ದೇಶಿಯ ಮಾರುಕಟ್ಟೆಗೆ 'ಹುವಾಮಿ' ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌!.ಬೆಲೆ 3,999ರೂ!

|

ಸ್ಮಾರ್ಟ್‌ವಾಚ್‌ ಡಿವೈಸ್‌ಗಳು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ ಹುಟ್ಟುಹಾಕಿದ್ದು, ಹಲವಾರು ಕಂಪನಿಗಳು ನೂತನ ಸ್ಮಾರ್ಟ್‌ವಾಚ್‌ ಡಿವೈಸ್‌ಗಳನ್ನು ಬಿಡುಗಡೆ ಮಾಡಿವೆ. ಅವುಗಳಲ್ಲಿ ಚೀನಾ ಮೂಲದ ಕಂಪನಿಗಳ ಪಾಲು ಹೆಚ್ಚಿದ್ದು, ಇದೀಗ ಚೀನಾದ ಧರಿಸುವ ಸ್ಮಾರ್ಟ್‌ ಉತ್ಪನ್ನಗಳ ತಯಾರಿಕಾ ಕಂಪನಿ 'ಹುವಾಮಿ' ಸಹ ಸೇರ್ಪಡೆಯಾಗಿದೆ. ಈ ಕಂಪನಿಯು ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ.

ದೇಶಿಯ ಮಾರುಕಟ್ಟೆಗೆ 'ಹುವಾಮಿ' ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌!.ಬೆಲೆ 3,999ರೂ!

ಹೌದು, ಹುವಾಮಿ ಕಂಪನಿಯು ಅಮಾಜ್ಫಿಟ್ ಬಿಪ್ ಲೈಟ್‌ ಹೆಸರಿನ ಸ್ಮಾರ್ಟ್‌ವಾಚ್‌ ಡಿವೈಸ್ ಅನ್ನು ದೇಶಿಯ ಮಾರುಕಟ್ಟೆಗೆ ರಿಲೀಸ್‌ ಮಾಡಿದೆ. ಈ ಡಿವೈಸ್‌ನ ಒಮ್ಮೆ ಚಾರ್ಜ್‌ ಮಾಡಿದರೇ ಬರೋಬ್ಬರಿ 45 ದಿನಗಳ ಬ್ಯಾಟರಿ ಬಾಳಿಕೆಯನ್ನು ಒದಗಿಸುವ ಸಾಮರ್ಥ್ಯ ಪಡೆದಿದೆ. ಹಾರ್ಟ್‌ ಬೀಟ್‌ ಟ್ರಾಕಿಂಗ್ ಸೇರಿದಂತೆ ದೈನಂದಿನ ಚಟುವಟಿಕೆಗಳನ್ನು ಟ್ರಾಕಿಂಗ್ ಮಾಡುವ ಸೌಲಭ್ಯಗಳನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಗೆ 'ಹುವಾಮಿ' ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌!.ಬೆಲೆ 3,999ರೂ!

ಹಗುರವಾದ ರಚನೆಯನ್ನು ಹೊಂದಿರುವ ಈ ಸ್ಮಾರ್ಟ್‌ವಾಚ್‌ ಡಿವೈಸ್‌ 32 ಗ್ರಾಂ ತೂಕವನ್ನು ಪಡೆದಿದೆ. ಹಾಗೆಯೇ 1.28 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 30 ಮೀಟರ್‌ ವಾಟರ್‌ ರೆಸಿಸ್ಟರನ್ಸ್‌ ಹಾಗೂ ಸ್ವಿಮ್ಮ ಪ್ರೂಫ್‌ ಸೌಲಭ್ಯವನ್ನು ಹೊಂದಿದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಮಾದರಿಯ ಎರಡು ಓಎಸ್‌ ಡಿವೈಸ್‌ಗಳಿಗೂ ಬೆಂಬಲ ನೀಡಲಿದ್ದು, ರಿಯಲ್‌ಟೈಮ್‌ ಆಪ್‌ ನೋಟಿಫಿಕೇಶನ್‌ ಫೀಚರ್‌ ಅನ್ನು ಒಳಗೊಂಡಿದೆ.

