ವಾಹನ ಮಾಲೀಕರೇ HSRP ನಂಬರ್ ಪ್ಲೇಟ್ ಕಡ್ಡಾಯ..ಇಲ್ಲದಿದ್ದರೆ ಬೀಳುತ್ತೆ ದಂಡ!
ವಾಹನ ಮಾಲೀಕರೇ ಇಲ್ಲಿ ಗಮನಿಸಿ. ನಿಮ್ಮ ವಾಹನ 2019 ರ ಏ.1 ಕ್ಕೂ ಮೊದಲು ನೋಂದಣಿಯಾಗಿದ್ದರೆ, ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ನಂಬರ್ ಪ್ಲೇಟ್ ಅಳವಡಿಸುವುದು ಖಡ್ಡಾಯವಾಗಿವೆ. ಹೀಗಾಗಿ ರಾಜ್ಯ ಸರ್ಕಾರ ಅನುಮತಿ ನೀಡಿರುವ ಅಧಿಕೃತ ಡೀಲರ್‌ಶಿಪ್ ಬಳಿ ಮಾತ್ರವೇ ನಂಬರ್ ಪ್ಲೇಟ್ ಹಾಕಿಸಿ. ಎಲ್ಲೆಂದರಲ್ಲಿ ನಂಬರ್ ಪ್ಲೇಟ್ ಹಾಕಿಸಲೇಬೇಡಿ.
ಹೌದು, ಹಳೆಯ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ನಂಬರ್ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ನವೆಂಬರ್ 17, 2023 ರ ವರೆಗೂ ಕಾಲಾವಕಾಶ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ 4000ಕ್ಕೂ ಹೆಚ್ಚಿನ ಡೀಲರ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಹಾಗಾದರೆ ಏನಿದು HSRP ನಂಬರ್ ಪ್ಲೇಟ್? ಈ ನಂಬರ್ ಪ್ಲೇಟ್ ಬೆಲೆ ಎಷ್ಟು? ಅಸಲಿ HSRP ನಂಬರ್ ಪ್ಲೇಟ್ ಪಡೆಯವುದು ಹೇಗೆ? ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏನಿದು HSRP ನಂಬರ್ ಪ್ಲೇಟ್ :
ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಇದು ಟ್ಯಾಂಪರ್-ಪ್ರೂಫ್ ವಾಹನ ನೋಂದಣಿ / ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಹೊಂದಿರುವ ಅಲ್ಯೂಮಿನಿಯಂ ನಿಂದ ಮಾಡಲ್ಪಟ್ಟ ನಂಬರ್ ಪ್ಲೇಟ್ ಆಗಿದೆ. ರೆಟ್ರೊ ರಿಫ್ಲೆಕ್ಟಿವ್ ಶೀಟ್‌ನೊಂದಿಗೆ ಹಾಟ್-ಸ್ಟ್ಯಾಂಪ್ಡ್ ಆಲ್ಫಾ ಸಂಖ್ಯಾವಾಚಕ ಹಾಗೂ ಲೇಸರ್ ಕೋಡ್ ಪಡೆದಿರುತ್ತದೆ.
HSRP ನಂಬರ್ ಪ್ಲೇಟ್ ಈ ಅಂಶಗಳನ್ನು ಪಡೆದಿರುತ್ತದೆ :
* ವಾಹನದ ಇಂಜಿನ್ ಸಂಖ್ಯೆ, ಚಾಸ್ಸಿ ನಂಬರ್, ರಿಜಿಸ್ಟ್ರೇಷನ್ ನಂಬರ್, ಇನ್ಶೂರೆನ್ಸ್, ಮಾಲೀಕರ ಮಾಹಿತಿ
* ಪ್ರತ್ಯೇಕ ಗುರುತಿಸಿನ ಸಂಖ್ಯೆ ಹೊಂದಿರುತ್ತದೆ
* ಅಶೋಕ ಚಕ್ರ ಚಿಹ್ನೆಯ ಕ್ರೋಮಿಯಂ ಸ್ಟಿಕ್ಕರ್
HSRP ನಂಬರ್ ಪ್ಲೇಟ್ ಶುಲ್ಕ ಎಷ್ಟು?
