Home
ಸುದ್ದಿಜಾಲ

HTC ಸಂಸ್ಥೆಯಿಂದ ಹೊಸ ಫೋನ್‌ ಲಾಂಚ್‌; ವಾವ್‌ ಎನಿಸುವ ಫೀಚರ್ಸ್‌!

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಪೈಕಿ ಒಂದೆನಿಸಿಕೊಂಡಿರುವ ಹೆಚ್‌ಟಿಸಿ (HTC) ಸಂಸ್ಥೆಯು ಹೊಸ ಸ್ಮಾರ್ಟ್‌ಫೋನ್‌ ಸರಣಿಯನ್ನು ಬಿಡುಗಡೆ ಮಾಡಿದೆ. ಅದುವೇ ನೂತನ ಹೆಚ್‌ಟಿಸಿ U ಸರಣಿಯಲ್ಲಿನ ಹೆಚ್‌ಟಿಸಿ U24 ಪ್ರೊ (HTC U24 Pro). ಈ ನೂತನ ಸ್ಮಾರ್ಟ್‌ಫೋನ್‌ ಹೆಚ್‌ಟಿಸಿ U24 ಪ್ರೊ (HTC U23 Pro) ಫೋನಿನ ಉತ್ತರಾಧಿಕಾರಿ ಆಗಿ ಪರಿಚಿತವಾಗಿದ್ದು, ಕೆಲವು ಅಪ್‌ಡೇಟ್‌ ಫೀಚರ್ಸ್‌ ಜೊತೆಗೆ ಲಗ್ಗೆ ಇಟ್ಟಿದೆ. ಈ ಫೋನ್‌ ಕರ್ವ್ಡ್‌ ಡಿಸ್‌ಪ್ಲೇ ಪಡೆದಿರುವುದು ಪ್ರಮುಖ ಹೈಲೈಟ್‌ ಅಂಶಗಳಲ್ಲಿ ಒಂದು.

ಹೌದು, ಹೆಚ್‌ಟಿಸಿ ಸಂಸ್ಥೆಯು ಹೊಸದಾಗಿ ಹೆಚ್‌ಟಿಸಿ U24 ಪ್ರೊ (HTC U24 Pro) ಬಿಡುಗಡೆ ಮಾಡಿದೆ. ಈ ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಮುಂಭಾಗದಲ್ಲಿ ಸಹ 50 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಎನಿಸಿದೆ.

HTC ಸಂಸ್ಥೆಯಿಂದ ಹೊಸ ಫೋನ್‌ ಲಾಂಚ್‌; ವಾವ್‌ ಎನಿಸುವ ಫೀಚರ್ಸ್‌!

ಅಲ್ಲದೇ ಈ ಫೋನ್‌ 4,600 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಅಲ್ಲದೇ ಅಂಡರ್‌ ಸ್ಕ್ರೀನ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸೌಲಭ್ಯ ಸಹ ಪಡೆದಿದೆ. ಹಾಗಾದರೇ ಹೆಚ್‌ಟಿಸಿ U24 ಪ್ರೊ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹೆಚ್‌ಟಿಸಿ U24 ಪ್ರೊ ಫೀಚರ್ಸ್‌ ಹೀಗಿವೆ

ಹೆಚ್‌ಟಿಸಿ U24 ಪ್ರೊ ಫೋನ್‌ 6.8 ಇಂಚಿನ OLED ಡಿಸ್‌ಪ್ಲೇ, ಪೂರ್ಣ HD+, 1080 × 2436 ಪಿಕ್ಸೆಲ್‌ಗಳು ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಅಲ್ಲದೇ ಇದು 120Hz ರಿಫ್ರೆಶ್ ರೇಟ್, 20:9 ಆಕಾರ ಅನುಪಾತವನ್ನು ಕೂಡಾ ಪಡೆದಿದೆ. ಇದರೊಂದಿಗೆ ಈ ಫೋನಿನ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಸಹ ಹೊಂದಿದೆ.

ಹೆಚ್‌ಟಿಸಿ U24 ಪ್ರೊ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ ಸಾಮರ್ಥ್ಯದ ಜೊತೆಗೆ Adreno 720 GPU ಸಪೋರ್ಟ್‌ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಸಹ ಹೊಂದಿದೆ. ಹಾಗೆಯೇ ಇದು 12 GB RAM + 256 GB ಹಾಗೂ 12 GB RAM + 512 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಮೈಕ್ರೊ SD ಕಾರ್ಡ್ ಸ್ಲಾಟ್ ಆಯ್ಕೆ ಇದೆ.

ಹೆಚ್‌ಟಿಸಿ U24 ಪ್ರೊ ಫೋನ್‌ ಹಿಂಬದಿ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾ ಸಹ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು ಸಹ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಪಡೆದಿದೆ.

ಹೆಚ್‌ಟಿಸಿ U24 ಪ್ರೊ ಫೋನ್‌ 4,600 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 60W ವೈರ್ಡ್ ಫಾಸ್ಟ್ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್, 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಪಡೆದುಕೊಂಡಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, ಇದು 12.5 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಒದಗಿಸಲಿದೆ. ಡ್ಯುಯಲ್-ಸಿಮ್, 5G, WiFi 6E 802.11 a/b/g/n/ac/ax, ಬ್ಲೂಟೂತ್‌ 5.3, NFC, ಜಿಪಿಎಸ್‌, GLONASS, Galileo ಮತ್ತು USB 3.0. ಆಯ್ಕೆಗಳು ಇವೆ.

Best Mobiles in India

English summary
HTC U24 Pro with Snapdragon 7 Gen 3 SoC Launched. Check Price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+