Subscribe to Gizbot

4ಜಿ ಫೋನ್‌ ಎಚ್‌ಟಿಸಿ ಎಮ್9 ಪ್ಲಸ್ ಮೇನಲ್ಲಿ ಮಾರುಕಟ್ಟೆಗೆ

Written By:

ಮೊಬೈಲ್ ಡಿವೈಸ್ ತಯಾರಿಕಾ ಸಂಸ್ಥೆ ಎಚ್‌ಟಿಸಿ ತನ್ನ ಪ್ರೀಮಿಯಮ್ 4ಜಿ ಫೋನ್‌ ಎಮ್ 9 ಪ್ಲಸ್ ಜೊತೆಗೆ ಮೂರು ಡಿವೈಸ್‌ಗಳನ್ನು ಲಾಂಚ್ ಮಾಡಿದ್ದು ಬೆಲೆ ರೂ 52,500 ಆಗಿದ್ದು ಮೇನಿಂದ ಇದು ಲಭ್ಯವಾಗಲಿದೆ.

[ಓದಿರಿ: ಹೆಚ್ಚು ಉಪಕಾರಿ ಟಾಪ್ 20 ಕೀಬೋರ್ಡ್ ಶಾರ್ಟ್‌ಕಟ್‌ ಕೀಗಳು]

4ಜಿ ಫೋನ್‌ ಎಚ್‌ಟಿಸಿ ಎಮ್9 ಪ್ಲಸ್ ಮೇನಲ್ಲಿ ಮಾರುಕಟ್ಟೆಗೆ

ಇನ್ನು ಈ ವರ್ಷ ರೂ 20,000 ಕ್ಕೆ 4ಜಿ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸನ್ನಾಹದಲ್ಲಿ ಕಂಪೆನಿ ಇದೆ ಎಂಬುದು ತಿಳಿದು ಬಂದಿದೆ. ಎಮ್9 ಪ್ಲಸ್ ಭಾರತದಲ್ಲಿ ರೂ 52,500 ಕ್ಕೆ ದೊರೆಯುತ್ತಿದ್ದು ಮುಂದಿನ ತಿಂಗಳು ಈ ಫೋನ್ ಲಭ್ಯವಾಗಲಿದೆ. ಭಾರತದಿಂದ ಏಳು ಶೇಕಡಾ ಮಾರಾಟ ಮೌಲ್ಯಗಳನ್ನು ಕಂಪೆನಿ ಎದುರು ನೋಡುತ್ತಿದ್ದು ಈ ವರ್ಷದ ಕೊನೆಯಲ್ಲಿ ಶೇಕಡಾ 10 ಅನ್ನು ತಲುಪುವ ಇರಾದೆ ಕಂಪೆನಿಗಿದೆ. ಎಂದು ಎಚ್‌ಟಿಸಿ ಜಾಗತಿಕ ಮಾರುಕಟ್ಟೆ ಮತ್ತು ಮುಖ್ಯ ಆರ್ಥಿಕ ಅಧಿಕಾರಿ ಚಿಯಾ ಲಿನ್ ಚಾಂಗ್ ತಿಳಿಸಿದ್ದಾರೆ.

4ಜಿ ಫೋನ್‌ ಎಚ್‌ಟಿಸಿ ಎಮ್9 ಪ್ಲಸ್ ಮೇನಲ್ಲಿ ಮಾರುಕಟ್ಟೆಗೆ

ಇನ್ನು 20,000 ರೂಪಾಯಿಗಿಂತಲೂ ಕೆಳಗಿರುವ 4ಜಿ ಸ್ಮಾರ್ಟ್‌ಫೋನ್‌ಗಳನ್ನು ನಾವು ಹೊರತರುವ ನಿರೀಕ್ಷೆಯಲ್ಲಿದ್ದು, ನಮ್ಮ ವೇರಿಯೇಬಲ್ ಡಿವೈಸ್‌ಗಳನ್ನು ಈ ಸಮಯದಲ್ಲಿ ರಿಲೀಸ್ ಮಾಡುವ ತವಕದಲ್ಲಿರುವೆವು ಎಂದು ಚಾಂಗ್ ತಿಳಿಸಿದ್ದಾರೆ.

[ಓದಿರಿ: ಬದಲಾದ ವಾಟ್ಸಾಪ್ ಸೆಟ್ಟಿಂಗ್ಸ್ ಕುರಿತು ತಿಳಿಯಬೇಕೇ?]

ವರ್ಧಿತ ಡಿಸ್‌ಪ್ಲೇ, ಆಡಿಯೊ ಗುಣಮಟ್ಟತೆ ಮತ್ತು ಅತ್ಯುತ್ತಮ ವಿನ್ಯಾಸದೊಂದಿಗೆ ಎಮ್9 ಪ್ಲಸ್ ಬಂದಿದ್ದು 5.2 ಇಂಚಿನ ಸ್ಕ್ರೀನ್ ಅನ್ನು ಈ ಡಿವೈಸ್ ಹೊಂದಿದೆ. ಇದು 20 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು 4 ಕೆ ರೆಸಲ್ಯೂಶನ್ ಚಿತ್ರಗಳನ್ನು ಶೂಟ್ ಮಾಡಲು ಇದು ಹೇಳಿಮಾಡಿಸಿದ್ದಾಗಿದೆ.

4ಜಿ ಫೋನ್‌ ಎಚ್‌ಟಿಸಿ ಎಮ್9 ಪ್ಲಸ್ ಮೇನಲ್ಲಿ ಮಾರುಕಟ್ಟೆಗೆ

ಎಮ್9 ಪ್ಲಸ್ 3ಜಿಬಿ RAM ಅನ್ನು ಹೊಂದಿದ್ದು 32 ಜಿಬಿ ಆಂತರಿಕ ಸಂಗ್ರಹ ಇದರಲ್ಲಿದೆ. ಇದನ್ನು ಮೆಮೊರಿ ಕಾರ್ಡ್ ಬಳಸಿ 2 ಟೆರಾಬೈಟ್‌ಗೆ ವಿಸ್ತರಿಸಬಹುದು. ಇನ್ನು ಭಾರತದಲ್ಲಿ ಎಚ್‌ಟಿಸಿ ಸ್ಟ್ರೇಟಜಿ ಬಗ್ಗೆ ಕೇಳಿದಾಗ ಇಲ್ಲಿ ಕಡಿಮೆ ದರದ ಫೋನ್‌ಗಳು ನಿಮಿಷಗಳಲ್ಲಿ ಮಾರಾಟವಾಗುತ್ತವೆ ಎಂಬುದು ತಿಳಿದು ಬಂದಿದೆ.

[ಓದಿರಿ: ಯಾರೂ ಅರಿಯದ ಭಯಾನಕ ಬ್ರಹ್ಮಾಂಡ ಗುಟ್ಟುಗಳು]

4ಜಿ ಫೋನ್‌ ಎಚ್‌ಟಿಸಿ ಎಮ್9 ಪ್ಲಸ್ ಮೇನಲ್ಲಿ ಮಾರುಕಟ್ಟೆಗೆ

ಎಚ್‌ಟಿಸಿ ಕಂಪೆನಿ ತನ್ನ ಫೋನ್‌ಗಳಿಗೆ ಇನ್‌ಶ್ಯುರೆನ್ಸ್ ಪಾಲಿಸಿಯನ್ನು ಘೋಷಿಸಿದ್ದು, ಫೋನ್‌ಗೆ ಸಂಭವಿಸುವ ಯಾವುದೇ ಅಪಘಾತ ಇಲ್ಲವೇ ನೀರಿನಿಂದ ಉಂಟಾಗುವ ಹಾನಿಗೆ ಪಾಲಿಸಿ ಪರಿಹಾರ ಒದಗಿಸುತ್ತದೆ.

English summary
Mobile device maker HTC Tuesday unveiled three devices including its premium 4G smartphone M9 Plus priced at Rs 52,500 which will be available from May. Besides, the company will expand 4G handset portfolio with models likely to be priced below Rs 20,000 this year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot