Home
ಸುದ್ದಿಜಾಲ

'ವೈಲ್ಡ್‌ಫೈರ್‌ ಎಕ್ಸ್‌' ಬಜೆಟ್‌ ಫೋನ್‌ ಮೂಲಕ ಮತ್ತೆ ಎಂಟ್ರಿಕೊಟ್ಟ 'ಎಚ್‌ಟಿಸಿ'!

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ತೈವಾನ ಮೂಲದ 'ಎಚ್‌ಟಿಸಿ' ಕಂಪನಿಯ ಹೆಸರು ಚಿರಪರಿಚಿತ. ಏಕೆಂದರೇ ಈ ಕಂಪನಿಯು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೂಲಕ ಆರಂಭದಲ್ಲಿ ಭಾರಿ ಜನಪ್ರಿಯತೆ ಗಳಿಸಿತ್ತು. ಆದ್ರೆ ಇತರೆ ಕಂಪನಿಯ ಸ್ಮಾರ್ಟ್‌ಫೋನ್ ಪೈಪೋಟಿಯಲ್ಲಿ ಜನಪ್ರಿಯತೆ ಕಳೆದುಕೊಂಡು ಕಳೆದ ವರ್ಷ ದೇಶಿಯ ಮಾರುಕಟ್ಟೆಯಿಂದ ನಿರ್ಗಮಿಸಿತು. ಆದ್ರೆ ಇದೀಗ ಎಚ್‌ಟಿಸಿ ಹೊಸ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಮೂಲಕ ಮತ್ತೆ ಗ್ಯ್ರಾಂಡ್‌ ಎಂಟ್ರಿ ನೀಡಿದೆ

'ವೈಲ್ಡ್‌ಫೈರ್‌ ಎಕ್ಸ್‌' ಬಜೆಟ್‌ ಫೋನ್‌ ಮೂಲಕ ಮತ್ತೆ ಎಂಟ್ರಿಕೊಟ್ಟ 'ಎಚ್‌ಟಿಸಿ'!

ಹೌದು, ಎಚ್‌ಟಿಸಿ ಕಂಪನಿಯು ಈಗ ವೈಲ್ಡ್‌ಫೈರ್‌ ಸರಣಿಯಲ್ಲಿ ಹೊಸದಾಗಿ 'ವೈಲ್ಡ್‌ಫೈರ್‌ ಎಕ್ಸ್‌' ಸ್ಮಾರ್ಟ್‌ಫೋನ್ ಲಾಂಚ್‌ ಮಾಡಿದ್ದು, ಬಜೆಟ್‌ ಬೆಲೆಯಲ್ಲಿರುವ ಈ ಸ್ಮಾರ್ಟ್‌ಫೋನ್ ಇದೇ ಅಗಷ್ಟ 22ರಿಂದ ಫ್ಲಿಪ್‌ಕಾರ್ಟ್‌ ಜಾಲತಾಣದಲ್ಲಿ ಖರೀದಿಗೆ ಲಭ್ಯವಾಗಲಿದೆ. 3GB RAM ಮತ್ತು 4GB RAM ಮಾದರಿಯ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್‌ ಶಕ್ತಿಯನ್ನು ಹೊಂದಿದೆ

'ವೈಲ್ಡ್‌ಫೈರ್‌ ಎಕ್ಸ್‌' ಬಜೆಟ್‌ ಫೋನ್‌ ಮೂಲಕ ಮತ್ತೆ ಎಂಟ್ರಿಕೊಟ್ಟ 'ಎಚ್‌ಟಿಸಿ'!

ಹಾಗೆಯೇ ಈ ಸ್ಮಾರ್ಟ್‌ಫೋನ್ 12ಎಂಪಿ + 8ಎಂಪಿ + 5ಎಂಪಿ ಸೆನ್ಸಾರ್‌ ಸಾಮರ್ಥ್ಯದ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, ಹಿಂಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಫೀಚರ್‌ ಅನ್ನು ಸಹ ಒಳಗೊಂಡಿದೆ. ಆಂಡ್ರಾಯ್ಡ್‌ 9 ಪೈ ಓಎಸ್‌ನ ಬೆಂಬಲ ಪಡೆದಿದೆ. ಹಾಗಾದರೇ ಎಚ್‌ಟಿಸಿಯ ಹೊಸ ವೈಲ್ಡ್‌ಫೈರ್‌ ಎಕ್ಸ್‌ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಎಚ್‌ಟಿಸಿ ವೈಲ್ಡ್‌ಫೈರ್‌ ಎಕ್ಸ್‌ ಸ್ಮಾರ್ಟ್‌ಫೋನ್ 720×1,520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.22 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಹಾಗೆಯೇ ಡಿಸ್‌ಪ್ಲೇಯು ವಾಟರ್‌ ಡ್ರಾಪ್ ಸ್ಟೈಲ್‌ ನಾಚ್ ರಚನೆಯನ್ನು ಪಡೆದಿದ್ದು, ಡಿಸ್‌ಪ್ಲೇಯ ಒಟ್ಟು ಸುತ್ತಳತೆಯು 156.70 x 74.90 x 7.95mm ಆಗಿದೆ. 160ಗ್ರಾಂ ತೂಕವನ್ನು ಪಡೆದುಕೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

