Subscribe to Gizbot

ಎಚ್‌ಟಿಸಿ ಒನ್ ಎಮ್‌8 ಗೂ ಬರಲಿದೆ ಲಾಲಿಪಪ್ ನವೀಕರಣ

Written By:

ತೈವಾನ್ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಎಚ್‌ಟಿಸಿ ಅತ್ಯಾಧುನಿಕ ಆಂಡ್ರಾಯ್ಡ್ 5.0 ಅಪ್‌ಡೇಟ್ ಅನ್ನು ಎಚ್‌ಟಿಸಿ ಒನ್ ಎಮ್‌8 ಫೋನ್‌ಗೆ ಬಿಡುಗಡೆ ಮಾಡುತ್ತಿದೆ. ಫೋನ್ ಅನ್ನು ಹೊಂದಿರುವ ಬಳಕೆದಾರರು ಮುಂಬರುವ ದಿನಗಳಲ್ಲಿ ಈ ನವೀಕರಣವನ್ನು ತಮ್ಮ ಫೋನ್‌ಗಳಿಗೆ ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಎಚ್‌ಟಿಸಿಯಿಂದ ಸೆನ್ಸ್ ಯುಐ ಜೊತೆಗೆ ಆಂಡ್ರಾಯ್ಡ್ 5.0 ಲಾಲಿಪಪ್ ಅಪ್‌ಡೇಟ್ ಅನ್ನು ಪಡೆದುಕೊಳ್ಳುತ್ತಿರುವ ಮೊದಲ ಫೋನ್ ಇದಾಗಿದ್ದು ಸೆನ್ಸ್‌ನ ಇತರ ಆವೃತ್ತಿಗಳು ಮುಂಬರುವ ದಿನಗಳಲ್ಲಿ ಈ ನವೀಕರಣವನ್ನು ಪಡೆದುಕೊಳ್ಳಲಿವೆ. ಇನ್ನು ಒನ್ (ಎಮ್7) ಗಾಗಿ ಲಾಲಿಪಪ್ ನವೀಕರಣ ಆದಷ್ಟು ಬೇಗನೇ ಬರುತ್ತಿದ್ದು, ಬಿಡುಗಡೆಯ ದಿನಾಂಕವನ್ನು ಇನ್ನೂ ಕಂಪೆನಿ ತಿಳಿಸಿಲ್ಲ.

ಎಚ್‌ಟಿಸಿ ಒನ್ ಎಮ್‌8 ಗೂ ಬರಲಿದೆ ಲಾಲಿಪಪ್ ನವೀಕರಣ

ಗೂಗಲ್‌ನಿಂದ ಇತ್ತೀಚಿನ ನವೀಕರಣ ಅಧಿಸೂಚನೆ ವ್ಯವಸ್ಥೆಯನ್ನು ರಿಫ್ರೆಶ್ ಮಾಡುತ್ತಿದೆ. ಲಾಲಿಪಪ್ 5.0 ಅಪ್‌ಡೇಟ್, ಲಾಕ್ ಸ್ಕ್ರೀನ್‌ನಲ್ಲೂ ಅಧಿಸೂಚನೆಯನ್ನು ನೋಡಲು ಬಳಕೆದಾರರನ್ನು ಅನುಮತಿಸುತ್ತದೆ ಹಾಗೂ ಪರದೆಯ ಮೇಲ್ಭಾಗದಲ್ಲಿ ಅಧಿಸೂಚನೆಗಳು ಪ್ರದರ್ಶನಗೊಳ್ಳುತ್ತಿರುತ್ತವೆ.

ಅಧಿಸೂಚನೆ ಪಟ್ಟಿಯಲ್ಲಿ ಡುನಾಟ್ ಡಿಸ್ಟರ್ಬ್ ಫೀಚರ್ ಅನ್ನು ನೋಡಬಹುದಾಗಿದ್ದು, ಲಾಲಿಪಪ್ ನವೀಕರಣವು ಬ್ಯಾಟರಿ ಅಪ್ಟಿಮೈಸೇಶನ್, ಬ್ಯಾಟರಿ ಸೇವರ್ ಮೋಡ್ ಮೊದಲಾದ ಅಂಶಗಳನ್ನು ಒಳಗೊಂಡಿದೆ.

English summary
Taiwan handset manufacturer HTC has started rolling out the latest Android 5.0 update for the HTC One M8 unlocked variant for the developers in the United States.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot