ವಿಶ್ವದ ಮೊಬೈಲ್ ದಿಗ್ಗಜ ಸ್ಥಾನ ಕಳೆದುಕೊಂಡ ಆಪಲ್!.ಮೂರನೇ ಸ್ಥಾನಕ್ಕೆ ಸ್ಯಾಮ್‌ಸಂಗ್!!
ಜೂನ್ ಮತ್ತು ಜುಲೈನಲ್ಲಿ ಚೀನಾದ ಹುವಾವೆ ಸಂಸ್ಥೆಯು ಮೊಬೈಲ್ ತಯಾರಿಕೆಯಲ್ಲಿ ಆಪಲ್ ಕಂಪೆನಿಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.!
ಈ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ ಆಪಲ್ ವಿಶ್ವದ ಮೊಬೈಲ್ ದಿಗ್ಗಜ ಎಂಬ ಹಣೆಪಟ್ಟಿಯನ್ನು ಕಳೆದುಕೊಂಡಿದೆಯೇ.!? ಹೌದು ಎನ್ನುತ್ತಿದೆ ಜಾಗತಿಕ ಮಟ್ಟದಲ್ಲಿ ಉದ್ಯಮಗಳ ವಿಶ್ಲೇಷಣೆ ಮಾಡುವ ಕೌಂಟರ್‌ಪಾಯಿಂಟ್ ಸಂಶೋಧನಾ ವರದಿ.! ಆಪಲ್ ಇದೀಗ ಎರಡನೇ ಸ್ಥಾನಕ್ಕೆ ಜಾರಿದೆ ಎಂದು ವರದಿ ತಿಳಿಸಿದೆ.!!
2017ರ ಜೂನ್ 30ಕ್ಕೆ ಕೊಜೂನ್ ಮತ್ತು ಜುಲೈನಲ್ಲಿ ಚೀನಾದ ಹುವಾವೆ ಸಂಸ್ಥೆಯು ಮೊಬೈಲ್ ತಯಾರಿಕೆಯಲ್ಲಿ ಆಪಲ್ ಕಂಪೆನಿಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.! ಈಗ ಕೊನೆಗೊಂಡ ತ್ರೈಮಾಸಿಕದ ಚೀನಾ ಕಂಪೆನಿಯ ಪ್ರಬಲ ಪೈಪೋಟಿಗೆ ಆಪಲ್ ಮತ್ತು ಸ್ಯಾಮ್‌ಸಂಗ್ ಸೋತಿದ್ದು, ಇದೀಗ ಚೀನಾದ ನಂಬರ್ ಒನ್ ಮೊಬೈಲ್ ಕಂಪೆನಿ ಹುವಾವೆ ಜಾಗತಿಕ ಮೊಬೈಲ್ ದಿಗ್ಗಜನಾಗಿದೆ.!

ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚು ಸೇವೆಗಳನ್ನು ನೀಡುತ್ತಿರುವ ಹುವಾವೆ ಮೊಬೈಲ್‌ಗಳ ಜಾಗತಿಕ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದಾಗಿ, ಆಪಲ್ ವಿಶ್ವದ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದರೆ, ಎರಡನೇ ಸ್ಥಾನದಲ್ಲಿದ್ದ ಸ್ಯಾಮ್ಸಂಗ್ ಮೂರನೇ ಸ್ಥಾನಕ್ಕಿಳಿದಿದೆ.!!

2017ರ ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವಿಶ್ವದಾಧ್ಯಂತ 36 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ. ಇದರಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಶೇ 87.7 ರಷ್ಟಿದ್ದರೆ, ಐಒಎಸ್ ಶೇ 12.1 ರಷ್ಟಿದೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಜಾಗತಿಕ ಮೊಬೈಲ್ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಶೇ 6.7 ರಷ್ಟು ಪ್ರಗತಿ ದಾಖಲಿಸಿದೆ.

ಚೀನಾದ ಮೊಬೈಲ್ ತಯಾರಿಕಾ ಕಂಪೆನಿಗಳು ಅಗ್ಗದ ಬೆಲೆಗೆ ಹಲವು ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಆಪಲ್ ಮತ್ತು ಸ್ಯಾಮ್‌ಸಂಗ್ ಪ್ರಮುಖ ಕಂಪೆನಿಗಳು ಮಾರುಕಟ್ಟೆ ಪಾಲನ್ನು ಸ್ವಲ್ಪ ಸ್ವಲ್ಪವಾಗಿಯೇ ಕಸಿದುಕೊಳ್ಳುತ್ತಿವೆ.!!
ಓದಿರಿ: ವಿವೊ ಕಂಪೆನಿಯ ಮಹಾಮೋಸ!?..ದಾಖಲೆ ಸಮೇತ ಬಿಚ್ಚಿಟ್ಟ ಬೆಂಗಳೂರು ಹುಡುಗ!!


Click it and Unblock the Notifications








