿಗೆ ಲ್ಯಾಪ್‌ಟಾಪ್‌ಗಳು ಹಾರ್ಡ್‌ವೇರ್-ಸಕ್ರಿಯಗೊಳಿಸಿದ ಕಡಿಮೆ-ಬೆಳಕಿನ ಹೊಂದಾಣಿಕೆಯೊಂದಿಗೆ 9 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿವೆ.

ಇದೆಲ್ಲಕ್ಕಿಂತ ಮಿಗಿಲಾಗಿ ಮೀಸಲಾದ ಎಐ ಚಿಪ್ ಇನ್‌ಬಿಲ್ಟ್ ಭದ್ರತಾ ಫೀಚರ್ಸ್ ಆಗಿರುವ ವಾಕ್ ಅವೇ ಲಾಕ್, ವೇಕ್ ಆನ್ ಅಪ್ರೋಚ್ ಮತ್ತು ಗೌಪ್ಯತೆ ಎಚ್ಚರಿಕೆ ಫೀಚರ್ಸ್ ಅನ್ನು ಪಡೆದುಕೊಂಡಿವೆ. ಈ ಮೂಲಕ ಒಟ್ಟಾರೆ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರೀರಿಸಲಾಗಿದೆ. ಅಡಾಪ್ಟಿವ್ ಸ್ಕ್ರೀನ್ ಹೊಂದಾಣಿಕೆಗಳು, ಆಟೋಮ್ಯಾಟಿಕ್ ಕಾರ್ಯಕ್ಷಮತೆ ಆಪ್ಟಿಮೈಸೇಶನ್ ಮತ್ತು ವೇರಿಯಬಲ್ ರಿಫ್ರೆಶ್ ರೇಟ್ ಸಮರ್ಥ ಮತ್ತು ಬಳಕೆದಾರ ಸ್ನೇಹಿ ಅನುಭವಕ್ಕೆ ಸಾಕ್ಷಿ ಆಗಲಿದೆ.
ಈ ಲ್ಯಾಪ್‌ಟಾಪ್‌ಗಳನ್ನು ಕಂಟೆಟ್ ಕ್ರಿಯೇಟರ್‌ಗಾಗಿಯೇ ಪ್ರಮುಖವಾಗಿ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿಯೇ ಇವುಗಳಲ್ಲಿ ಉನ್ನತ-ಮಟ್ಟದ ಮಾದರಿಯು ಸ್ಟುಡಿಯೋ ಡ್ರೈವರ್‌ಗಳೊಂದಿಗೆ NVIDIA RTX 4050 ಮೊಬೈಲ್ ಗ್ರಾಫಿಕ್ಸ್ ಕಾರ್ಡ್ ಆಯ್ಕೆ ನೀಡಲಾಗಿದೆ. ಅಲ್ಲದೆ, ಆರ್ಕ್ ಗ್ರಾಫಿಕ್ಸ್ ಅನ್ನು ಸಹ ಸಂಯೋಜಿಸಿವೆ. ಇದರೊಂದಿಗೆ ಇತ್ತೀಚಿನ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಇವು ಕಾಣಿಸಿಕೊಂಡಿದ್ದು, ಜಿಪಿಟಿ-ಚಾಲಿತ ಕಾಪಿಲೋಟ್ ಅನ್ನು ಬೆಂಬಲಿಸುತ್ತವೆ.
ಹೆಚ್‌ಪಿ ಸ್ಪೆಕ್ಟರ್ x360 ಲ್ಯಾಪ್‌ಟಾಪ್ ಬೆಲೆ ಹಾಗೂ ಲಭ್ಯತೆ: 14 ಇಂಚಿನ ವೇರಿಯಂಟ್‌ಗೆ 1,64,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 16 ಇಂಚಿನ ವೇರಿಯಂಟ್‌ಗೆ 1,79,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇವುಗಳನ್ನು ಹೆಚ್‌ಪಿ ವರ್ಲ್ಡ್ ಸ್ಟೋರ್‌ಗಳು, ಹೆಚ್‌ಪಿ ಆನ್‌ಲೈನ್ ಸ್ಟೋರ್ ಮೂಲಕ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್ ನೈಟ್‌ಫಾಲ್ ಬ್ಲ್ಯಾಕ್, ಸ್ಲೇಟ್ ಬ್ಲೂ ಬಣ್ಣದಲ್ಲಿ ಲಭ್ಯ ಇವೆ.


Click it and Unblock the Notifications