2GHz ವೇಗದ ಆಕ್ಟಾಕೋರ್ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲವಿದೆ. 3GB RAM ಮತ್ತು 4GB RAM ವೇರಿಯಂಟ್‌ ಆಯ್ಕೆಗಳಿದ್ದು, ಇವು ಕ್ರಮವಾಗಿ 32GB ಮತ್ತು 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯವಾಗಿ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವಿದೆ.

ಕ್ಯಾಮೆರಾ ಸ್ಪೆಷಲ್

ಕ್ಯಾಮೆರಾ ಸ್ಪೆಷಲ್

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 12ಎಂಪಿ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಮತ್ತು ತೃತೀಯ ಕ್ಯಾಮೆರಾವು 5ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿವೆ. ಹಾಗೆಯೇ ಸೆಲ್ಫಿಗಾಗಿ 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದ್ದು, ಆಟೋಫೋಕಸ್‌ ಸೇರಿದಂತೆ ಅಗತ್ಯ ಕ್ಯಾಮೆರಾ ಫೀಚರ್ಸ್‌ಗಳನ್ನು ನೀಡಲಾಗಿದೆ.

ಬ್ಯಾಟರಿ ಬಲ

ಬ್ಯಾಟರಿ ಬಲ

3,300mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಪಡೆದಿರುವ ಈ ಸ್ಮಾರ್ಟ್‌ಫೋನ್ 10W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್‌-ಸಿ ಪೋರ್ಟ್‌ ಆಯ್ಕೆಯನ್ನು ಒದಗಿಸಲಾಗಿದ್ದು, ಇದರೊಂದಿಗೆ ಬ್ಲೂಟೂತ್ v 4.10, ವೈಫೈ, ಜಿಪಿಎಸ್‌, ಫೇಸ್‌ಅನ್‌ಲಾಕ್, ಫಿಂಗರ್‌ಪ್ರಿಂಟ್ ಸೆನ್ಸಾರ್, ಆಂಬಿಯಂಟ್ ಲೈಟ್‌ ಸೆನ್ಸಾರ್, ಗೈರೋಸ್ಕೋಪ್ ಸೆನ್ಸಾರ್ ಆಯ್ಕೆಗಳು ಇವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಚ್‌ಟಿಸಿ ವೈಲ್ಡ್‌ಫೈರ್‌ ಎಕ್ಸ್‌ ಸ್ಮಾರ್ಟ್‌ಫೋನ್ ಇದೇ ಅಗಷ್ಟ 22ರಿಂದ ಫ್ಲಿಪ್‌ಕಾರ್ಟ್‌ನಲ್ಲಿ (ಮಧ್ಯಾಹ್ನ 12)ಖರೀದಿಗೆ ಲಭ್ಯವಾಗಲಿದೆ. ಎರಡು ವೇರಿಯಂಟ್ ಆಯ್ಕೆಗಳಿದ್ದು, 3GB RAM ಬೆಲೆಯು 10,999ರೂ.ಗಳು ಆಗಿದೆ. ಹಾಗೂ 4GB RAM ವೇರಿಯಂಟ್ ಬೆಲೆಯು 13,999ರೂ.ಗಳಿಗೆ ದೊರೆಯಲಿದೆ. ಇದರೊಂದಿಗೆ ಆರಂಭಿಕ ಕೊಡುಗೆಯಾಗಿ 1000ರೂ.ಗಳ ರಿಯಾಯಿತಿ ಸೀಗಲಿದೆ.

Best Mobiles in India

English summary
HTC Wildfire X available to purchase from Flipkart starting August 22. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+