ದ್ವಿಚಕ್ರ ವಾಹನಗಳಿಗೆ ಜೋಡಿ HSRP ನಂಬರ್ ಪ್ಲೇಟ್ ದರ 390ರೂ. ದಿಂದ 440ರೂ. ವರೆಗೆ ಆಗಿದೆ. ಅದೇ ರೀತಿ ನಾಲ್ಕು ಚಕ್ರದ ವಾಹನಗಳಿಗೆ ಜೋಡಿ HSRP ನಂಬರ್ ಪ್ಲೇಟ್ ಶುಲ್ಕವು 680 ರೂ. ದಿಂದ 690 ರೂ. ವರೆಗೂ ಆಗಿರುತ್ತದೆ. ಅಂದಹಾಗೆ ವಾಹನ ಮಾಲೀಕರು ಸರ್ಕಾರ ನಿಗದಿಪಡಿಸಿರುವ ಅಧಿಕೃತ ಡೀಲರ್ ಬಳಿ HSRP ನಂಬರ್ ಪ್ಲೇಟ್ ಹಾಕಿಸಬೇಕಿದೆ.
ಆನ್‌ಲೈನ್ ಮೂಲಕ HSRP ನಂಬರ್ ಪ್ಲೇಟ್ :
HSRP ನಂಬರ್ ಪ್ಲೇಟ್ ಆನ್‌ಲೈನ್ ಮೂಲಕ ಬುಕ್ ಮಾಡಬಹುದಾಗಿದೆ. ವಾಹನ ಮಾಲೀಕರು ಅಧಿಕೃತ www.siam.in ವೆಬ್‌ಸೈಟ್‌ಗೇ ಭೇಟಿ ನೀಡುವುದು. ಬಳಿಕ ಅಲ್ಲಿ BOOK HSRP ಆಯ್ಕೆ ಕ್ಲಿಕ್ ಮಾಡುವುದು, ಅಲ್ಲಿ ಕೇಳಲಾಗಿರುವ ಮಾಹಿತಿ ಭರ್ತಿ ಮಾಡಿ ಮುಂದಿನ ಹಂತಗಳನ್ನು ಪೂರೈಸುವುದು.
HSRP ನಂಬರ್ ಪ್ಲೇಟ್ ಅನುಕೂಲತೆಗಳ ಮಾಹಿತಿ :
* ವಾಹನದ ಮಾಲೀಕರು ಸರಿಯಾದ ವಿವರಗಳನ್ನು ವಿತರಿಸುವ ಪ್ರಾಧಿಕಾರಕ್ಕೆ ಒದಗಿಸಿದರೆ ಮಾತ್ರ ವಾಹನ ಮಾಲೀಕರಿಗೆ HSRP ಒದಗಿಸಲಾಗುತ್ತದೆ.
* ವಾಹನ ನೋಂದಣಿ ಡೇಟಾದ ಲಭ್ಯತೆಯು ಜಾರಿ ಏಜೆನ್ಸಿಗಳಿಗೆ ಸುಲಭವಾಗುತ್ತದೆ. ಇದು ಟ್ರಾಫಿಕ್ ನಿರ್ವಹಣೆಗೆ ನೆರವಾಗುತ್ತದೆ
* HSRP ನೋಂದಣಿಗಾಗಿ ವಾಹನ ಮಾಲೀಕರು ಒದಗಿಸಿದ ವಿವರಗಳು - ಇಂಜಿನ್ ಸಂಖ್ಯೆ, ಮಾದರಿ ಸಂಖ್ಯೆ, ಮಾನ್ಯ ವಿಮೆಯ ಪ್ರತಿ, ಚಾಸಿಸ್ ಸಂಖ್ಯೆ ಇತ್ಯಾದಿ
* ಈ ನಂಬರ್ ಪ್ಲೇಟ್‌ಗಳು ಟ್ಯಾಂಪರ್ ಪ್ರೂಫ್ ಆಗಿರುತ್ತವೆ.
* ವಾಹನಗಳಿಗೆ HSRP ನಂಬರ್ ಪ್ಲೇಟ್ ಇದ್ದರೆ, ವಾಹನವನ್ನು ಕದ್ದ ಸಂದರ್ಭದಲ್ಲಿ ಪತ್ತೆಹಚ್ಚಲು ಉಪಯುಕ್ತ ವಾಗಲಿದೆ. ಏಕೆಂದರೆ HSRP ನಂಬರ್ ಪ್ಲೇಟ್‌ಗಳನ್ನು ಪತ್ತೆಹಚ್ಚಬಹುದಾಗಿದೆ.


Click it and Unblock the Notifications