ದೇಶಿಯ ಮಾರುಕಟ್ಟೆಗೆ 'ಹುವಾಮಿ' ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌!.ಬೆಲೆ 3,999ರೂ!

ಕಂಪನಿಯು ಈ ಸ್ಮಾರ್ಟ್‌ವಾಚ್‌ನಲ್ಲಿ PPG ಸೆನ್ಸಾರ್‌ ಅಳವಡಿಸಿದ್ದು, ಅದು ಹೃದಯ ಬಡಿತದ ಮಾನಿಟರ್‌ ಮಾಡಲಿದೆ. ಅಲ್ಲದೇ ತ್ರಿ ಆಕ್ಸಿಸ್‌ ಆಕ್ಸಲ್ರೋಮೀಟರ್‌ (accelerometer), ಬಾರೊಮೀಟರ್, ಹಾಗೂ ಕಂಪಾಸ್‌ ಆಯ್ಕೆಗಳನ್ನು ಸಹ ಹೊಂದಿದ್ದು, ಇವುಗಳು ಸೈಕ್ಲಿಂಗ್, ರನ್ನಿಂಗ್ ಮತ್ತು ಮಲ್ಟಿ ಸ್ಪೋರ್ಟ್ಸ್‌ಗಳು ಸೇರಿದಂತೆ ದೈನಂದಿನ ಆಕ್ಟಿವಿಟಿಗಳನ್ನು ನಿಯಮಿತವಾಗಿ ಟ್ರಾಕ್‌ ಮಾಡಲು ನೆರವಾಗಲಿವೆ.

ಓದಿರಿ : ಅಗ್ಗದ ಬೆಲೆಯಲ್ಲಿ 'ಲೆನೊವೊ ಕಾರ್ಡಿಯೊ 2' ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌!ಓದಿರಿ : ಅಗ್ಗದ ಬೆಲೆಯಲ್ಲಿ 'ಲೆನೊವೊ ಕಾರ್ಡಿಯೊ 2' ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌!

ಹುವಾಮಿ ಕಂಪನಿಯ ಅಮಾಜ್ಫಿಟ್ ಬಿಪ್ ಲೈಟ್ ಡಿವೈಸ್‌ ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್ ಮಾಡಬಹುದಾಗಿದ್ದು, ವಾಯಿಸ್‌ ಕರೆಗಳು, ಮೆಸೆಜ್‌ ಮತ್ತು ಇತರೆ ನೋಟಿಫಿಕೇಶನ್‌ಗಳ ಮಾಹಿತಿಯನ್ನು ನೀಡುತ್ತದೆ. ಈ ಡಿವೈಸ್‌ನ 3,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗಿದ್ದು, ಇದೇ ಜುಲೈ 15ರಂದು ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಅಮೆಜಾನ್ ನಲ್ಲಿ ಮಾರಾಟ ಆರಂಭಿಸಲಿದೆ.

ಓದಿರಿ : ಸ್ಮಾರ್ಟ್‌ಫೋನಿನಲ್ಲಿ ಸಿನಿಮಾ ಮತ್ತು ಟಿವಿ ಶೋ ವೀಕ್ಷಿಸಲು ಈ ಆಪ್ಸ್‌ಗಳು ಬೆಸ್ಟ್‌!ಓದಿರಿ : ಸ್ಮಾರ್ಟ್‌ಫೋನಿನಲ್ಲಿ ಸಿನಿಮಾ ಮತ್ತು ಟಿವಿ ಶೋ ವೀಕ್ಷಿಸಲು ಈ ಆಪ್ಸ್‌ಗಳು ಬೆಸ್ಟ್‌!

Best Mobiles in India

English summary
Huami Amazfit Bip Lite has been launched in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X